ಕಾಂಗ್ರೆಸ್ ಪಕ್ಷ ಹೇಳಿದ್ದರಿಂದಲೇ ನಾನು ‘ಕೇಸರಿ ಭಯೋತ್ಪಾದನೆ’ ಪದ ಬಳಸಿದ್ದೆ, ಅದು ಬಳಸಬಾರದಿತ್ತು ! – ಸುಶೀಲ ಕುಮಾರ ಶಿಂದೆ

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಸುಶೀಲ ಕುಮಾರ ಶಿಂದೆ ಅವರಿಗೆ ಈಗ ಜ್ಞಾನೋದಯ

ಮುಂಬಯಿ – ನಾನು ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಬಾರದಾಗಿತ್ತು. ನನಗೆ ನನ್ನ ಪಕ್ಷವೇ ಕೇಸರಿ ಭಯೋತ್ಪಾದನೆಯಾಗುತ್ತಿದೆಯೆಂದು ಹೇಳಿತ್ತು. ಪಕ್ಷದ ಹೇಳಿದ್ದರಿಂದಲೇ ನಾನು ಆ ಶಬ್ದವನ್ನು ಉಪಯೋಗಿಸಿದ್ದೆನು; ಆದರೆ ನಾನು ಅದನ್ನು ಏತಕ್ಕೆ ಉಪಯೋಗಿಸಿದೆನು ಎನ್ನುವುದು ನನಗೂ ತಿಳಿದಿಲ್ಲ. ಆ ಶಬ್ದ ತಪ್ಪಾಗಿತ್ತು. ಅದು ಆ ಪಕ್ಷದ ಸಿದ್ಧಾಂತವಾಗಿರುತ್ತದೆ. ಬಿಳಿ, ಕೆಂಪು ಅಥವಾ ಕೇಸರಿ ಹೀಗೆ ಯಾವುದೇ ಭಯೋತ್ಪಾದಕತೆ ಇರುವುದಿಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಗೃಹಸಚಿವ ಸುಶೀಲಕುಮಾರ ಶಿಂದೆಯವರು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಆಗಿನ ಯು.ಪಿ.ಎ. ಸರಕಾರದ ಅವಧಿಯಲ್ಲಿ, ‘ಕೇಸರಿ ಭಯೋತ್ಪಾದನೆ’ ಅಸ್ತಿತ್ವದಲ್ಲಿದೆ ಎಂದು ಹೇಳುತ್ತಾ ಅವರು ಟೀಕಿಸಿದ್ದರು. (ಇಸ್ಲಾಮಿಕ್ ಭಯೋತ್ಪಾದನೆ ಅಸ್ತಿತ್ವದಲ್ಲಿದ್ದರೂ, ಆ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ‘ಚಕಾರ’ ಎತ್ತುವುದಿಲ್ಲ, ಎಂಬುದು ಗಮನಿಸಬೇಕು ! – ಸಂಪಾದಕರು) ಅವರು ಇತ್ತೀಚೆಗೆ ಈ ವಿಷಯದಲ್ಲಿ ಸಂದರ್ಶನ ನೀಡಿದ್ದಾರೆ. ಅದು ಇನ್ನೂ ಪ್ರಸಾರವಾಗಬೇಕಾಗಿದೆ; ಆದರೆ ಅದರಲ್ಲಿನ ಕೆಲವು ಕ್ಲಿಪ್ಸ (ತುಣುಕು) ಪ್ರಸಾರವಾಗಿದ್ದು, ಅದರಲ್ಲಿ ಶಿಂದೆಯವರು ಮೇಲಿನ ಹೇಳಿಕೆ ನೀಡಿರುವುದು ಕಂಡು ಬಂದಿದೆ.

‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಯಾವಾಗ ಉಚ್ಚರಿಸಿದ್ದರು ?

ಜನವರಿ 2013 ರಲ್ಲಿ, ಜೈಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಸುಶೀಲಕುಮಾರ ಶಿಂದೆ ಅವರು ದೇಶದಲ್ಲಿ ನಡೆದ ಭಯೋತ್ಪಾದನೆಯ ಪ್ರಕರಣಗಳಲ್ಲಿ ಕೆಲವು ಹಿಂದೂ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಿ ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಿದ್ದರು ಈ ಶಬ್ದವನ್ನು ಅವರು ಕಾಂಗ್ರೆಸ್ಸಿನ ಚಿಂತನ ಶಿಬಿರದ ಕೊನೆಯ ದಿನದ ಭಾಷಣದಲ್ಲಿ ಬಳಸಿದ್ದರು. `ಕೆಲವು ಹಿಂದುತ್ವವಾದಿ ಸಂಘಟನೆಗಳು ಭಯೋತ್ಪಾದನೆಯನ್ನು ಹರಡಲು ತರಬೇತಿ ಶಿಬಿರಗಳನ್ನು ನಡೆಸುತ್ತಿದೆಯೆಂದು ಗೃಹಸಚಿವಾಲಯ ತನಿಖೆಯಿಂದ ಬಹಿರಂಗವಾಗಿದೆ’ ಎಂದು ಅವರು ಹೇಳಿದ್ದರು.

ಸಂಪಾದಕೀಯ ನಿಲುವು

  • ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಕೆ ಮಾಡಿದ್ದರಿಂದ ಜಗತ್ತಿನಾದ್ಯಂತ ಹಿಂದೂಗಳ ಅವಮಾನ ಆಯಿತು, ಅವರ ಮೇಲೆ ಭಯೋತ್ಪಾದಕರು ಎನ್ನುವ ಕಳಂಕ ಅಂಟಿತು, ಅದೀಗ ಶಿಂದೆ ಅವರ ಈ ಹೇಳಿಕೆಯಿಂದ ಅಳಿಸಿಹೋಗುವುದೇ ? ಆದ್ದರಿಂದ ಶಿಂದೆಯ ವಿರುದ್ಧ ಕಠಿಣ ಕ್ರಮ ಕೈಕೊಳ್ಳಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !
  • ಕಾಂಗ್ರೆಸ್‌ನ ಮುಸಲ್ಮಾನರ ಓಲೈಕೆ ಯಾವ ಹಂತಕ್ಕೆ ಹೋಗಬಹುದು ಎನ್ನುವುದು ಇದರಿಂದ ಕಂಡು ಬರುತ್ತದೆ. ಇಂತಹ ಕಾಂಗ್ರೆಸ್ ಕೇವಲ ಹಿಂದೂಗಳಿಗಾಗಿ ಅಲ್ಲ, ಬದಲಾಗಿ ದೇಶಕ್ಕೂ ಅಪಾಯಕಾರಿಯಾಗಿರುವುದರಿಂದ, ಅದರ ರಾಜಕೀಯ ಅಸ್ತಿತ್ವವನ್ನು ಮುಗಿಸಲು ಹಿಂದೂಗಳು ಹೆಜ್ಜೆ ಇಡುವುದು ಆವಶ್ಯಕವಾಗಿದೆ !