ವಿಶ್ವ ಸಂಸ್ಥೆಯಿಂದ ಕ್ಷಮಾಯಾಚನೆ
ನ್ಯೂಯಾರ್ಕ್ (ಅಮೇರಿಕಾ) – ವಿಶ್ವ ಸಂಸ್ಥೆಯ ಕಾರ್ಯದರ್ಶಿ ಅಮೀನಾ ಮಹಮ್ಮದ್ ಇವರು ಕಳೆದ ವಾರದಲ್ಲಿ ಅಫ್ಘಾನಿಸ್ತಾನದ ಪ್ರವಾಸ ಮಾಡಿದರು. ಆ ಸಮಯದಲ್ಲಿ ವಿಶ್ವ ಸಂಸ್ಥೆಯ ಕೆಲವು ಪದಾಧಿಕಾರಿಗಳು ತಾಲಿಬಾನದ ಧ್ವಜದ ಸಹಿತ ಛಾಯಾಚಿತ್ರಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದರು. ಇದರಿಂದ ವಿಶ್ವ ಸಂಸ್ಥೆಯ ಮೇಲೆ ಟೀಕೆಗಳು ಬಂದ ನಂತರ ವಿಶ್ವ ಸಂಸ್ಥೆಯು ಈ ಕುರಿತು ಕ್ಷಮೆಯಾಚಿಸಿದೆ. ವಿಶ್ವ ಸಂಸ್ಥೆಯು ಇಲ್ಲಿಯವರೆಗೆ ತಾಲಿಬಾನ ಮತ್ತು ಅಫ್ಘಾನಿಸ್ತಾನದಲ್ಲಿನ ಸರಕಾರಗಳಿಗೆ ಮಾನ್ಯತೆ ನೀಡಿಲ್ಲ.
#IEWorld | The UN has apologised for “a significant lapse in judgement” after photographs surfaced of some of its personnel in front of a Taliban flag in #Afghanistanhttps://t.co/CqYJS9glFG
— The Indian Express (@IndianExpress) January 21, 2023