`ಭಾಜಪ ಸರಕಾರ ಇರುವ ರಾಜ್ಯದಲ್ಲಿ ಜಾರಿಗೊಳಿಸಲಾದ ಲವ್ ಜಿಹಾದ್ ಕಾನೂನು ಸಂವಿಧಾನ ವಿರೋಧಿ !’ (ಅಂತೆ)

`ಲವ್ ಜಿಹಾದ್’ ನ್ನು ಬೆಂಬಲಿಸುವ ಎಂ.ಐ.ಎಂ.ನ ಮುಖಂಡ ಆಸದ್ದುದ್ದಿನ್ ಓವೈಸಿ ಇವರ ಹೇಳಿಕೆ !

ಎಂ.ಐ.ಎಂ.ನ ಮುಖಂಡ ಆಸದ್ದುದ್ದಿನ್ ಓವೈಸಿ

ನಾಶಿಕ – ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರೌಢ ನಾಗರಿಕರಿಗೆ ಅವರ ಆಸೆಯ ಪ್ರಕಾರ ಜೊತೆಗಾರನ ಆಯ್ಕೆ ಮಾಡುವ ಅಧಿಕಾರ ನೀಡಲಾಗಿದೆ. ಯಾರಾದರು ತಮ್ಮ ಇಷ್ಟವಾದ ಜೊತೆಗಾರನ ಮದುವೆ ಮಾಡಿಕೊಳ್ಳುತ್ತಿದ್ದರೆ, ಅದರ ಬಗ್ಗೆ ಬೇರೆಯವರಿಗೆ ತೊಂದರೆ ಆಗುವ ಕಾರಣವೇನು ? ಭಾಜಪದ ಸರಕಾರ ವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿ ಆಗಿದೆ, ಇದು ಸಂವಿಧಾನ ವಿರೋಧಿಯಾಗಿದೆ. ಭಾಜಪಗೆ ಪ್ರೀತಿಯ ಬಗ್ಗೆ ಇಷ್ಟು ಸಿಟ್ಟು ಏಕೆ ಬರುತ್ತದೆ ? ಪ್ರತಿಯೊಂದು ವಿಷಯಕ್ಕೆ ಧಾರ್ಮಿಕ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಮಹಾರಾಷ್ಟ್ರದಲ್ಲಿ ರೈತರು ತೊಂದರೆಯಲ್ಲಿದ್ದಾರೆ, ಅದರ ಬಗ್ಗೆ ಏನು ಮಾತನಾಡುವುದಿಲ್ಲ. ಮಹಾರಾಷ್ಟ್ರದಲ್ಲಿನ ಯುವಕರ ಜ್ವಲಂತ ಸಮಸ್ಯೆಗಳ ಬಗ್ಗೆ ಯಾರು ಮಾತನಾಡಲು ಸಿದ್ದರಿಲ್ಲ, ಎಂದು ಎಂ.ಐ.ಎಂ. ನ ಮುಖಂಡ ಅಸುದ್ದುದ್ದಿನ್ ಓವೈಸಿ ಇವರು ನಾಶೀಕದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡುವಾಗ ಪುಕ್ಕಟ್ಟೆ ಸಲಹೆ ನೀಡಿದರು. (ರಾಷ್ಟ್ರದ ಎದುರು `ಲವ್ ಜಿಹಾದ್’ ಈ ಜ್ವಲಂತ ಸಮಸ್ಯೆಯದಿಂದ ಎಲ್ಲರ ಗಮನ ಬೇರೆ ಕಡೆಗೆ ಸೆಳೆಯಬೇಕು ಅದಕ್ಕಾಗಿ ಬೇರೆ ಸಮಸ್ಯೆಗಳನ್ನು ಮಂಡಿಸುವ ಓವೈಸಿಯ ಪ್ರಯತ್ನ ! – ಸಂಪಾದಕರು)

ತಮ್ಮ ಮಾತು ಮುಂದುವರೆಸಿ,

೧.`ಲವ್’ ಮತ್ತು `ಜಿಹಾದ್’ ಇವು ಎರಡು ಬೇರೆ ಬೇರೆ ವಿಷಯವಾಗಿವೆ. (ಜನರ ದಾರಿ ತಪ್ಪಿಸುವ ಹೇಳಿಕೆ ! – ಸಂಪಾದಕರು) ಖಡ್ಗ ಎತ್ತಿ ಯಾರಿಗಾದರೂ ಹೊಡೆಯುವುದು ಇದನ್ನು ಜನರು `ಜಿಹಾದ್’ ಎಂದು ತಿಳಿದುಕೊಳ್ಳುತ್ತಾರೆ. ಇದು ತಪ್ಪಾಗಿದೆ. (ಕಳೆದ ಕೆಲವು ತಿಂಗಳಲ್ಲಿ ಮತಾಂಧರ ಚಟುವಟಿಕೆ ನೋಡುತ್ತಿದ್ದರೆ ಅದರಲ್ಲಿ `ಜಿಹಾದ್’ ಹೇಗೆ ಮಾಡಲಾಯಿತು ಇದು ಎಲ್ಲರೂ ಕೇಳಿರುವ ವಿಚಾರವಾಗಿದೆ, ಹೀಗಿರುವಾಗ `ಜಿಹಾದ್’ಗೆ ಸೌಮ್ಯ ಮತ್ತು ಮೃದು ಎಂದು ಹೇಳುವ ಓವೈಸಿ ಇವರ ಪ್ರಯತ್ನ ಹಿಂದೂಗಳು ಸಂಪೂರ್ಣವಾಗಿ ತಿಳಿದಿರುತ್ತಾರೆ ! – ಸಂಪಾದಕರು)

೨. ಒಂದುವೇಳೆ ಯಾರಾದರು ಹಣ ನೀಡಿ ಧರ್ಮ ಪರಿವರ್ತನೆ ಮಾಡಲು ಹೇಳುತ್ತಿದ್ದರೆ ಆಗ ಅವರ ವಿರುದ್ಧ ಮೊದಲೇ ಸರ್ವೋಚ್ಚ ನ್ಯಾಯಾಲಯದಿಂದ ೨೫ ವರ್ಷಗಳ ಹಿಂದೆ ತೀರ್ಪು ನೀಡಿದೆ; ಆದರೆ ಯಾರಾದರೂ ಸ್ವಇಚ್ಛೆಯಿಂದ ಧರ್ಮ ಪರಿವರ್ತನೆ ಮಾಡುತ್ತಿದ್ದರೆ ಆಗ ಇದರಲ್ಲಿ ಅಡಚಣೆ ತರುವವರು ನೀವ್ಯಾರು ? (ಪ್ರಸ್ತುತ ಕಾಲದಲ್ಲಿ ಸ್ವಇಚ್ಛೆಯಿಂದ ಧರ್ಮ ಪರಿವರ್ತನೆ ಮಾಡುವವರಗಿಂತಲೂ ಬಲವಂತವಾಗಿ ಮತಾಂತರಗೊಳಿಸುವ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ ಇದು ಬಹಿರಂಗ ಸತ್ಯವಾಗಿದೆ. ಈ ವಿಷಯದ ಅಂಕೀಅಂಶಗಳು ಹೇಳುವ ಅನೇಕ ವರದಿಗಳು ಪ್ರಸಿದ್ಧವಾಗಿದೆ. ಈ ಕುರಿತು ಓವೈಸಿ ಮಹಾಶಯರ ಅಭಿಪ್ರಾಯವೇನು ? – ಸಂಪಾದಕರು)

೩. ಯಾರು ಕ್ರೈಸ್ತರು ಅಥವಾ ಮುಸಲ್ಮಾನರು ತಮ್ಮ ಧರ್ಮ ಬದಲಾಯಿಸಿದಾಗ ಅದಕ್ಕೆ ಯಾವುದೆ ಅಡಚಣೆ ಇರುವುದಿಲ್ಲ. ಯಾರಿಗೆ ಏನು ಮಾಡುವುದಿದೆ ಅದು ಮಾಡಲು ಬಿಡಬೇಕು. ಅದು ಅವರ ಕಾನೂನರೀತಿಯ ಅಧಿಕಾರವಿದೆ. (ಕ್ರೈಸ್ತರು ಅಥವಾ ಮುಸಲ್ಮಾನ ಇವರಿಂದ ಧರ್ಮ ಪರಿವರ್ತನೆಯ ಪ್ರಮಾಣಕ್ಕಿಂತ ಹಿಂದೂಗಳನ್ನೂ ಬಲವಂತವಾಗಿ ಮತಾಂತರ ಮಾಡುವ ಪ್ರಮಾಣ ಹೆಚ್ಚಾಗಿದೆ. ಈ ವಿಷಯದ ಬಗ್ಗೆ ಚ ಕಾರ ಎತ್ತದೇ ಕ್ರೈಸ್ತ ಅಥವಾ ಮುಸಲ್ಮಾನರ ಪರ ಮಾತನಾಡುವ ಮತಾಂಧ ಓವೈಸಿ ! – ಸಂಪಾದಕರು)

ಸಂಪಾದಕೀಯ ನಿಲುವು

  • ಹಿಂದೂ ಹೆಸರು ಹೇಳಿಕೊಂಡು ಹಿಂದೂ ಹುಡುಗಿಯರನ್ನು ಮೋಸಗೊಳಿಸುವುದು, ಅವರ ಮೇಲೆ ಬಲಾತ್ಕಾರ ಮಾಡುವುದು ಮತ್ತು ಅವರನ್ನು ಮತಾಂತರಗೊಳಿಸುವುದು, ಇದು ಯಾವ ಸಂವಿಧಾನದಲ್ಲಿ ಇದೆ ?
  • ಓವೈಸಿ ಇವರಿಗೆ ಸಂವಿಧಾನದ ಬಗ್ಗೆ ಇಷ್ಟೊಂದು ಗೌರವ ಇದ್ದರೆ ಅವರು ಮುಸಲ್ಮಾನರಿಂದ ನಡೆಯುವ ದಂಗೆ ಮುಂತಾದರ ಬಗ್ಗೆ ಮಾತನಾಡಬೇಕು ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಸರಕಾರವನ್ನು ಬೆಂಬತ್ತಬೇಕು !