ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹಿಂದೂ ಸೇವಾ ಸಮಿತಿ ವತಿಯಿಂದ ಬಾ. ಸೌಂದತ್ತಿ (ಬೆಳಗಾವಿ)ಯಲ್ಲಿ ಬೃಹತ್ ಹಿಂದೂ ಸಮಾವೇಶ
ಸೌಂದತ್ತಿ (ಬೆಳಗಾವಿ) – ‘ಸದ್ಯ ಹಿಂದೂ ಅಪ್ಪ-ಅಮ್ಮಂದಿರು ದುಡಿಯುವುದರಲ್ಲಿ ಮಗ್ನರಿದ್ದಾರೆ. ಲವ್ ಜಿಹಾದ್ ಅನ್ನು ತಡೆಯಲಿಕ್ಕಿದ್ದರೆ ಪೋಷಕರು ಸಮಯ ತೆಗೆದು ಮಗಳಿಗೆ ಯಾರ ಜೊತೆ ಸ್ನೇಹವಿದೆ, ಏನು ಚಾಟ್ ಮಾಡುತ್ತಿದ್ದಾಳೆ. ಎಲ್ಲಿ ಹೋಗುತ್ತಿದ್ದಾಳೆ ಎಂದು ಗಮನಿಸುವ ಆವಶ್ಯಕತೆಯಿದೆ. ಇಂದು ಹಿಂದೂಗಳ ಆಚರಣೆಯ ನಕಲು ಮಾಡಿ ಅವರನ್ನು ಹಿಂದೂಗಳ ದಾರಿಯಲ್ಲೇ ಕರೆದೊಯ್ದು ಮತಾಂತರಿಸುವ ಕೃತ್ಯಗಳಾಗುತ್ತಿವೆ. ಇಂದು ಹಿಂದೂಗಳು ಜಾತ್ಯತೀತದ ಭ್ರಮೆಯಲ್ಲಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರ ತರಹ ಇದ್ದೇವೆ, ಚೆನ್ನಾಗಿದ್ದೇವೆ ಎಂದೆನಿಸಿಕೊಂಡಿದ್ದಾರೆ. ಕಾಶ್ಮೀರಿ ಪಂಡಿತರು ಸಹ ೩೦ ವರ್ಷಗಳ ಹಿಂದೆ ಹೀಗೇ ಭ್ರಮೆಯಲ್ಲಿದ್ದರು. ಆದರೆ ಹಿಂದೂಗಳು ಅವರ ಹೆಣ್ಮಕ್ಕಳನ್ನು ಬಿಟ್ಟು ಕಾಶ್ಮೀರದಿಂದ ತೊಲಗಬೇಕೆಂದು ಹಿಂದೂಗಳ ಮನೆಯ ಬಾಗಿಲಿಗೆ ಕರಪತ್ರ ಅಂಟಿಸಿದಾಗಲೇ ಅವರ ಭ್ರಮೆ ದೂರವಾಯಿತು. ಹಾಗಾಗಿ ನಾವಿಂದು ಈ ಭ್ರಮೆಯಿಂದ ಹೊರಬಂದು ಜಾಗೃತಗೊಳಿಸಬೇಕಿದೆ’, ಎಂದು ಖ್ಯಾತ ವಾಗ್ಮಿ ಕು. ಚೈತ್ರಾ ಕುಂದಾಪುರ ಇವರು ಕರೆ ನೀಡಿದ್ದಾರೆ. ಅವರು ಹಿಂದೂ ಸೇವಾ ಸಮಿತಿ ವತಿಯಿಂದ ಜನವರಿ ೨೦ ರಂದು ರಾಯಬಾಗ್ ತಾಲೂಕಿನ ಬಾ. ಸೌಂದತ್ತಿಯಲ್ಲಿ ಆಯೋಜಿಸಲಾದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹುಕ್ಕೇರಿಯ ಕ್ಯಾರಗುಡ್ಡದ ಪುಣ್ಯಕ್ಷೇತ್ರ ಅವಜಿಕರ ಆಶ್ರಮದ ಶ್ರೀ. ಸ. ಸ. ಅಭಿನವ ಮಂಜುನಾಥ ಸ್ವಾಮಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಶ್ರೀ. ವಿಠ್ಠಲ ಮಾಳಿ ಇವರೂ ಉಪಸ್ಥಿತರಿದ್ದರು. ಸುಮಾರು ೨ ಸಾವಿರ ಜನರು ಇದರ ಲಾಭ ಪಡೆದರು.