Telangana Police Lathi Charge : ಕ್ರಿಕೆಟ್ ನಲ್ಲಿ ಭಾರತದ ಗೆಲುವು; ಸಂಭ್ರಮಿಸುತ್ತಿದ್ದ ಹಿಂದೂಗಳ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ!

ಭಾಗ್ಯನಗರ (ತೆಲಂಗಾಣ) – ಚಾಂಪಿಯನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ಪಂದ್ಯವನ್ನು ಗೆದ್ದ ನಂತರ, ಭಾಗ್ಯನಗರದ ದಿಲ್ಸುಖ್‌ನಗರದಲ್ಲಿ ಸಂಭ್ರಮಿಸುತ್ತಿದ್ದ ಹಿಂದೂಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆ ಮಾರ್ಚ್ 9ರ ರಾತ್ರಿ ನಡೆದಿದೆ. ಕರೀಂನಗರದಲ್ಲಿ ರಾಷ್ಟ್ರಧ್ವಜ ಹಿಡಿದು ಉತ್ಸವ ಆಚರಿಸುತ್ತಿದ್ದವರನ್ನು ತಡೆದು ಧ್ವಜ ಹಾರಿಸಲು ಸಹ ಅನುಮತಿ ನೀಡಿಲ್ಲ.

1. ಭಾಜಪ ನಾಯಕ ಅಮಿತ್ ಮಾಳವೀಯ ಅವರು ದಿಲ್ಸುಖ್‌ ನಗರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಇದು ಹೊಸ ಪದ್ಧತಿಯೇ? ಯಾರನ್ನು ಸಂತೋಷಪಡಿಸಲು ಅವರು ಬಯಸುತ್ತಿದ್ದಾರೆ? ಎಂದು ಬರೆದಿದ್ದಾರೆ.

2. ಕರೀಂನಗರದ ಭಾಜಪ ಸಂಸದ ಬಂಡಿ ಸಂಜಯ್ ಕುಮಾರ್ ಅವರು, ತೆಲಂಗಾಣದ ಗೃಹ ಸಚಿವ ರೇವಂತ್ ರೆಡ್ಡಿ ಅವರು ಕರೀಂನಗರ ಪೊಲೀಸರು ಯಾವ ದೇಶವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಬೇಕು? ಭಾರತದ ಗೆಲುವನ್ನು ಸಂಭ್ರಮಿಸಲು ಸಾಧ್ಯವಿಲ್ಲ; ಆದರೆ ಪಾಕಿಸ್ತಾನದ ಹೆಸರಿನ ಫ್ಲೆಕ್ಸ್‌ಗಳನ್ನು ತೆಗೆದುಹಾಕುತ್ತಾರೆಯೇ? ವಿಜಯೋತ್ಸವವು ಕೋಮು ಸ್ವರೂಪವನ್ನು ಹೇಗೆ ಪಡೆಯಿತು?, ಎಂದು ಕೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತವೆಂದರೆ ಪಾಕಿಸ್ತಾನದ ಆಡಳಿತ ಎಂದು ಹೇಳಲಾಗುತ್ತದೆ, ಅದಕ್ಕೊಂದು ಉದಾಹರಣೆ! ಕಾಂಗ್ರೆಸ್ ಭಾರತಕ್ಕಿಂತ ಪಾಕಿಸ್ತಾನದ ಗೆಲುವನ್ನು ಹೆಚ್ಚು ಸಂಭ್ರಮಿಸುವುದರಿಂದಲೇ ದೇಶಭಕ್ತರಿಗೆ ಪೆಟ್ಟು ತಿನ್ನಬೇಕಾಗುತ್ತದೆ!