ಬಿಲಾಸಪುರ (ಛತ್ತೀಸಗಡ)ದಲ್ಲಿ ಅಪ್ರಾಪ್ತ ಹುಡುಗನಿಂದ ಸುಭಾಷಚಂದ್ರ ಬೋಸರ ಪುತ್ತಳಿಗೆ ಅವಮಾನ

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಬಿಲಾಸಪುರ (ಛತ್ತೀಸಗಡ) – ಇಲ್ಲಿಯ ಸಿಪಟ ವೃತ್ತದಲ್ಲಿ ಓರ್ವ ಅಪ್ರಾಪ್ತ ಹುಡುಗನು ನೇತಾಜಿ ಸುಭಾಷಚಂದ್ರ ಬೋಸರ ಪುತ್ತಳಿಗೆ ಅಪಮಾನ ಮಾಡಿದ್ದಾನೆ. ಪೊಲೀಸರು ಹುಡುಗನನ್ನು ಬಂಧಿಸಿದ್ದಾರೆ. ಅವನು ಯಾವ ಪುತ್ತಳಿಗೆ ಅಪಮಾನ ಮಾಡಿದನೋ ಆ ಪುತ್ತಳಿಯ ಕಾಲಿಗೆ ನಮಸ್ಕರಿಸುವಂತೆ ಅನಿವಾರ್ಯಪಡಿಸಲಾಯಿತು.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಇದರಲ್ಲಿ ಒಬ್ಬ ಅಪ್ರಾಪ್ತ ಹುಡುಗನು ಪುತ್ತಳಿಯ ಹತ್ತಿರ ಹೋಗಿ ಸಿಗರೇಟ್ ಸೇದುತ್ತಾ ಸುಭಾಷಚಂದ್ರ ಬೋಸರ ಪುತ್ತಳಿಯ ಮುಖದ ಮೇಲೆ ಹೊಗೆಯನ್ನು ಬಿಡುತ್ತಿರುವಂತೆ ಅವರ ಬಾಯಿಗೆ ಸಿಗರೇಟ ಹಿಡಿದಿರುವುದು ಕಾಣಿಸುತ್ತಿದೆ. ಹುಡುಗನನ್ನು ಬಂಧಿಸಿದ ಬಳಿಕ ಮತ್ತೊಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಆ ಹುಡುಗನು ಪುತ್ತಳಿಯ ಸ್ವಚ್ಛತೆಯನ್ನು ಮಾಡುತ್ತಿರುವುದು ಮತ್ತು ಪುತ್ತಳಿಯ ಕಾಲಿಗೆ ನಮಸ್ಕರಿಸುತ್ತಿರುವುದು ಕಾಣಿಸುತ್ತಿದೆ.

ಸಂಪಾದಕರ ನಿಲುವು

* ಎಲ್ಲ ಪಕ್ಷಗಳ ರಾಜ್ಯಕರ್ತರು ಜನರಿಗೆ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಪುರುಷರ ವಿಷಯದಲ್ಲಿ ಗೌರವವನ್ನು ಕಲಿಸದಿರುವುದರ ಪರಿಣಾಮವೇ ಇದಾಗಿದೆ !