ಈ ಹಿಂದೆ ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದರು !

ಕರ್ಣಾವತಿ – ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾಬೇನ ಮೋದಿ ಇವರ ವಿರುದ್ಧ ಆವಮಾನಕರ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ನಿಯಂತ್ರಕ ಆಫಜಲ್ ಲಖಾನಿ ಇವನನ್ನು ಜೈಲಿಗೆ ಕಳುಹಿಸಲಾಗಿತ್ತು. ಈಗ ಅವನ ವಿರುದ್ಧ ಹೊಸ ಪ್ರಕರಣ ಬೆಳಕಿಗೆ ಬಂದಿದೆ, ಫೇಸ್ ಬುಕ್ ನಲ್ಲಿ `ಜಿಗರ್ ಟಕ್ಕರ್’ ಈ ಹಿಂದೂ ಹೆಸರಿನ ಸುಳ್ಳು ಖಾತೆ ತೆರೆದು ಹಿಂದೂ ಧರ್ಮ, ಬ್ರಾಹ್ಮಣ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಟೀಕಿಸುತ್ತಿರುವುದು ಬಹಿರಂಗವಾಗಿದೆ. ಇದರ ವಿರುದ್ಧ ಹಿಂದೂ ಸೇನೆಯ ಕಾರ್ಯಕರ್ತರು ಜಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಆಫಜಲ್ ಇವನ ವಿರುದ್ಧ ಅಪರಾಧ ದಾಖಲಿಸಿಕೊಂಡಿದ್ದಾರೆ. (ಇದರ ಅರ್ಥ ದೂರು ನೀಡದಿದ್ದರೆ, ಅಪರಾಧ ದಾಖಲಿಸಲಾಗುತ್ತಿರಲಿಲ್ಲವೆ ? – ಸಂಪಾದಕರು) ಆಫಜಲ್ ನು `ಜಿಗರ ಟಕ್ಕರ್’ ಈ ಹೆಸರಿನ ಖಾತೆಯಿಂದ ಪ್ರಸಾರ ಮಾಡಿರುವ ಲೇಖನದಲ್ಲಿ `ಸಂಘ ಇದು ಭಾರತದಲ್ಲಿ ಕಾರ್ಯನಿರತವಾಗಿರುವ ಏಕೈಕ ಭಯೋತ್ಪಾದಕ ಸಂಘಟನೆಯಾಗಿದೆ’, `ನಥುರಾಮ ಗೋಡ್ಸೆ ಇವರು ಭಾರತದಲ್ಲಿನ ಮೊದಲ ಭಯೋತ್ಪಾದಕನಾಗಿದ್ದಾರೆ’, `ಬ್ರಾಹ್ಮಣ ಸಮಾಜ ಇದು ಮುಸಲ್ಮಾನ್, ದಲಿತರು, ರಜಪುತರ ವಿರುದ್ಧ ಕಾರ್ಯ ಮಾಡುತ್ತದೆ’, ಈ ರೀತಿಯ ಹೇಳಿಕೆ ಪ್ರಸಾರ ಮಾಡಿದ್ದನು.
FIR filed against Congress’ Afzal Lakhani for derogatory posts on Hindus, RSS; was earlier booked for remarks against PM Modi and his motherhttps://t.co/AQqJyreER6
— OpIndia.com (@OpIndia_com) January 7, 2023
| ಈಗ ಮತಾಂಧರು ಹಿಂದೂ ಹೆಸರು ಬಳಸಿಕೊಂಡು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ವಿಚಾರಗಳು ಪ್ರಸಾರ ಮಾಡುವುದು ಕಾಣುತ್ತಿದೆ. ಹೀಗೆ ಮಾಡಿ ಅವರು ಹಿಂದುಗಳಲ್ಲಿ ಬಿರುಕು ಮೂಡಿಸುವುದು ಮತ್ತು ಅವರಲ್ಲಿ ಭ್ರಮೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. `ಲವ್ ಜಿಹಾದ್’ನ ಘಟನೆಗಳಲ್ಲಿ ಮತಾಂಧರು ಹಿಂದೂ ಹೆಸರು ಇಟ್ಟುಕೊಂಡು ಹಿಂದೂ ಯುವತಿಯರಿಗೆ ಮೋಸ ಮಾಡುತ್ತಾರೆ. ಹಿಂದೂ ಹೆಸರು ಬಳಸಿ ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧ ಚಟುವಟಿಕೆ ನಡೆಸುವ ಮತಾಂಧರ ಷಡ್ಯಂತ್ರವಾಗಿದ್ದು ಅದನ್ನು ತಡೆಯಲು ಸರಕಾರ ಕ್ರಮ ಕೈಗೊಳ್ಳಬೇಕು !- ಸಂಪಾದಕರು |
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ಸಮಾಜವಾದಿ-ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಮೋದಿ ವಾಗ್ದಾಳಿ : Yogi Adityanath
NEET ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿನ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು! – ಪ್ರಧಾನಿ ಮೋದಿ