ಭಾರತದಿಂದ ಆಸ್ಟ್ರೇಲಿಯಾ ಸರಕಾರದ ಬಳಿ ಕಳವಳ !

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಸ್ಥಾನಗಳ ಮೇಲಾಗುವ ದಾಳಿಗಳ ಪ್ರಕರಣ

ನವ ದೆಹಲಿ – ಆಸ್ಟ್ರೇಲಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ಖಲಿಸ್ತಾನಿಗಳ ಆಕ್ರಮಣದಿಂದ ಆಸ್ಟ್ರೇಲಿಯದ ಕ್ಯನ್‌ಬೆರಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಕಠೋರವಾಗಿ ಟೀಕೆ ಮಾಡುತ್ತಾ ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳ ಹೆಚ್ಚುತ್ತಿರುವ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಭಾರತೀಯ ರಾಯಭಾರಿ ಕಚೇರಿಯು ಪ್ರಸಾರ ಮಾಡಿದ ಮನವಿಯಲ್ಲಿ, ನಾವು ಮೆಲ್‌ಬರ್ನ್‌ನಲ್ಲಿನ ಹಿಂದೂಗಳ ೩ ದೇವಸ್ಥಾನಗಳ ಮೇಲಿನ ಧ್ವಂಸವನ್ನು ಖಂಡಿಸುತ್ತೇವೆ. ‘ಶಾಂತಿಯುತ ಹಾಗೂ ಬಹುಧರ್ಮಿ ಭಾರತೀಯರಲ್ಲಿ ದ್ವೇಷ ಹಾಗೂ ವಿಭಜನೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ’, ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಖಲಿಸ್ತಾನಿ ಬೆಂಬಲಿಗರು ಆಸ್ಟ್ರೇಲಿಯಾದಲ್ಲಿ ತಮ್ಮ ಚಟುವಟಿಕೆಯನ್ನು ಹೆಚ್ಚಿಸುತ್ತಿದ್ದಾರೆ ಹಾಗೂ ಅವರಿಗೆ ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ ಈ ಭಯೋತ್ಪಾದಕ ಸಂಘಟನೆ ಹಾಗೂ ಆಸ್ಟ್ರೇಲಿಯಾದ ಹೊರ ಭಾಗದಿಂದ ಸಹಾಯ ಮಾಡಲಾಗುತ್ತಿದೆ. ನಾವು ನಮ್ಮ ಕಳವಳವನ್ನು ಆಸ್ಟ್ರೇಲಿಯಾ ಸರಕಾರಕ್ಕೆ ತಿಳಿಸಿದ್ದೇವೆ. ಹಾಗೂ ಭಾರತೀಯರ ರಕ್ಷಣೆಯ ಬಗ್ಗೆ ಆಶ್ವಾಸನೆ ನೀಡಬೇಕೆಂದು ವಿನಂತಿಸಿದ್ದೇವೆ. ಹಾಗೂ ಅಲ್ಲಿನ ಭಾರತದ ಸಾರ್ವಭೌಮತ್ವಕ್ಕೆ ಹಾನಿಯನ್ನುಂಟು ಮಾಡುವವರನ್ನು ತಡೆಯಬೇಕೆಂದು ಮನವಿ ಮಾಡಿದ್ದೇವೆ.

ಸಂಪಾದಕರ ನಿಲುವು

* ಭಾರತೀಯರನ್ನು ರಕ್ಷಿಸುವಂತೆ ವಿನಂತಿ

* ಭಾರತ ಸರಕಾರವು ಭಾರತದಲ್ಲಿಯೂ ಹೆಚ್ಚುತ್ತಿರುವ ಖಲಿಸ್ತಾನವಾದವನ್ನು ನಷ್ಟಗೊಳಿಸಲು ಕಠಿಣ ಹೆಜ್ಜೆ ಇಡುವ ಅವಶ್ಯಕತೆಯಿದೆ, ಎಂದು ಭಾರತೀಯರಿಗೆ ಅನಿಸುತ್ತದೆ !