ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಶ್ರೀರಾಮನ ನಾಮಜಪ ಮಾಡುವಾಗ ಶಾಂತ ಅನಿಸುವುದು ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಆನಂದದ ಅರಿವಾಗುವುದು, ಇದರ ಹಿಂದಿನ ಕಾರಣಮೀಮಾಂಸೆ

೧. ಅನುಭೂತಿ

‘ನನಗೆ ಶ್ರೀರಾಮನ ನಾಮಜಪ ಮಾಡುವಾಗ ಶಾಂತವೆನಿಸುತ್ತದೆ ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಆನಂದದ ಅರಿವಾಗುತ್ತದೆ. ಮುಂದುಮುಂದಿನ ಹಂತಗಳ ಅನುಭೂತಿಗಳಾದ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಈ ಕ್ರಮಕ್ಕನುಸಾರ ಬರುತ್ತವೆ, ಅಂದರೆ ಮೊದಲು ಆನಂದದ ಮತ್ತು ನಂತರ ಶಾಂತಿಯ ಅನುಭೂತಿ ಇರುತ್ತದೆ. ಯುಗಗಳಿಗನುಸಾರವೂ ಈ ಕ್ರಮವು ಗಮನಕ್ಕೆ ಬರುತ್ತದೆ. ಮೊದಲು ತ್ರೇತಾಯುಗವಾಯಿತು ಮತ್ತು ನಂತರ ದ್ವಾಪರಯುಗವಾಯಿತು. ತ್ರೇತಾಯುಗದಲ್ಲಿ ಶ್ರೀರಾಮನ ಅವತಾರವಾಯಿತು. ಅವನ ನಾಮಜಪ ಮಾಡುವಾಗ ನನಗೆ ಶಾಂತವೆನಿಸಿತು. ನಂತರದ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವಾಯಿತು. ಅವನ ನಾಮಜಪ ಮಾಡುವಾಗ ಆನಂದವೆನಿಸಿತು.

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

೨. ಅನುಭೂತಿಗಳ ಹಿಂದಿನ ಕಾರಣಮೀಮಾಂಸೆ

೨ ಅ. ಮೊದಲು ಸತ್ಯಯುಗ, ನಂತರ ತ್ರೇತಾ, ನಂತರ ದ್ವಾಪರ ಮತ್ತು ಎಲ್ಲಕ್ಕಿಂತ ಕೊನೆಗೆ ಕಲಿಯುಗ, ಹೀಗೆ ನಾಲ್ಕು ಯುಗಗಳ ಕ್ರಮವಿದೆ. ಸತ್ಯಯುಗದಲ್ಲಿ ಮನುಷ್ಯನ ಸಾತ್ತ್ವಿಕತೆಯ ಪ್ರಮಾಣ ಎಲ್ಲಕ್ಕಿಂತ ಹೆಚ್ಚಿತ್ತು. ಮುಂದೆ ನಾಲ್ಕನೇ ಯುಗದವರೆಗೆ ಪ್ರತಿಯೊಂದು ಯುಗದಲ್ಲಿ ಸಾತ್ತ್ವಿಕತೆ ಉತ್ತರೋತ್ತರ ಕಡಿಮೆಯಾಯಿತು. ಅನುಭೂತಿಗಳ ಕ್ರಮದ ವಿಚಾರ ಮಾಡಿದರೆ, ಅದ್ವೈತದ (‘ನಾನು ಮತ್ತು ಈಶ್ವರ ಒಂದೇ ಆಗಿದ್ದೇವೆ’) ಅನುಭೂತಿಯನ್ನು ಸರ್ವಶ್ರೇಷ್ಠ ಅನುಭೂತಿ ಎಂದು ತಿಳಿಯಲಾಗುತ್ತದೆ. ಅದರ ನಂತರ ಎರಡನೇಯ ಕ್ರಮದಲ್ಲಿ ಶಾಂತಿಯ ಅನುಭೂತಿ ಶ್ರೇಷ್ಠವಾಗಿದೆ. ಅದಕ್ಕೂ ಮುಂದೆ ಇಳಿಕೆಯ ಕ್ರಮದಲ್ಲಿ ಆನಂದ,ಚೈತನ್ಯ, ಭಾವ ಮತ್ತು ಎಲ್ಲಕ್ಕಿಂತ ಕನಿಷ್ಠ ಸ್ತರದಲ್ಲಿ ಶಕ್ತಿಯ ಅನುಭೂತಿ ಎಂದು ತಿಳಿಯಲಾಗುತ್ತದೆ. ಸತ್ಯಯುಗದಲ್ಲಿ ಮನುಷ್ಯನ ಸಾತ್ತ್ವಿಕತೆ ಎಲ್ಲಕ್ಕಿಂತ ಹೆಚ್ಚಿದ್ದುದರಿಂದ ಎಲ್ಲ ಜನರು ಅದ್ವೈತದ, ಅಂದರೆ ಸರ್ವೋಚ್ಚ ಅನುಭೂತಿಯ ಸ್ಥಿತಿಯಲ್ಲಿದ್ದರು. ಮುಂದೆ ಮನುಷ್ಯನ ಸಾತ್ತ್ವಿಕತೆ ಸ್ವಲ್ಪ ಕಡಿಮೆಯಾಯಿತು ಮತ್ತು ಸಾತ್ತ್ವಿಕತೆಯ ಕ್ರಮಕ್ಕನುಸಾರ ಎರಡನೇಯ ಕ್ರಮಾಂಕದಲ್ಲಿರುವ ತ್ರೇತಾಯುಗದಲ್ಲಿ ಶ್ರೀರಾಮನ ಅವತಾರವಾಯಿತು. ಆದುದರಿಂದ ಅವನ ನಾಮಜಪವನ್ನು ಮಾಡುವಾಗ ಅನುಭೂತಿಗಳಲ್ಲಿ ಶ್ರೇಷ್ಠತೆಯಲ್ಲಿ ಎರಡನೇಯ ಕ್ರಮಾಂಕದಲ್ಲಿರುವ ಶಾಂತಿಯ ಅನುಭೂತಿ ಬಂದಿತು. ತ್ರೇತಾಯುಗದ ತುಲನೆಯಲ್ಲಿ ಕಡಿಮೆ ಸಾತ್ತ್ವಿಕತೆ ಇರುವ ಮೂರನೇಯ ಕ್ರಮಾಂಕದ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವಾಯಿತು. ಆದುದರಿಂದ ಅವನ ನಾಮಜಪವನ್ನು ಮಾಡುವಾಗ ಅನುಭೂತಿಗಳಲ್ಲಿ ಮೂರನೇಯ ಕ್ರಮಾಂಕದಲ್ಲಿರುವ ಆನಂದದ ಅನುಭೂತಿ ಬಂದಿತು.

೨ ಆ. ಶ್ರೀರಾಮನ ತತ್ತ್ವವು ಶ್ರೀವಿಷ್ಣುವಿನ ನಿರ್ಗುಣ ರೂಪಕ್ಕೆ ಹೆಚ್ಚು ಸಂಬಂಧಿಸಿದೆ; ಆದುದರಿಂದ ಶ್ರೀರಾಮನ ನಾಮಜಪವನ್ನು ಮಾಡುವಾಗ ನಿರ್ಗುಣ ರೂಪಕ್ಕೆ ಸಂಬಂಧಿಸಿದ ಶಾಂತಿಯ ಅನುಭೂತಿ ಬಂದಿತು. ಶ್ರೀಕೃಷ್ಣನ ತತ್ತ್ವವು ಶ್ರೀವಿಷ್ಣುವಿನ ಸಗುಣ ರೂಪಕ್ಕೆ ಹೆಚ್ಚು ಸಂಬಂಧಿಸಿದೆ; ಆದುದರಿಂದ ಶ್ರೀಕೃಷ್ಣನ ನಾಮಜಪ ಮಾಡುವಾಗ ನಿರ್ಗುಣ ರೂಪಕ್ಕೆ ಕಡಿಮೆ ಸಂಬಂಧಿಸಿದ ಆನಂದದ ಅನುಭೂತಿ ಬಂದಿತು. ಯುಗಗಳಿಗನುಸಾರ ದೇವತೆಗಳ ಆಯಾ ರೂಪಗಳಲ್ಲಿ ಕಾರ್ಯವನ್ನು ಮಾಡುವ ಸ್ತರ ಬದಲಾಗುತ್ತದೆ. ಆದುದರಿಂದ ಆ ರೂಪಗಳಿಗನುಸಾರ ಅನುಭೂತಿ ಬರುವ ಸ್ವರೂಪವೂ ಬದಲಾಗುತ್ತದೆ.

೨ ಇ. ದೇವತೆಗಳ ಗುಣವೈಶಿಷ್ಟ್ಯಗಳಿಗನುಸಾರವೂ ಅನುಭೂತಿಗಳು ಬಂದವು. ಶ್ರೀರಾಮನ ಹೆಸರನ್ನು ಉಚ್ಚರಿಸಿದರೆ, ಶ್ರೀರಾಮನಶಾಂತ ಮುದ್ರೆಯಿರುವ ರೂಪವು ಕಣ್ಣುಗಳೆದುರು ಬರುತ್ತದೆ. ತದ್ವಿರುದ್ಧ ಶ್ರೀಕೃಷ್ಣನ ಹೆಸರು ಉಚ್ಚರಿಸಿದರೆ, ಶ್ರೀಕೃಷ್ಣನ ಆನಂದದ ಮುದ್ರೆಯಿರುವ ರೂಪವು ಕಣ್ಣುಗಳೆದುರು ಬರುತ್ತದೆ. ‘ಶ್ರೀಕೃಷ್ಣನು ಬಾಲಲೀಲೆಗಳ ಮಾಧ್ಯಮದಿಂದ ಭಕ್ತರಿಗೆ, ಹಾಗೆಯೇ ರಾಸಕ್ರೀಡೆಯ ಮಾಧ್ಯಮದಿಂದ ಗೋಪಿಯರಿಗೆ ಬಹಳಷ್ಟು ಅನಂದವನ್ನು ನೀಡಿದನು’, ಎಂದು ಶ್ರೀಕೃಷ್ಣನ ಚರಿತ್ರೆಯಲ್ಲಿದೆ. ಶ್ರೀರಾಮನ ನಾಮಜಪ ಮಾಡುವಾಗ ಶ್ರೀರಾಮನ ಶಾಂತಮಯ ರೂಪಕ್ಕೆ ಹೊಂದುವ ಶಾಂತಿಯ ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಶ್ರೀಕೃಷ್ಣನ ಆನಂದದಾಯಕ ರೂಪಕ್ಕೆ ಹೊಂದುವ ಆನಂದದ ಅನುಭೂತಿ ಬಂದಿತು.’

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೨೬.೩.೨೦೨೦)

ಪಂಚತತ್ತ್ವಗಳಿಗೆ ಸಂಬಂಧಿಸಿದ ಸಿದ್ಧಾಂತಗಳು ಸಂತರಿಗೆ ಅನ್ವಯಿಸುವುದಿಲ್ಲ

‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗಿರುತ್ತವೆ’, ಈ ಸಿದ್ಧಾಂತವು ಸಾಮಾನ್ಯ ವಸ್ತು ಮತ್ತು ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಅವು ಸಂತರಿಗೆ ಅನ್ವಯಿಸುವುದಿಲ್ಲ !

ಇದರ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

ಶಬ್ದ : ಸಾಮಾನ್ಯ ವ್ಯಕ್ತಿಯ ಸಂದರ್ಭದಲ್ಲಿ ಅವನ ಗಾಯನವನ್ನು ಇಂತಿಷ್ಟು ಸಮಯಕ್ಕಿಂತ ಹೆಚ್ಚು ಕೇಳಿದರೆ ಬೇಸರವಾಗುತ್ತದೆ; ಆದರೆ ಸಂತರು ಸ್ವತಃ ಹಾಡಿದ ಪದಗಳನ್ನು (ಭಜನೆ) ಕೇಳುವಾಗ ಅವರ ಗಾಯನವು ಕಿವಿಗಳಿಗೆ ಸುಮಧುರವೆನಿಸುತ್ತದೆ ಮತ್ತು ತುಂಬಾ ಹೊತ್ತು ಆ ಪದಗಳನ್ನು ಕೇಳಬಹುದು, ಉದಾ. ಪ.ಪೂ. ಭಕ್ತರಾಜ ಮಹಾರಾಜರು ಹಾಡಿದ ಭಜನೆಗಳು.

ಸ್ಪರ್ಶ : ಸಾಮಾನ್ಯ ವಯಸ್ಕರ ವ್ಯಕ್ತಿಯ ಚರ್ಮ ಒರಟಾಗಿರುತ್ತದೆ; ಆದರೆ ವಯಸ್ಕರ ಸಂತರ ಚರ್ಮವನ್ನು ಸ್ಪರ್ಶಿಸಿದರೆ ಅದು ಮೃದುವಾಗಿರುತ್ತದೆ, ಉದಾ. ಸನಾತನ ಸಂಸ್ಥೆಯ ಸದ್ಗುರು (ಸೌ.) ಸಖದೇವ ಅಜ್ಜಿಯವರ ಚರ್ಮದ ಸ್ಪರ್ಶವು ಅತ್ಯಂತ ಮೃದುವಾಗಿತ್ತು.

ರೂಪ : ಸಾಮಾನ್ಯ ವ್ಯಕ್ತಿಯ ಹಸ್ತಾಕ್ಷರ ಅಥವಾ ಮುಖ, ಅಂದರೆ ರೂಪ ಚೆನ್ನಾಗಿಲ್ಲದಿದ್ದರೆ ಅದರಿಂದ ಕೆಟ್ಟ ಸ್ಪಂದನಗಳ ಅರಿವಾಗುತ್ತದೆ; ಆದರೆ ಸಂತರ ಹಸ್ತಾಕ್ಷರ ಅಥವಾ ಮುಖ ನೋಡಲು ಚೆನ್ನಾಗಿಲ್ಲದಿದ್ದರೂ, ಅದರಿಂದ ಒಳ್ಳೆಯ ಸ್ಪಂದನವೇ ಅರಿವಾಗುತ್ತದೆ.

ರಸ : ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ಬೇಯಿಸಿದ ಆಹಾರದ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ ಎಂದೇನಿಲ್ಲ; ಆದರೆ ಸಂತರ ಆಶ್ರಮದಲ್ಲಿ ಮಹಾಪ್ರಸಾದ ಅಥವಾ ಸಂತರು ಮಾಡುತ್ತಿರುವ ಅನ್ನಸಂತರ್ಪಣೆಯ ಸಮಯದಲ್ಲಿ ತಯಾರಿಸಿದ ಮಹಾಪ್ರಸಾದವು ಎಲ್ಲರಿಗೂ ರುಚಿಕರವೆನಿಸುತ್ತದೆ.

ಗಂಧ : ಸಾಮಾನ್ಯ ವ್ಯಕ್ತಿಯ ದೇಹಕ್ಕೆ ದುರ್ಗಂಧ ಬರುತ್ತದೆ. ಅದು ಹೋಗಲು ಅವರಿಗೆ ಸುಗಂಧದ್ರವ್ಯಗಳನ್ನು ಉಪಯೋಗಿಸಬೇಕಾಗುತ್ತದೆ; ಆದರೆ ಸಂತರ ದೇಹಕ್ಕೆ ಸತತ ದೈವೀ ಸುಗಂಧ ಬರುತ್ತದೆ, ಉದಾ. ಪ.ಪೂ. ಭಕ್ತರಾಜ ಮಹಾರಾಜರ ಸ್ನಾನದ ಮೊದಲೂ ಅವರ ದೇಹಕ್ಕೆ ದೈವೀಸುಗಂಧವೇ ಬರುತ್ತಿತ್ತು.’

– (ಪರಾತ್ಪರ ಗುರು) ಡಾ. ಆಠವಲೆ (೧೬.೪.೨೦೧೬)