ಆಧಾರವಿಲ್ಲದ ಕಾಶ್ಮೀರಿ ಹಿಂದೂಗಳು !

ಕ್ರೈಸ್ತ ಹೊಸವರ್ಷದ ದಿನ ಪಾಕ್ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ೪ ಕಾಶ್ಮೀರಿ ಹಿಂದೂಗಳನ್ನು ಹತ್ಯೆಗೈದು ‘ನೀವು ನಮ್ಮನ್ನು ಮುಗಿಸಲು ಸಾಧ್ಯವಿಲ್ಲ, ನಮ್ಮನ್ನು ಮುಗಿಸುವಷ್ಟು ಧೈರ್ಯ ನಿಮ್ಮಲ್ಲಿಲ್ಲ. ನಾವು ಬೆರಳೆಣಿಕೆಯಷ್ಟಿದ್ದರೂ ಮಹಾತ್ಮಾ ಗಾಂಧಿಯವರ ದೇಶಕ್ಕಾಗಿ ಮತ್ತು ಅವರ ಹಿಂದೂಗಳಿಗಾಗಿ, ಅವರ ಸರಕಾರಕ್ಕಾಗಿ ಮತ್ತು ಅವರ ಸಂಘಟನೆಗಳಿಗಾಗಿ ಸಮಾಧಿ ತೋಡುತ್ತೇವೆ’, ಎಂದು ತೋರಿಸಿದ್ದಾರೆ. ಅದು ಹೇಗೆ ಸತ್ಯ ? ಎಂಬುದನ್ನು ಸಹ ಗಮನಿಸಬೇಕು. ಈ ಹತ್ಯೆಗಳ ನಂತರ ಕಾಶ್ಮೀರದ ರಾಜ್ಯಪಾಲರು ಈ ಘಟನೆಯನ್ನು ಖಂಡಿಸಿದ್ದಾರೆ. ಈ ರೀತಿಯ ಖಂಡನೆಯನ್ನು ಎಲ್ಲ ಸರಕಾರಗಳು ಮಾಡುತ್ತಲೇ ಬಂದಿವೆ. ಅದರ ಆಚೆಗೆ ಹೋಗಿ ಈ ಹಿಂದೆ ಏನು ಮಾಡಿದ ಬಗ್ಗೆ ಕೇಳಿಲ್ಲ ಮತ್ತು ಈಗಲೂ ಏನೂ ಮಾಡುವಂತೆ ಕಾಣುತ್ತಿಲ್ಲ. ಹಿಂದೂಗಳ ಆಕ್ರೋಶವನ್ನು ತಣ್ಣಗಾಗಿಸಲು ರಾಜ್ಯಪಾಲರು ಮೃತ ಹಿಂದೂಗಳ ಸಂಬಂಧಿಕರಿಗೆ ೧೦ ಲಕ್ಷ ರೂಪಾಯಿಗಳನ್ನು ನೀಡುವ ಘೋಷಣೆಯನ್ನು ಮಾಡಿದ್ದಾರೆ. ‘ನಷ್ಟಪರಿಹಾರ ಸಿಕ್ಕ ತಕ್ಷಣ, ಹಿಂದೂಗಳು ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವರು ಮತ್ತು ಮತ್ತೊಬ್ಬ ಹಿಂದೂ ಸಾಯಲು ತಯಾರಾಗುವನು’ ಎಂಬ ಮನಸ್ಥಿತಿಯನ್ನು ಆಡಳಿತಗಾರರು ಪ್ರತಿಯೊಂದು ಘಟನೆಯಲ್ಲಿ ಇಟ್ಟುಕೊಳ್ಳುತ್ತಾರೆ’, ಎಂದು ಹೇಳಿದರೆ ತಪ್ಪಾಗಲಾರದು. ಈ ಹತ್ಯೆಯ ನಂತರ ಈಗ ಭದ್ರತಾಪಡೆಗಳು ಸಂಬಂಧಿತ ಭಯೋತ್ಪಾದಕರನ್ನು ಪತ್ತೆ ಹಚ್ಚಿ ಅವರನ್ನು ಕೊಲ್ಲುವರು. ಆದರೆ ಮುಂದೇನು ? ಕಳೆದ ೩೩ ವರ್ಷಗಳಿಂದ ಅದರ ಆಚೆಗೆ ಏನೂ ಘಟಿಸಿಲ್ಲ. ಇತ್ತೀಚೆಗಷ್ಟೇ ಸರಕಾರವು ‘೨೦೨೨ ರಲ್ಲಿ ಎಷ್ಟು ಭಯೋತ್ಪಾದಕರನ್ನು ಕೊಲ್ಲಲಾಯಿತು’, ಎಂಬುದರ ಅಂಕಿಅಂಶಗಳನ್ನು ಘೋಷಿಸಿತು. ಅದಕ್ಕನುಸಾರ ೧೭೨ ಭಯೋತ್ಪಾದಕರನ್ನು ಕೊಲ್ಲಲಾಯಿತು. ಅದಕ್ಕೂ ಮೊದಲು ಪ್ರತಿ ವರ್ಷ ೨೦೦ ಕ್ಕಿಂತಲೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಯಿತು. ಇಷ್ಟು ಮಾಡಿಯೂ ಕಾಶ್ಮೀರದ ಹಿಂದೂಗಳು ಅಸುರಕ್ಷಿತರಿದ್ದಾರೆ. ಕೇವಲ ಕಾಶ್ಮೀರ ಮಾತ್ರವಲ್ಲದೇ ಪ್ರಸ್ತುತ ಘಟನೆ ಜಮ್ಮುವಿನಿಂದ ಸಮೀಪವಿರುವ ರಾಜೌರಿಯಲ್ಲಿ ಘಟಿಸಿದೆ ಎಂದು ಗಮನಿಸಬೇಕು. ‘ಜಮ್ಮುದಲ್ಲಿ ಭಯೋತ್ಪಾದಕರ ಘಟನೆಗಳು ಕಡಿಮೆಯಾಗಿವೆ’, ಎಂದು ಹೇಳುತ್ತಿರುವಾಗ ‘ಅದು ಹೇಗೆ ಹುಸಿಯಾಗಿದೆ’, ಎಂಬುದನ್ನೇ ಭಯೋತ್ಪಾದಕರು ಇದರಿಂದ ತೋರಿಸಿಕೊಟ್ಟಿದ್ದಾರೆ. ಅದೇ ರೀತಿ ಕೆಲವು ತಿಂಗಳುಗಳ ಹಿಂದೆ ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಕೊಲ್ಲಲಾಯಿತು. ಓರ್ವ ಸರಕಾರಿ ಸಿಬ್ಬಂದಿಯನ್ನು ಕೊಲ್ಲಲಾಯಿತು. ಕೇಂದ್ರ ಸರಕಾರವು ಕಾಶ್ಮೀರದಲ್ಲಿ ಉದ್ಯೋಗದ ನಿಮಿತ್ತ ಕರೆ ತಂದ ಕಾಶ್ಮೀರಿ ಹಿಂದೂಗಳು ‘ನಾವು ಅಸುರಕ್ಷಿತರಿರುವುದರಿಂದ ನಮ್ಮನ್ನು ಜಮ್ಮುವಿಗೆ ಸ್ಥಳಾಂತರಿಸಬೇಕು’ ಎಂಬ ಬೇಡಿಕೆಯನ್ನಿಟ್ಟರು. ಅದಕ್ಕಾಗಿ ಅವರು ಇಂದಿಗೂ ಆಂದೋಲನ ನಡೆಸುತ್ತಿದ್ದಾರೆ; ಆದರೆ ಸರಕಾರ ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಈ ಅವಧಿಯಲ್ಲಿ ಹಿಂದೂಗಳ ಹತ್ಯೆಯ ಅನೇಕ ಘಟನೆಗಳು ಘಟಿಸಿವೆ. ಇದರಿಂದ ಜಮ್ಮು- ಕಾಶ್ಮೀರದ ಹಿಂದೂಗಳು ಕೆರಳಿದ್ದಾರೆ. ಕೇವಲ ಕಾಶ್ಮೀರಿ ಹಿಂದೂಗಳಷ್ಟೇ ಅಲ್ಲ ಆದರೆ ಬೇರೆ ರಾಜ್ಯಗಳಿಂದ ಕೆಲಸದ ನಿಮಿತ್ತ ಕಾಶ್ಮೀರಕ್ಕೆ ಬಂದಿರುವ ಹಿಂದೂಗಳನ್ನೂ ಗುರಿಯಾಗಿಸುತ್ತಿದ್ದಾರೆ.

ಹಿಂದೂಗಳ ಆಕ್ರೋಶ !

೩೩ ವರ್ಷಗಳ ಹಿಂದೆಯೇ ಕಾಶ್ಮೀರವನ್ನು ಹಿಂದೂ ಮುಕ್ತ ಮಾಡುವುದು ಆರಂಭವಾಗಿತ್ತು ಮತ್ತು ಅದಕ್ಕೆ ಶೇ. ೯೯ ರಷ್ಟು ಯಶಸ್ಸೂ ಲಭಿಸಿತು. ಕಳೆದ ೩೩ ವರ್ಷಗಳಲ್ಲಿ ಈ ಸ್ಥಿತಿಯನ್ನು ಬದಲಾಯಿಸಲು ಭಾರತದ ಸರ್ವಪಕ್ಷ ಸರಕಾರಗಳು ಯಶಸ್ವಿಯಾಗಿಲ್ಲ. ಇದರ ಹಿಂದೆ ಸರಕಾರದ ಇಚ್ಛಾಶಕ್ತಿಯ ಅಭಾವ, ಕಠೋರ ನಿರ್ಣಯದ ಅಭಾವ, ಹಿಂದೂಗಳ ರಕ್ಷಣೆಯ ಬಗೆಗಿನ ಉದಾಸೀನತೆ, ಮುಸಲ್ಮಾನರ ಓಲೈಕೆ, ಮತಪೆಟ್ಟಿಗೆಯ ರಾಜಕಾರಣ ಇವೇ ಪ್ರಮುಖ ಕಾರಣಗಳಾಗಿವೆ. ‘ಭಾಜಪ ಸರಕಾರ ಬಂದ ನಂತರ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ಮತ್ತು ಜಿಹಾದಿ ಮಾನಸಿಕತೆಯನ್ನು ನಾಶ ಮಾಡಲಾಗುವುದು ಮತ್ತು ಪುನಃ ಅಲ್ಲಿ ಹಿಂದೂಗಳ ಪುನಸ್ರ್ಥಾಪನೆ ಮಾಡಲಾಗುವುದು’, ಎಂದು ಕಾಶ್ಮೀರಿ ಹಿಂದೂಗಳ ಸಹಿತ ಸಂಪೂರ್ಣ ದೇಶದ ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿ ಹಿಂದೂಗಳು ನಿರೀಕ್ಷಿಸಿದ್ದರು; ಆದರೆ ಕಳೆದ ೮ ವರ್ಷಗಳಲ್ಲಿ ಅದು ಪೂರ್ಣಗೊಂಡಿಲ್ಲ, ಈ ವಾಸ್ತವವು ಇಂದಿನ ದಾಳಿಯಿಂದ ಸ್ಪಷ್ಟವಾಗುತ್ತದೆ. ಸರಕಾರವು ಮಧ್ಯಂತರದ ಕಾಲದಲ್ಲಿ ಕಾಶ್ಮೀರದಲ್ಲಿ ಕಲಮ್ ೩೭೦ ಅನ್ನು ರದ್ದುಗೊಳಿಸಿತು, ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತು, ನೂರಾರು ಜಿಹಾದಿ ಭಯೋತ್ಪಾದಕರನ್ನು ಕೊಲ್ಲಲಾಯಿತು, ಕಲ್ಲುತೂರಾಟದ ಘಟನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು, ಇದು ಸತ್ಯವಿದ್ದರೂ, ‘ಕಾಶ್ಮೀರದಲ್ಲಿ ಭಯೋತ್ಪಾದನೆ ಬೇರುಸಮೇತ ಕಿತ್ತೊಗೆದಿಲ್ಲ ಮತ್ತು ಹಿಂದೂಗಳು ಇಂದಿಗೂ ಅಲ್ಲಿ ವಾಸಿಸಲು ಸಾಧ್ಯವಿಲ್ಲ, ಅವರು ಅಸುರಕ್ಷಿತರಿದ್ದಾರೆ’, ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಈ ನಡುವೆ ಉರಿ ಮತ್ತು ಪಠಾಣಕೋಟ್‍ನ ಸೇನಾ ನೆಲೆಗಳ ಮೇಲೆ ದಾಳಿಯಾದ ನಂತರ ಸರಕಾರವು ‘ಸರ್ಜಿಕಲ್’ ಮತ್ತು ‘ಏರ್ ಸ್ಟ್ರೈಕ್’ ಮಾಡಿ ಪಾಕ್‍ನೊಳಗೆ ನುಗ್ಗಿ ಭಯೋತ್ಪಾದಕರನ್ನು ಕೊಂದು ಹಾಕಿತ್ತು; ಆದರೆ ಅದರಿಂದ ಭಯೋತ್ಪಾದನೆಯು ನಾಶವಾಯಿತೇ ? ಇಲ್ಲ; ಏಕೆಂದರೆ ಇದು ಮೇಲುಮೇಲಿನ ಮತ್ತು ತಾತ್ಕಾಲಿಕ ಕಾರ್ಯಾಚರಣೆಯಾಗಿತ್ತು. ಇಂತಹ ಕಾರ್ಯಾಚರಣೆಯನ್ನು ಮಾಡುವುದು ಅಪೇಕ್ಷಿತವೇ ಇದೆ; ಆದರೆ ಯಾವಾಗ ಸಮಸ್ಯೆ ಗಂಭೀರವಿರುತ್ತದೆಯೋ ಆಗ ಅದನ್ನು ಬೇರುಸಮೇತ ನಾಶ ಮಾಡಲು ಸಮರೋಪಾದಿಯಲ್ಲಿ ಪ್ರಯತ್ನಿಸುವುದು ಆವಶ್ಯಕವಾಗಿರುತ್ತದೆ. ಹಿಂದಿನ ಸರಕಾರಗಳು ವಿವಿಧ ಕಾರಣಗಳಿಂದ ಯಾವೆಲ್ಲ ದೊಡ್ಡ ತಪ್ಪುಗಳನ್ನು ಮಾಡಿದವೋ ಆ ತಪ್ಪುಗಳಾಗದಂತೆ ತಡೆಗಟ್ಟಿ ಈ ಸಮಸ್ಯೆಗಳನ್ನು ಬಿಡಿಸಲು ಇಂದಿನ ಸರಕಾರ ಗಾಂಭೀರ್ಯದಿಂದ ಪ್ರಯತ್ನಿಸುವುದು ಆವಶ್ಯಕವಾಗಿತ್ತು. ಆ ರೀತಿ ಆಗಿರುವುದು ಕಾಶ್ಮೀರಿ ಹಿಂದೂಗಳಿಗೆ ಕಂಡು ಬಂದಿಲ್ಲ ಅವರ ಮನಸ್ಸಿನಲ್ಲಿ ಇದೇ ವಿಚಾರ ಹೆಚ್ಚಿರುವುದು ಅವರಿಂದ ನಡೆಯುತ್ತಿರುವ ಆಂದೋಲನ ಮತ್ತು ಆಕ್ರೋಶಗಳಿಂದ ಕಾಣಿಸುತ್ತಿದೆ. ಈ ಬಗ್ಗೆ ವಿಚಾರವಾಗುವುದು ಆವಶ್ಯಕವಾಗಿದೆ.

ಜಿಹಾದಿ ಮಾನಸಿಕತೆ

ಕಾಶ್ಮೀರದಲ್ಲಿ ಭಯೋತ್ಪಾದನೆಯು ಜಿಹಾದಿ ಮಾನಸಿಕತೆಯಿಂದ ಉತ್ಪನ್ನವಾಗಿದೆ. ಅದರ ಹಿಂದಿರುವ ಜಿಹಾದಿ ಮಾನಸಿಕತೆಯನ್ನು ನಾಶ ಮಾಡಲು ಎಂದೂ ಪ್ರಯತ್ನವಾಗಿಲ್ಲ; ಏಕೆಂದರೆ ಇಂತಹ ಕೆಲವು ಮಾಸಿಕತೆಗಳನ್ನು ಇಂದಿನವರೆಗೆ ಯಾವುದೇ ಸರಕಾರವು ಸ್ವೀಕರಿಸಿಲ್ಲ. ಅದನ್ನು ಸ್ವೀಕರಿಸದಿರಲು ಮತಪೆಟ್ಟಿಗೆಯ ರಾಜಕಾರಣವು ಕಾರಣವಾಗಿತ್ತು ಎಂದು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆ ಇಲ್ಲ. ಆದುದರಿಂದ ಈ ಭಯೋತ್ಪಾದನೆಯನ್ನು ನಾಶಮಾಡಲು ಅಂದರೆ ಮೂಲದಿಂದ ಕೊನೆಗೊಳಿಸಲು ಪ್ರಯತ್ನವಾಗಿಲ್ಲ. ಅದನ್ನು ಮಾಡುವುದು ಆವಶ್ಯಕವಾಗಿವೆ. ಅದಕ್ಕಾಗಿ ಕಠೋರವಾಗುವ ಆವಶ್ಯಕತೆ ಇದೆ. ಭಯೋತ್ಪಾದಕರಿಗೆ ಇಲ್ಲಿಯವರೆಗೆ ಎಲ್ಲ ರೀತಿಯ ಸಹಾಯ ಜಿಹಾದಿ ಮಾನಸಿಕತೆಯ ಸ್ಥಳೀಯ ನಾಗರಿಕರಿಂದ ದೊರಕಿದೆ. ಭಯೋತ್ಪಾದಕರ ಅಂತ್ಯಯಾತ್ರೆಯಲ್ಲಿ ಸಾವಿರಾರು ಕಾಶ್ಮೀರಿ ಮುಸಲ್ಮಾನರು ಪಾಲ್ಗೊಳ್ಳುತ್ತಾರೆ, ಇದು ಅದರದ್ದೇ ದ್ಯೋತಕವಾಗಿದೆ. ಈ ಮಾನಸಿಕತೆಯ ಬಗ್ಗೆ ತನಿಖೆ ಮಾಡುವ ಪ್ರಯತ್ನವಾಗಿಲ್ಲ. ಆದುದರಿಂದ ಜಿಹಾದಿ ಭಯೋತ್ಪಾದನೆಯೂ ನಾಶವಾಗಿಲ್ಲ. ೩೩ ವರ್ಷಗಳಲ್ಲಿ ಸಾವಿರಾರು ಕಾಶ್ಮೀರಿ ಮುಸಲ್ಮಾನ ಯುವಕರು ಮೊದಲಿನ ಭಯೋತ್ಪಾದಕ ಯುವಕರ ಹತ್ಯೆಯಾಗುತ್ತಿರುವಾಗಲೂ ಭಯೋತ್ಪಾದಕ ಸಂಘಟನೆಗಳಲ್ಲಿ ಸೇರ್ಪಡೆಯಾದರು ಮತ್ತು ಆಗುತ್ತಿದ್ದಾರೆ, ಇದು ವಾಸ್ತವವಾಗಿದೆ. ಎಲ್ಲಿಯವರೆಗೆ ಜಿಹಾದಿ ಮಾನಸಿಕತೆಯ ಮತ್ತು ಜಿಹಾದಿ ದೇಶ ಪಾಕಿಸ್ತಾನ್‍ವನ್ನು ನಾಶ ಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ಕಾಶ್ಮೀರದ ಹಿಂದೂಗಳ ವಂಶಸಂಹಾರ ಆಗುತ್ತಲೇ ಇರುವುದು, ಎಂಬುದನ್ನು ಸ್ವೀಕರಿಸಲೇ ಬೇಕಾಗುವುದು !