‘ಜಗತ್ತಿನಾದ್ಯಂತ ವಾಹನಗಳ ಅಪಘಾತಗಳಾಗುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲಿ ವಾಹನಗಳ ‘ಟೈಯರ್’ ಒಡೆದು ಅಪಘಾತವಾಗುವುದು, ಇದು ಸಹ ಒಂದು ಕಾರಣವಾಗಿದೆ. ಇದನ್ನು ತಪ್ಪಿಸಲು ವಾಹನದ ವೇಗವನ್ನು ನಿಯಂತ್ರಿಸುವುದು, ‘ಟೈಯರ್’ನಲ್ಲಿ ಯೋಗ್ಯ ಪ್ರಮಾಣದಲ್ಲಿ ಗಾಳಿ ಇರುವುದು ಮತ್ತು ವಾಹನಗಳ ‘ಟೈಯರ್’ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಅತ್ಯಂತ ಆವಶ್ಯಕವಾಗಿದೆ. ‘ಟೈಯರ್’ ಒಡೆಯುವ ಹಿಂದಿನ ಕಾರಣಗಳು ಮತ್ತು ‘ಟೈಯರ್’ನ ಕಾಳಜಿಯನ್ನು ಹೇಗೆ ವಹಿಸಬೇಕು ?’ ಈ ಬಗೆಗಿನ ಮಾರ್ಗದರ್ಶಕ ಅಂಶಗಳನ್ನು ಮುಂದೆ ಕೊಡಲಾಗಿದೆ.
೧. ವಾಹನಗಳ ‘ಟೈಯರ್’ ಒಡೆಯುವ ಹಿಂದಿನ ಕಾರಣಗಳು
೧ ಅ. ವಾಹನಚಾಲಕರು ವೇಗಮಿತಿಯನ್ನು ಪಾಲಿಸದಿರುವುದು : ‘ಅತಿವೇಗದಿಂದ ವಾಹನಗಳನ್ನು ಓಡಿಸುವುದು’ ಇದು ‘ಟೈಯರ್’ ಒಡೆಯುವ ಹಿಂದಿನ ಕಾರಣವಾಗಿದೆ. ಅನೇಕ ಬಾರಿ ಅಪಘಾತದ ನಂತರ ‘ಸಂಬಂಧಿತ ವಾಹನಚಾಲಕರು ಬಹಳ ವೇಗದಿಂದ ವಾಹನವನ್ನು ಓಡಿಸುತ್ತಿದ್ದರು’, ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆದುದರಿಂದ ವಾಹನ ಚಾಲಕರು ವೇಗಮಿತಿಯನ್ನು ಪಾಲಿಸುವುದು ಅತ್ಯಾವಶ್ಯಕವಾಗಿದೆ.
೨. ‘ಟೈಯರ್’ ಒಡೆಯದಂತೆ ವಹಿಸಬೇಕಾದ ಕಾಳಜಿ
೨ ಅ. ‘ಐ.ಎಸ್.ಐ.’ ಮಾರ್ಕ್ ಇರುವ ‘ಟೈಯರ್’ಅನ್ನು ಬಳಸಬೇಕು ! : ಸದ್ಯ ಮಾರುಕಟ್ಟೆಯಲ್ಲಿ ‘ಚೈನಾ ಮೆಡ್ ಟೈಯರ್’ಗಳು ಸಿಗುತ್ತವೆ. ಸುರಕ್ಷೆಯ ದೃಷ್ಟಿಯಿಂದ ಈ ‘ಟೈಯರ್’ ಗಟ್ಟಿ ಇರುವುದಿಲ್ಲ ಮತ್ತು ಬಾಳಿಕೆ ಬರುವುದಿಲ್ಲ. ಈ ‘ಟೈಯರ್’ನ ಬೆಲೆ ಕಡಿಮೆ ಇರುವುದರಿಂದ ಹೆಚ್ಚಿನ ವಾಹನಚಾಲಕರು ಈ ‘ಟೈಯರ್’ಅನ್ನು ಬಳಸುತ್ತಾರೆ; ಆದರೆ ‘ಐ.ಎಸ್.ಐ.’ ಮಾರ್ಕ್ ಇರುವ ‘ಟೈಯರ್’ ಬಳಸುವುದು ಆವಶ್ಯಕವಾಗಿದೆ.
೨ ಆ. ವಾಹನದ ಗಾಳಿಯನ್ನು ಪರೀಕ್ಷಿಸುವ ಸಂದರ್ಭದಲ್ಲಿ : ಸದ್ಯ ಹೆಚ್ಚಿನ ಪೆಟ್ರೋಲ್ ಪಂಪ್‌ಗಳಲ್ಲಿ ‘ಡಿಜಿಟಲ್’ ಯಂತ್ರಗಳು (ಮಶಿನ್ಸ್) ಲಭ್ಯವಿವೆ. ಇಂತಹ ‘ಡಿಜಿಟಲ್ ಮಶೀನ್’ನಲ್ಲಿ ಗಾಳಿಯನ್ನು ಪರೀಕ್ಷಿಸಬೇಕು. ಪ್ರವಾಸವನ್ನು ಆರಂಭಿಸಿದ ೫ ಕಿಲೋ ಮೀಟರ್‌ನೊಳಗೆ ಗಾಳಿಯನ್ನು ಪರೀಕ್ಷಿಸಬೇಕು. ಆಗ ‘ಟೈಯರ್’ ನಲ್ಲಿನ ಗಾಳಿ ತಣ್ಣಗಿರುವುದರಿಂದ ‘ಇಂಡಿಕೇಟರ್’ನಲ್ಲಿ ಸರಿಯಾದ ಪ್ರಮಾಣದ ಗಾಳಿಯನ್ನು ತೋರಿಸುತ್ತದೆ. ಕೆಲವರು ೩೦ ರಿಂದ ೪೦ ಕಿಲೋಮೀಟರ್ ದೂರ ಪ್ರಯಾಣಿಸಿದ ನಂತರ ಗಾಳಿ ತಪಾಸಣೆ ಮಾಡುತ್ತಾರೆ. ಆಗ ‘ಟೈಯರ್’ ನಲ್ಲಿನ ಗಾಳಿಯು ಬಿಸಿಯಾಗಿರುವುದರಿಂದ ‘ಟೈಯರ್’ನಲ್ಲಿನ ಗಾಳಿ ೪೫ ಇದ್ದರೂ, ‘ಇಂಡಿಕೇಟರ್’ ಅದನ್ನು ೩೨ ಇರುವುದಾಗಿ ತೋರಿಸುತ್ತದೆ.
೨ ಇ. ‘ಟೈಯರ್’ ‘ಪಂಕ್ಚರ್’ ಆಗಿದ್ದರೆ ‘ಪಂಕ್ಚರ್’ಅನ್ನು ವ್ಯವಸ್ಥಿತವಾಗಿ ತೆಗೆಯಬೇಕು ! : ಸದ್ಯ ಹೆಚ್ಚಿನ ವಾಹನಗಳಿಗೆ ‘ಟ್ಯೂಬ್‌ಲೆಸ್ ಟೈಯರ್’ ಇರುತ್ತವೆ. ಈ ‘ಟೈಯರ್ ಪಂಕ್ಚರ್’ ಆದರೆ ಅದರಲ್ಲಿನ ಗಾಳಿ ತಕ್ಷಣ ಕಡಿಮೆಯಾಗುವುದಿಲ್ಲ. ‘ಟೈಯರ್’ಗೆ ಚಿಕ್ಕ ತೂತು ಬಿದ್ದರೂ ೮ ರಿಂದ ೧೦ ದಿನಗಳ ನಂತರವೂ ‘ಟೈಯರ್’ನಲ್ಲಿ ಗಾಳಿ ಕಡಿಮೆಯಾಗುವುದಿಲ್ಲ. ‘ಟ್ಯೂಬ್’ ಇರುವ ಟೈಯರ್ ಪಂಕ್ಚರ್ ಆದರೆ ವಾಹನ ಚಲಿಸುವ ಸ್ಥಿತಿಯಲ್ಲಿದ್ದರೆ ಅಲುಗಾಡುತ್ತದೆ ಅಥವಾ ಶುರು ಮಾಡುವಾಗಲೂ ಅದು ಅಲುಗಾಡುತ್ತದೆ. ಆ ಸಮಯದಲ್ಲಿ ‘ಟೈಯರ್’ಅನ್ನು ತಕ್ಷಣ ಪರೀಕ್ಷಿಸಬೇಕು. ಅನೇಕ ಬಾರಿ ‘ಟೈಯರ್’ಅನ್ನು ಪೂರ್ಣ ತೆರೆಯದೇ ಮೇಲ್ನೋಟಕ್ಕೆ ‘ಪಂಕ್ಚರ್’ ತೆಗೆಯಲಾಗುತ್ತದೆ. ಹೀಗೆ ಮಾಡದೇ ‘ಟೈಯರ್’ ತೆಗೆದೇ ‘ಪಂಕ್ಚರ್’ ತೆಗೆಯಬೇಕು.
೨ ಈ. ಉಪಯೋಗಿಸದ ವಾಹನವನ್ನು ವಾರದಲ್ಲಿ ೧೦ ರಿಂದ ೨೦ ಕಿಲೋಮೀಟರ್ ಓಡಿಸುವುದು : ಕೆಲವು ವಾಹನಗಳನ್ನು ಅನೇಕ ದಿನ ಬಳಸಿರುವುದಿಲ್ಲ. ಅದರಿಂದ ಟೈಯರ್‌ಗಳು ಗಟ್ಟಿಯಾಗುತ್ತವೆ ಮತ್ತು ನಂತರ ಅವು ಸುಕ್ಕುಗಟ್ಟುತ್ತವೆ. ಇಂತಹ ವಾಹನಗಳನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗುವಾಗ ಅದರ ‘ಟೈಯರ್’ ಒಡೆಯುವ ಅಪಾಯ ಹೆಚ್ಚಿರುತ್ತದೆ. ಆದುದರಿಂದ ಕಡಿಮೆ ಬಳಕೆ ಇರುವ ವಾಹನಗಳನ್ನು ವಾರದಲ್ಲಿ ೧೦ ರಿಂದ ೨೦ ಕಿಲೋಮೀಟರ್ ದೂರದ ವರೆಗೆ ಓಡಿಸಬೇಕು. ಇದರಿಂದ ‘ಟೈಯರ್’ನ ಬಾಳಿಕೆ ಹೆಚ್ಚಾಗಿ ಅಪಘಾತಗಳನ್ನೂ ತಪ್ಪಿಸಬಹುದು.
೨ ಉ. ‘ಟೈಯರ್’ನ ಬಾಳಿಕೆಯ ಕಾಲಾವಧಿ ಮುಗಿದ ನಂತರ ಅದನ್ನು ತಕ್ಷಣ ಬದಲಾಯಿಸುವುದು ಆವಶ್ಯಕವಾಗಿದೆ ! : ಪ್ರತಿಯೊಂದು ‘ಟೈಯರ್’ ಮೇಲೆ ‘ಟ್ರೇಡ್ ವೆರ್ ಇಂಡಿಕೇಟರ್’ (TWI) ಇರುತ್ತದೆ. ಈ ‘ಇಂಡಿಕೇಟರ್’ವರೆಗೆ ‘ಟೈಯರ್’ ಸವೆದಿದ್ದರೆ ಅದರ ಬಾಳಿಕೆಯ ಕಾಲಾವಧಿ ಮುಗಿದಿರುತ್ತದೆ; ಆದರೆ ಕೆಲವು ವಾಹನಚಾಲಕರು ಆ ‘ಇಂಡಿಕೇಟರ್’ನ ಕೆಳಗೆ ಸವೆಯುವವರೆಗೆ ‘ಟೈಯರ್’ಅನ್ನು ಬಳಸುತ್ತಾರೆ. ‘ಟೈಯರ್’ನ ತಂತಿಗಳು ಕಾಣಿಸುತ್ತಿದ್ದರೂ ಅವರು ‘ಟೈಯರ್’ಅನ್ನು ಬದಲಾಯಿಸುವುದಿಲ್ಲ. ಇಂತಹ ತಪ್ಪುಗಳಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತವೆ. ವಾಹನಚಾಲಕನು ‘ಟ್ರೇಡ್ ವೇರ್ ಇಂಡಿಕೇಟರ್’ ಕಡೆಗೆ ಸತತವಾಗಿ ಗಮನವಿಡಬೇಕು. ಬಾಡಿಗೆಯೆಂದು ತೆಗೆದುಕೊಂಡ ವಾಹನದ ‘ಟೈಯರ್’ಅನ್ನು ಸಹ ಪ್ರವಾಸಕ್ಕೆ ಹೊರಡುವ ಮೊದಲು ಪರೀಕ್ಷಿಸಬೇಕು.
‘ವಾಹನಚಾಲಕರೇ, ವಾಹನಗಳ ಟೈಯರ್’ಗಳ ಸರಿಯಾದ ಕಾಳಜಿ ವಹಿಸಿ ಸುರಕ್ಷಿತವಾಗಿ ಪ್ರಯಾಣಿಸಿ !’ (೨೯.೧೨.೨೦೨೨)