ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣ ಗೂಂಡಾಗಳ ಹಿಡಿತದಲ್ಲಿ !

ದಾವುದ ಗ್ಯಾಂಗ್ ನ ರೌಡಿಯ ಪತ್ನಿಯಿಂದ ಮಾಹಿತಿ !

ನವದೆಹಲಿ – ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ನಿಯಂತ್ರಣ ಅಪರಾಧಿ ಗ್ಯಾಂಗ್ ನ ಬಳಿ ಇದೆ. ಅವರು ತಮ್ಮ ಗೂಂಡಾಗಳ ದಾಖಲೆಗಳ ಮೇಲೆ ‘ಇಮಿಗ್ರಷನ್’ ಸೀಲು ಹಾಕಲು ಬಿಡುವುದಿಲ್ಲ. ಆದ್ದರಿಂದ ‘ಪಾಕಿಸ್ತಾನದಲ್ಲಿ ಯಾರು ಬಂದಿದ್ದಾರೆ ಅಥವಾ ಯಾರು ಹೊರಗೆ ಹೋಗಿದ್ದಾರೆ’, ಇದರ ಮಾಹಿತಿ ತಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಈ ಗ್ಯಾಂಗ್ ಬೇರೆ ದೇಶದಲ್ಲಿನ ಗೂಂಡಾಗಳನ್ನು ಅಥವಾ ಬೇರೆ ಯಾರನ್ನು ಕೂಡ ಪಾಕಿಸ್ತಾನಕ್ಕೆ ಕರೆಸುತ್ತದೆ. ಇಂತಹ ವ್ಯಕ್ತಿ ಪಾಕಿಸ್ತಾನಕ್ಕೆ ಬಂದ, ಈ ಕುರಿತು ಎಲ್ಲಿ ಕೂಡ ದಾಖಲೆ ಇರುವುದಿಲ್ಲ. ಅಪರಾಧಿ ಗ್ಯಾಂಗ್ ಗಳಿಗೆ ಹಣ ಪೂರೈಕೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಸಲೀಮ್ ಫ್ರೂಟ್ ನ ಪತ್ನಿಯು ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದ್ದಾಳೆ.

ಸಲೀಮ್ ಫ್ರೂಟ್ ನ ಪತ್ನಿಯ ವಿಚಾರಣೆಯಲ್ಲಿ, ‘ನಾನು ಅನೇಕ ಸಲ ಪಾಕಿಸ್ತಾನಕ್ಕೆ ಹೋಗಿದ್ದೇನೆ. ಅಲ್ಲಿ ದಾವುದ್ ಇಬ್ರಾಹಿಂನ ಸಹಚರ ಚೋಟಾ ಶಕೀಲ್ ನನ್ನು ಜನರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಬರುತ್ತಾರೆ ಮತ್ತು ನನ್ನ ಪಾಸ್ಪೋರ್ಟ್ ಮೇಲೆ ಸೀಲ್ ಹಾಕದೆ ನನ್ನನ್ನು ವಿಮಾನ ನಿಲ್ದಾಣದಿಂದ ಹೊರಗೆ ಕರೆದುಕೊಂಡು ಬರುತ್ತಾರೆ. ೨೦೧೩-೧೪ ರಲ್ಲಿ ನಾನು ೩ ಸಲ ಪಾಕಿಸ್ತಾನಕ್ಕೆ ಹೋಗಿದ್ದೇ. 2013 ರಲ್ಲಿ ನಾನು ನನ್ನ ಮಕ್ಕಳ ಜೊತೆ ಪಾಕಿಸ್ತಾನದ ಕರಾಚಿಯಲ್ಲಿ ಹೋಗಿದ್ದೆ. ಅಲ್ಲಿ ನಾವು ಚೋಟಾ ಶಕೀಲನ ಮಗಳ ಮದುವೆಗಾಗಿ ಹೋಗಿದ್ದೆವು. ಆ ಸಮಯದಲ್ಲಿ ಸಲೀಮ್ ಫ್ರೂಟ್ ನನ್ನ ಜೊತೆ ಬಂದಿರಲಿಲ್ಲ. ನಂತರ ನಾನು ಮಾರ್ಚ್ ೨೪, ೨೦೧೪ ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದೆ. ಆ ಸಮಯದಲ್ಲಿ ಕೂಡ ನಾನು ನನ್ನ ಮಕ್ಕಳ ಜೊತೆಗೆ ಕರಾಚಿಗೆ ಹೋಗಿದ್ದೆ. ಆಗ ನಾನು ಚೋಟಾ ಶಕೀಲನ ಎರಡನೇ ಮಗಳ ಮದುವೆಗೆ ಸಹಭಾಗಿಯಾಗಲು ಹೋಗಿದ್ದೆ. ಆ ಸಮಯದಲ್ಲಿ ಕೂಡ ಸಲೀಮ್ ನಮ್ಮ ಜೊತೆಗೆ ಪಾಕಿಸ್ತಾನಕ್ಕೆ ಬಂದಿರಲಿಲ್ಲ.’ ಎಂದು ಹೇಳಿದಳು.

ಸಂಪಾದಕೀಯ ನಿಲುವು

‘ಸಂಪೂರ್ಣ ಪಾಕಿಸ್ತಾನ ಗೂಂಡಾಗಳು ಮತ್ತು ಜಿಹಾದಿ ಭಯೋತ್ಪಾದಕರು ಆಳುತ್ತಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ !