ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಮೂರ್ತಿ ಧ್ವಂಸ !

ಢಾಕಾ (ಬಾಂಗ್ಲಾದೇಶ) – ನೆತರಕೊನಾ ಜಿಲ್ಲೆಯಲ್ಲಿನ ಮೋಹನಗಂಜ ನಾರಾಯಿಚ ಗ್ರಾಮದಲ್ಲಿ ಜನವರಿ ೨೬ ರ ವಸಂತ ಪಂಚಮಿಯ ದಿನದಂದು ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಪೂಜೆ ನಡೆಯುತ್ತಿರುವಾಗಲೇ ಮಂಟಪದ ಮೇಲೆ ದಾಳಿ ಮಾಡಿ ಮೂರ್ತಿಯನ್ನು ಧ್ವಂಸಗೊಳಿಸಿದರು. ಈ ಘಟನೆಯಲ್ಲಿ ಇಬ್ಬರೂ ಹಿಂದುಗಳು ಗಾಯಗೊಂಡರು. ದಾಳಿಯ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೬ ಜನರನ್ನು ಬಂಧಿಸಿದ್ದಾರೆ. ನೇತರಕೋನಾ ಜಿಲ್ಲೆಯ ಪೂರಬಧಾಲಾ ಮಾರುಕಟ್ಟೆಯಲ್ಲಿ ಜನವರಿ ೨೩ ರಂದು ಕೂಡ ಮುಸಲ್ಮಾನರಿಂದ ದಾಳಿ ನಡೆಸಿ ಶ್ರೀ ಸರಸ್ವತಿ ದೇವಿಯ ಮೂರ್ತಿಯ ಜೊತೆಗೆ ಇತರ ದೇವತೆಗಳ ಮೂರ್ತಿಗಳು ಕೂಡ ಭಗ್ನಗೊಳಿಸಿದ್ದರು.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರ ಪ್ರಕಾರ ಮೂರ್ತಿ ಪೂಜೆ ಇಸ್ಲಾಂನಲ್ಲಿ ಒಪ್ಪುವುದಿಲ್ಲದ್ದರಿಂದ ಅವರು ಇಲ್ಲಿಯವರೆಗಿನ ಇತಿಹಾಸ ಮೂರ್ತಿ ಬಗ್ನ ಮಾಡುವುದು, ಅದು ಇಂದಿಗೂ ಕೂಡ ಅದೇ ರೀತಿಯ ಕೃತ್ಯ ಮಾಡುತ್ತಾರೆ; ಆದರೆ ಇಂತಹವರಿಗೆ ಯಾರು ಕೂಡ ಜಾತ್ಯಾತೀತತೆಯ, ಸರ್ವಧರ್ಮ ಸಮಭಾವದ, ಪ್ರಗತಿಪರದ ಮುಂತಾದವರು ಉಪದೇಶ ಮಾಡುವ ಪ್ರಯತ್ನ ಮಾಡುವುದಿಲ್ಲ; ಆದರೆ ಹಿಂದುಗಳಿಗೆ ಈ ಉಪದೇಶ ನೀಡಿ ಅನೇಕ ದಶಕಗಳಿಂದ ಅವರನ್ನು ಪ್ರಜ್ಞ ಹೀನರನ್ನಾಗಿ ಮಾಡಿದ್ದಾರೆ, ಇದು ಹಿಂದುಗಳು ತಿಳಿದುಕೊಳ್ಳುವ ದಿನವೇ ಸುದಿನ !