2025 ಕ್ಕೆ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಿ ಪುನಃ ವಿಶ್ವಗುರುವಾಗಲಿದೆ ! – ಶ್ರೀ. ವಿಜಯ ರೇವಣಕರ್, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಶಿವಮೊಗ್ಗ ನಗರದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ-ಜಾಗೃತಿ ಅಧಿವೇಶನ

ಅಧಿವೇಶನದ ಉದ್ಘಾಟನಾ ಸತ್ರದಲ್ಲಿ ಹಿಂದೂ ರಾಷ್ಟ್ರ ಸೇನೆಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಸಂದೀಪ್, ಹಿಂದುತ್ವವಾದಿಗಳಾದ ಡಾ. ಮಂಜುನಾಥ್ ಪಾಂಡೆ ಇವರೂ ಉಪಸ್ಥಿತರಿದ್ದು ದೀಪ ಪ್ರಜ್ವಲನೆ ನೆರವೇರಿಸಿದರು.

ಶಿವಮೊಗ್ಗ : ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿಭಜನೆ ಆಯಿತು ಆದರೆ ಬಹುಸಂಖ್ಯಾತ ಹಿಂದೂಗಳಿಗೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿಲ್ಲ ಇದರ ಪರಿಣಾಮವಾಗಿ ಅಂದಿನಿಂದ ಹಿಂದೂ ಸಮಾಜಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ಯುಗಯುಗಗಳಿಂದ ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಜಾತ್ಯಾತೀತ ರಾಷ್ಟ್ರ ಎಂದು ಮಾಡಿದರು, ಈ ಅನ್ಯಾಯವನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯೇ ಪರ್ಯಾಯವಾಗಿದೆ. ಅನೇಕ ಸಂತರು ನುಡಿದಿರುವಂತೆ ಭಾರತವು 2025 ಕ್ಕೆ ಪುನಃ ಹಿಂದೂ ರಾಷ್ಟ್ರವಾಗಿ ವಿಶ್ವಗುರುವಾಗಲಿದೆ, ನಾವೆಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯ ರೇವಣಕರ್ ಇವರು ಕರೆ ನೀಡಿದರು. ಅವರು ಜನವರಿ 7 ಮತ್ತು 8 ರಂದು ಶಿವಮೊಗ್ಗದ ಓಟಿ ರಸ್ತೆಯಲ್ಲಿರುವ ಪಟೇಲ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಅಧಿವೇಶನದ ಉದ್ಘಾಟನಾ ಸತ್ರದಲ್ಲಿ ಹಿಂದೂ ರಾಷ್ಟ್ರ ಸೇನೆಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಸಂದೀಪ್, ಹಿಂದುತ್ವವಾದಿಗಳಾದ ಡಾ. ಮಂಜುನಾಥ್ ಪಾಂಡೆ ಇವರೂ ಉಪಸ್ಥಿತರಿದ್ದು ದೀಪ ಪ್ರಜ್ವಲನೆ ನೆರವೇರಿಸಿದರು.

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳು ತಮ್ಮ ತನು,ಮನ, ಧನದ ಮೂಲಕ ತ್ಯಾಗ ಮಾಡಿ ಕಾರ್ಯ ಮಾಡಬೇಕಾಗಿದೆ ! – ಶ್ರೀ. ಸಂದೀಪ್, ಹಿಂದೂ ರಾಷ್ಟ್ರ ಸೇನೆ

ಹಲವಾರು ಸಂಘಟನೆಗಳು ಬೇರೆ ಬೇರೆ ಉದ್ದೇಶಕ್ಕಾಗಿ ಕಾರ್ಯ ಮಾಡುತ್ತಿವೆ ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲ ಸಂಘಟನೆಗಳು ಒಂದಾಗುವ ಅವಶ್ಯಕತೆ ಇದೆ, ಹಿಂದೂಗಳ ಸಂಘಟಿತ ಹೋರಾಟದ ಫಲವಾಗಿ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ ಇನ್ನು ನಮ್ಮ ಮುಂದಿರುವ ಮತಾಂತರ, ಲವ್ ಜಿಹಾದ್, ಗೋ ಹತ್ಯೆ ಇಂತಹ ಹಲವಾರು ಸಮಸ್ಯೆಗಳ ವಿರುದ್ಧ ವ್ಯಾಪಕವಾಗಿ ಹೋರಾಟ ಮಾಡಬೇಕಾಗಿದೆ, ಇಂದಿನ ಯುವಜನತೆ ಕೇವಲ ಮೋಜು-ಮಸ್ತಿಗಾಗಿ ಸಮಯವನ್ನು ನೀಡುತ್ತಿದ್ದಾರೆ ಆದರೆ ಇಂದು ಧರ್ಮಕ್ಕಾಗಿ ಸಮಯ ನೀಡುವ ಅವಶ್ಯಕತೆ ಇದೆ, ಇಂದು ನಮ್ಮ ಅಸ್ತಿತ್ವಕ್ಕಾಗಿ ನಾವು ಹೋರಾಡಬೇಕಾದ ಅನಿವಾರ್ಯತೆ ಇದೆ, ಇದಕ್ಕಾಗಿ ನಾವು ಪ್ರತಿದಿನ ಆಧ್ಯಾತ್ಮಿಕ ಸಾಧನೆಯನ್ನು ಮಾಡುವ ಮೂಲಕ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಶ್ರೀ. ಸಂದೀಪ್ ಇವರು ಕರೆ ನೀಡಿದರು.

ಶಾಲೆಗಳಲ್ಲಿ ದೇಶಪ್ರೇಮ ಹೆಚ್ಚಿಸಲು ಮತ್ತು ಮನೆಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಿದೆ ! – ಡಾ. ಮಂಜುನಾಥ ಪಾಂಡೆ, ಹಿಂದುತ್ವವಾದಿಗಳು

ಇಂದಿನ ಯುವ ಜನತೆ ಪಾಶ್ಚತ್ಯ ಸಂಸ್ಕೃತಿ ಕಡೆ ಆಕರ್ಷಿತವಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ, ಇಂದು ಹೆಣ್ಣು ಮಕ್ಕಳು ಬಳೆಯನ್ನು ಹಾಕಿಕೊಳ್ಳಲು ಸಹ ನಾಚಿಕೆ ಪಡುತ್ತಿದ್ದಾರೆ ಮತ್ತು ಶಾಲೆಗಳಲ್ಲಿ ನಮ್ಮ ದೇಶವನ್ನು ಲೂಟಿ ಮಾಡಿದ ಮೊಘಲರ, ಬ್ರಿಟಿಷರ ಇತಿಹಾಸದ ಬದಲು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ರಕ್ಷಣೆ ಮಾಡಿದ ನಮ್ಮ ರಾಷ್ಟ್ರ ಪುರುಷರ ಇತಿಹಾಸವನ್ನು ತಿಳಿಸಬೇಕಾಗಿದೆ, ಜೊತೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಹಿಂದುತ್ವವಾದಿಗಳಾದ ಡಾ. ಮಂಜುನಾಥ ಪಾಂಡೆ ಕರೆ ನೀಡಿದರು.

ಈ ಅಧಿವೇಶನದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳ ವಿಶ್ವ ಹಿಂದೂ ಪರಿಷತ್, ಬಜರಂಗದಳ,ಹಿಂದೂ ರಾಷ್ಟ್ರ ಸೇನೆ, ರಾಮಸೇನೆ ಸೇರಿದಂತೆ ಇನ್ನೂ ಅನೇಕ ಸಂಘಟನೆಗಳ ಪ್ರತಿನಿಧಿಗಳು, ಹಿಂದುತ್ವವಾದಿ ವಕೀಲರು, ದೇವಸ್ಥಾನ ವಿಷ್ವಸ್ಥರು ಉಪಸ್ಥಿತರಿದ್ದಾರೆ.