Sambhal SP Strict Warning : ಹೋಳಿ ರಾಷ್ಟ್ರೀಯ ಹಬ್ಬ, ಆದರೆ ಶುಕ್ರವಾರದ ನಮಾಜ್ ಒಂದು ಸಮುದಾಯದ ಮೇಳ ! – ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಶ್ನೋಯ್

ಸಂಭಲ್ (ಉತ್ತರ ಪ್ರದೇಶ) ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಶ್ನೋಯ್ ಅವರ ಹೇಳಿಕೆ!

ಸಂಭಲ್ (ಉತ್ತರ ಪ್ರದೇಶ) – ಹೋಳಿ ಹಬ್ಬ ವರ್ಷಕ್ಕೊಮ್ಮೆ ಬರುತ್ತದೆ. ಶುಕ್ರವಾರದ ಮಧ್ಯಾಹ್ನದ ನಮಾಜ್ ವಿಶೇಷ ಹಬ್ಬವಲ್ಲ. ಬದಲಿಗೆ ಅದು ಒಂದು ನಿರ್ದಿಷ್ಟ ಸಮುದಾಯದ ಸಭೆ, ಎಂದು ಸಂಭಲ್ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಶ್ನೋಯ್ ಹೇಳಿದ್ದಾರೆ. ಮಾರ್ಚ್ 14 ರಂದು ಶುಕ್ರವಾರ, ಹೋಳಿ ಹಬ್ಬ ಮುಗಿದ ನಂತರ ಮಧ್ಯಾಹ್ನ 2:30 ಕ್ಕೆ ನಮಾಜ್ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಇವರು, ಶುಕ್ರವಾರ ವರ್ಷದಲ್ಲಿ 52 ಬಾರಿ ಬರುತ್ತದೆ, ಹೋಳಿ ಮತ್ತು ಈದ್ ಹಬ್ಬಗಳು ವರ್ಷಕ್ಕೊಮ್ಮೆ ಬರುತ್ತವೆ. ಹೋಳಿ ಬಣ್ಣದಿಂದ ಧರ್ಮ ಹಾಳಾಗಬಾರದು ಅಥವಾ ಬೇರೆ ಯಾವುದೇ ಸಮಸ್ಯೆ ಉಂಟಾಗಬಾರದು, ಆದ್ದರಿಂದ ಆ ಜನರು ಮನೆಯಲ್ಲಿಯೇ ನಮಾಜ್ ಮಾಡಬೇಕು ಎಂದಿದ್ದರು.

ಸಂಪಾದಕೀಯ ನಿಲುವು

ಈ ಹೇಳಿಕೆಯಿಂದ ಬಿಶ್ನೋಯ್ ಅವರನ್ನು ಟೀಕಿಸಬಹುದು; ಆದರೆ ಹೋಳಿ ರಾಷ್ಟ್ರೀಯ ಹಬ್ಬವಾಗಿರುವುದರಿಂದ, ಅದರ ಮುಂದೆ ಯಾವುದೇ ಧರ್ಮದ ಧಾರ್ಮಿಕ ಆಚರಣೆ ಸೀಮಿತ ಪ್ರಾಮುಖ್ಯತೆಯನ್ನು ಹೊಂದಿದೆ, ಈ ಸ್ಪಷ್ಟತೆಯನ್ನು ಪ್ರತಿಯೊಬ್ಬ ಹಿಂದೂವೂ ಹೊಂದಿರಬೇಕು!