ವಿಶೇಷ ಸಂಪಾದಕೀಯ ಎರಡು ತಪಗಳ ಸಾಧನೆ !


ಸಾಪ್ತಾಹಿಕ ಸನಾತನ ಪ್ರಭಾತವು ಇಂದು ೨೪ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. `ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸಾಪ್ತಾಹಿಕ (ಮರಾಠಿ) `ಸನಾತನ ಪ್ರಭಾತ’ದ ರೂಪದಲ್ಲಿ `ಸನಾತನ ಪ್ರಭಾತ’ದ ಆರಂಭವಾಯಿತು. `ಸನಾತನ ಪ್ರಭಾತ ನಿಯತಕಾಲಿಕೆಯನ್ನು ನಡೆಸುವುದು ಸಮಷ್ಟಿ ಸಾಧನೆಯಾಗಿದೆ ಮತ್ತು ಇದರಿಂದ ಈಶ್ವರಪ್ರಾಪ್ತಿ ಮಾಡಿಕೊಳ್ಳಲಿಕ್ಕಿದೆ’, ಎಂಬ ಭಾವದಿಂದ ಇದರ ಸಾಧಕರು ಸೇವೆಯನ್ನು ಮಾಡುತ್ತಿದ್ದಾರೆ.

ಈ ದಿನಪತ್ರಿಕೆಗೆ ದೇಶದ ಅನೇಕ ಸಂತರ ಆಶೀರ್ವಾದ ಲಭಿಸಿದೆ. ಈ ಆಧ್ಯಾತ್ಮಿಕ ಶಕ್ತಿಯಿಂದ ಈ ದಿನಪತ್ರಿಕೆ ಈಗಲೂ ಪ್ರಕಟವಾಗುತ್ತಿದೆ ಮತ್ತು ಮುಂದೆಯೂ ಆಗಲಿದೆ, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಯಾವ ಉದ್ದೇಶದಿಂದ ಈ ದಿನಪತ್ರಿಕೆಯನ್ನು ಪ್ರಾರಂಭಿಸಲಾಗಿತ್ತೋ ಆ ಉದ್ದೇಶದಂತೆ `ಸನಾತನ ಪ್ರಭಾತ’ವು ಶೇ. ೧೦೦ ರಷ್ಟು ತನ್ನ ಕಾರ್ಯವನ್ನು ಮಾಡಿದೆ’, ಎಂದು ಹೇಳಬಹುದು. ‘ಇದು ಹಿಂದೂ ಸಂಘಟನೆ, ರಾಷ್ಟ್ರರಕ್ಷಣೆ ಮತ್ತು ಧರ್ಮದ್ರೋಹಿಗಳ ವಿರುದ್ಧದ ಹೋರಾಟ ಇವುಗಳಿಗಾಗಿ ಸಾಧಕರು ಆರ್ಥಿಕ ಹಾನಿಯನ್ನು ಸಹಿಸಿ ನಡೆಸುತ್ತಿರುವ ಏಕೈಕ ದಿನಪತ್ರಿಕೆ’ ಈ ಧ್ಯೇಯವಾಕ್ಯದಿಂದಲೇ ಪತ್ರಿಕೆಯ ಉದ್ದೇಶ ಸ್ಪಷ್ಟವಾಗುತ್ತದೆ. ಇಂದು ಪೂರ್ಣ ದೇಶದಲ್ಲಿ ಹಿಂದುತ್ವದ ಅಲೆ ಎದ್ದಿದೆ. ಇಂದು ಹಿಂದೂಗಳು ಹಿಜಾಬ್, ಹಲಾಲ್, ಮಸೀದಿಗಳ ಮೇಲಿನ ಭೋಂಗಾಗಳು (ಧ್ವನಿವರ್ಧಕಗಳು) ಮುಂತಾದವುಗಳ ವಿರುದ್ಧ ಪ್ರಖರವಾಗಿ ಮಾತನಾಡುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಇಂದು ಹಿಂದುತ್ವದ ವಿಚಾರಗಳನ್ನು ಬೆಂಬಲಿಸುವ ಸರಕಾರಗಳಿವೆ; ಆದರೆ ‘ಸನಾತನ ಪ್ರಭಾತ’ ಆರಂಭವಾದಾಗ ಸ್ಥಿತಿ ಪೂರ್ಣ ಭಿನ್ನವಾಗಿತ್ತು. ಆ ಸಮಯದಲ್ಲಿ ‘ಸನಾತನ ಪ್ರಭಾತ’ದಿಂದ ಹಿಂದೂಗಳನ್ನು ಜಾಗೃತಗೊಳಿಸುವ ಕಾರ್ಯವನ್ನು ಆರಂಭಿಸಲಾಗಿತ್ತು. ಕಳೆದ ೨೪ ವರ್ಷಗಳಲ್ಲಿ `ಸನಾತನ ಪ್ರಭಾತ’ ಮಂಡಿಸಿದ ವಿಚಾರಗಳ ಆಧಾರದಲ್ಲಿಯೇ ಹಿಂದೂಗಳು ಕಾರ್ಯವನ್ನು ಮಾಡುತ್ತಿದ್ದಾರೆ. ಇದುವೇ `ಸನಾತನ ಪ್ರಭಾತ’ದ ಯಶಸ್ಸಾಗಿದೆ. ಭಾರತೀಯ ಪತ್ರಿಕೋದ್ಯಮ ಅಥವಾ ಹಿಂದುತ್ವದ ಚಳುವಳಿಯ ಇತಿಹಾಸವನ್ನು ಬರೆಯುವಾಗ `ಸನಾತನ ಪ್ರಭಾತ’ದ ಹೆಸರು ಅದರಲ್ಲಿ ಪ್ರಮುಖವಾಗಿರುವುದು ಎಂಬುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ.

ಸಂಕಟಗಳನ್ನು ಗೆದ್ದು ಕಾರ್ಯ ಮುಂದುವರಿಸುವುದು !

`ಸನಾತನ ಪ್ರಭಾತ’ದ ಇಲ್ಲಿಯವರೆಗೆ ಸಾಗಿದ ದಾರಿಯು ನಿರ್ವಿಘ್ನವಾಗಿರಲಿಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ `ಸನಾತನ ಪ್ರಭಾತ’ ಮೇಲೆ ನಿಷೇಧದ ತೂಗುಗತ್ತಿ ಇತ್ತು. ಅಂತಹ ಸ್ಥಿತಿಯಲ್ಲೂ `ಸನಾತನ ಪ್ರಭಾತ’ವು ಹಿಂದುತ್ವ, ರಾಷ್ಟ್ರ ರಕ್ಷಣೆ ಮತ್ತು ಧರ್ಮರಕ್ಷಣೆಯ ವ್ರತವನ್ನು ಬಿಡಲಿಲ್ಲ. `ಸನಾತನ ಪ್ರಭಾತ’ದ ಮೇಲೆ ಕೆಲವು ಮೊಕದ್ದಮೆಗಳನ್ನೂ ಹೂಡಲಾಯಿತು. ಪೊಲೀಸರು ನಮ್ಮ ಸಂಪಾದಕರನ್ನು ೪ ಸಲ ಬಂಧಿಸಿದರು. ಆದರೂ `ಸನಾತನ ಪ್ರಭಾತ’ವು ತನ್ನ ಪ್ರಖರ ಮತ್ತು ತೀಕ್ಷ್ಣ ವಿಚಾರಗಳನ್ನು ವ್ಯಕ್ತ ಪಡಿಸುವುದನ್ನು ನಿಲ್ಲಿಸಲಿಲ್ಲ. ಇಷ್ಟೇ ಅಲ್ಲದೇ ಹಿಂದುತ್ವನಿಷ್ಠರ, ಅವರ ಸಂಘಟನೆಗಳ, ಅವರ ಪಕ್ಷಗಳ ತಪ್ಪುಗಳನ್ನು ಅಷ್ಟೇ ಕಟುವಾಗಿ ಹೇಳಿತು; ಆದರೆ ಪ್ರಗತಿಪರರು ಮತ್ತು ಜಾತ್ಯತೀತವಾದಿಗಳು ಅದನ್ನು ದುರುಪಯೋಗ ಪಡಿಸಿಕೊಂಡಿದ್ದರಿAದ ನಮಗೆ ಹಿಂದೂಹಿತದ ದೃಷ್ಟಿಯಿಂದ ಅವುಗಳನ್ನು ನಿಲ್ಲಿಸಬೇಕಾಯಿತು; ಆದರೆ ನಾವು ನಮ್ಮ ವಿಚಾರಗಳನ್ನು ಬಿಟ್ಟಿಲ್ಲ ಅಥವಾ ಅವುಗಳಿಗೆ ತಿಲಾಂಜಲಿ ನೀಡಿಲ್ಲ. ಪತ್ರಿಕೋದ್ಯಮವನ್ನು ತತ್ತ್ವನಿಷ್ಠೆಯಿಂದ ಮಾಡುವುದೇ ಪತ್ರಿಕೋದ್ಯಮದ ನಿಜವಾದ ಧರ್ಮವಾಗಿದೆ. ಭಾರತೀಯ ಪತ್ರಿಕೋದ್ಯಮದ ಹರಿಕಾರ ಬಾಲ ಗಂಗಾಧರ ತಿಲಕರು ಬ್ರಿಟಿಷ ಸರಕಾರದ ವಿರುದ್ಧ ದೃಢತೆ ಮತ್ತು ತತ್ತ್ವನಿಷ್ಠೆಯಿಂದ ವೈಚಾರಿಕ ದಾಳಿಯನ್ನು ಮಾಡಿ ಭಾರತೀಯರಲ್ಲಿ ಆಂಗ್ಲರ ವಿರುದ್ಧ ಅಸಂತೋಷ ಜಾಗೃತಗೊಳಿಸಿದರು. `ಸನಾತನ ಪ್ರಭಾತ’ವು ಆ ಪತ್ರಿಕೋದ್ಯಮವನ್ನು ಆದರ್ಶವೆಂದು ತಿಳಿದು ಕಳೆದ ೨೩ ವರ್ಷಗಳಿಂದ ಮಾರ್ಗಕ್ರಮಣ ಮಾಡುತ್ತಿದೆ. ತಿಲಕರಿಗೆ ತಮ್ಮ ಈ ತೀಕ್ಷ್ಣ ಪತ್ರಿಕೋದ್ಯಮದಿಂದಾಗಿ ೬ ವರ್ಷಗಳ ಕಾಲ ಮ್ಯಾನ್ಮಾರನ (ಹಿಂದಿನ ಬ್ರಹ್ಮದೇಶದ) ಮಂಡಾಲೆಯ ಸೆರೆಮನೆಯಲ್ಲಿ ಶಿಕ್ಷೆಯನ್ನು ಭೋಗಿಸಬೇಕಾಯಿತು. ‘ಸನಾತನ ಪ್ರಭಾತ’ವೂ ಇಂತಹ ವಿಷಯಗಳ ಬಗ್ಗೆ ಎಂದಿಗೂ ಚಿಂತೆ ಮಾಡಲಿಲ್ಲ. ಸನಾತನ ಪ್ರಭಾತದ ಪತ್ರಿಕೋದ್ಯಮದಿಂದ ಅನೇಕ ಆಂದೋಲನಗಳಾದವು. ಈ ಹಿಂದೆ ಜಾಹೀರಾತು, ಚಲನಚಿತ್ರ, ನಾಟಕ ಮುಂತಾದ ಮಾಧ್ಯಮಗಳಿಂದ ಹಿಂದೂಗಳ ದೇವತೆಗಳ ವಿಡಂಬನೆಯನ್ನು ಮಾಡಲಾಗುತ್ತಿತ್ತು. ಅದನ್ನು ಕಠೋರವಾಗಿ ವಿರೋಧಿಸುವ ಕಾರ್ಯವನ್ನು `ಸನಾತನ ಪ್ರಭಾತ’ ಮಾಡಲು ಆರಂಭಿಸಿದ ನಂತರ ಆ ಮೂಲಕ ಆಂದೋಲನಗಳಾದವು ಮತ್ತು ನೂರಾರು ಘಟನೆಗಳಲ್ಲಿ ಈ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂಗಳಿಗೆ ಯಶಸ್ಸು ಸಿಕ್ಕಿತು. ಹಿಂದೂದ್ವೇಷಿ ಚಿತ್ರಕಾರ ಮ.ಫಿ. ಹುಸೇನ್ ಇವರು ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಬಗ್ಗೆ `ಸನಾತನ ಪ್ರಭಾತ’ವು ಮೊತ್ತಮೊದಲ ಬಾರಿ ಪ್ರಖರವಾಗಿ ಧ್ವನಿ ಎತ್ತಿತು. ಅನಂತರ ಅದರ ಬಗ್ಗೆ ದೇಶಾದ್ಯಂತ ಆಂದೋಲನಗಳಾದಾಗ ಹುಸೇನ್ ಇವರಿಗೆ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು ಮತ್ತು ಅಲ್ಲಿ ಅವರ ನಿಧನವಾಯಿತು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧ !

`ಸನಾತನ ಪ್ರಭಾತ’ ಆರಂಭವಾದಾಗ `ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಗಾಗಿ’ `ಸನಾತನ ಪ್ರಭಾತ’ ಎಂಬ ಘೋಷವಾಕ್ಯವನ್ನು ಮುದ್ರಿಸಲಾಗುತ್ತಿತ್ತು. ಇದು `ಸನಾತನ ಪ್ರಭಾತ’ದ ಅಂತಿಮ ಧ್ಯೇಯವಾಗಿದೆ. `ಒಂದು ವೇಳೆ ಸಮಾಜ ಮತ್ತು ಆಡಳಿತಗಾರರು ಧರ್ಮಾಚರಣಿಗಳಾದರೆ, ಭಾರತದಲ್ಲಿ ಈಶ್ವರೀ ರಾಜ್ಯ ಬರುವುದು, ಈ ಉದ್ದೇಶದಿಂದ `ಸನಾತನ ಪ್ರಭಾತ’ವು ಹಿಂದೂಗಳಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಬಂದಿದೆ ಮತ್ತು ಈಗಲೂ ಮಾಡುತ್ತಿದೆ. ಸಾಧಕವೃತ್ತಿಯಿರುವ ಎಲ್ಲ ಜನರಿಗಾಗಿ `ಸನಾತನ ಪ್ರಭಾತ’ದಲ್ಲಿನ ಸಾಧನೆಯ ಬಗೆಗಿನ ಲೇಖನಗಳು ಅವರ ಸಾಧನೆಗಾಗಿ ಮಾರ್ಗದರ್ಶಕವಾಗುತ್ತಿವೆ. ಹಿಂದುತ್ವನಿಷ್ಠರು ಮತ್ತು `ಸನಾತನ ಪ್ರಭಾತ’ದ ವಾಚಕರು, ಜಾಹೀರಾತುದಾರರು ಮತ್ತು ಹಿತಚಿಂತಕರು ಈಗ ಸಾಧನೆಯನ್ನು ಮಾಡುತ್ತಿದ್ದಾರೆ. ಕೆಲವರು ಅಧ್ಯಾತ್ಮಪ್ರಸಾರವನ್ನೂ ಮಾಡುತ್ತಿದ್ದಾರೆ. `ಸನಾತನ ಪ್ರಭಾತ’ಕ್ಕಾಗಿ ಇತರ ಯಾವುದೇ ಲಾಭಕ್ಕಿಂತ ಈ ವಿಷಯ ಅತ್ಯಮೂಲ್ಯವಾಗಿದೆ. ಸಮಾಜದಲ್ಲಿ ಇಂದು ಅನೇಕ ದಿನಪತ್ರಿಕೆಗಳಿದ್ದು, ಹೆಚ್ಚಿನ ದಿನಪತ್ರಿಕೆಗಳನ್ನು ವ್ಯವಸಾಯವೆಂದೇ ಮಾಡಲಾಗುತ್ತದೆ. ಇಂತಹ ದಿನಪತ್ರಿಕೆಗಳಿಂದ ರಾಷ್ಟç, ಧರ್ಮ ಮತ್ತು ಹಿಂದೂಗಳ ಸಾಧನೆಗಾಗಿ ಯಾವುದೇ ಕಾರ್ಯವಾಗುವುದಿಲ್ಲ. ಹಿಂದುತ್ವನಿಷ್ಠರು, ಹಾಗೆಯೇ ಸಾಧು-ಸಂತರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಅನೇಕ ದಶಕಗಳಿಂದ ಚಳುವಳಿಗಳನ್ನು ಮಾಡುತ್ತಿದ್ದಾರೆ. `ಸನಾತನ ಪ್ರಭಾತ’ವೂ ಕಳೆದ ೨೪ ವರ್ಷಗಳಿಂದ ಅದಕ್ಕಾಗಿ ಪ್ರಯತ್ನಿಸುತ್ತಿದೆ. ಇಂದು ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಸಾಧ್ಯತೆಯು ಹೆಚ್ಚಾಗಿರುವುದರ ಹಿಂದೆ `ಕಾಲ’ವೇ ಕಾರಣವಾಗಿದೆ; ಆದರೆ ಕಾಲವು ಪ್ರತಿಕೂಲವಾಗಿದ್ದಾಗಲೂ, `ಸನಾತನ ಪ್ರಭಾತ’ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳನ್ನು ಜಾಗೃತಗೊಳಿಸುತ್ತಿತ್ತು. ಅವರಿಗೆ ಹಿಂದೂ ರಾಷ್ಟ್ರವನ್ನು ಹೇಗೆ ತರಬಹುದು ? ಈ ಹಿಂದೂ ರಾಷ್ಟ್ರ ಹೇಗಿರಲಿದೆ ? ಎಂಬುದರ ಬಗ್ಗೆ ಮಾರ್ಗದರ್ಶನ ಮಾಡುತ್ತಿದೆ. ಹಿಂದೂ ರಾಷ್ಟ್ರದ ಸಂವಿಧಾನ, ನ್ಯಾಯವ್ಯವಸ್ಥೆ, ಆಡಳಿತ, ಶಿಕ್ಷಣ, ವಿಕಾಸ ಮುಂತಾದವುಗಳ ಬಗ್ಗೆ ಆಗಾಗ `ಸನಾತನ ಪ್ರಭಾತ’ದಲ್ಲಿ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಸಂತರು ಹೇಳಿದಂತೆ ಮತ್ತು ಭವಿಷ್ಯಕಾರರ ಭವಿಷ್ಯವಾಣಿಯಂತೆ ೨೦೨೫ ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ. ಅಲ್ಲಿಯವರೆಗೆ `ಸನಾತನ ಪ್ರಭಾತ’ ಇದಕ್ಕಾಗಿ ಮಾರ್ಗದರ್ಶನ ಮಾಡುತ್ತಿರುವುದು; ಅಲ್ಲಿಂದ ಮುಂದೆ `ಹಿಂದೂ ರಾಷ್ಟ್ರದಲ್ಲಿ ಪ್ರತ್ಯಕ್ಷ ಕಾರ್ಯವನ್ನು ಹೇಗೆ ಮಾಡಬೇಕು ?’, ಎಂಬ ಮಾರ್ಗದರ್ಶನವೂ ಇರಲಿದೆ. ಭಾರತವು ಆಧ್ಯಾತ್ಮಿಕ ಸ್ತರದಲ್ಲಿ ವಿಶ್ವಗುರುವಾಗಿತ್ತು. ಅದಕ್ಕೆ ಪುನಃ ಅದರ ಗೌರವವನ್ನು ದೊರಕಿಸಿ ಕೊಡಲು `ಸನಾತನ ಪ್ರಭಾತ’ವು ತನ್ನ ಅಳಿಲು ಸೇವೆ ಮಾಡುತ್ತಿದೆ. ಇದರಲ್ಲಿ `ಸನಾತನ ಪ್ರಭಾತ’ದ ವಾಚಕರು, ಜಾಹೀರಾತುದಾರರು, ಅರ್ಪಣೆದಾರರು ಮತ್ತು ಹಿತಚಿಂತಕರ ಪಾಲು ಬಹುದೊಡ್ಡದಿದ್ದು ಈ ವರ್ಧ್ಯಂತ್ಯುತ್ಸವದ ನಿಮಿತ್ತ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ.