ಮರಣದಂಡನೆಯ ಹಿಂದಿರುವುದು ಕರ್ಮಫಲನ್ಯಾಯವೋ ಅಥವಾ ನ್ಯಾಯಪದ್ಧತಿಯ ಅಸಹಾಯಕತೆಯೋ ?

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಮರಣದಂಡನೆಯ ಶಿಕ್ಷೆಯ ವಿಷಯದಲ್ಲಿ ೨೦೧೫ ರಲ್ಲಿ ರಾಷ್ಟ್ರೀಯ ವಿಧಿ ಆಯೋಗದ ವರದಿಯಲ್ಲಿ ಕೆಲವು ಶಿಫಾರಸ್ಸುಗಳನ್ನು ಮಾಡಲಾಗಿದೆ. ಮರಣದಂಡನೆಯನ್ನು ಎಲ್ಲಕ್ಕಿಂತ ಕಠೋರ ಶಿಕ್ಷೆಯೆಂದೆ ಪರಿಗಣಿಸಲಾಗುತ್ತದೆ. ಆರೋಪಿ ಓಡಾಟ ಮಾಡಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಕೆಲವು ಆದೇಶಗಳನ್ನು ಪಡೆಯದಿದ್ದರೆ, ಸತ್ರ ನ್ಯಾಯಾಲಯವು ನೀಡಿದ ಹಿಂದಿನ ಶಿಕ್ಷೆಗಳನ್ನೇ ಅನ್ವಯಗೊಳಿಸಲಾಗುತ್ತದೆ. ಅದಕ್ಕೆ ಅಪವಾದ ಕೇವಲ ಮರಣದಂಡನೆಯಾಗಿದೆ. ಯಾವ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಮರಣದಂಡನೆಯ ಶಿಕ್ಷೆಯನ್ನು ನೀಡಿದೆಯೊ, ಆ ಪ್ರಕರಣದಲ್ಲಿ ಆರೋಪಿಯು ಪ್ರಶ್ನಿಸದಿದ್ದರೂ, ಅವನಿಗೆ ಸತ್ರ ನ್ಯಾಯಾಲಯ ತಾನಾಗಿಯೆ ನಿರ್ಣಯವನ್ನು ಪರಿಶೀಲಿಸಲು ಉಚ್ಚ ನ್ಯಾಯಾಲಯಕ್ಕೆ ಕಳುಹಿಸಬೇಕು ಹಾಗೂ ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರ ವಿಭಾಗೀಯ ಪೀಠವು ಅದರ ವಿಚಾರವಿಮರ್ಷೆ ಮಾಡಿ ‘ಮರಣದಂಡನೆ ಯೋಗ್ಯವೋ, ಅಯೋಗ್ಯವೋ ?’, ಎಂದು ಘೋಷಿಸಬೇಕು, ಎನ್ನುವ ಪ್ರಕ್ರಿಯೆ ಇದೆ. ಈ ವರದಿಯಲ್ಲಿ ಅತೀ ಗಂಭೀರವಾದ ಶಿಕ್ಷೆಯ ವಿಷಯದಲ್ಲಿ ಕೆಲವು ಅಂಶಗಳನ್ನು ಮಂಡಿಸಲಾಯಿತು. ಈ ಲೇಖನವು ಅದನ್ನು ಆಧರಿಸಿದೆ.

೧. ೧ ಸಾವಿರದ ೫೧೨ ಪ್ರಕರಣಗಳಲ್ಲಿನ ಕೇವಲ ೬೫ ಜನರಿಗೆ ಮಾತ್ರ ಗಲ್ಲು ಶಿಕ್ಷೆಯನ್ನುವಿಧಿಸಿ ೪೩೬ ಪ್ರಕರಣಗಳಲ್ಲಿನ ಆರೋಪಿಗಳನ್ನು ನಿರಪರಾಧಿಯೆಂದು ಬಿಟ್ಟುಬಿಡಲಾಯಿತು 

ಸರ್ವೋಚ್ಚ ನ್ಯಾಯಾಲಯವು ನೀಡಿದ ಮಾಹಿತಿಗನುಸಾರ ೨೦೦೦ ದಿಂದ ೨೦೧೫ ಈ ಅವಧಿಯಲ್ಲಿ ಸತ್ರ ನ್ಯಾಯಾಲಯವು ಅನೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿತು. ಅದರಲ್ಲಿ ೧ ಸಾವಿರದ ೫೧೨ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ಪುನಃ ಖಟ್ಲೆಯನ್ನು ಆಲಿಸಿ ಅವರಿಗೆ ನಿರ್ಣಯ ನೀಡಿತು. ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿನ ಶೇ. ೬೨.೮ ರಷ್ಟು ಆರೋಪಿಗಳ ಅಪರಾಧಗಳಿಗೆ ಮುದ್ರೆಯೊತ್ತಿದೆ. ಆದರೆ ಅವರಿಗೆ ಗಲ್ಲು ಶಿಕ್ಷೆಯನ್ನು ನೀಡುವ ಬದಲು ಬೇರೆಯೆ ಶಿಕ್ಷೆಯನ್ನು ನೀಡಿದೆ ಹಾಗೂ ಶೇ. ೨೮.೯ ರಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ನಿರಪರಾಧಿಯೆಂದು ಮುಕ್ತಗೊಳಿಸಿದೆ. ಇದರ ಅರ್ಥ ಉಚ್ಚ ನ್ಯಾಯಾಲಯವು ಕೆಳ ನ್ಯಾಯಾಲಯಗಳ ನಿರ್ಣಯಗಳ ಗುಣಮಟ್ಟದಲ್ಲಿ ಸಮಸ್ಯೆಯಿದೆಯೆಂದು ಮುದ್ರೆಯೊತ್ತಿದೆ. ಈ ೧ ಸಾವಿರದ ೫೧೨ ಪ್ರಕರಣಗಳಲ್ಲಿ ಕೇವಲ ಶೇ. ೪.೩ ರಷ್ಟೇ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನು ಅನ್ವಯಗೊಳಿಸಿತು ಹಾಗೂ ಸುಮಾರು ೪೩೬ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯಾಗಿರುವ ಆರೋಪಿಗಳನ್ನು ನಿರಪರಾಧಿಯೆಂದು ಮುಕ್ತಗೊಳಿಸಲಾಯಿತು, ಎಂದು ನೇರವಾಗಿ ಹೇಳಬಹುದು. ‘ಇದು ಹೀಗೇಕಾಯಿತು ?’, ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದರೆ ತಪ್ಪೇನಿದೆ ?

೨. ಒಂದೇ ಪ್ರಕರಣದಲ್ಲಿ ಬೇರೆ ಬೇರೆ ನ್ಯಾಯವನ್ನು ನೀಡುವುದರ ಹಿಂದಿರುವ ಕಾರಣ ನ್ಯಾಯಾಂಗದ ದೋಷವೋ ಅಥವಾ ಆರೋಪಿಯ ಪ್ರಾರಬ್ಧವೋ ?

ಇದೇ ತರಹದ ಒಂದು ನಿರ್ಣಯವಿದೆ. ಹರ್ಬನ್ಸ್ ಸಿಂಹ, ಮೊಹಿಂದರ್ ಸಿಂಹ, ಜಿತಾ ಸಿಂಹ ಮತ್ತು ಕಾಶ್ಮಿರಾ ಸಿಂಹ ಈ ನಾಲ್ವರು ಸೇರಿ ೪ ಜನರ ಹತ್ಯೆಗೈದರು. ಈ ನಾಲ್ವರಲ್ಲಿ ಮೊಹಿಂದರ್ ಸಿಂಹ ಪೊಲೀಸರ ಚಕಮಕಿಯಲ್ಲಿ ಮೃತಪಟ್ಟನು. ಆದ್ದರಿಂದ ಮೂವರು ಉಳಿದರು. ಈ ಮೂವರಿಗೂ ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತು. ಉಚ್ಚ ನ್ಯಾಯಾಲಯವು ಅವರಿಗೆ ಸಾಯುವ ತನಕ ಮರಣದಂಡನೆ ನೀಡುವ ಬಗ್ಗೆ ಮುದ್ರೆಯೊತ್ತಿತು.

ಅ. ಜಿತಾ ಸಿಂಹನು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದನು; ಆದರೆ ಅದನ್ನು ೧೫.೪.೧೯೭೬ ರಂದು ವಜಾ ಗೊಳಿಸಿದುದರಿಂದ ಅವನನ್ನು ಗಲ್ಲಿಗೇರಿಸಲು ನಿರ್ಧರಿಸಲಾಯಿತು.

ಆ. ೧೦.೪.೧೯೭೭ ರಂದು ಸರ್ವೋಚ್ಚ ನ್ಯಾಯಾಲಯದ ಆದರೆ ಬೇರೆ ವಿಭಾಗೀಯ ಪೀಠದಲ್ಲಿ ಕಾಶ್ಮಿರಾ ಸಿಂಹನ ಅರ್ಜಿಯನ್ನು ಆಲಿಸಲಾಯಿತು. ಆಗ ಸರ್ವೋಚ್ಚ ನ್ಯಾಯಾಲಯವು ಅವನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು.

ಇ. ೧೬.೧೦.೧೯೭೮ ರಂದು ಸರ್ವೋಚ್ಚ ನ್ಯಾಯಾಲಯವು ಹರಬನ್ಸ್ ಸಿಂಹನ ಅರ್ಜಿಯನ್ನು ತಳ್ಳಿಹಾಕಿತು. ೧೯೮೦ ರಲ್ಲಿ ಅದರಲ್ಲಿನ ‘ರಿವ್ಯೂ ಅರ್ಜಿ’ಯನ್ನೂ ತಳ್ಳಿಹಾಕಲಾಯಿತು. ಅಂದರೆ ಹರಬನ್ಸ್ ನೇಣುಗಂಬಕ್ಕೇರುವುದು ಖಚಿತವಾಗಿತ್ತು. ಅನಂತರ ಅವನು ಮಾನ್ಯ ರಾಷ್ಟ್ರಪತಿಯವರಲ್ಲಿ ದಯೆಯ ಅರ್ಜಿಯನ್ನು ದಾಖಲಿಸಿದನು. ಅಂದರೆ ಆಗಸ್ಟ್ ೧೯೮೧ ರಲ್ಲಿ ಅದನ್ನೂ ತಳ್ಳಿಹಾಕಲಾಯಿತು.

ಜಿತಾ ಸಿಂಹನನ್ನು ೬ ಅಕ್ಟೋಬರ್ ೧೯೮೧ ರಂದು ನೇಣುಗಂಬಕ್ಕೇರಿಸಲಾಯಿತು. ಹರ್ಬನ್ಸ್ ಸಿಂಹನಿಗೂ ಅದೇ ದಿನ ನೇಣು ಹಾಕಲಾಗುವುದಿತ್ತು; ಆದರೆ ಅವನು ಈ ನಡುವೆ ಪುನಃ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದನು. ‘ಸಮಾನ ಸ್ಥಿತಿಯಲ್ಲಿದ್ದ ಕಾಶ್ಮಿರಾ ಸಿಂಹನ ಗಲ್ಲು ಶಿಕ್ಷೆ ರದ್ದಾಗುತ್ತದೆ ಎಂದಾದರೆ, ಹರಬನ್ಸನ ಗಲ್ಲುಶಿಕ್ಷೆಯೂ ರದ್ದಾಗಬೇಕು’, ಎಂಬುದೇ ಅವನ ಯುಕ್ತಿವಾದವಾಗಿತ್ತು. ಆಗ ಸರ್ವೋಚ್ಚ ನ್ಯಾಯಾಲಯವು ‘ಕಾಶ್ಮಿರಾ ಸಿಂಹನ ಗಲ್ಲು ಶಿಕ್ಷೆ ರದ್ದಾಗಿದ್ದರೆ, ಅದೇ ನ್ಯಾಯಕ್ಕನುಸಾರ ಹರಬನ್ಸನ ಶಿಕ್ಷೆಯೂ ರದ್ದಾಗಬೇಕು, ಎಂಬುದನ್ನು ಮನ್ನಿಸಿತು ಹಾಗೂ ಅವನ ಗಲ್ಲುಶಿಕ್ಷೆಯು ಜೀವಾವಧಿಗೆ ಪರಿವರ್ತನೆಯಾಗಬೇಕು’, ಎಂಬುದನ್ನು ಮನ್ನಿಸಿತು. ಸರ್ವೋಚ್ಚ ನ್ಯಾಯಾಲಯವು ಒಮ್ಮೆ ಹಿಂದಿನ ಅರ್ಜಿಯನ್ನು ತಳ್ಳಿ ಹಾಕಿದ ನಂತರ ಸರ್ವೋಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯಲ್ಲಿ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರವಿರಲಿಲ್ಲ. ಆದ್ದರಿಂದ ರಾಷ್ಟ್ರಪತಿಗಳು ಇದನ್ನು ಪುನರ್ವಿಚಾರ ಮಾಡಬೇಕು ಹಾಗೂ ಅಷ್ಟರವರೆಗೆ ಗಲ್ಲುಶಿಕ್ಷೆಯನ್ನು ನಿಲ್ಲಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು.

೩. ಆರೋಪಿಗಳಲ್ಲಿ ಇಬ್ಬರಿಗೆ ಮರಣದಂಡನೆ ಸಿಕ್ಕಿತು ಹಾಗೂ ಮತ್ತಿಬ್ಬರು ಬದುಕಿದರು, ಇದಕ್ಕೆ ಕಾರಣ ನ್ಯಾಯಾಧೀಶರ ದೃಷ್ಟಿಕೋನವೋ ಅಥವಾ ಪ್ರಾರಬ್ಧವೋ ?

ಈ ಪ್ರಕರಣದಲ್ಲಿ ಮೂವ್ವರ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ವಿವಿಧ ನ್ಯಾಯಾಧೀಶರಲ್ಲಿ ಆಲಿಕೆಗೆ ಬಂದಿದ್ದವು. ಅಪರಾಧ ಒಂದೇ ಆಗಿತ್ತು ಹಾಗೂ ಅದರಲ್ಲಿ ೪ ಜನರ ಹತ್ಯೆಯಾಗಿತ್ತು. ಮೂರೂ ಆರೋಪಿಗಳ ವಿಷಯದಲ್ಲಿ ಬೇರೆ ಬೇರೆ ಸ್ಥಿತಿಯಿರಲಿಲ್ಲ. ಅಪರಾಧದಲ್ಲಿನ ಮೂವರ ಪಾತ್ರವೂ ಸಮಾನವಾಗಿತ್ತು. ಮೊತ್ತ ಮೊದಲು ಒಬ್ಬ ಅಪರಾಧಿ ಪೊಲೀಸರ ಚಕಮಕಿಯಲ್ಲಿ ಸಾವನ್ನಪ್ಪಿದನು, ಇನ್ನೊಬ್ಬ ಖಟ್ಲೆಯಲ್ಲಿ ದೋಷಿಯೆಂದು ತೀರ್ಮಾನವಾಗಿ ನೇಣುಗಂಬಕ್ಕೇರಿದನು. ಉಳಿದ ಇಬ್ಬರು ಬದುಕಿದರು, ಆದರೆ ಅವರು ಸೆರೆಮನೆಯಲ್ಲಿ ಉಳಿದರು. ಇದರಲ್ಲಿ ಇಬ್ಬರು ಸರಕಾರಿ ಹತ್ಯೆಗೊಳಗಾದರು, ಅದು ಪ್ರಾರಬ್ಧದಿಂದಲೋ ಅಥವಾ ಮಾನವೀ ತಪ್ಪಿನಿಂದಲೋ ? ಹಾಗೂ ಇಬ್ಬರು ಬದುಕಿದರು, ಅದು ನ್ಯಾಯಾಧೀಶರು ಒಳ್ಳೆಯವರು ಸಿಕ್ಕಿದರೆಂದೋ ಅಥವಾ ಕೆಟ್ಟವರು ಸಿಕ್ಕಿದರೆಂದೋ ? ಅದೇ ರೀತಿ ಯಾವ ನ್ಯಾಯಾಧೀಶರ ಬಳಿ ಖಟ್ಲೆ ಬರುತ್ತದೆಯೋ ಅದಕ್ಕನುಸಾರ ಮರಣದಂಡನೆಯನ್ನು ನಿರ್ಧರಿಸುವುದು ಅಥವಾ ಬದಲಾಯಿಸುವುದು  ನಿರ್ಧರಿತವಾಗುವುದೇ?

೪. ಗಲ್ಲುಶಿಕ್ಷೆ ರದ್ದಾಗಲು ಯುಕ್ತಿವಾದ ಮಾಡುವ ವಕೀಲರ ಕೌಶಲ್ಯ, ನ್ಯಾಯಾಧೀಶರ ವಿಶಿಷ್ಟ ಮಾನಸಿಕತೆ, ಆರೋಪಿಗಳ ಪ್ರಾರಬ್ಧ ಅಥವಾ ಇವೆಲ್ಲದರ ಒಟ್ಟು ಪರಿಣಾಮವು ಕಾರಣವೇ ?

ಪ್ರಾಧ್ಯಾಪಕ ಬ್ಲ್ಯಾಕ್ ಶೀಲ್ಡ್ ಇವರು ೧೯೭೨ ರಿಂದ ೧೯೭೬ ರ ತನಕ ೭೦ ನಿರ್ಣಯಗಳ ಅಭ್ಯಾಸ ಮಾಡಿದರು. ಈ ೭೦ ನಿರ್ಣಯಗಳಲ್ಲಿ ‘ಗಲ್ಲು ಶಿಕ್ಷೆಯನ್ನು ವಿಧಿಸುವುದೋ ಅಥವಾ ಜೀವಾವಧಿಯಾಗಿ ಪರಿವರ್ತಿಸುವುದೋ ?’, ಎಂಬ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ನೀಡಲಿಕ್ಕಿತ್ತು. ಪ್ರಾಧ್ಯಾಪಕರು ಅದರಿಂದ ಮುಂದಿನ ನಿಷ್ಕರ್ಷಕ್ಕೆ ಬಂದರು, ನ್ಯಾಯಾಧೀಶ ವೈದ್ಯ ಲಿಂಗಮ್, ದುವಾ ಹಾಗೂ ಅಲಗಿರಿಸ್ವಾಮಿ ಇವರಲ್ಲಿ ಬಂದ ಪ್ರಕರಣಗಳಲ್ಲಿ ಮುಖ್ಯವಾಗಿ ಗಲ್ಲುಶಿಕ್ಷೆಯನ್ನೇ ವಿಧಿಸಲಾಯಿತು.

‘ಗಲ್ಲು ಶಿಕ್ಷೆಯನ್ನು ವಿಧಿಸಿ ತುಂಬಾ ಸಮಯವಾಗಿದೆ’, ಎಂಬ ಕಾರಣದಿಂದ ೫ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು ಹಾಗೂ ಇದೇ ಕಾರಣವನ್ನು ಮುಂದಿಟ್ಟು ನ್ಯಾಯಾಲಯದ ಮೆಟ್ಟಿಲೇರಿದ ೫ ಖಟ್ಲೆಗಳಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಪ್ರಾಧ್ಯಾಪಕರ ಅಭ್ಯಾಸಕ್ಕನುಸಾರ ೨೦೦೦ ರ ನಂತರದ ಸಮಯದಲ್ಲಿ ಓರ್ವ ನ್ಯಾಯಾಧೀಶರ ಮುಂದೆ ಗಲ್ಲುಶಿಕ್ಷೆಯ ಒಟ್ಟು ೩೦ ಪ್ರಕರಣಗಳು ಬಂದವು. ಅವುಗಳಲ್ಲಿನ ೧೪ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯನ್ನೇ ವಿಧಿಸಲಾಯಿತು. ಈ ೧೪ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಬರುವ ಮೊದಲು ಉಚ್ಚ ನ್ಯಾಯಾಲಯವು ೨ ಪ್ರಕರಣಗಳಲ್ಲಿನ ಆರೋಪಿಗಳನ್ನು ನಿರಪರಾಧಿಯೆಂದು ಮುಕ್ತಗೊಳಿಸಿತ್ತು ಹಾಗೂ ೨ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು. ‘ಈ ೧೪ ರಲ್ಲಿ ೫ ಪ್ರಕರಣಗಳಲ್ಲಿನ ನಿರ್ಣಯವು ಯೋಗ್ಯವಿರಲಿಲ್ಲ. ಅದನ್ನು ಅವಲಂಬಿಸಿರಬಾರದು’, ಎಂದು ಸರ್ವೋಚ್ಚ ನ್ಯಾಯಾಲಯ ನಂತರ ಘೋಷಿಸಿತು; ಆದರೆ ಆ ನಿರ್ಣಯ ಹಾಗೆಯೇ ಉಳಿಯಿತು, ಅದು ಮುಂದೆ ಹೇಗೆ ? ಇದು ಯಾವುದರಿಂದಾಯಿತು ? ಯುಕ್ತಿವಾದ ಮಾಡುವ ವಕೀಲರ ಕೌಶಲ್ಯವೋ ? ಅಥವಾ ನ್ಯಾಯಾಧೀಶರ ಸ್ವಂತದ ವಿಶಿಷ್ಟ ಮಾನಸಿಕತೆಯೋ ? ಅಥವಾ ಆ ಆರೋಪಿಗಳ ಪ್ರಾರಬ್ಧವೋ ? ಅಥವಾ ಇವರೆಲ್ಲರ ಒಟ್ಟು ಪರಿಣಾಮವೋ ? ಎಂಬುದರ ಉತ್ತರವನ್ನು ಯಾವ ‘ಮೈಲಾರ್ಡ್’ ಕೊಡುವರು ?

೫. ಹೆಚ್ಚು ಉತ್ತಮವಾಗಿ ನ್ಯಾಯದಾನ ಮಾಡಲು ನ್ಯಾಯಾಧೀಶರು ಸಾಧನೆ ಮಾಡುವುರೊಂದಿಗೆ ಹಿಂದೂ ಸಂಸ್ಕೃತಿಯನ್ನು ಅಭ್ಯಾಸ ಮಾಡುವುದು ಆವಶ್ಯಕ !

ಯಾವುದೇ ಒಂದು ಹೊಸ ಪ್ರಶ್ನೆ ಮುಂದೆ ಬಂದರೆ ಅದರ ಸ್ಪಷ್ಟ ಉತ್ತರ ಸಂವಿಧಾನದಲ್ಲಿ ಅಥವಾ ಹಿಂದಿನ ನಿರ್ಣಯದಲ್ಲಿ ಇಲ್ಲದಿದ್ದರೆ, ನಮ್ಮ ನ್ಯಾಯಾಧೀಶರು ವಿದೇಶದ ನ್ಯಾಯಾಲಯಗಳ ನಿರ್ಣಯದ ಕಡೆಗೆ ನೋಡುತ್ತಾರೆ.

ಅವುಗಳಲ್ಲಿ ಯಾವುದಾದರೂ ಎರವಲು ಪಡೆಯಬಹುದೇ ? ಎಂದು ನೋಡುತ್ತಾರೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ಒಳ್ಳೆಯದೆಂದು ತಿಳಿಯಲಾಗುತ್ತದೆ; ಆದರೆ ಕರ್ಮಫಲನ್ಯಾಯದ ಬಗ್ಗೆ ಅಮೇರಿಕಾದ ನ್ಯಾಯಾಲಯ ಹೇಗೆ ವಿಚಾರ ಮಾಡಬಹುದು ? ಅವರ ಏಸೂ ಅವರಿಗೆ ಕರ್ಮಫಲ ನ್ಯಾಯವನ್ನು ಕಲಿಸದೇ ಇದ್ದರೆ ಅವರ ನಿರ್ಣಯದಲ್ಲಿ ಅದು ಬರಲಿಕ್ಕೆ ಸಾಧ್ಯವಿಲ್ಲ. ಆಕಾಶಕ್ಕೆ ಹೋಗಲಿಕ್ಕಿದ್ದರೆ, ನಮ್ಮ ಬೇರನ್ನು ನಮ್ಮ ಭೂಮಿಯಲ್ಲಿಯೇ ಹುಡುಕಬೇಕಲ್ಲ ? ಇವೆಲ್ಲವನ್ನೂ ವಿಚಾರ ಮಾಡದೇ ‘ಇದು ಹೀಗೆಯೇ ಇರುತ್ತದೆ’, ಎಂದು ಬಿಟ್ಟು ಬಿಡದೆ ನಾವು ಇನ್ನೂ ಒಳ್ಳೆಯದನ್ನು ಮಾಡುವ ವಿಚಾರ ಹಾಗೂ ಪ್ರಯತ್ನ ಮಾಡಲಿಕ್ಕಿದ್ದೇವೆಯೇ ? – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷದ್ (೧೨.೫.೨೦೨೨)

ಸಂಪರ್ಕ ಸಂಖ್ಯೆ – ೯೫೯೫೯೮೪೮೪೪

ವಿ-ಅಂಚೆsocialchange.[email protected]

ಸಾಧಕರಿಗೆ ಸೂಚನೆ ಮತ್ತು ವಾಚಕರುಹಾಗೂ ಹಿತಚಿಂತಕರಿಗೆ ವಿನಂತಿ

ಈ ಲೇಖನವನ್ನು ಓದಿದಾಗ ವಕೀಲರು ಅಥವಾ ಸಮಾಜದಲ್ಲಿನ ವ್ಯಕ್ತಿಗಳು ನ್ಯಾಯಪ್ರಕ್ರಿಯೆಯ ಲೇಖನದಲ್ಲಿ ಹೇಳಿದಂತೆ ಅನುಭವವನ್ನು ಪಡೆದಿದ್ದರೆ, ಅಂತವರಿಗೆ ಈ ವಿಷಯದಲ್ಲಿ ಏನಾದರೂ ಹೇಳಲಿಕ್ಕಿದ್ದರೆ, ಅವರು ಈ ಮುಂದಿನ ವಿಳಾಸಕ್ಕೆ ತಮ್ಮ ಅನುಭವವನ್ನು ಕಳುಹಿಸಬೇಕು. ನಿಮ್ಮ ಇಚ್ಛೆಯಿದ್ದರೆ ನಿಮ್ಮ ಹೆಸರನ್ನು ಗುಪ್ತವಾಗಿಡಲಾಗುವುದು.

ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ

‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ – ಗೋವಾ, ಪಿನ್ – ೪೦೩೪೦೧

ವಿ-ಅಂಚೆ ವಿಳಾಸ : [email protected]

ಸಂಚಾರವಾಣಿ ಕ್ರಮಾಂಕ : ೯೫೯೫೯೮೪೮೪೪