ಸಾಕ್ಷ್ಯಚಿತ್ರ ಮೇಲೆ ನಿಷೇಧವಿರುವಾಗಲೂ ಕಮ್ಯುನಿಸ್ಟ ವಿದ್ಯಾರ್ಥಿ ಸಂಘಟನೆಯಿಂದ ತೋರಿಸುವ ಪ್ರಯತ್ನ ! |
ನವದೆಹಲಿ – ಗುಜರಾತದಲ್ಲಿನ ೨೦೦೨ ರ ದಂಗೆ ಮತ್ತು ಅದರಲ್ಲಿಯೂ ಗುಜರಾತನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸಹಭಾಗ ಈ ರೀತಿಯ ಮಂಡನೆ ಮಾಡಿರುವ ‘ಬಿ.ಬಿ.ಸಿ. ನ್ಯೂಸ್’ ಈ ವೃತ್ತವಾಹಿನಿಯ ಸಾಕ್ಷ್ಯಚಿತ್ರವು ಇಲ್ಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯು.) ತೋರಿಸಿದ್ದರಿಂದ ವಿವಾದವಾಯಿತು. ಕಮ್ಯುನಿಸ್ಟ ವಿಚಾರದ ‘ಜೆ.ಎನ್.ಯು.’ ವಿದ್ಯಾರ್ಥಿ ಸಂಘಟನೆಯು ಜನವರಿ ೨೪ ರಂದು ರಾತ್ರಿ ೯ ಗಂಟೆಗೆ ಸಕ್ಷ್ಯಚಿತ್ರ ತೋರಿಸಲು ಪ್ರಯತ್ನಿಸಿತು; ಆದರೆ ಅದಕ್ಕೆ ವಿರೋಧವಾದ ಕಾರಣ ಅದನ್ನು ತೋರಿಸಲು ಸಾಧ್ಯವಾಗಲಿಲ್ಲ. ವಿಶೇಷವೆಂದರೆ ಕೇಂದ್ರ ಸರಕಾರವು ಈ ಭಾರತದಲ್ಲಿ ಈ ಸಕ್ಷ್ಯಚಿತ್ರದ ಮೇಲೆ ನಿರ್ಬಂಧ ಹೇರಿರುವಾಗಲೂ ಅದನ್ನು ತೋರಿಸಲಾಗುತ್ತಿತ್ತು.
#FirstOnTNNavbharat: JNU में BBC की बैन डॉक्यूमेंट्री पर बवाल, पथराव के बाद वसंतकुंज थाने तक मार्च निकाल रहे छात्र
कैसे हुई हंगामे की शुरुआत? @aishvaryjain दे रहे हैं पूरी जानकारी#BBC #BBCDocumentary #BBCDocumentaryRow #JNU #JNUCampus pic.twitter.com/TDlxCGTj7q
— Times Now Navbharat (@TNNavbharat) January 24, 2023
ಜೆ.ಎನ್.ಯು. ಆಡಳಿತದವರು ಈ ಸಕ್ಷ್ಯಚಿತ್ರ ಪ್ರದರ್ಶನವನ್ನು ತಡೆಗಟ್ಟಲು ವಿಶ್ವವಿದ್ಯಾಲಯದ ಇಂಟರ್‌ನೆಟ್ ಮತ್ತು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿದರು, ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. ಅನಂತರ ಈ ಸಕ್ಷ್ಯಚಿತ್ರವನ್ನು ವಿರೋಧಿಸುವ ವಿದ್ಯಾರ್ಥಿಗಳು ಮತ್ತು ಬೆಂಬಲಿಸುವ ವಿದ್ಯಾರ್ಥಿಗಳಲ್ಲಿ ವಿವಾದ ನಡೆಯಿತು. ‘ಈ ವೇಳೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದರು’, ಎಂದು ‘ಜೆ.ಎನ್.ಯು.’ ಸಂಘಟನೆಯು ಆರೋಪಿಸಿದೆ.
ಸಂಪಾದಕೀಯ ನಿಲುವುಇಂತಹ ಹಿಂದೂದ್ವೇಷಿ ಹಾಗೂ ಕಾನೂನು ದ್ರೋಹಿ ಕಮ್ಯುನಿಷ್ಟ ವಿದ್ಯಾರ್ಥಿ ಸಂಘಟನೆಯ ಮೇಲೆ ಸರಕಾರ ನಿರ್ಬಂಧ ಹೇರಬೇಕು ! |