Ready for Face War : ದೇಶದ ಭದ್ರತೆ ಇತರರ ಮೇಲೆ ಅವಲಂಬಿಸಿರಲು ಸಾಧ್ಯವಿಲ್ಲ ! – ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ನವ ದೆಹಲಿ : ದೇಶದ ಭದ್ರತೆಯನ್ನು ಔಟ್ ಸೋರ್ಸ್’ ಗೆ ನೀಡಲಾಗುವುದಿಲ್ಲ ಅಥವಾ ಇತರರ ಔದಾರ್ಯದ ಮೇಲೆ ಅವಲಂಬಿಸಿರಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ. ಅವರು ಏಪ್ರಿಲ್ 22, 2024 ರಂದು ನವ ದೆಹಲಿಯಲ್ಲಿ ‘ಆಲ್ ಇಂಡಿಯಾ ಮ್ಯಾನೇಜಮೆಂಟ್’ನ ಒಂಬತ್ತನೇ ‘ನ್ಯಾಶನಲ್ ಲೀಡರ್ ಶಿಪ್ ಕಾನ್ಕ್ಲೇವ್’ನಲ್ಲಿ ‘ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಪ್ರಾಮುಖ್ಯತೆ ಹಾಗೂ ಮಹತ್ವದ ಬಗ್ಗೆ ಮಾತನಾಡುತ್ತಿದ್ದರು. ಜನರಲ್ ಮನೋಜ್ ಪಾಂಡೆ ಮಾತನಾಡಿ, “ಸಾಮರ್ಥ್ಯದ ಅಭಿವೃದ್ಧಿಯ ವಿಚಾರ ಮಾಡಿದಾಗ, ನಾವು ಪ್ರಮುಖ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಮತ್ತು ಈ ತಂತ್ರಜ್ಞಾನಗಳನ್ನು ಹೊಂದಿರುವ ದೇಶಗಳನ್ನು ಅವಲಂಬಿಸಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವಾಗಲೂ ಹಿಂದುಳಿದಿದ್ದೇವೆ, ಇದು ನಮಗೆ ಸ್ಪಷ್ಟವಾಗಬೇಕಾಗಿದೆ ಎಂದರು.”

ಯುದ್ಧವನ್ನು ಎದುರಿಸಲು ಸಿದ್ಧ ! – ಸೇನಾಪಡೆ ಮುಖ್ಯಸ್ಥ

ಅವರು ಮುಂದೆ ಮಾತನಾಡಿ, “ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ರಾಷ್ಟ್ರೀಯ ಹಿತಾಸಕ್ತಿ ಇರುವಲ್ಲಿ ದೇಶವು ಯುದ್ಧಕ್ಕೆ ಸಿದ್ಧವಾಗಿದೆ ಎಂದು ತೋರಿಸಿವೆ. ಆ ನಿಟ್ಟಿನಲ್ಲಿ ನೌಕಾಪಡೆಯನ್ನು ಸಶಸ್ತ್ರ, ಆಧುನಿಕ, ಚುರುಕುಬುದ್ಧಿಯ, ಹೊಂದಿಕೊಳ್ಳಬಲ್ಲ, ತಂತ್ರಜ್ಞಾನ ಆಧಾರಿತ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು ಇದು ನಮ್ಮ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರ ಮಾಡುವಾಗ ವಿವಿಧ ರೀತಿಯ ಪರಿಸರದಲ್ಲಿ ಸಂಪೂರ್ಣ ಸಾಮರ್ಥ್ಯದೊಂದಿಗೆ ಯುದ್ಧವನ್ನು ಗೆಲ್ಲುವುದು, ಇದು ನಮ್ಮ ಉದ್ದೇಶವಾಗಿದೆ ಎಂದರು.