ಭಾರತ ಮತ್ತು ಜರ್ಮನಿ ಒಟ್ಟಾಗಿ ಜಗತ್ತನ್ನು ಸುರಕ್ಷಿತವಾಗಿರಿಸಲು ಬಯಸುತ್ತವೆ ! – ರ್ಮನಿಯ ನೌಕಾಪಡೆಯ ಅಧಿಕಾರಿ ರಿಯರ ಅಡ್ಮಿರಲ್ ಹೆಲ್ಗೆ ರಿಶ್

ನವ ದೆಹಲಿ – ಭಾರತ ಮತ್ತು ಜರ್ಮನಿ ಇವು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಉತ್ತಮ ಪಾಲುದಾರರಾಗಿದ್ದಾರೆ. ಎರಡೂ ದೇಶಗಳು ಒಟ್ಟಾಗಿ ಜಗತ್ತನ್ನು ಸುರಕ್ಷಿತವಾಗಿರಿಸಬೇಕಾಗಿದೆ ಎಂದು ಜರ್ಮನಿಯ ನೌಕಾಪಡೆಯ ಅಧಿಕಾರಿ ರಿಅರ್ ಅಡ್ಮಿರಲ್ ಹೆಲ್ಗೆ ರಿಶ್ ಇವರು ಹೇಳಿದ್ದಾರೆ. ಹೆಲ್ಗೆ ರಿಶ್ ಅವರು ‘ಜರ್ಮನ್ ಫ್ರಿಗೆಟ್ ಟಾಸ್ಕ್ ಫೋರ್ಸ್ ಗ್ರೂಪ್’ನ ಕಮಾಂಡರ್ ಆಗಿದ್ದಾರೆ.

ರಿಶ್ ಮಾತನಾಡಿ, ಎರಡೂ ದೇಶಗಳು ಪ್ರಜಾಪ್ರಭುತ್ವವಾದಿಗಳಾಗಿವೆ. ನಮ್ಮ ಅನೇಕ ಮೌಲ್ಯಗಳು ಮತ್ತು ಆಸಕ್ತಿಗಳು ಒಂದೇ ಆಗಿವೆ. ನಾವಿಬ್ಬರೂ ಪ್ರಾದೇಶಿಕ ಮಟ್ಟದಲ್ಲಿ ಸಂಪರ್ಕ ಹೊಂದಿದ್ದೇವೆ; ಆದರೆ ನಾವು ವಿಶ್ವ ಮಟ್ಟದಲ್ಲಿಯೂ ವಚನಬದ್ಧರಾಗಿದ್ದೇವೆ. ಉಭಯ ದೇಶಗಳು ಮತ್ತು ಅವರ ನೌಕಾ ಪಡೆಗಳ ನಡುವಿನ ಸ್ನೇಹ ಮತ್ತು ಪಾಲುದಾರಿಕೆಯನ್ನು ಅಧಿಕ ಬಲಪಡಿಸುವ ಪ್ರಯತ್ನವಾಗಿದೆ. ಭವಿಷ್ಯದಲ್ಲಿ ನಾವು ಇನ್ನೂ ಹೆಚ್ಚು ಅಭ್ಯಾಸ ಮಾಡುತ್ತೇವೆ; ಆದರೆ ಆ ಬಗ್ಗೆ ಈಗಲೇ ಮಾತನಾಡುವುದು ಸೂಕ್ತವಲ್ಲ. ನಮ್ಮ ದೇಶಗಳ ಸರಕಾರವೂ ಇದನ್ನು ಚರ್ಚಿಸಿರಬೇಕು ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.