ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಪೊಲೀಸ ಠಾಣೆಯ ಮೇಲೆ ದಾಳಿ ೩ ಪೊಲೀಸರ ಸಾವು

ಪೇಶಾವರ (ಪಾಕಿಸ್ತಾನ) – ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ. ಈ ಭಯೋತ್ಪಾದಕರು ಜನವರಿ ೧೪ ರಂದು ಬೆಳಗಿನ ಜಾವ ಚಿಕ್ಕ ಬಾಂಬ್ ಮತ್ತು `ಸ್ನೈಪರ್’ ಬಂದುಕು ತೆಗೆದುಕೊಂಡು ಏಕಾಏಕಿ ಪೊಲೀಸ ಠಾಣೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದರು. ಆ ಸಮಯದಲ್ಲಿ ಪೊಲೀಸ ಠಾಣೆಯಲ್ಲಿ ಅಧಿಕಾರಿಗಳ ಸಹಿತ ೧೨ ರಿಂದ ೧೪ ಪೊಲೀಸರಿದ್ದರು. ಗುಂಡಿನ ದಾಳಿ ನಡೆಸಿ ಎಲ್ಲಾ ಭಯೋತ್ಪಾದಕರು ಪರಾರಿಯಾದರು.