ಹಿಂದೂಗಳು ಮನೆಯಲ್ಲಿ ಪೂಜೆಗಾಗಿ ಖಡ್ಗವನ್ನು ಇಡಬೇಕು !

ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕರಿಂದ ಹಿಂದೂಗಳಿಗೆ ಕರೆ !

ಶ್ರೀ. ಪ್ರಮೋದ ಮುತಾಲಿಕ

ಕಲಬುರ್ಗಿ (ಕರ್ನಾಟಕ) – ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರು ಹಿಂದೂಗಳಿಗೆ ಅವರ ಮನೆಯಲ್ಲಿ ಪೂಜೆಗಾಗಿ ಖಡ್ಗವನ್ನು ಇಡಲು ಕರೆ ನೀಡಿದ್ದಾರೆ. ಮನೆಯಲ್ಲಿ ಪೂಜೆಗಾಗಿ ಖಡ್ಗ ಇಡುವುದು ಅಪರಾಧವಲ್ಲ, ಎಂದು ಅವರು ದಾವೆ ಮಾಡಿದ್ದಾರೆ. ಇಲ್ಲಿಯ ಯಾದರಾಮಿ ಪ್ರದೇಶದಲ್ಲಿ ಆಯೋಜಿಸಿದ್ದ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ.

( ಸೌಜನ್ಯ: Asianet Suvarna News )

ಶ್ರೀ. ಪ್ರಮೋದ ಮುತಾಲಿಕ ಅವರು ತಮ್ಮ ಮಾತನ್ನು ಮುಂದುವರಿಸಿ, ಬೇರೆ ಯಾರ ಮೇಲೆ ದಾಳಿ ಮಾಡುವುದಕ್ಕಾಗಿ ಅಲ್ಲ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಮನೆಯಲ್ಲಿ ಖಡ್ಗ ಇಡಬೇಕು. ಪೊಲೀಸರು ನಿಮ್ಮ ಮನೆಗೆ ಬಂದು ಮತ್ತು ನಿಮಗೆ ಖಡ್ಗದ ಬಗ್ಗೆ ವಿಚಾರಿಸಿದರೆ, ಆಗ ನೀವು, ಹಿಂದೂಗಳ ದೇವತೆಗಳು ಅಂದರೆ ಶ್ರೀ ದುರ್ಗಾದೇವಿ, ಶ್ರೀ ಮಹಾಕಾಳಿ ದೇವಿ, ಭಗವಾನ್ ಶ್ರೀ ರಾಮ ಮುಂತಾದವರು ಶಸ್ತ್ರಗಳನ್ನು ಇಟ್ಟುಕೊಂಡಿದ್ದರು, ಆದ್ದರಿಂದ ಅವರ ಮೇಲೆ ಆರೋಪ ದಾಖಲಿಸಿ. ಹಿಂದೂ ಧರ್ಮದಲ್ಲಿ ಜನರು ಶಸ್ತ್ರಗಳನ್ನು ಪೂಜೆ ಮಾಡುತ್ತಿದ್ದರು. ಈಗ ನಾವು ಗ್ರಂಥ, ಲೇಖನಿ, ವಾಹನ ಮುಂತಾದರ ಪೂಜೆ ಮಾಡುತ್ತೇವೆ. ಪೊಲೀಸರು ಕೂಡ ಬಂದುಕಿನ ಪೂಜೆ ಮಾಡುತ್ತಾರೆ, ಅವರು ದಾಖಲೆಗಳ ಪೂಜೆ ಮಾಡುವುದಿಲ್ಲ. ಅದೇ ರೀತಿ ಮನೆಯಲ್ಲಿ ಶಸ್ತ್ರಗಳನ್ನು ಇಡಬೇಕು. ಅದರ ಪೂಜೆ ಮಾಡಬೇಕು. ಮನೆಯಲ್ಲಿ ಖಡ್ಗ ಇಟ್ಟರೆ, ಹಿಂದೂ ಮಹಿಳೆಯರ ಶೋಷಣೆ ಮಾಡುವ ಧೈರ್ಯ ಯಾರು ಮಾಡುವುದಿಲ್ಲ ಎಂದು ಹೇಳಿದರು.