ಜನವರಿ ೨೩ ರಂದು ಇರುವ ನೇತಾಜಿ ಸುಭಾಶ್ಚಂದ್ರ ಬೋಸರ ಜಯಂತಿ ನಿಮಿತ್ತ
ನೇತಾಜಿ ಸುಭಾಶ್ಚಂದ್ರ ಬೋಸ೧. ಭಾರತದ ಸ್ವಾತಂತ್ರ್ಯಕ್ಕಾಗಿ ಆಂಗ್ಲರ ವಿರುದ್ಧ ಹೋರಾಡಲು ನೇತಾಜಿ ಸುಭಾಶ್ಚಂದ್ರ ಬೋಸರಿಂದ ಕರಾರುವಕ್ಕಾದ ಸಿದ್ಧತೆ
‘ಒಂದು ಬಲಿಷ್ಠ ಹಾಗೂ ಮಹಾಕಾಯ ಆಡಳಿತದ ವಿರುದ್ಧ ಅನೇಕ ವರ್ಷಗಳ ವರೆಗೆ ದಿಟ್ಟತನದಿಂದ ಹೋರಾಡಲು ಬೇಕಾದ ಎಲ್ಲ ಸಿದ್ಧತೆಯನ್ನು ನೇತಾಜಿ ಸುಭಾಶ್ಚಂದ್ರ ಬೋಸರು ಆಯೋಜನಾಬದ್ಧವಾಗಿ ಮಾಡಿದ್ದರು. ಅತಿಪೂರ್ವದಲ್ಲಿನ ಅನೇಕ ದೇಶಗಳಲ್ಲಿ ನೆಲೆಸಿರುವ ೨೫ ರಿಂದ ೩೦ ಲಕ್ಷ ಭಾರತೀಯ ಜನತೆಯ ನಾಗರಿಕ ಸಂಘಟನೆಗಳು, ಸೈನಿಕ ಹಾಗೂ ಆರ್ಥಿಕ ಬಲವನ್ನು ಪೂರೈಸಲು ಅವರ ಬೆಂಬಲಕ್ಕಿದ್ದರು. ಆಂಗ್ಲರಿಂದ ಕಲಿತು ಸಿದ್ಧರಾದ ೩೦-೪೦ ಸಾವಿರ ಸೈನಿಕರು ಸಿಂಗಾಪುರದಲ್ಲಿ ಜಪಾನಿಗೆ ಶರಣಾದರು ಹಾಗೂ ನೇತಾಜಿಯವರ ಪರವಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧರಾದರು. ಯೋಗ್ಯ ಅಧಿಪತ್ಯದಲ್ಲಿ ಯುದ್ಧ ನಡೆಯಬೇಕೆಂದು ನೇತಾಜಿಯವರು ಸ್ವತಂತ್ರ ಭಾರತದ ಒಂದು ಸರಕಾರವನ್ನೂ ಸ್ಥಾಪಿಸಿದರು. ಅಷ್ಟೇ ಅಲ್ಲದೇ ಭಾರತದ ಒಂದೊಂದು ಭಾಗವು ತಮ್ಮ ವಶವಾದಾಗ ಅಲ್ಲಿನ ನಾಣ್ಯ, ನೋಟು, ಅಂಚೆ ಹಾಗೂ ‘ಮನಿಆರ್ಡರ’ಗಳ ಅರ್ಜಿ ಇತ್ಯಾದಿ ಎಲ್ಲಾ ಸ್ವತಂತ್ರ ಸರಕಾರದ್ದೇ ಇರಬೇಕೆಂದು ಅವರು ಕರಾರುವಾಕ್ಕಾಗಿ ದಕ್ಷತೆ ವಹಿಸಿದರು.
೨. ಪೆನಾಂಗ ಉಪದ್ರವ ವಿದ್ಯಾ ಕೇಂದ್ರ
೨ ಅ. ಪಾರತಂತ್ರ್ಯದಲ್ಲಿರುವ ಭಾರತಕ್ಕೆ ನೇತಾಜಿಯವರು ನೀಡಿದ ಆಘಾತದಲ್ಲಿ ಈ ಉಪದ್ರವ ಕೇಂದ್ರದ ಬಹುದೊಡ್ಡ ಪಾತ್ರ
ನೇತಾಜಿಯವರ ಸಿದ್ಧತೆಯಲ್ಲಿ ಒಂದು ವಿಶಿಷ್ಟ ವಿಷಯದ ಅಂತರ್ಭಾವವಿತ್ತು. ಆ ವಿಷಯವೆಂದರೆ ಪೆನಾಂಗನಲ್ಲಿ ಸ್ವಾತಂತ್ರ್ಯ ಸೇನೆಯ ಉಪದ್ರವ ವಿದ್ಯಾಕೇಂದ್ರ ! ನೇತಾಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಅಲ್ಪ ಜ್ಞಾತ ಸ್ವಲ್ಪವಾದರೂ ಅಥವಾ ಅಜ್ಞಾತ ವಿಷಯಗಳಲ್ಲಿ ಈ ಉಪದ್ರವ ಕೇಂದ್ರವನ್ನು ಉಲ್ಲೇಖಿಸಬೇಕು. ಪಾರತಂತ್ರ್ಯ ಭಾರತಕ್ಕೆ ನೇತಾಜಿಯವರು ನೀಡಿದ ಆಘಾತಗಳಲ್ಲಿ ಈ ಉಪದ್ರವ ಕೇಂದ್ರವು ಬಹುದೊಡ್ಡ ಪಾತ್ರವಹಿಸಿತ್ತು. ಈ ಕೇಂದ್ರದಲ್ಲಿ ಕಲಿತು ಸಿದ್ಧರಾದ ಕೆಲವು ವ್ಯಕ್ತಿಗಳು ದೃಢ ಪರಾಕ್ರಮ ಹಾಗೂ ದೇಶಭಕ್ತಿಯ ಉತ್ತುಂಗಕ್ಕೇರಿದರು ಹಾಗೂ ಕೆಲವರು ಆಂತರಿಕ ಪಿತೂರಿ ಕೂಡ ನಡೆಸಿದರು.
೨ ಆ. ಶತ್ರುಗಳ ಗುಂಪಿನೊಳಗೆ ನುಗ್ಗಿ ಉಪದ್ರವ ನಡೆಸುವುದು ಹಾಗೂ ಅಪಘಾತ ನಡೆಸಿ ಗಡಿಬಿಡಿ, ಗೊಂದಲವನ್ನು ಸೃಷ್ಟಿಸುವುದು ಹಾಗೂ ಶತ್ರುಗಳಿಗೆ ಸಂಕಟ ನೀಡುವುದು
ಯಾವುದೇ ದೊಡ್ಡ ಮಹಾನ ಶಕ್ತಿಯ ವಿರುದ್ಧ ಹೋರಾಡುವಾಗ ‘ಗೆರಿಲ್ಲಾ ಯುದ್ಧ’ವು ತುಂಬಾ ಉಪಯುಕ್ತವಾಗುತ್ತದೆ, ಎಂಬುದು ಛತ್ರಪತಿ ಶಿವಾಜಿ ಮಹಾರಾಜರ ಯುಕ್ತಿಯಿಂದ ಅದು ನಮಗೆ ಮನವರಿಕೆಯಾಗಿದೆ. ಶತ್ರುಗಳ ಪಾಳಯದಲ್ಲಿ ಹಾವಳಿ, ಅಪಘಾತ ನಡೆಸಿ ಗಡಿಬಿಡಿ ಮತ್ತು ಗೊಂದಲವನ್ನು ಸೃಷ್ಟಿಸುವುದರಿಂದ ‘ಶತ್ರುವಿನ ಶಕ್ತಿಯ ಮೂಲಕ್ಕೆ ಕುತ್ತು’ ಎಂಬ ನ್ಯಾಯದಂತೆ ದಿಗ್ಬ್ರಾಂತರಾಗುತ್ತಾರೆ. ಪ್ರತ್ಯಕ್ಷ ಯುದ್ಧದ ಸಿದ್ಧತೆಯಲ್ಲಿ ವ್ಯತ್ಯಯವಂತೂ ಆಗುತ್ತದೆ. ಅಲ್ಲದೇ, ಅದಕ್ಕಿಂತ ನಮಗೆ ‘ನೇರವಾಗಿ ಶತ್ರುವಿನ ಪಾಳಯದಲ್ಲಿ ಹಾಗೂ ಕೋಟೆಯಲ್ಲಿ ವಿರೋಧಿಗಳ ಕೋಲಾಹಲ ಆರಂಭವಾಯಿತು’, ಈ ಭಾವನೆಯಿಂದಲೇ ಶತ್ರುವು ಭಯಭೀತನಾಗುತ್ತಾನೆ. ಶತ್ರು ನಿರುತ್ಸಾಹಿಯಾಗುತ್ತಾನೆ. ಅವನಿಗೆ ಏನು ಮಾಡಬೇಕು?, ಎಲ್ಲಿಗೆ ಹೋಗಬೇಕು? ಎಂಬ ಭ್ರಮೆ ಉಂಟಾಗುತ್ತದೆ. ಪಿತೂರಿಯ ಬೀಜ ಎಲ್ಲೆಲ್ಲಿ ಬೆಳೆದಿದೆ, ಎಂಬ ಬಗ್ಗೆ ಶತ್ರುವು ಅಧೀರನಾಗುತ್ತಾನೆ. ಎಲ್ಲೆಡೆಯಿಂದಲೂ ಒಟ್ಟು ಸೇರಿ ಒಂದು ಹುಲಿಯನ್ನು ಬೆನ್ನೆತ್ತುವಂತೆ ಶತ್ರುವು ಚಡಪಡಿಸುತ್ತಿರುತ್ತಾನೆ. ಪೆನಾಂಗದ ಉಪದ್ರವ ವಿದ್ಯಾಕೇಂದ್ರವನ್ನು ಸ್ಥಾಪಿಸುವುದರ ಹಿಂದೆ ನೇತಾಜಿಯವರ ಇದೇ ದೃಷ್ಟಿಕೋನವಿತ್ತು.
೨ ಇ. ಪೆನಾಂಗನ ಬಂದರು ಪರಿಸರದಲ್ಲಿ ಸ್ವಾತಂತ್ರ್ಯ ಸೇನೆಯಲ್ಲಿ ಗುಪ್ತ ಕೌಶಲ್ಯವನ್ನು ಕಲಿಸಿ ಸಿದ್ಧಮಾಡುವ ಕೆಲಸ ನಡೆಯುವುದು
ಮಲಾಯಾದ ಪೂರ್ವ ತೀರದಲ್ಲಿ ‘ಪೆನಾಂಗ’ ಎಂಬ ಹೆಸರಿನ ಸುಂದರವಾದ ಊರಿದೆ. ಸಮುದ್ರ ತೀರದಲ್ಲಿರುವ ಈ ಊರು ಅತ್ಯಂತ ನಿಸರ್ಗರಮ್ಯವೆನಿಸುತ್ತದೆ. ಪೆನಾಂಗ ಬಂದರಿನ ಎದುರಿಗೆ ವೃಕ್ಷಾಚ್ಛಾದಿತ ೨-೩ ಪರ್ವತಗಳಿಂದ ಸ್ವಲ್ಪ ಆಶ್ರಯ ನಿರ್ಮಿಸಿದಂತೆ ಕಾಣಿಸುತ್ತದೆ. ಪರ್ವತದ ಮೇಲಿರುವ ತೋಪು ಆಚೆಗಿನ ತೆರೆದ ಸಮುದ್ರದ ಮೇಲೆ ತನ್ನ ಭೇದಕ ಕಣ್ಗಾವಲಿಡುತ್ತದೆ. ಕೆಲವು ಕ್ರುದ್ಧ ಮುದ್ರೆಯಿಂದ ಆಕಾಶದಲ್ಲಿನ ಶತ್ರುವಿನ ವಿಮಾನಗಳ ಸಮಾಚಾರವನ್ನು ತೆಗೆದುಕೊಳ್ಳಲು ತಯಾರಿರುತ್ತಾರೆ. ಅಂತಹ ಬಿಗಿ ಬಂದೋಬಸ್ತಿನಲ್ಲಿ ಕಾಡಿನಲ್ಲಿರುವ ಪರ್ವತಗಳ ವಿಸ್ತೀರ್ಣದ ಸುತ್ತಿನಲ್ಲಿ ಕಾವಲು, ನಾವಿಕ ಶಿಕ್ಷಣ, ಸೈನಿಕರ ಸಂಚಾರ ಹಾಗೂ ಶತ್ರುವಿನ ಮೇಲೆ ದಾಳಿ ನಡೆಸುವುದು ಇತ್ಯಾದಿಗಳ ಕೆಲವು ಗುಪ್ತ ಸ್ಥಳಗಳಿದ್ದವು. ಕುಶಲ ಹಾಗೂ ಶೂರವೀರ ಜಪಾನಿ ಸೈನಿಕರು ಈ ಎಲ್ಲಾ ಭಾಗವನ್ನು ಆಂಗ್ಲರ ವಿರುದ್ಧ ಯುದ್ಧವನ್ನು ಸಾರಿ ಒಂದೇ ಚಿಟಕಿ ಹೊಡೆಯುತ್ತಲೇ ವಶಪಡಿಸಿಕೊಂಡಿದ್ದರು. ಇದೇ ಪೆನಾಂಗನ ಬಂದರಿನ ಪರಿಸರದಲ್ಲಿ ಪರ್ವತದ ನೆರಳಿನಲ್ಲಿ ನೇತಾಜಿಯವರ ಬಂಡಾಯಗಾರರ ಸ್ವಾತಂತ್ರ್ಯ ಸೇನೆಯ ಒಂದು ವಿದ್ಯಾಕೇಂದ್ರವು ಶಾಂತವಾಗಿ ತನ್ನ ಕಾರ್ಯವನ್ನು ಮಾಡುತ್ತಿತ್ತು. ಭಾರತದಲ್ಲಿ ಕೋಲಾಹಲವುಂಟು ಮಾಡುವ ಸ್ವಾತಂತ್ರ್ಯ ಸೇನೆಯ ಸದಸ್ಯರನ್ನು ಕಲಿಸಿ ಸಿದ್ಧ ಪಡಿಸುವ ಕೆಲಸವು ಇಲ್ಲಿ ನಡೆಯುತ್ತಿತ್ತು.
೩. ನೇತಾಜಿಯವರ ಸ್ವಾತಂತ್ರ್ಯ ಸೇನೆ ಹಾಗೂಜಪಾನಿ ಸೇನೆ ಇವುಗಳ ಸಂಯುಕ್ತ ಆಕ್ರಮಣನಡೆಸುವ ಸಮೀಕ್ಷೆಯ ಕೆಲಸದ ಪ್ರಾರಂಭ !
ನೇತಾಜಿಯವರ ಸ್ವಾತಂತ್ರ್ಯಸೇನೆಗೆ ಇತರ ಕ್ಷೇತ್ರಗಳಲ್ಲಿ ಜಪಾನೀ ಯುದ್ಧ ಕೌಶಲ್ಯ ಹಾಗೂ ಯುದ್ಧತಂತ್ರದ ಸಹಾಯ ಲಭಿಸಿದಂತೆಯೇ ಉಪದ್ರವ ವಿದ್ಯಾಕೇಂದ್ರಕ್ಕೂ ಕೂಡ ಲಭಿಸಿತು. ಕರ್ನಲ್ ಗಿಲಾನೀ ಎಂಬ ಓರ್ವ ಗೃಹಸ್ಥರು ಕೇಂದ್ರದ ವರಿಷ್ಠ ಅಧಿಕಾರಿಗಳಾಗಿದ್ದರು. ಅಲ್ಲಿ ಉಪದ್ರವ ಗುಪ್ತದಳದಲ್ಲಿ ಕಲಿತು ಸಿದ್ಧರಾದವರು ಜಪಾನೀ ತಜ್ಞರಾಗಿದ್ದರು, ಅಲ್ಲಿ ಕ್ಯಾಪ್ಟನ ಯಾಮಾ ನೂಚೀಯವರು ಪ್ರಮುಖರಾಗಿದ್ದರು. ವರ್ಷ ೧೯೪೩ ರ ಆಗಸ್ಟ ತಿಂಗಳಿನಿಂದ ಅಲ್ಲಿನ ಶಿಕ್ಷಣಕಾರ್ಯವು ಲಗುಬಗೆಯಿಂದ ಸಿದ್ಧತೆಯನ್ನು ಪ್ರಾರಂಭಿಸಿತು. ಬ್ರಹ್ಮದೇಶ ಹಾಗೂ ಭಾರತದ ಗಡಿಯಲ್ಲಿ ನೇತಾಜಿಯವರ ಸ್ವಾತಂತ್ರ್ಯಸೇನೆ ಹಾಗೂ ಜಪಾನೀ ಸೇನೆಯ ಸಂಯುಕ್ತ ದಾಳಿಯನ್ನು ಶೀಘ್ರ ಪ್ರಾರಂಭಿಸುವ ದೃಷ್ಟಿಯಿಂದ ಸಮೀಕ್ಷೆಯು ಪ್ರಾರಂಭವಾಯಿತು. ಜಾರಿ ಮಾರ್ಗ, ಚೌಕಿಗಳ ಪಹರೆ, ಸೈನ್ಯದ ಮುಖ್ಯ ನೆಲೆ, ತೋಪುಗಳ ಮೋರ್ಚೆ, ವಿಮಾನ ನಿಲ್ದಾಣ ಹಾಗೂ ಶತ್ರುಪ್ರದೇಶದ ಮೇಲೆ ಪ್ರಾರಂಭದ ಕ್ಷುಲ್ಲಕ ದಾಳಿ ಮಾಡಲು ಗೆರಿಲ್ಲಾ ಪಡೆಯ ಶಿಬಿರಗಳು ಎಲ್ಲೆಲ್ಲಿ ಇರಬೇಕು, ಎಂಬುದನ್ನು ನಕಾಶೆಯಲ್ಲಿ ತಯಾರಿಸುವುದು ಪ್ರಾರಂಭವಾಯಿತು.
೪. ದಾಳಿಯ ಪೂರ್ವಸಿದ್ಧತೆ
ಅ. ಬ್ರಹ್ಮದೇಶ-ಭಾರತದ ನೇತೃತ್ವದಲ್ಲಾಗುವ ದಾಳಿಯ ನಾಂದಿ ಎಂದು ಕೊಲಕಾತಾದ ಔದ್ಯೋಗಿಕ ಹಾಗೂ ನಾವಿಕ ಪರಿಸರದಲ್ಲಿ ಬಾಂಬ್ ಎಸೆಯುವ ವಿಮಾನಗಳು ಕೋಲಾಹಲವನ್ನುಂಟು ಮಾಡಲು ಪ್ರಾರಂಭಿಸಿದವು. ನೇತಾಜಿಯವರ ಸ್ವಾತಂತ್ರ್ಯಸೇನೆಯ ಮುಂದಿನ ದಾಳಿಯ ಸೂಚನೆ ನೀಡುವ ನೂರಾರು ಕರಪತ್ರಗಳನ್ನು ಆಯಾ ಸಮಯದಲ್ಲಿ ಹರಿದಾಡಿಸುತ್ತಾ ಕೊಲಕಾತಾ ಹಾಗೂ ಅಸ್ಸಾಂನ ಗಡಿಗೆ ಬಂದು ನಿಂತಿತು.
ಆ. ಪೆನಾಂಗನಲ್ಲಿನ ಉಪದ್ರವ ವಿದ್ಯಾಕೇಂದ್ರದಲ್ಲಿ ಗುಪ್ತ ಸೈನಿಕರ ತುಕಡಿಗಳಿಗೆ ಕಲಿತು ಸಿದ್ಧವಿರುವಂತೆ ಆಜ್ಞೆ ನೀಡಲಾಯಿತು. ಪ್ರತಿ ೩ ತಿಂಗಳಿನಲ್ಲಿ ೮-೮ ಅಥವಾ ೧೦-೧೦ ಸೈನಿಕರ ಎರಡು, ಮೂರು ತುಕಡಿಗಳನ್ನು ಸಿದ್ಧಪಡಿಸುವಂತಹ ಕಾರ್ಯವು ಪ್ರಾರಂಭವಾಯಿತು. ಪ್ರತಿಯೊಂದು ತುಕಡಿಯ ಕಾರ್ಯಕ್ಷೇತ್ರದಂತೆ ಅವರ ಶಿಕ್ಷಣದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತಿತ್ತು.
ಇ. ಪೆನಾಂಗನಲ್ಲಿ ಸಿದ್ಧರಾದ ಕೆಲವು ತುಕಡಿಗಳನ್ನು ಬ್ರಹ್ಮದೇಶದ ಗಡಿಯಿಂದ ನಾಗ ಗುಡ್ಡಗಾಡು ಹಾಗೂ ಅಸ್ಸಾಮನಲ್ಲಿ ಬಿಡಲಾಯಿತು. ಕೆಲವರನ್ನು ರಾತ್ರಿ ವಿಮಾನದಿಂದ ಪ್ಯಾರಾಶೂಟನ ಸಹಾಯದಿಂದ ಬಂಗಾಲ ಹಾಗೂ ಬಿಹಾರ ಪ್ರಾಂತ್ಯದ ಕಾಡು ಬೆಟ್ಟಗಳಲ್ಲಿ ಇಳಿಸಲಾಯಿತು ಹಾಗೂ ವಿಶಾಖಾಪಟ್ಟಣಮ್, ಮದ್ರಾಸ, ಲಂಕಾ, ಮುಂಬೈ, ಕನ್ಯಾಕುಮಾರಿ, ಮಲಬಾರ, ಕರಾವಳಿ, ಗುಜರಾತನಿಂದ ಕರಾಚಿ ಈ ರೀತಿ ವಿಸ್ತೀರ್ಣವಾಗಿರುವ ಸಮುದ್ರ ತೀರದಲ್ಲಿ ಸ್ವಾತಂತ್ರ್ಯ ಸೈನಿಕರ ಗುಪ್ತ ಉಪದ್ರವ ಕೇಂದ್ರ ಪಡೆಯನ್ನು ಬಿಡುವ ಕಾರ್ಯಕ್ರಮವನ್ನು ರೂಪಿಸಲಾಯಿತು.
೫. ಉಪದ್ರವ ಕೇಂದ್ರದಲ್ಲಿ ನೀಡಲಾಗುವ ಶಿಕ್ಷಣ
ಅ. ಸದ್ದಿಲ್ಲದೆ ಅಲ್ಪಸ್ವಲ್ಪ ಸಾಮಾಗ್ರಿಗಳಿಂದ ರೈಲಿನ ಹಳಿಗಳನ್ನು ಕಿತ್ತು ಹಾಕುವುದು, ಸ್ಫೋಟಕಗಳ ಕೊಠಡಿಗೆ ಬೆಂಕಿಯಿಡುವುದು, ಸುರಂಗ ನಿರ್ಮಿಸಿ ರಕ್ಷಣಾ ವ್ಯವಸ್ಥೆಯನ್ನು ನಾಶ ಮಾಡುವುದು, ಶತ್ರುಗಳ ತೋಪು-ಬಂದೂಕು ಇತ್ಯಾದಿ ಶಸ್ತ್ರಗಳನ್ನು ನಿಷ್ಕ್ರಿಯಗೊಳಿಸುವುದು, ಹಡಗನ್ನು ಮುಳುಗಿಸುವುದು, ತುರ್ತು ಪ್ರಸಂಗದಲ್ಲಿ ಹೊಯೈಕೈ ಪ್ರಸಂಗ ಬಂದಾಗ ಶತ್ರುವನ್ನು ಮಣ್ಣು ಮುಕ್ಕಿಸುವುದು ಇತ್ಯಾದಿ ಶಿಕ್ಷಣವನ್ನು ಪೆನಾಂಗನ ಕೇಂದ್ರದಲ್ಲಿ ನೀಡಲಾಗುತ್ತಿತ್ತು.
ಆ. ಈ ಕಾರ್ಯಗಳನ್ನು ಸರಿಯಾಗಿ ಮಾಡಲು ಬರಲಿ ಎಂಬುದಕ್ಕಾಗಿ ಅದಕ್ಕನುಸಾರ ಅನೇಕ ವಿಷಯಗಳನ್ನು ಕಲಿಯಬೇಕಾಗುತ್ತಿತ್ತು. ಈಜು, ನೀರಿನ ಕೆಳಗೆ ಮಾರ್ಗ ನಿರ್ಮಿಸುವುದು, ಆಯಾ ಪ್ರಾಂತ್ಯದ ಭಾಷೆಯನ್ನು ಮಾತನಾಡುವುದು, ವೈರಾಗಿ, ಸನ್ಯಾಸಿ, ಸಾಧು, ಭಿಕಾರಿ, ಫಕೀರ, ಕಮ್ಮಾರ, ಚಮ್ಮಾರ, ಮೀನುಗಾರ ಇತ್ಯಾದಿ ಗುರುತು ಮರೆಮಾಚುವುದು, ಅನೇಕ ಶಸ್ತ್ರಗಳ ನಿರ್ವಹಣೆ, ಗುಪ್ತವಾಗಿ ಸುದ್ಧಿ ಮುಟ್ಟಿಸಲು ಬೇರೆ ಬೇರೆ ತಂತ್ರಗಳನ್ನು ನಿರ್ವಹಿಸುವುದು ಈ ವಿಷಯಗಳ ಸಮಾವೇಶವಿತ್ತು.
ಇ. ಮುಂಜಾನೆ ಹಾಗೂ ಸಾಯಂಕಾಲದ ಕತ್ತಲಿನಲ್ಲಿ ಈಜುವ ಶಿಕ್ಷಣದ ಪ್ರಾತ್ಯಕ್ಷಿಕೆಯನ್ನು ಪೆನಾಂಗನ ಸುತ್ತಲು ಸಾಗರಪರ್ವತ ಪ್ರದೇಶದಲ್ಲಿ ನೀಡಲಾಗುತ್ತಿತ್ತು. ಭಾಷೆ ಹಾಗೂ ವ್ಯವಸಾಯದ ಶಿಕ್ಷಣವನ್ನು ಹಗಲಿನಲ್ಲಿ ನೀಡಲಾಗುತ್ತಿತ್ತು. ಇಡೀ ದಿನದಲ್ಲಿ ಒಟ್ಟು ಶಿಕ್ಷಣದ ಸಮಯ ಸಾಧಾರಣವಾಗಿ ೧೫ ತಾಸು ನಡೆಯುತ್ತಿತ್ತು.
ಈ. ವಿದ್ಯಾಕೇಂದ್ರದ ಶಿಕ್ಷಣಕ್ರಮಕ್ಕಾಗಿ ಆಯ್ಕೆಯಾದ ವ್ಯಕ್ತಿಗಳು ಇತರ ಜಗತ್ತಿನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಬೇಕಾಗುತ್ತಿತ್ತು. ಒಮ್ಮೆ ಮನೆ ಬಿಟ್ಟ ಬಳಿಕ ಆ ಹುಡುಗರು ಎಲ್ಲಿದ್ದಾರೆ ?, ಅವರ ಶಿಕ್ಷಣ ಕ್ರಮ ಪೂರ್ಣವಾಗಿದೆಯೇ ಅಥವಾ ಇಲ್ಲಾ ಅವರನ್ನು ಕೆಲಸ ಕಾರ್ಯಕ್ಕಾಗಿ ಎಲ್ಲಿಗೆ ಕಳುಹಿಸಲಾಗಿದೆ ? ಎಂಬ ವಿಷಯದಲ್ಲಿ ಅವರ ಮನೆಯವರಿಗೆ ಸುಳಿವೇ ಸಿಗುತ್ತಿರಲಿಲ್ಲ. ಕೋಟಿ ಗಟ್ಟಲೆ ಜನರ ಮುಂದಿನ ಅನೇಕ ಪೀಳಿಗೆಯನ್ನು ಸುಖ ಸಮೃದ್ಧಗೊಳಿಸಬೇಕೆಂದರೆ ಸಾವಿರಾರು ಜನರು ಕಠೋರ ದೇಶ ಸೇವೆಯ ಇಷ್ಟು ಕಠಿಣ ವ್ರತವನ್ನು ಅಂಗೀಕರಿಸಬೇಕಾಗುತ್ತಿತ್ತು.