‘ಭಾರತದೊಂದಿಗೆ ೩ ಸಲ ಯುದ್ಧ ಮಾಡಿದ್ದರಿಂದ ನಾವು ಬಡವರಾದೆವು !(ಅಂತೆ) – ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಶರೀಫ್

ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಶರೀಫ್ ಇವರ ಮೊಸಳೆ ಕಣ್ಣೀರು !

ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಶರೀಫ್

ರಿಯಾಧ (ಸೌದಿ ಅರೇಬಿಯಾ) – ಭಾರತ ಮತ್ತು ಪಾಕಿಸ್ತಾನ್ ಇವು ನೆರೆಯ ದೇಶಗಳಾಗಿದ್ದು ಪರಸ್ಪರ ಹೊಂದಿಕೊಂಡು ಇರಬೇಕು. ನಾವು ಒಟ್ಟಾಗಿ ಶಾಂತಿಯಿಂದ ಇರಬೇಕು, ಪ್ರಗತಿ ಮಾಡಿಕೊಳ್ಳಬೇಕೆ ಅಥವಾ ಯುದ್ಧ ಮಾಡಬೇಕೆ, ಇದು ನಮ್ಮ ಮೇಲೆ ಅವಲಂಬಿಸಿದೆ. ನಾವು ಭಾರತದ ವಿರುದ್ಧ 3 ಸಲ ಯುದ್ಧ ಮಾಡಿದೆವು, ಆದ್ದರಿಂದಲೇ ನಾವು ಬಡತನದ ಜೊತೆ ನಿರುದ್ಯೋಗಿಗಳಾದೆವು. ನಾವು ಯುದ್ಧದಿಂದ ಪಾಠ ಕಲಿತಿದ್ದೇವೆ. ನಾವು ಶಾಂತಿಯಿಂದ ಬದುಕಬೇಕು. ನಮಗೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ, ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಶಾಹಬಾಜ್ ಶರೀಫ್ ಇವರು ‘ಅಲ್ ಅರೇಬಿಯಾ’ ಈ ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಈ ಸಮಯದಲ್ಲಿ ಅವರು ‘ಪ್ರಧಾನಿ ಮೋದಿ ಇವರಿಗೆ ನನ್ನದೊಂದು ಸಂದೇಶ ಇದೆ ಎಂದು ಹೇಳುತ್ತಾ, ನಾವು ಮುಖಾಮುಖಿಯಾಗಿ ಕುಳಿತು ಕಾಶ್ಮೀರದಂತಹ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸೋಣ’, ಎಂದು ಕರೆ ನೀಡಿದರು. ಪಾಕಿಸ್ತಾನದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ತುತ್ತ ತುದಿ ಮುಟ್ಟಿದೆ. ದೇಶದಲ್ಲಿನ ಜನರಿಗೆ ಗೋಧಿ ಹಿಟ್ಟು ಸಿಗದೇ ಅವರಲ್ಲೇ ಹೊಡೆದಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ನೆನಪಾಗಿದೆ. ಇನ್ನೊಂದು ಕಡೆ ಪಾಕಿಸ್ತಾನದ ಪ್ರಸಾರ ಮಾಧ್ಯಮಗಳು ಬಹಿರಂಗವಾಗಿ ಭಾರತದ ಪ್ರಧಾನಿ ಮೋದಿಯವರನ್ನು ಶ್ಲಾಘಿಸುತ್ತಿದ್ದೂ ‘ಭಾರತ ಪ್ರತಿಯೊಂದು ವಿಷಯದಲ್ಲಿ ಶಕ್ತಿಶಾಲಿಯಾಗಿದೆ’, ಎಂದು ಹೇಳುತ್ತಿದೆ.

‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ !’ (ಅಂತೆ)

ಇದನ್ನೇ ಹೇಳುವುದು ಕಳ್ಳನಿಗೊಂದು ಪಿಳ್ಳೆ ನೆವ ! ಪಾಕಿಸ್ತಾನದಲ್ಲಿ ಕಳೆದ ೭೫ ವರ್ಷಗಳಿಂದ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರ ನಡೆಯುತ್ತಿರುವಾಗ ಮತ್ತು ಭಾರತದಲ್ಲಿ ಮುಸಲ್ಮಾನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಈ ರೀತಿಯ ಹೇಳಿಕೆ ಎಂದರೆ ನಂಬುವಂತೆ ಸುಳ್ಳು ಹೇಳಿ ! ಎಂದಾಗಿದೆ.

ಪ್ರಧಾನಿ ಶಾಹಬಾಜ್ ಶರೀಫ್ ಮಾತು ಮುಂದುವರೆಸುತ್ತಾ, ಕಾಶ್ಮೀರದಲ್ಲಿ ಯಾವಾಗಲೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತದೆ. ಕಲಂ ೩೭೦ ಅಡಿಯಲ್ಲಿ ಕಾಶ್ಮೀರಿಗಳಿಗೆ ಸಿಕ್ಕಿದ್ದ ಹಕ್ಕನ್ನು ಭಾರತವು ತೆಗೆದುಹಾಕಿದೆ. ಆಗಸ್ಟ್ ೨೦೧೯ ರಲ್ಲಿ ಸ್ವಾಯತ್ತತೆ ರದ್ದುಪಡಿಸಲಾಯಿತು. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದೆಲ್ಲಾ ಯಾವುದೇ ಪರಿಸ್ಥಿತಿಯಲ್ಲಿ ನಿಲ್ಲಬೇಕು. ಇದರಿಂದ ಭಾರತ ಚರ್ಚೆಗಾಗಿ ಸಿದ್ಧವಿದೆ ಎಂಬ ಸಂದೇಶ ಪ್ರಪಂಚಕ್ಕೆ ಹೋಗುವುದು. (ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಇದರ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆ ಯಾವುದೇ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ. ಪಾಕಿಸ್ತಾನ ಅದರ ವಶದಲ್ಲಿರುವ ಕಾಶ್ಮೀರನ್ನು ಭಾರತಕ್ಕೆ ಬೆಷರತ್ತಾಗಿ ಹಿಂತಿರುಗಿಸಬೇಕು, ಕಾಶ್ಮೀರದ ಸಮಸ್ಯೆಯ ಮೇಲೆ ಇದು ಏಕೈಕ ಉಪಾಯವಾಗಿದೆ ! -ಸಂಪಾದಕರು)

ಸಂಪಾದಕೀಯ ನಿಲುವು

ಭಾರತ ಯುದ್ಧ ಮಾಡಲು ಹೇಳಿರಲಿಲ್ಲ, ಆದರೆ ಪಾಕಿಸ್ತಾನ ತನ್ನ ಉದ್ದಟತನದಿಂದ ಮಾಡಿದ ಯುದ್ಧದ ಪರಿಣಾಮ ಆಗಿದೆ. ಈ ಪರಿಣಾಮ ಇಷ್ಟಕ್ಕೆ ನಿಲ್ಲದೆ ಪಾಕಿಸ್ತಾನವನ್ನು ಸಂಪೂರ್ಣ ನೆಲಕಚ್ಚಿಸುವುದು, ಇದು ಶರೀಫರು ಗಮನದಲ್ಲಿಟ್ಟುಕೊಳ್ಳಬೇಕು !