ಬೇಹುಯಗಾರಿಕೆಯ ಆರೋಪ
ಟೆಹರಾನ (ಇರಾನ) – ಇರಾನ ತನ್ನ ಮಾಜಿ ಉಪ ರಕ್ಷಣಾ ಸಚಿವ ಅಲಿ ರಝಾ ಅಕಬರಿ (ವಯಸ್ಸು 61 ವರ್ಷ) ಇವರನ್ನು ಬೇಹುಗಾರಿಕೆಯ ಆರೋಪದಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ. ಅಕಬರಿಯವರ ಬಳಿ ಇರಾನ ಮತ್ತು ಬ್ರಿಟಿನ ಪೌರತ್ವ ಇತ್ತು. ಅಕಬರಿಯವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದಾಗ ವಿರೋಧವೂ ವ್ಯಕ್ತವಾಗಿತ್ತು; ಆದರೂ ಇರಾನ ಗಲ್ಲು ಶಿಕ್ಷೆ ರದ್ದು ಪಡಿಸಲಿಲ್ಲ. `ಅಕಬರಿಯವರು ಭ್ರಷ್ಟಾಚಾರ ಮತ್ತು ದೇಶದೊಳಗೆ ಮತ್ತು ಹೊರಗಿನ ಭದ್ರತೆಗೆ ಹಾನಿಯುಂಟು ಮಾಡಿದ್ದರು’, ಎಂದು ಅವರ ಮೇಲೆ ಆರೋಪವಿದೆ.
ಅಕಬರಿಯ ಗಲ್ಲು ಶಿಕ್ಷೆಯ ಬಗ್ಗೆ ಬ್ರಿಟನ ಪ್ರಧಾನಮಂತ್ರಿ ಋಷಿ ಸುನಕ ಇವರು ದುಃಖ ವ್ಯಕ್ತಪಡಿಸಿದ್ದಾರೆ. ಅವರು ಟ್ವೀಟ್ ಮಾಡಿ, ಇದೊಂದು ಅಮಾನುಷ ಮತ್ತು ಹೇಯ ಕೃತ್ಯವಾಗಿದ್ದು, ಅದು ಒಂದು ರಾಕ್ಷಸಿ ಸರಕಾರದಿಂದ ಮಾಡಲಾಗಿದೆ. ಈ ಸರಕಾರಕ್ಕೆ ಜನರ ಮಾನವ ಹಕ್ಕುಗಳ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುತನ್ನದೇ ಮಾಜಿ ಉಪ ರಕ್ಷಣಾಸಚಿವನಿಗೆ ಬೇಹುಗಾರಿಕೆಯ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸುವ ಇರಾನಿನಿಂದ ಭಾರತವು ಪಾಠ ಕಲಿಯುವ ಆವಶ್ಯಕತೆಯಿದೆ ! |