ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಗೋಪಾಲ ಗಂಜ ಪ್ರದೇಶದಲ್ಲಿನ ಕೋಟಾಲಿಪಾರಾ ಇಲ್ಲಿ ಮುಸಲ್ಮಾನರ ಗುಂಪಿನಿಂದ ಮಹಮ್ಮದ್ ಪೈಗಂಬರರ ತಥಾ ಕಥಿತ ಅಪಮಾನ ಮಾಡಿರುವ ಫೇಸ್ ಬುಕ್ ಪೋಸ್ಟ್ ನಿಂದ ಓರ್ವ ಹಿಂದೂ ಯುವಕನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲಾಗಿದೆ. ಜನವರಿ ೧೫ ರಂದು ಸಂಜೆ ಈ ಘಟನೆ ನಡೆದಿದೆ. ಇದರಲ್ಲಿ ಯಾವುದೇ ಜೀವಹಾನಿ ಆಗಿರುವ ವಾರ್ತೆ ಇಲ್ಲ. ಈ ಘಟನೆಯ ನಂತರ ಪರಿಸರದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಈ ಯುವಕನ ಸಹೋದರದಂಬಂಧಿಯು, ಫೇಸ್ ಬುಕ್ ಪೋಸ್ಟ್ ನಲ್ಲಿ ಏನು ಹೇಳಲಾಗಿದೆ ಇದು ತಿಳಿದಿಲ್ಲ, ಎಂದು ಹೇಳಿದ್ದಾರೆ.
೧. ಸ್ಥಳೀಯರ ಅಭಿಪ್ರಾಯದ ಪ್ರಕಾರ, ತಥಾ ಕಥಿತ ಪೋಸ್ಟ್ ನಿಂದ ಕೋಟಾಲಿಪಾರಾ ಮತ್ತು ಬರಿಸಾಲ ಉಪಜಿಲ್ಲೆಯಲ್ಲಿನ ಅನೇಕ ಗ್ರಾಮದ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಇದರ ನಂತರ ಕೆಲವು ಸ್ಥಳೀಯ ಮುಸಲ್ಮಾನರು ಯುವಕನ ಮನೆ ಧ್ವಂಸಗೊಳಿಸಿದರು. ಈ ಯುವಕ ಕಳೆದ ೭ ವರ್ಷಗಳಿಂದ, ಹಾಗೂ ಅವನ ಇತರ ಕುಟುಂಬದವರು ಕೆಲವು ತಿಂಗಳ ಹಿಂದೆ ಭಾರತದಲ್ಲಿ ವಾಸಿಸಲು ಹೋಗಿದ್ದಾರೆ
೨. ಸ್ಥಳೀಯ ಉಲೇಮಾ ಪರಿಷತ್ತಿನ ಪ್ರಚಾರ ಸಚಿವ, ಫೇಸ್ ಬುಕ್ ಪೋಸ್ಟ್ ನಿಂದ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ; ಆದರೆ ನಾನು ಮುಸಲ್ಮಾನನೆಂದು ಈ ಧ್ವಂಸವನ್ನು ಬೆಂಬಲಿಸುವುದಿಲ್ಲ, ಎಂದು ಹೇಳಿದರು.
೩. ಪೊಲೀಸ್ ಅಧಿಕಾರಿ ಮಹಮ್ಮದ ಜಿಲ್ಲೂರ ರಹಮಾನ ಇವರು, ಅಪಮಾನದ ಪ್ರಕರಣದ ಬಗ್ಗೆ ನಮ್ಮ ಬಳಿ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ವಿಚಾರಣೆಯ ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಆರೋಪಿ ಭಾರತದಲ್ಲಿ ವಾಸವಾಗಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಹಿಂದೂಗಳ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪೋಸ್ಟ್ ಮಾಡಿ ಅವರ ಮೇಲೆ ದಾಳಿ ಮಾಡುವ ಹೊಸ ಪದ್ದತಿಯನ್ನು ಮುಸಲ್ಮಾನರು ಕಂಡುಹಿಡಿದಿದ್ದಾರೆ. ಇದು ಇದರದೇ ಒಂದು ಭಾಗ, ಎಂದು ತಿಳಿದು ಬರುತ್ತದೆ ! |