‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಪಿ.ಐ.ಪಿ. (ಪಾಲಿಕಾಂಟ್ರಾಸ್ಟ್ ಇಂಟರ್‌ಫೆರನ್ಸ್ ಫೊಟೋಗ್ರಾಫಿ)’ ಈ ತಂತ್ರಜ್ಞಾನದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆಯುವಾಗ ನಾವು ಎರಡೂ ಕೈಗಳನ್ನು ಜೋಡಿಸಿ ದೇವರಿಗೆ ನಮಸ್ಕರಿಸುತ್ತೇವೆ. ಎರಡು ಕೈಗಳ ಅಂಗೈಗಳು ಜೋಡಿಸಿದ ನಂತರ (ಅಂದರೆ ಒಂದಕ್ಕೊಂದು ಜೋಡಿಸಿದಾಗ) ಆಗುವ ಮುದ್ರೆಗೆ ‘ನಮಸ್ಕಾರ’ ಎನ್ನುತ್ತಾರೆ. ದೇವರಿಗೆ ನಮಸ್ಕರಿಸುವಾಗಿನ ಮುದ್ರೆಯಿಂದ ದೇವತೆಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ನಮಗೆ ಗ್ರಹಿಸಲು ಸಾಧ್ಯವಾಗುತ್ತದೆ. ‘ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಯಾವುದು ?’ ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಪಿ.ಐ.ಪಿ. (ಪಾಲಿಕಾಂಟ್ರಾಸ್ಟ್ ಇಂಟರ್‌ಫೆರನ್ಸ್ ಫೊಟೋಗ್ರಾಫಿ)’ ಈ ತಂತ್ರಜ್ಞಾನವನ್ನು ಉಪಯೋಗಿಸಲಾಯಿತು. ಇದರಿಂದ ವಸ್ತು ಮತ್ತು ವ್ಯಕ್ತಿಯ ಊರ್ಜಾಕ್ಷೇತ್ರದ (‘ಔರಾ’ದ) ಅಧ್ಯಯನ ಮಾಡಲು ಬರುತ್ತದೆ. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಸಾಧಕನು ನಮಸ್ಕಾರದ ಮುದ್ರೆಯನ್ನು ಮಾಡುವ ಮೊದಲು ಮತ್ತು ಅವನು ಒಂದೊಂದರಂತೆ ಮುಂದಿನ ೩ ರೀತಿಯ ನಮಸ್ಕಾರಗಳ ಮುದ್ರೆಯನ್ನು ಮಾಡಿದ ನಂತರ ‘ಪಿ.ಐ.ಪಿ.’ ತಂತ್ರಜ್ಞಾನದ ಮೂಲಕ ವಾತಾವರಣದ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಈ ಛಾಯಾಚಿತ್ರಗಳ ಬಗ್ಗೆ ಮಾಡಿದ ತುಲನಾತ್ಮಕ ಅಧ್ಯಯನದಿಂದ ‘ದೇವರಿಗೆ ನಮಸ್ಕಾರ ಮಾಡುವ ಯಾವ ಪದ್ಧತಿ ಎಲ್ಲಕ್ಕಿಂತ ಯೋಗ್ಯವಾಗಿದೆ ?’,ಎಂದು ತಿಳಿಯಿತು.
ಅ. ಕೇವಲ ಕೈ ಜೋಡಿಸಿ ನಮಸ್ಕರಿಸುವುದು : ಈ ಪದ್ಧತಿಯಲ್ಲಿ ಸಾಧಕನು ಎರಡೂ ಕೈಗಳ ಅಂಗೈಗಳನ್ನು ಒಂದಕ್ಕೊಂದು ಜೋಡಿಸಿ ಶರೀರದ ಎದುರು ಹಿಡಿದು ನಮಸ್ಕರಿಸಿದನು. (೧ ನೇ ಛಾಯಾಚಿತ್ರವನ್ನು ನೋಡಿ.)
ಆ. ಕೈ ಜೋಡಿಸಿ ಅನಾಹತಚಕ್ರದ ಸ್ಥಳದಲ್ಲಿ ಸ್ಪರ್ಶಿಸಿ ನಮಸ್ಕರಿಸುವುದು : ಈ ಪದ್ಧತಿಯಲ್ಲಿ ಸಾಧಕನು ಎರಡು ಕೈಗಳ ಅಂಗೈಗಳನ್ನು ಒಂದಕ್ಕೊಂದು ಜೋಡಿಸಿ ಅನಾಹತಚಕ್ರದ ಸ್ಥಳದಲ್ಲಿ (ಅಂದರೆ ಎದೆಗೆ) ಸ್ಪರ್ಶ ಮಾಡಿ ಮತ್ತು ತಲೆಯನ್ನು ಸ್ವಲ್ಪ ಕೆಳಗೆ ಬಾಗಿಸಿ ನಮಸ್ಕರಿಸಿದನು. (೨ ನೇ ಛಾಯಾಚಿತ್ರವನ್ನು ನೋಡಬೇಕು.)
ಇ. ಕೈ ಜೋಡಿಸಿ ಕೈಗಳ ಹೆಬ್ಬೆರಳುಗಳನ್ನು ಭ್ರೂಮಧ್ಯದಲ್ಲಿ ಸ್ಪರ್ಶಿಸಿ ನಮಸ್ಕರಿಸುವುದು : ಈ ಪದ್ಧತಿಯಲ್ಲಿ ಸಾಧಕನು ಎರಡು ಕೈಗಳ ಅಂಗೈಗಳನ್ನು ಒಂದಕ್ಕೊಂದು ಜೋಡಿಸಿ ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಸ್ಥಳದಲ್ಲಿ ಹಿಡಿದು, ಬೆನ್ನು ಸ್ವಲ್ಪ ಕೆಳಗೆ ತಗ್ಗಿಸಿ ಮತ್ತು ತಲೆಯನ್ನು ಸ್ವಲ್ಪ ಬಾಗಿಸಿ ನಮಸ್ಕರಿಸಿದನು. (೩ ನೇ ಛಾಯಾಚಿತ್ರವನ್ನು ನೋಡಿ.)
೨. ‘ಪಿ.ಐ.ಪಿ.’ ಛಾಯಾಚಿತ್ರಗಳಲ್ಲಿನ (ಪ್ರಭಾವಲಯದಲ್ಲಿನ) ನಕಾರಾತ್ಮಕ ಮತ್ತು ಸಕಾರಾತ್ಮಕಸ್ಪಂದನಗಳ ಒಟ್ಟು ಪ್ರಮಾಣ, ಹಾಗೆಯೇ ಸಕಾರಾತ್ಮಕ ಸ್ಪಂದನಗಳಲ್ಲಿ ಕೆಲವು ಮಹತ್ವದ ಸ್ಪಂದನಗಳ ಪ್ರಮಾಣ
ಟಿಪ್ಪಣಿ : ಕೇವಲ ಕೈ ಜೋಡಿಸುವುದರಿಂದ ಚೈತನ್ಯವು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುವುದಿಲ್ಲ, ಚೈತನ್ಯವು ಹೆಚ್ಚು ಪ್ರಮಾಣದಲ್ಲಿ ಬರಲು ಯೋಗ್ಯ ಪದ್ಧತಿಯಿಂದ ನಮಸ್ಕರಿಸುವುದು ಆವಶ್ಯಕವಾಗಿದೆ ಮತ್ತು ಆಗಲೇ ಆ ಚೈತನ್ಯವು ದೇಹದಲ್ಲಿ ಹರಡುತ್ತದೆ.
ಸಾಧಕನು ಮೂರು ಪದ್ಧತಿಗಳಿಂದ ಮಾಡಿದ ನಮಸ್ಕಾರದ ಪ್ರಭಾವಲಯಗಳ ತುಲನೆಯನ್ನು ನಮಸ್ಕಾರ ಮಾಡುವ ಮೊದಲಿನ ಪ್ರಭಾವಲಯದೊಂದಿಗೆ ಮಾಡಲಾಗಿದೆ. ಇದರಿಂದ ಮುಂದಿನ ಅಂಶಗಳು ಗಮನಕ್ಕೆ ಬಂದಿತು.
ಅ. ನಮಸ್ಕಾರ ಮಾಡುವ ಮೊದಲಿನ ತುಲನೆಯಲ್ಲಿ ಸಾಧಕನು ಕೇವಲ ಕೈ ಜೋಡಿಸಿ ನಮಸ್ಕಾರವನ್ನು ಮಾಡಿರುವುದರಿಂದ ವಾತಾವರಣದಲ್ಲಿನ ಸಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣವು ಕಡಿಮೆಯಾಯಿತು ಮತ್ತು ನಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣವು ಹೆಚ್ಚಾಯಿತು. ಹಾಗೆಯೇ ಸಕಾರಾತ್ಮಕ ಸ್ಪಂದನಗಳನ್ನು ತೋರಿಸುವ ಹಳದಿ ಬಣ್ಣದ ಪ್ರಮಾಣವೂ ತುಂಬಾ ಕಡಿಮೆಯಾಯಿತು.
ಆ. ನಮಸ್ಕಾರ ಮಾಡುವ ಮೊದಲಿನ ತುಲನೆಯಲ್ಲಿ ಅವನು ಅನಾಹತ ಚಕ್ರದ ಸ್ಥಳದಲ್ಲಿ ಸ್ಪರ್ಶ ಮಾಡಿ ನಮಸ್ಕರಿಸಿದ ನಂತರ ವಾತಾವರಣದಲ್ಲಿನ ಸಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣವು ಹೆಚ್ಚಾಯಿತು ಮತ್ತು ನಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣವು ಕಡಿಮೆಯಾಯಿತು. ಹಾಗೆಯೇ ಸಕಾರಾತ್ಮಕ ಸ್ಪಂದನಗಳನ್ನು ತೋರಿಸುವ ಹಳದಿ ಬಣ್ಣದ ಪ್ರಮಾಣವು ತುಂಬಾ ಹೆಚ್ಚಾಯಿತು.
ಇ. ನಮಸ್ಕಾರ ಮಾಡುವ ಮೊದಲಿನ ತುಲನೆಯಲ್ಲಿ ಅವನು ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಮೇಲೆ ಹಿಡಿದು ಮಾಡಿದ ನಮಸ್ಕಾರದಿಂದ ವಾತಾವರಣದಲ್ಲಿನ ಸಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣ ಎಲ್ಲಕ್ಕಿಂತ ಹೆಚ್ಚಾಯಿತು ಮತ್ತು ನಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣ ತುಂಬಾ ಕಡಿಮೆಯಾಯಿತು. ಹಾಗೆಯೇ ಸಕಾರಾತ್ಮಕ ಸ್ಪಂದನಗಳನ್ನು ತೋರಿಸುವ ಹಳದಿ ಮತ್ತು ನೀಲಿ ಮಿಶ್ರಣ ಬಿಳಿ ಬಣ್ಣಗಳ ಪ್ರಮಾಣ ಹೆಚ್ಚಾಯಿತು.
೩. ನಿಷ್ಕರ್ಷ
ಸಾಧಕನು ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದಲ್ಲಿ ಹಿಡಿದು ಮಾಡಿದ ನಮಸ್ಕಾರದಿಂದ ವಾತಾವರಣದಲ್ಲಿ ಚೈತನ್ಯ ಮತ್ತು ಪಾವಿತ್ರ್ಯದ ಸ್ಪಂದನಗಳು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಿದವು. ಇದರಿಂದ ದೇವರಿಗೆ ನಮಸ್ಕಾರ ಮಾಡುವ ಈ ಪದ್ಧತಿಯು ಎಲ್ಲಕ್ಕಿಂತ ಯೋಗ್ಯವಾಗಿದೆ, ಎಂದು ಗಮನಕ್ಕೆ ಬರುತ್ತದೆ.
೪. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೪ ಅ. ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಮೇಲೆ ಹಿಡಿದು ಮಾಡಿದ ನಮಸ್ಕಾರದಿಂದ ವಾತಾವರಣದಲ್ಲಿ ಚೈತನ್ಯ ಮತ್ತು ಪಾವಿತ್ರ್ಯದ ಸ್ಪಂದನಗಳು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸುವ ಕಾರಣ : ಸಾಧಕನು ಕೇವಲ ಕೈಗಳನ್ನು ಜೋಡಿಸಿದನು, ಆಗ ಅವನ ಭಾವವು ಜಾಗೃತವಾಗಲಿಲ್ಲ. ಆದ್ದರಿಂದ ಅವನಿಗೆ ಹೆಚ್ಚು ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಅವನು ಕೈಗಳನ್ನು ಜೋಡಿಸಿ ಅನಾಹತಚಕ್ರದ ಮೇಲೆ ಸ್ಪರ್ಶ ಮಾಡಿ ಮತ್ತು ತಲೆಯನ್ನು ಸ್ವಲ್ಪ ಕೆಳಗೆ ಬಾಗಿಸಿ ಯಾವಾಗ ನಮಸ್ಕಾರವನ್ನು ಮಾಡಿದನೋ, ಆಗ ಅವನ ಅನಾಹತಚಕ್ರವು ಕಾರ್ಯನಿರತವಾಯಿತು. ಆದ್ದರಿಂದ ಅವನ ಭಾವವು ಜಾಗೃತವಾಗಿ ಅವನಿಗೆ ಹೆಚ್ಚು ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಯಿತು. ಯಾವಾಗ ಅವನು ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಮೇಲೆ, ಅಂದರೆ ಆಜ್ಞಾಚಕ್ರದ ಮೇಲೆ ಹಿಡಿದು, ಬೆನ್ನು ಸ್ವಲ್ಪ ಕೆಳಗೆ ತಗ್ಗಿಸಿ ಮತ್ತು ತಲೆಯನ್ನು ಸ್ವಲ್ಪ ಬಾಗಿಸಿ ನಮಸ್ಕಾರ ಮಾಡಿದನೋ, ಆಗ ಅವನ ಶರಣಾಗತಭಾವವು ಜಾಗೃತವಾಯಿತು. ಶರಣಾಗತಭಾವವು ಜಾಗೃತವಾಗಿರುವುದರಿಂದ ಸಾಧಕನಲ್ಲಿನ ‘ಅಹಂಭಾವ’ (ಅಂದರೆ ‘ಸ್ವ’ದ ಅಸ್ತಿತ್ವದ ಅರಿವು) ಕಡಿಮೆಯಾಗಲು ಸಹಾಯವಾಯಿತು. ಆದ್ದರಿಂದ ಅವನಿಗೆ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ ದೇವರಿಗೆ ಈ ಪದ್ಧತಿಯಿಂದ ಮಾಡಿದ ನಮಸ್ಕಾರದಿಂದ ವ್ಯಕ್ತಿಗೆ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗುತ್ತವೆ, ಎಂಬುದನ್ನು ಈ ಪರೀಕ್ಷಣೆಯಿಂದ ಸ್ಪಷ್ಟವಾಯಿತು.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೧೨.೨೦೨೨)
ವಿ-ಅಂಚೆ : [email protected]