ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಮತ್ತು ಮಾಹಿತಿಯನ್ನು ಹಚ್ಚುವ ಮೂಲಕ ಗೌರವ ಸಲ್ಲಿಕೆ !

ಪ್ರಯಾಣಿಕರಿಂದ ರೇಲ್ವೆ ಇಲಾಖೆಯ ಮೆಚ್ಚುಗೆ

ನವದೆಹಲಿ – ಕೋಲಕಾತಾದಿಂದ ಹೊರಡುವ ಶತಾಬ್ದಿ ಎಕ್ಸ್‌ಪ್ರೆಸ್‌ನ ಬೋಗಿಗಳಲ್ಲಿ ಕಿಟಕಿಗಳ ಬದಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳನ್ನು ಹಚ್ಚಲಾಗಿದೆ. ಛಾಯಾಚಿತ್ರಗಳ ಪಕ್ಕದಲ್ಲಿ ಆಯಾ ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸಹಜವಾಗಿ ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲಿ ಮಾಹಿತಿ ಸಿಗುತ್ತಿದೆ. ಈ ಬೋಗಿಗಳಲ್ಲಿ ಸ್ವಾತಂತ್ರ್ಯವೀರ ಸಾವರಕರ, ಯೋಗಿ ಅರವಿಂದ, ಖುದೀರಾಮ ಬೋಸ, ಮೇಡಂ ಕಾಮಾ, ಸರದಾರ ಪಟೇಲ, ನೇತಾಜಿ ಸುಭಾಷಚಂದ್ರ ಬೋಸ ಮುಂತಾದವರ ಛಾಯಾಚಿತ್ರಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ. ಕೇಂದ್ರ ಸರಕಾರದ ಈ ಉಪಕ್ರಮದಿಂದಾಗಿ ಪ್ರಯಾಣಿಕರೊಂದಿಗೆ ಇರುವ ಚಿಕ್ಕ ಮಕ್ಕಳ ಜ್ಞಾನವೂ ವೃದ್ಧಿಸುತ್ತಿದೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತದಿಂದ ಪ್ರಾರಂಭಿಸಲಾಗಿರುವ ಈ ಉಪಕ್ರಮದ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂಪಾದಕರ ನಿಲುವು

* ಸರಕಾರವು ಶತಾಬ್ದಿ ಎಕ್ಸ್‌ಪ್ರೆಸ್‌ ಗೆ ಮಾತ್ರ ಸೀಮಿತಗೊಳಿಸದೇ ಇತರ ರೈಲುಗಾಡಿಗಳು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ಇಂತಹ ಪ್ರಯತ್ನಗಳನ್ನು ಮಾಡಿದರೆ, ಹೆಚ್ಚು ಹೆಚ್ಚು ಜನರಲ್ಲಿ ದೇಶಭಕ್ತಿ ನಿರ್ಮಾಣವಾಗಲು ಸಹಾಯವಾಗುತ್ತದೆ.