ಹೋಳಿಯಂದು ಮುಸಲ್ಮಾನರು ಮನೆಯಲ್ಲೇ ಇರಿ ಅಥವಾ ಹೊರಗೆ ಹೋದರೆ ಯಾರಾದರೂ ಬಣ್ಣ ಹಾಕಿದರೆ ಬೇಸರ ಮಾಡಿಕೊಳ್ಳಬೇಡಿ ! – ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ

ಬಿಹಾರದ ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ ಇವರಿಂದ ಕರೆ

ಬಿಹಾರದ ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ್

ಪಾಟಲಿಪುತ್ರ (ಬಿಹಾರ) – ಹೋಳಿ ಹಬ್ಬದಂದು ಮುಸಲ್ಮಾನರು ಮನೆಯಲ್ಲೇ ನಮಾಜ ಮಾಡಬೇಕು ಎಂದು ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಸಲಹೆ ನೀಡಿದ್ದಾರೆ. ಬಿಹಾರದ ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ್ ಈ ಸಲಹೆಯನ್ನು ಬೆಂಬಲಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಹರಿಭೂಷಣ ಠಾಕೂರ ಬಚೌಲ್ ಅವರು, ಸಂಭಲ್‌ನ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಹೇಳಿರುವುದು ಖಂಡಿತವಾಗಿಯೂ ಶೇ.100 ರಷ್ಟು ಯೋಗ್ಯವಾಗಿದೆ. ನಾನು ಬಿಹಾರದಲ್ಲಿಯೂ ಇದೇ ಕರೆ ನೀಡುತ್ತೇನೆ. ವರ್ಷದಲ್ಲಿ ಒಟ್ಟು 52 ಶುಕ್ರವಾರಗಳಿವೆ. ಈ ಬಾರಿ ಹೋಳಿ ಹಬ್ಬ ಶುಕ್ರವಾರವೇ ಇದೆ. ಮುಸಲ್ಮಾನರು ಈ ದಿನ ಮನೆಯಲ್ಲೇ ಇರಬೇಕು ಅಥವಾ ಹೊರಗೆ ಹೋದರೆ ದೊಡ್ಡ ಮನಸ್ಸಿನಿಂದ ಹೊರಗೆ ಹೋಗಬೇಕು. ಅವರಿಗೆ ಯಾರಾದರೂ ಬಣ್ಣ ಹಾಕಿದರೆ ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದರು. ಮೂಲತಃ ಅವರೇ ಹೋಳಿ ಹಬ್ಬದ ಬಣ್ಣಗಳು, ಪಿಚಕಾರಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ; ಆದರೆ ಇದೇ ಬಣ್ಣ ಹಚ್ಚಿದರೆ ಹಿಂಸಾಚಾರ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು.

ಜನತಾ ದಳ (ಸಂಯುಕ್ತ) ಪಕ್ಷದ ನಾಯಕ ಮತ್ತು ಸಚಿವ ಅಶೋಕ ಚೌಧರಿಯವರ ಆಕ್ಷೇಪ

ಬಿಹಾರ ಸರಕಾರದ ಸಚಿವ ಮತ್ತು ಜನತಾ ದಳ (ಸಂಯುಕ್ತ) ನಾಯಕ ಅಶೋಕ ಚೌಧರಿ ಶಾಸಕ ಹರಿಭೂಷಣ ಠಾಕೂರ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೇಶ ಎಲ್ಲರದ್ದು, ಇಲ್ಲಿ ಪ್ರತಿಯೊಂದು ಧರ್ಮದ ಜನರು ಪರಸ್ಪರ ಹಬ್ಬಗಳನ್ನು ಮತ್ತು ಉತ್ಸವಗಳನ್ನು ಸಂತೋಷದಿಂದ ಆಚರಿಸುತ್ತಾರೆ. ಇದಕ್ಕೆ ಯಾರಿಗೂ ಯಾವುದೇ ಆಕ್ಷೇಪವಿಲ್ಲ. ಭಾಜಪ ಶಾಸಕರು ಇಂತಹ ಹೇಳಿಕೆಗಳನ್ನು ತಪ್ಪಿಸಬೇಕು. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದಕ್ಕೂ ನಮ್ಮ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.