ದೀರ್ಘ ಕಾಲದ ಪಾರತಂತ್ರ್ಯ ಮತ್ತು ಭಾರತೀಯ ಸಂಸ್ಕೃತಿಯ ಅವನತಿ ಇವುಗಳಿಂದಾಗಿ, ಕೆಲವರು ಮುಖ್ಯ ಪ್ರವಾಹದಿಂದ ಪ್ರತ್ಯೇಕಿಸಲ್ಪಟ್ಟರು. ಇದಲ್ಲದೇ, ಭಾರತೀಯರ ಶಕ್ತಿಯನ್ನು ಕುಗ್ಗಿಸುವ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತೊಂದು ಸಂಚನ್ನು ಹೂಡಿದರು. ಮತ್ತೊಂದೆಡೆ ಹಿಂದೂ ಸಮಾಜದಲ್ಲಿನ ತಥಾಕಥಿತ ಅಸ್ಪೃಶ್ಯ ವರ್ಗದ ಭಾವನೆಗಳನ್ನು ಕಲುಷಿತಗೊಳಿಸಲು ಪ್ರಾರಂಭಿಸಿತು. ಅಷ್ಟೇ ಅಲ್ಲದೇ, ಪರ್ವತಗಳಲ್ಲಿ, ಗುಹೆಗಳಲ್ಲಿ ಮತ್ತು ಕಾಡುಗಳಲ್ಲಿ ವಾಸಿಸುವ ಭಾರತೀಯರನ್ನು ಮುಖ್ಯಪ್ರವಾಹದಿಂದ ದೂರವಿರಿಸಲು ಸರಕಾರಿ ಮಟ್ಟದಲ್ಲಿ ಕ್ರೈಸ್ತಿಕರಣ ಮಾಡುವ ಕಾರ್ಯ ವೇಗವಾಗಿ ಮಾಡಲಾಯಿತು. ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರವು ದ್ವಿತೀಯ ಸ್ಥಾನದಲ್ಲಿದೆ. ಜಾತಿ, ಸಂಪ್ರದಾಯ ಮತ್ತು ಅಲ್ಪಸಂಖ್ಯಾತರ ಓಲೈಸುವುದು ರಾಜಕಾರಣಿಗಳಿಗೆ ‘ಕಾಮಧೇನು’ (ಇಚ್ಛಿತ ಪಡೆಯುವ ಸಾಧನ) ಆಗಿ ಮಾರ್ಪಟ್ಟಿದೆ.
(ಆಧಾರ : ಮಾಸಿಕ ‘ಗೀತಾ ಸ್ವಾಧ್ಯಾಯ’, ಜನವರಿ ೨೦೧೩)
ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ ! – ಪೂ. ಶ್ರೀ ಶ್ರೀ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ, ಧಾರವಾಡ (೧೦.೧೨.೨೦೦೮) |