ಆಗ್ರಾ (ಉತ್ತರಪ್ರದೇಶ) – ದಯಾಳಬಾಗ್ ಶೈಕ್ಷಣಿಕ ಸಂಸ್ಥೆಯ ಬಿ.ಟೆಕ್ ವಿದ್ಯಾರ್ಥಿ ಸಿದ್ಧಾಂತ ಗೋವಿಂದ ಶರ್ಮಾ ನನ್ನು ಸಿಕಂದರಾದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆತ ತನ್ನ 3 ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದನು.
ಆವಾಸ್ ವಿಕಾಸ್ ಕಾಲೋನಿಯ ಸೆಕ್ಟರ್-7 ರ ನಿವಾಸಿ ಸಿದ್ಧಾಂತ ಗೋವಿಂದ ಶರ್ಮಾ (ವಯಸ್ಸು 24 ವರ್ಷ), ಕಾಲೋನಿಯ ಶುಭಂ ಗುಪ್ತಾ, ಪುಷ್ಪಾಂಜಲಿ ಗಾರ್ಡೇನಿಯಾದ ನಿವಾಸಿ ಶಶಾಂಕ್ ರಾಣಾ ಮತ್ತು ಅಪರ್ಣಾ ಪ್ರೇಮ್ ಅಪಾರ್ಟ್ಮೆಂಟ್ ನ ನಿವಾಸಿ ಸಿದ್ಧಾಂತ ರಾಣಾ ಶಾಸ್ತ್ರಿಪುರಂನ ಜೆಸಿಬಿ ಚೌಕ್ ತಲುಪಿದ್ದರು. ಮೈದಾನದಲ್ಲಿ ನಿಂತು ನಾಲ್ವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಕ್ರಿಕೆಟ್ ಪಂದ್ಯವನ್ನು ನೋಡುತ್ತಿದ್ದರು. ಆ ಸಮಯದಲ್ಲಿ 3 ಯುವಕರು ಬೈಕ್ ನಲ್ಲಿ ಬಂದರು. ಅವರಲ್ಲಿ ಒಬ್ಬರು ನಾಲ್ವರ ಬಳಿ ಹಣ ಕೇಳಿದರು. ಅವರು ನಿರಾಕರಿಸಿದಾಗ, ಚಾಕುವನ್ನು ತೆಗೆದು ಸಿದ್ಧಾಂತನ ಹೊಟ್ಟೆಗೆ ಇರಿದನು. ಅವನು ಶರ್ಮನ ಸ್ನೇಹಿತರ ಮೇಲೂ ದಾಳಿ ಮಾಡಿ ಓಡಿಹೋದರು.
ಪೊಲೀಸ್ ವರಿಷ್ಠಾಧಿಕಾರಿ ಹರಿಪರ್ವತ್ ಆದಿತ್ಯ ಸಿಂಗ್ ಮಾತನಾಡಿ, ನಾಲ್ವರು ಸ್ನೇಹಿತರು ಔತಣಕೂಟಕ್ಕೆ ಬಂದಿದ್ದರು. ಅವರ ಬಳಿ ಮದ್ಯದ ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ, ಎಂದು ಹೇಳಿದರು.