ಭಾರತದ ಸಮುದ್ರ ಭದ್ರತೆ : ನಿನ್ನೆ, ಇಂದು ಮತ್ತು ನಾಳೆ !

೧. ಸಮುದ್ರ ಭದ್ರತೆಯ ಅನಿವಾರ್ಯತೆ

೫ ಮೇ ೨೦೨೦ ರಿಂದ ಚೀನಾ-ಭಾರತದ ಲಡಾಖ ಗಡಿಯಲ್ಲಿ ಸಂರ್ಘದ ಸ್ಥಿತಿಯಿದೆ. ಆದುದರಿಂದ ಭಾರತ ಚೀನಾ ಗಡಿಯಲ್ಲಿ ಹೆಚ್ಚಿನ ಗಮನ ನೀಡುತ್ತಿದೆ; ಆದರೆ ಇತರ ಗಡಿಗಳ ಕಡೆಗೂ ಗಮನ ಹರಿಸುವುದು ಮಹತ್ವದ್ದಾಗಿದೆ. ಹಾಗೆ ಮಾಡದಿದ್ದರೆ, ದೇಶದ ಸುರಕ್ಷತೆಗೆ ಬಹುದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಭಾರತಕ್ಕೆ ೭ ಸಾವಿರ ೬೦೦ ಕಿಲೋಮೀಟರ ಉದ್ದದ ಸಮುದ್ರ ತೀರ ಲಭಿಸಿದೆ. ಅಂಡಮಾನ-ನಿಕೋಬಾರ ದ್ವೀಪಗಳ ಸಂಖ್ಯೆ ೫೭೨ ಆಗಿದೆ. ಅದರಲ್ಲಿನ ೨೯ ದ್ವೀಪಗಳನ್ನು ಹೊರತುಪಡಿಸಿ, ಇತರ ದ್ವೀಪಗಳಲ್ಲಿ ಮಾನವನ ವಾಸ್ತವ್ಯವಿಲ್ಲ. ಲಕ್ಷದ್ವೀಪಗಳ ಸಂಖ್ಯೆ ೨೭ ಇದ್ದು, ಅಲ್ಲಿ ಕೇವಲ ೯ ದ್ವೀಪಗಳ ಮೇಲೆ ಮನುಷ್ಯ ವಸತಿಯಿದೆ. ಇಂತಹ ಮಾನವನ ವಸತಿಯಿಲ್ಲದ (ನಿರ್ಜನ) ಸ್ಥಳಗಳಿಂದ ದೇಶಕ್ಕೆ ವಿವಿಧ ರೀತಿಯ ಅಪಾಯಗಳು ಎದುರಾಗುವ ಸಾಧ್ಯತೆಯಿರುತ್ತದೆ.

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಯಾವ ಅಪಾಯಗಳು ಭೂಮಿಯ ಗಡಿಗಳಲ್ಲಿ ಇರುತ್ತವೆಯೋ, ಅಂತಹ ಅಪಾಯಗಳೇ ಸಮುದ್ರದ ಗಡಿಗಳಲ್ಲಿಯೂ ಇರುತ್ತವೆ. ಸಮುದ್ರದ ಗಡಿಗಳಿಂದ ಉಗ್ರರು ದೇಶದಲ್ಲಿ ಪ್ರವೇಶಿಸಬಹುದು. ಅಲ್ಲದೇ ಅಲ್ಲಿಂದ ಸ್ಫೋಟಕಗಳನ್ನು ದೇಶದಲ್ಲಿ ತರಬಹುದು. ೧೯೯೩ ರಲ್ಲಿ ಮುಂಬಯಿಯಲ್ಲಿನ ಬಾಂಬ್ ಸ್ಫೋಟಗಳಿಗಾಗಿ ರಾಯಗಡ ದಂಡೆಯ ಮೇಲೆ ಸ್ಫೋಟಕಗಳನ್ನು ಇಳಿಸಲಾಗಿತ್ತು. ೨೬ ನವೆಂಬರ್ ೨೦೦೮ ರಂದು ಮುಂಬಯಿಯ ಆಕ್ರಮಣದ ಸಮಯದಲ್ಲಿ ಉಗ್ರರು ಸಮುದ್ರಮಾರ್ಗದಿಂದ ದೇಶದೊಳಗೆ ನುಸುಳಿದ್ದರು. ಉಗ್ರರು ಅನೇಕ ಬಾರಿ ಶ್ರೀಲಂಕಾದ ಬದಿಯಿಂದ ಕೇರಳ ಅಥವಾ ತಮಿಳುನಾಡು ಮುಂತಾದ ರಾಜ್ಯಗಳಿಗೆ ಪ್ರವೇಶಿಸು ತ್ತಾರೆ. ಅಲ್ಲಿ ಅನಧಿಕೃತ ವ್ಯಾಪಾರಗಳು ನಡೆಯುತ್ತವೆ. ಸಮುದ್ರದಲ್ಲಿ ಅನೇಕ ಕಾನೂನುಬಾಹಿರ ಕೃತ್ಯಗಳನ್ನು ಮಾಡಲಾಗುತ್ತದೆ; ಭಾರತೀಯ ನಕಲಿ ಚಲನ, ಬಂಗಾರ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ನಡೆಯುತ್ತದೆ.

‘ಮಾಗ್ರೋವ್ಹ ಫಾರೆಸ್ಟ (ಕಾಂಡ್ಲಾ ವನ) ಇದು ೪ ಸಾವಿರ ಎಕರೆ ಚದರ ಕಿಲೋಮೀಟರಗಿಂತ ಹೆಚ್ಚಿದೆ. ಅಲ್ಲಿಯೂ ಅನಧಿಕೃತ ಕೃತ್ಯಗಳು ನಡೆಯುತ್ತವೆ. ಭಾರತಕ್ಕೆ ಎಷ್ಟು ಅಪಾಯ ಬಾಹ್ಯ ಸುರಕ್ಷತೆಯ ಬಗ್ಗೆ  ಇದೆಯೋ, ಅದಕ್ಕಿಂತ ಅಧಿಕ ಅಪಾಯವು ಆಂತರಿಕ ಸುರಕ್ಷತೆಯ ದೃಷ್ಟಿಯಿಂದಿದೆ. ದೇಶದ ಸುರಕ್ಷತೆಗಾಗಿ ಸಮುದ್ರ ತೀರಗಳ ಭದ್ರತೆ ಅತ್ಯಂತ ಮಹತ್ವದ್ದಾಗಿದೆ.

೨. ಸಮುದ್ರದ ಗಡಿಗಳ ಭದ್ರತೆಯ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಮನ್ವಯ ಆವಶ್ಯಕ !

ಅ. ಗುಜರಾತ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ ಮತ್ತು ಬಂಗಾಳ ಈ ೯ ರಾಜ್ಯಗಳಿಗೆ ಮತ್ತು ಪುದುಚೆರಿ, ಲಕ್ಷ್ಮದ್ವೀಪ, ಅಂಡಮಾನ-ನಿಕೋಬಾರ, ದೀವ-ದಮನ ಈ ಕೇಂದ್ರಾಡಳಿತ ಪ್ರದೇಶಗಳಿಗೆ ಸಮುದ್ರ ಸೀಮೆ ತಗಲಿದೆ.

ಆ. ಭಾರತದ ಸಮುದ್ರದ ದಂಡೆಯ ಮೇಲೆ ಮುಂಬಯಿ ಮತ್ತು ಚೆನ್ನೈಗಳಂತಹ ಮಹಾನಗರಗಳಿವೆ. ಇಂದು ಶೇ. ೨೦ ರಷ್ಟು ಜನಸಂಖ್ಯೆ ಸಮುದ್ರ ದಡದ ಮೇಲೆ ವಾಸಿಸುತ್ತದೆ. ಅತ್ಯಧಿಕ ದಡಪ್ರದೇಶ ಗುಜರಾತ ರಾಜ್ಯಕ್ಕೆ ಮತ್ತು ತದನಂತರ ಮಹಾರಾಷ್ಟ್ರಕ್ಕೆ ಲಭಿಸಿದೆ. ಅಲ್ಲಿ ಪಾಕಿಸ್ತಾನಿ ಉಗ್ರರು ಕಣ್ಣಿಟ್ಟಿರುತ್ತಾರೆ.

ಇ. ಬಂಗಾಲ, ಹಾಗೆಯೇ ದಕ್ಷಿಣದ ಕಡೆಯ ರಾಜ್ಯಗಳು ತಮ್ಮ ಸಮುದ್ರದ ದಡಪ್ರದೇಶದ ಭದ್ರತೆಯ ಕಡೆಗೆ ಅಷ್ಟೊಂದು ಗಮನಹರಿಸುವುದಿಲ್ಲ. ಇದು ಅಪಾಯಕಾರಿಯಾಗಿದೆ. ಈ ಕಾರಣದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಮನ್ವಯ ಇರುವುದು ಆವಶ್ಯಕವಾಗಿದೆ.

ಈ. ‘ಎಲ್.ಟಿ.ಟಿ.’ ಈ. ಈ ಸಂಘಟನೆ ರಾಮಸೇತುವಿನ ರಸ್ತೆಯನ್ನು ಕಳ್ಳಸಾಗಾಣಿಕೆಗಾಗಿ ಉಪಯೋಗಿಸುತ್ತಿತ್ತು. ಸುದೈವದಿಂದ ಭಾರತೀಯ ಸೈನ್ಯವು ಅದರ ಬೆನ್ನೆಲುಬು ಮುರಿಯಿತು; ಆದರೆ ಅದಕ್ಕಾಗಿ ೪ ಸಾವಿರಕ್ಕಿಂತ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರು. ಇಂದಿಗೂ ಸ್ವಲ್ಪ ಮಟ್ಟಿಗೆ ಅಲ್ಲಿ ಕಳ್ಳ ಸಾಗಾಣಿಕೆ ನಡೆಯುತ್ತದೆ.

ಉ. ಸುಂದರ ಬನದಲ್ಲಿ ಗಂಗಾ-ಯಮುನಾ-ಬ್ರಹ್ಮಪುತ್ರಾ ಈ ನದಿಗಳು ಸಮುದ್ರವನ್ನು ಸೇರುತ್ತವೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳ ಸಾಗಾಣಿಕೆ ಮತ್ತು ಬಾಂಗ್ಲಾದೇಶಿ ನಾಗರಿಕರ ನುಸುಳುವಿಕೆ ನಡೆಯುತ್ತದೆ. ಬಂಗಾಲ ಸರಕಾರ ಈ ಬಗ್ಗೆ ಏನನ್ನೂ ಮಾಡಲು ಸಿದ್ಧವಿಲ್ಲ. ಇದರೆಡೆಗೆ ಮಾಧ್ಯಮಗಳು ಕೂಡ ಗಮನಹರಿಸಬೇಕು. ಬಂಗಾಲ ಸರಕಾರದ ಮೇಲೆ ಒತ್ತಡವನ್ನು ಹೇರಬೇಕು. ಈ ನುಸುಳುವಿಕೆ ಎಂದರೆ ಭಾರತಕ್ಕೆ ತಗುಲಿರುವ ಅರ್ಬುದರೋಗವೇ ಆಗಿದೆ. ಮಮತಾ ಬ್ಯಾನರ್ಜಿಯವರಿಗೆ ಅವರ ಈ ಕೃತಿ ದೇಶ ದ್ರೋಹಿಯಾಗಿದೆ ಎಂದು ತಿಳಿಸಿ ಹೇಳಬೇಕು.

೩. ಸಮುದ್ರದ ದಡಗಳ ಭದ್ರತೆಯನ್ನು ಮಾಡುವುದು ಭದ್ರತೆ ಸಚಿವಾಲಯಕ್ಕೆ ಸವಾಲು !

ಸಮುದ್ರದ ಭದ್ರತೆಗಾಗಿ ನಮ್ಮ ಬಳಿ ನೌಕಾದಳ, ತಟ ರಕ್ಷಕ ದಳ ಮತ್ತು ಸಮುದ್ರ ರಕ್ಷಣೆಯ ಪೊಲೀಸರಿದ್ದಾರೆ. ಸಮುದ್ರ ದಡದಿಂದ ೨೦ ಹಡಗು ಮೈಲುಗಳ ವರೆಗೆ ಗಮನವನ್ನಿಡಲು ಸಮುದ್ರ ರಕ್ಷಣೆ ಪೊಲೀಸರಿದ್ದಾರೆ. ತದನಂತರ ೨೦೦ ಹಡಗು ಮೈಲುಗಳ ವರೆಗಿನ ಸಮುದ್ರದ ಮೇಲೆ ಗಮನವಿಡುವ ಕೆಲಸವು ತಟರಕ್ಷಕ ದಳದ್ದಾಗಿದೆ. ಅದಕ್ಕಿಂತ ಮುಂದಿನ ಸಮುದ್ರದ ಮೇಲೆ ಭಾರತೀಯ ನೌಕಾಪಡೆ ಗಮನವಿಡುತ್ತದೆ. ತಟರಕ್ಷಕ ದಳದ ಬಳಿ ಅನೇಕ ಆಧುನಿಕ ಸಾಧನಗಳಿದ್ದು, ಸಮುದ್ರದ ಭದ್ರತೆಗಾಗಿ ಅವರು ಸಕ್ಷಮರಾಗಿದ್ದಾರೆ. ಇಂದು ಮೀನುಗಳನ್ನು ಹಿಡಿಯುವ ಸುಮಾರು ೩ ಲಕ್ಷ ದೋಣಿಗಳು ಭಾರತದ ಸಮುದ್ರದಲ್ಲಿ ಸಕ್ರಿಯವಿವೆ. ಇಂತಹ ಚಿಕ್ಕ ಚಿಕ್ಕ ದೋಣಿಗಳ ಮೇಲೆ ಗಮನವಿಡುವುದು ಕೂಡ ಸವಾಲಾಗಿದೆ.

೪. ಹಣದ ಕೊರತೆಯಿಂದ ಸಮುದ್ರ ಭದ್ರತೆಯ ವಿಷಯದಲ್ಲಿ ಉಪಾಯಯೋಜನೆಗಳಾಗದಿರುವುದು ದೇಶಕ್ಕೆ ಲಜ್ಜಾಸ್ಪದ

೧೯೭೭ ರ ವರೆಗೆ ಭಾರತೀಯ ಸಮುದ್ರದ ಗಡಿಯ ಭದ್ರತೆಯನ್ನು ಕೇವಲ ಭಾರತೀಯ ನೌಕಾದಳ ಮಾಡುತ್ತಿತ್ತು. ನೌಕಾದಳದ ಬಳಿ ಚಿಕ್ಕ ದೋಣಿಗಳಿಲ್ಲದ ಕಾರಣ ಭಾರತೀಯ ಸಮುದ್ರ ದಂಡೆಯ ಭದ್ರತೆಯು ಅಷ್ಟು ಚೆನ್ನಾಗಿರಲಿಲ್ಲ. ೭೦ ಮತ್ತು ೮೦ರ ದಶಕದಲ್ಲಿ ದೇಶದ ಅನೇಕ ಕುಖ್ಯಾತ ಕಳ್ಳಸಾಗಾಣಿಕೆದಾರರು ಕಳ್ಳಸಾಗಾಟದ  ಮಾಧ್ಯಮದಿಂದ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದರು. ೧೯೭೭ ರಲ್ಲಿ ಸಮುದ್ರದ ಸುರಕ್ಷತೆಗಾಗಿ ಭಾರತೀಯ ತಟ ರಕ್ಷಕ ದಳವನ್ನು ಸೇರಿಸಲಾಯಿತು. ೨೦೦೮ ರಲ್ಲಿ ಮುಂಬಯಿಯ ಮೇಲಿನ ಭಯೋತ್ಪಾದಕರ ಆಕ್ರಮಣದ ಬಳಿಕ ಭಾರತದ ಸಮುದ್ರ ಗಡಿಗಳಲ್ಲಿ ವಿಶೇಷ ಗಮನವನ್ನು ಹರಿಸ ಲಾಯಿತು. ೧೯೯೯ ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ಸುರಕ್ಷತೆಯ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಮಂಡಿಸಲಾಗಿತ್ತು. ಆದರೆ ಹಣದ ಕೊರತೆಯಿಂದ ಅದರ ಮೇಲೆ ವಿಶೇಷ ಕ್ರಮ ಜರುಗಿ ಸಲು ಸಾಧ್ಯವಾಗಲಿಲ್ಲ. ರಕ್ಷಣೆಯ ಆಯವ್ಯಯದಲ್ಲಿ (ಬಜೆಟ್ ನಲ್ಲಿ) ಅನುದಾನವನ್ನು ಹೆಚ್ಚಿಸಲು ಬಹಳಷ್ಟು ಹಣದ ಆವಶ್ಯಕತೆ ಯಿರುತ್ತದೆ. ಆದುದರಿಂದ ಸಾಧ್ಯವಿರುವವರು ತಪ್ಪದೇ ತೆರಿಗೆಯನ್ನು (Income Tax) ಕಟ್ಟಬೇಕು.

೫. ಭದ್ರತಾ ಸಂಸ್ಥೆಯಿಂದ ಗುಣಾತ್ಮಕ ಕಾರ್ಯ ಆವಶ್ಯಕ

ಅ. ಇಂದು ನೌಕಾಪಡೆಯ ಬಳಿ ಆಧುನಿಕ ಹಡಗುಗಳು ಮತ್ತು ವಿಮಾನಗಳಿವೆ. ಸಮುದ್ರದ ಮಾರ್ಗದಿಂದ ಥೈಲ್ಯಾಂಡ್, ಮಲೆಷ್ಯಾ, ದುಬೈ, ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಸ್ಥಳ ಗಳಿಂದ ಭಾರತದ ದಡದಿಂದ ನಕಲಿ ಚಲನ (ಹಣ) ಮತ್ತು ಮಾದಕ ದ್ಯವ್ಯಗಳನ್ನು ತರಲಾಗುತ್ತದೆ. ಇಂತಹ ಸಮಯದಲ್ಲಿ ಭಾರತೀಯ ನೌಕಾಪಡೆ ಎಷ್ಟು ನಕಲಿ ಚಲನಗಳನ್ನು ಹಿಡಿಯಿತು ? ಎಷ್ಟು ಅಮಲು ಪದಾರ್ಥಗಳನ್ನು ಹಿಡಿಯಿತು ? ಪಡೆಯುವರು ಸಮುದ್ರ ದಡದ ರಕ್ಷಣೆಯನ್ನು ಹೇಗೆ ಮಾಡುತ್ತಾರೆ ? ಎನ್ನುವುದು ಬಹಿರಂಗವಾಗಬೇಕು. ಕೇವಲ ಗಸ್ತು ಹಾಕುವುದು ಮತ್ತು ಪತ್ತೇದಾರಿ ಮಾಡಿ ಉಪಯೋಗವಿಲ್ಲ. ಅವರು ಎಷ್ಟು ಕಳ್ಳರನ್ನು ಹಿಡಿದರು ? ಎಂದು ಸಮುದ್ರ ಪೊಲೀಸರನ್ನು ಕೂಡ ಚೆನ್ನಾಗಿ ಕೇಳಬೇಕು. ಎಲ್ಲಿಯವರೆಗೆ ಕಳ್ಳ ಸಾಗಾಣಿಕೆದಾರರನ್ನು ಹಿಡಿಯುವುದಿಲ್ಲವೋ ಅಥವಾ ನಕಲಿ ಚಲನನನ್ನು ಹಿಡಿಯುವುದಿಲ್ಲವೋ, ಅಲ್ಲಿಯವರೆಗೆ ಅವರ ಫಲನಿಷ್ಪತ್ತಿ ತಿಳಿಯುವುದಿಲ್ಲ. ಇದರ ಕಡೆಗೆ ಕೇಂದ್ರದೊಂದಿಗೆ ರಾಜ್ಯ ಸರಕಾರಗಳೂ ಗಮನ ಹರಿಸಬೇಕು.

ಆ. ೨೬ ನವೆಂಬರ್ ೨೦೦೮ ಈ ದಿನದ ಆಕ್ರಮಣದ ಬಳಿಕ ಪೊಲೀಸ ಠಾಣೆಗಳು, ಚೆಕ್ ಪೋಸ್ಟ, ಔಟ ಪೋಸ್ಟ, ದೋಣಿಗಳ ಸಂಖ್ಯೆಗಳಲ್ಲಿ ಹೆಚ್ಚಳವಾಗಿದೆ; ಆದರೆ ಗುಣಾತ್ಮಕ ಕಾರ್ಯವಾಗುವುದು ಆವಶ್ಯಕವಾಗಿದೆ. ನಾವು ಸಮುದ್ರ ಗಡಿ ಪೊಲೀಸರನ್ನು, ನೀವು ಕಳೆದ ೫ ವರ್ಷಗಳಲ್ಲಿ ಏನು ಸಾಧಿಸಿದಿರಿ ಎಂದು ಕೇಳಿದರೆ, ಸರಿಸುಮಾರು ‘ಏನೂ ಇಲ್ಲ’ ಎಂದು ಉತ್ತರ ಬರಬಹುದು. ಆದುದರಿಂದ ಪೊಲೀಸರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಅತ್ಯಂತ ಮಹತ್ವದ್ದಾಗಿದೆ.

ಇ. ನೌಕಾಪಡೆ, ಗಡಿಕಾವಲು ಪಡೆ, ಸಿ.ಐ.ಎಸ್.ಎಫ್., ಮರೀನ ಪೊಲೀಸ, ಬಿಎಸ್‌ಎಫ್. ವಾಟರ ವಿಂಗ, ಮೀನುಗಾರಿಕೆ ವಿಭಾಗ, ಹಾಗೆಯೇ ವಾಯುದಳದ ವಿಮಾನಗಳು ಸುತ್ತುತ್ತಿರುತ್ತವೆ. ಆದುದರಿಂದ ನಮ್ಮ ಬಳಿ ಸಂಸ್ಥೆಗಳ ಕೊರತೆಯಿಲ್ಲ. ಈ ಸಂಸ್ಥೆಗಳು ವಿವಿಧ ವಿಭಾಗಗಳ ಅಧಿಕಾರಿಗಳ ಕೆಳಗೆ ಕಾರ್ಯವನ್ನು ಮಾಡುತ್ತಿರುತ್ತವೆ. ಇವರೆಲ್ಲರ ಸಮನ್ವಯ ಇರುವುದು ಆವಶ್ಯಕವಾಗಿದೆ.

೬. ಕಡಿಮೆ ಸಾಧನಗಳನ್ನು ಉಪಯೋಗಿಸಿ ದೇಶದ ರಕ್ಷಣೆಯನ್ನು ಮಾಡಲು ಬರಬೇಕು.

ಇಂದು ಜಗತ್ತಿನಲ್ಲಿ ಮೀನುಗಾರಿಕೆಯನ್ನು ಮಾಡುವವರಲ್ಲಿ ಭಾರತವು ಮೂರನೇ ದೇಶವಾಗಿದೆ. ಸಮುದ್ರದಲ್ಲಿ ೩ ಲಕ್ಷಕ್ಕಿಂತ ಅಧಿಕ ದೋಣಿಗಳು ಮೀನು ಹಿಡಿಯಲು ತಿರುಗುತ್ತವೆ. ೨೬/೧೧ ರ ಆಕ್ರಮಣದ ಸಮಯದಲ್ಲಿ ೧೦ ಜನ ಪಾಕಿಸ್ತಾನಿ ಉಗ್ರರು ಸಮುದ್ರದ ಮಾರ್ಗದಿಂದ ನಮ್ಮ ದೇಶದಲ್ಲಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಸಮುದ್ರ ದಡದ ರಕ್ಷಣೆಯನ್ನು ಮಾಡಬಹುದೇ ? ಆದುದರಿಂದ ಚಿಕ್ಕ-ದೊಡ್ಡ ಬಂದರುಗಳ ಸುರಕ್ಷತೆಗಾಗಿ ಸ್ವತಃ ಗಮನಹರಿಸಬೇಕಾಗುವುದು. ಕೆಲವು  ವರ್ಷಗಳ ಹಿಂದೆ ಇಟಲಿಯ ಒಂದು ಹಡಗು ಕೇರಳದ ಕಡೆಗೆ ಬರುತ್ತಿರುವಾಗ ಹಡಗಿನ ಮೇಲಿನ ನೌಕರರು ಭಾರತೀಯ ದೋಣಿಯ ಮೇಲೆ ಗುಂಡು ಹಾರಿಸಿ ಇಬ್ಬರು ಭಾರತೀಯ ಮೀನುಗಾರರ ಹತ್ಯೆಯನ್ನು ಮಾಡಿದ್ದರು. ನಮ್ಮ ಬಳಿಯಿರುವ ಸಾಧನಗಳು ಮತ್ತು ರಕ್ಷಣೆಯ ಆರ್ಥಿಕ ಅನುದಾನ (ಬಜಟ್) ಯಾವಾಗಲೂ ಕಡಿಮೆ ಬೀಳುವುದೇ ಇದೆ. ಅದಕ್ಕಾಗಿ ಅಲ್ಪ ಸಾಧನಗಳಲ್ಲಿ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಬುದ್ದಿಯನ್ನು ಉಪಯೋಗಿಸಬೇಕಾಗುವುದು.

೭.ಭಾರತವು ಉತ್ತಮ ಯುದ್ಧದ ಸ್ಥಿತಿಯ ಲಾಭವನ್ನು ಪ್ರಗತಿಗಾಗಿ ಮಾಡಿಕೊಳ್ಳುವುದು ಆವಶ್ಯಕ!

ಯಾವುದೇ ದೇಶದ ಪ್ರಗತಿಯು ಮುಂದಿನ ಎರಡು ಕಾರಣಗಳಿಂದ ಆಗುತ್ತದೆ, ಒಂದು ನದಿಯ ದಂಡೆಯ  ಪ್ರದೇಶ ಮತ್ತು ಇನ್ನೊಂದು ಸಮುದ್ರ ದಂಡೆ ! ಯಾವ ದೇಶಗಳಿಗೆ ಸಮುದ್ರ ದಂಡೆ ದೊರಕಿದೆಯೋ, ಅದು ಅತ್ಯಧಿಕ ಪ್ರಗತಿಯನ್ನು ಸಾಧಿಸಿದೆ. ದುರ್ದೈವದಿಂದ ಭಾರತವು ಸಮುದ್ರ ದಂಡೆಯ ಲಾಭವನ್ನು ಎಷ್ಟು ಬೇಕೋ ಅಷ್ಟು ಮಾಡಿಕೊಂಡಿಲ್ಲ. ಭಾರತದ ಸಮುದ್ರ ದಂಡೆಯ ಮೇಲೆ ೧೩ ಪ್ರಮುಖ ಬಂದರುಗಳು ಮತ್ತು ೧೮೫ ಚಿಕ್ಕ ಬಂದರುಗಳಿವೆ. ನಮ್ಮ ದೇಶದ ಅಂತರರಾಷ್ಟ್ರೀಯ ವ್ಯಾಪಾರ ಈ ಬಂದರುಗಳಿಂದ ನಡೆಯುತ್ತದೆ. ಇದರಲ್ಲಿ ಶೇ. ೯೫ ರಷ್ಟು ವ್ಯಾಪಾರವು ಸಮುದ್ರ ಮಾರ್ಗದಿಂದ ಮತ್ತು ಕೇವಲ ಶೇ. ೫ ರಷ್ಟು ವ್ಯಾಪಾರವು ಭೂ ಮಾರ್ಗ ಅಥವಾ ಆಕಾಶ ಮಾರ್ಗದಿಂದ ನಡೆಯುತ್ತದೆ. ಆದುದರಿಂದ ಸಮುದ್ರದಿಂದ ಬರುವ ಮಾರ್ಗಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿವೆ.

ಭಾರತಕ್ಕೆ ಶೇ. ೨೦ ರಿಂದ ೨೫ ರಷ್ಟು ಖನಿಜ ತೈಲ ಸಮುದ್ರದೊಳಗಿನಿಂದ ಸಿಗುತ್ತದೆ. ಅಂತರರಾಷ್ಟ್ರೀಯ ಕಾನೂನಿಗನುಸಾರ ೨೦೦ ನಾವಿಕ ಮೈಲಿಗಳ ವರೆಗಿನ ಸಮುದ್ರಕ್ಕೆ ‘ಮಹತ್ವದ ಆರ್ಥಿಕ ಕ್ಷೇತ್ರ’ ಎಂದು ಹೇಳಲಾಗುತ್ತದೆ. ಇಲ್ಲಿ ಸಿಗುವ ಎಲ್ಲ ಸಂಪತ್ತು ಸಂಬಂಧಿತ ದೇಶದ್ದಾಗಿರುತ್ತದೆ. ಅಂಡಮಾನ- ನಿಕೋಬಾರ ಸಮುದ್ರದಲ್ಲಿ ಯಾವ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯಬೇಕೋ, ಹಾಗೆ ನಡೆಯುತ್ತಿಲ್ಲ.

೮.ಯುದ್ಧಜನ್ಯ ಪರಿಸ್ಥಿತಿಯಲ್ಲಿ ಶತ್ರುದೇಶಗಳ ವ್ಯಾಪಾರದ ಸಮುದ್ರ ಮಾರ್ಗವನ್ನು ತಡೆಯುವುದು ಭಾರತದ ಕೈಯಲ್ಲಿದೆ !

ಮಿನಿಕಾಯ ದ್ವೀಪ ಭಾರತಕ್ಕೆ ಮಹತ್ವದ್ದಾಗಿದೆ. ಮಿನಿಕಾಯ ಮತ್ತು ಮಾಲದೀವ ದ್ವೀಪಗಳ ಸಮುದ್ರದಿಂದ ಅಂತರರಾಷ್ಟ್ರೀಯ ಹಡಗು ಸಂಚಾರ ನಡೆಯುತ್ತದೆ. ಮೂರನೇ ಮಹಾಯುದ್ಧವಾದರೆ, ಭಾರತ ಈ ಸ್ಥಳಗಳಲ್ಲಿ ಅನೇಕ ಶತ್ರುರಾಷ್ಟ್ರಗಳ ವ್ಯಾಪಾರವನ್ನು ತಡೆಯಬಹುದು. ಭಾರತದ ಅಂಡಮಾನ-ನಿಕೋಬಾರ ದ್ವೀಪಗಳ ಕೆಳಗಿನ ಬದಿಯಿಂದ ಚೀನಾದ ಶೇ. ೮೦ ರಷ್ಟು ವ್ಯಾಪಾರ ನಡೆಯುತ್ತದೆ. ಭಾರತ- ಚೀನಾ ಯುದ್ಧವಾದರೆ, ಭಾರತವು ಚೀನಾದ ಈ ವ್ಯಾಪಾರದ ಮಾರ್ಗವನ್ನು ಸಹಜವಾಗಿ ತಡೆಯಬಹುದು. ಭಾರತಕ್ಕೆ ೩ ಬದಿಗಳಲ್ಲಿ ಸಮುದ್ರದ ದಂಡೆ ಲಭಿಸಿದೆ. ಇದರಿಂದ ಭಾರತ-ಚೀನಾ ಅಥವಾ ಭಾರತ ಪಾಕಿಸ್ತಾನ ಯುದ್ಧವಾದರೆ ಯಾವುದೇ ದೇಶ ಭಾರತದ ಸಮುದ್ರದ ವ್ಯಾಪಾರವನ್ನು ತಡೆಯಲಾರದು. ಆದರೆ, ಭಾರತ ಚೀನಾದ ಆರ್ಥಿಕ ದಿಗ್ಬಂಧನ ಮಾಡಬಹುದು. ಭಾರತದ ಯುದ್ಧಸ್ಥಾನವು ಬಹಳ ಒಳ್ಳೆಯ ಸ್ಥಳದಲ್ಲಿದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು.

– (ನಿವೃತ್ತ) ಬ್ರಿಗೇಡಿಯರ ಹೇಮಂತ ಮಹಾಜನ, ಪುಣೆ