ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಂದ ನಿಜ ಇತಿಹಾಸವನ್ನು ಮರೆಮಾಚಿತು ! – ಡಾ. ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ

ಇತಿಹಾಸದ ತಿರುಚುವಿಕೆಯ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಡಾ. ಭೈರಪ್ಪನವರನ್ನು ವಜಾಗೊಳಿಸಿದ ಎನ್‌ಸಿಇಆರ್‌ಟಿ ಸಮಿತಿ

ಡಾ. ಎಸ್. ಎಲ್. ಭೈರಪ್ಪ
  • ಪಠ್ಯಕ್ರಮದ ಮೂಲಕ ಭಾರತದ ತಿರುಚಿದ ಇತಿಹಾಸವನ್ನು ಕಲಿಸುವ ಮೂಲಕ ಕಾಂಗ್ರೆಸ್ ಯುವ ಪೀಳಿಗೆಗೆ ಅಪಾರ ಹಾನಿಮಾಡಿದೆ. ಅದನ್ನು ತುಂಬಲು ಭಾರತದ ಬಿಜೆಪಿ ಸರ್ಕಾರ, ಬುದ್ಧಿಜೀವಿಗಳು ಸಾಕಷ್ಟು ಪ್ರಯತ್ನ ಮಾಡಬೇಕಾಗಿದೆ !
  • ಇತಿಹಾಸವನ್ನು ತಿರುಚುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಹೀಗೆ ಮಾಡಿದರೆ ಮುಂದೆ ಯಾರೂ ಸುಳ್ಳು ಇತಿಹಾಸವನ್ನು ಕಲಿಸುವ ಅಥವಾ ಹೇಳುವ ಧೈರ್ಯ ಮಾಡಲಾರರು !

ಹಿರಿಯ ಸಾಹಿತಿ ಡಾ. ಭೈರಪ್ಪ ಇವರು ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನ ಮತ್ತು ಪ್ರಶಿಕ್ಷಣ ಪರಿಷದ’ ಅಂದರೆ (ಎನ್.ಸಿ.ಇ.ಆರ್.ಟಿ.) ಸಂಸ್ಥೆಯಲ್ಲಿ ಕಾರ್ಯ ಮಾಡುತ್ತಿರುವಾಗಿನ ಒಂದಷ್ಟು ನೆನಪುಗಳನ್ನು ಬೆಳಕಿಗೆ ತಂದರು. ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೊಘಲ್ ಆಕ್ರಮಣಕಾರರನ್ನು ಪಠ್ಯಕ್ರಮದಲ್ಲಿ ವೈಭವೀಕರಿಸಲಾಯಿತು ಮತ್ತು ವಿದ್ಯಾರ್ಥಿಗಳು ನೈಜ ಇತಿಹಾಸದಿಂದ ವಂಚಿತರಾಗಿದ್ದರು ಎಂದು ಅವರು ಮಾಹಿತಿ ನೀಡಿದರು.

ಡಾ. ಭೈರಪ್ಪ ಮಂಡಿಸಿದ ಅಂಶಗಳು

೧. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ‘ರಾಷ್ಟ್ರೀಯ ಏಕೀಕರಣ ನಿಯಮ’ವನ್ನು ಸಾಬೀತುಪಡಿಸಿ ಅದರ ಭಾಗವಾಗಿ ಜಿ. ಪಾರ್ಥಸಾರಥಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಪಾರ್ಥಸಾರಥಿ ಅವರು ಇಂದಿರಾ ಗಾಂಧಿಯವರ ನೀತಿ ಸಲಹೆಗಾರರಾಗಿದ್ದರು ಮತ್ತು ಆಪ್ತರಾಗಿದ್ದರು ಮತ್ತು ಜವಾಹರಲಾಲ್ ನೆಹರು ಕುಟುಂಬಕ್ಕೂ ನಿಕಟರಾಗಿದ್ದರು.

೨. ನಂತರ ಪಾರ್ಥಸಾರಥಿ ಅವರು ‘ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣೆ ಸಮಿತಿ’ ರಚಿಸಿ ೫ ಸದಸ್ಯರನ್ನು ನೇಮಿಸಿದರು. ಆ ೫ ಸದಸ್ಯರಲ್ಲಿ ನಾನೂ ಒಬ್ಬ. ಪಾರ್ಥಸಾರಥಿಯವರು ಮೊದಲ ಸಭೆಯಲ್ಲೇ ‘ಇತಿಹಾಸ ಮತ್ತು ಸಮಾಜಶಾಸ್ತ್ರ’ ಪಠ್ಯಪುಸ್ತಕಗಳನ್ನು ‘ಸ್ವಚ್ಛಗೊಳಿಸುವಂತೆ’ (ನೈಜ ಇತಿಹಾಸವನ್ನು ತೆಗೆದು ಹಾಕುವಂತೆ) ಕೇಳಿದರು.

೩. ನಾನು ಕೇಳಿದೆ, ಪಠ್ಯಪುಸ್ತಕಗಳಿಂದ ನಿಖರವಾಗಿ ಏನನ್ನು ಹೊರಗಿಡಬೇಕು ? ಪಾರ್ಥಸಾರಥಿ ನನಗೆ ಹೇಳಿದರು, ‘ಮುಘಲ್ ದೊರೆ ಔರಂಗಜೇಬ್‌ನು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನೂರಾರು ದೇವಾಲಯಗಳನ್ನು ನಾಶಪಡಿಸಿದ ಎಂದು ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಇತಿಹಾಸ ಪುಸ್ತಕಗಳಲ್ಲಿ ಇದು ಅಗತ್ಯವಿದೆಯೇ ? ಇಂತಹ ಘಟನೆ ಗಳು ವಿದ್ಯಾರ್ಥಿಗಳ ಮನಸ್ಸನ್ನು ಕಲುಷಿತಗೊಳಿಸುತ್ತವೆ’ ಎಂದರು.

೪. ಈ ಉತ್ತರದಿಂದ ನನಗೆ ಆಶ್ಚರ್ಯವಾಯಿತು ಮತ್ತು ಪಾರ್ಥಸಾರಥಿ ಅವರನ್ನು ಕೇಳಿದೆ, ‘ಔರಂಗಜೇಬನು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸದಿದ್ದರೆ, ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸಿದವರು ಯಾರು ?’ ಇದಕ್ಕೆ ಪಾರ್ಥಸಾರಥಿ ಬಳಿ ಉತ್ತರವಿರಲಿಲ್ಲ.

ನಿಜವಾದ ಇತಿಹಾಸವನ್ನು ಪ್ರಸ್ತುತ ಪಡಿಸಲು ಒತ್ತಾಯಿಸುವ ಡಾ. ಭೈರಪ್ಪರನ್ನು ಸಮಿತಿಯಿಂದ ಹೊರಗಿಟ್ಟರು !

ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಸಭೆಯ ನಡಾವಳಿಗಳನ್ನು ವಿವರಿಸುತ್ತಾ ಡಾ. ಭೈರಪ್ಪ, ”ನಾನು ಪಾರ್ಥ ಸಾರಥಿಯವರಲ್ಲಿ ಕೇಳಿದೆ, ವಾರಣಾಸಿಯ ಮಸೀದಿಯತ್ತ ದಿಟ್ಟಿಸುತ್ತಿರುವ ನಂದಿಯನ್ನು ನೋಡಿ ಯಾವ ತೀರ್ಮಾನಕ್ಕೆ ಬರಬಹುದು? ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ವಿಷಯದ ಬಗ್ಗೆ ಶಿಕ್ಷಕರಿಗೆ ಪ್ರಶ್ನೆಯನ್ನು ಕೇಳಿದರೆ, ಶಿಕ್ಷಕರು ಏನು ಉತ್ತರಿಸುತ್ತಾರೆ? ಈ ಪ್ರಶ್ನೆಗಳಿಗೆ ಪಾರ್ಥಸಾರಥಿಯ ಬಳಿ ಉತ್ತರವಿರಲಿಲ್ಲ. ಪಾರ್ಥಸಾರಥಿಯವರು ನನ್ನನ್ನು ತಮ್ಮ ಸಭಾಂಗಣಕ್ಕೆ ಕರೆದೊಯ್ದು, ‘ನೀವು ಕರ್ನಾಟಕದವರು ಮತ್ತು ನಾನು ತಮಿಳುನಾಡಿನವರು. ನಾವು ಸಹೋದರರಂತೆ ವರ್ತಿಸಬೇಕು. ಜಗಳವಾಡಬಾರದು ಎಂದರು. ಪಾರ್ಥಸಾರಥಿಯವರ ಮಾತು ಕೇಳಿ ನಾನು ಹೊರಗೆ ಬಂದೆ. ೧೫ ದಿನಗಳ ನಂತರ ಮುಂದಿನ ಸಭೆಯಲ್ಲಿ, ನಾನು ಮತ್ತೆ ಅದೇ ಪ್ರಶ್ನೆಗಳನ್ನು ಕೇಳಿದೆ. ಪಾರ್ಥಸಾರಥಿಯವರು ಸಿಟ್ಟಿನಿಂದ ಸಭೆಯನ್ನು ಅಲ್ಲಿಗೆ ಮುಗಿಸಿದರು. ಕೆಲವು ದಿನಗಳ ನಂತರ ‘ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣೆ ಸಮಿತಿ’ಯನ್ನು ಪುನರ್ ರಚಿಸಲಾಗಿದೆ ಎಂದು ಸರಕಾರಿ ಅಧಿಸೂಚನೆಯನ್ನು ಪ್ರಕಟಿಸಲಾಯಿತು. ಅದರಲ್ಲಿ ನನ್ನ ಹೆಸರು ಕಾಣೆಯಾಗಿತ್ತು.

ಸಾಮ್ಯವಾದಿ ಇತಿಹಾಸಕಾರರನ್ನು ನೇಮಿಸುವ ಮೂಲಕ ನಿಜವಾದ ಇತಿಹಾಸವನ್ನು ಮರೆಮಾಡಲಾಯಿತು !

ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ೫ ಸದಸ್ಯರ ಸಂಯೋಜನೆಯನ್ನು ಉಳಿಸಿಕೊಳ್ಳಲಾಗಿದೆ; ಆದರೆ ನನ್ನ ಬದಲಿಗೆ ಸಾಮ್ಯವಾದಿ ಮನೋಭಾವದ ಇತಿಹಾಸಕಾರನನ್ನು ನೇಮಿಸಲಾಯಿತು. ಈ ಸಮಿತಿಯು ಇತಿಹಾಸ ಮತ್ತು ಸಮಾಜಶಾಸ್ತ್ರದ ಪುಸ್ತಕಗಳನ್ನು ಬದಲಾಯಿಸುವ ಮೂಲಕ ನಿಜವಾದ ಇತಿಹಾಸವನ್ನು ವಿದ್ಯಾರ್ಥಿಗಳಿಂದ ಮರೆಮಾಚಿದೆ. ಎಲ್ಲಾ ಪಾಠಗಳು ಸಾಮ್ಯವಾದಿ ಸಿದ್ಧಾಂತಕ್ಕೆ ಅನುಕೂಲಕರವಾಗಿವೆ. ಪಠ್ಯಕ್ರಮವು ಹೊರಗಿನ ಆಕ್ರಮಣಕಾರರನ್ನು ‘ನಾಯಕರು’ ಎಂದು ಬಿಂಬಿಸಲಾಗಿತ್ತು. ಇದಕ್ಕೆ ವಿರುದ್ಧವಾಗಿ, ಭಾರತದ ನಿಜವಾದ ಸಂಪತ್ತು, ಇತಿಹಾಸ ಮತ್ತು ಜ್ಞಾನಕ್ಕೆ ಆ ಪುಸ್ತಕಗಳಲ್ಲಿ ಸ್ಥಾನವಿರಲಿಲ್ಲ.