* ಸರಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿದ್ದ !
ಶ್ರೀನಗರ – ದಕ್ಷಿಣ ಕಾಶ್ಮೀರದಲ್ಲಿನ ಅನಂತನಾಗ ಜಿಲ್ಲಾಡಲಿತವು ‘ಹಿಜ್ಬ-ಉಲ್-ಮುಜಾಹಿದೀನ’ ಈ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ಗುಲಾಮ ನಬೀ ಖಾನ್ ಇವನ ಲಿವರ್ ಎಂಬ ಗ್ರಾಮದಲ್ಲಿನ ಮನೆಯ ಮೇಲೆ ಬುಲ್ಡೋಝರ್ ನಡೆಸಿತು. ಖಾನ್ ಇವನು ಸರಕಾರಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿದ್ದನು. ಖಾನ್ ಈ ಮೇಲಿನ ಸಂಘಟನೆಯ ಮುಖಂಡನಾಗಿದ್ದು ಅವನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಂದ ಭಯೋತ್ಪಾದಕ ಚಟುವಟಿಕೆಯನ್ನು ನಿಯಂತ್ರಿಸುತ್ತಾನೆ. ಅವನ ವಿರುದ್ಧ ಭಯೋತ್ಪಾದಕವಿರೋಧಿ ಕಾನೂನಿನಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ. ಅವನು ೯೦ ನೇ ದಶಕದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪಲಾಯನ ಗೈದಿದ್ದನು. ಅಂದಿನಿಂದ ಅವನು ಅಲ್ಲಿಂದಲೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾನೆ. ೨೦೧೪ ರಲ್ಲಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಸ್ಥಳೀಯ ಪಂಚಾಯತ ಖಾನ್ ಇವನ ಮನೆಯ ಮೇಲೆ ಕಾರ್ಯಾಚರಣೆ ಮಾಡಲು ವಿನಂತಿಸಿತ್ತು. ಅದಕ್ಕನುಸಾರ ಜಿಲ್ಲಾಡಳಿತವು ಹಾಗೆ ಮಾಡಿತು.
#LIVE | Bulldozer runs over Hizbul terrorist’s house in Pahalgam in mega crackdown in J&K.
Tune in to watch here – https://t.co/HbKDYgaNDs pic.twitter.com/5R1ksRld2W— Republic (@republic) December 31, 2022
* ಇನ್ನೊಬ್ಬ ಭಯೋತ್ಪಾದಕನ ಮನೆಯೂ ನೆಲಸಮ !
ಕೆಲವು ವಾರಗಳ ಹಿಂದೆ ಜಮ್ಮೂ-ಕಾಶ್ಮೀರದ ಆಡಳಿತವು ಪುಲವಾಮಾ ಜಿಲ್ಲೆಯಲ್ಲಿ ‘ಜೈಶ್-ಎ-ಮಹಮ್ಮದ’ದ ಮುಖಂಡ ಆಶಿಕ್ ನಿಗ್ರೋ ಇವನ ಮನೆಯನ್ನೂ ಹೀಗೆಯ ಧ್ವಂಸ ಮಾಡಿತ್ತು. ಅವನು ಕೂಡ ಸರಕಾರಿ ಭೂಮಿಯಲ್ಲಿ ಅತಿಕ್ರಮಣ ಮಾಡಿದ್ದನು. ಅವನು ೨೦೧೮-೧೯ ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪಲಾಯನ ಗೈದಿದ್ದನು ಹಾಗೂ ಅಲ್ಲಿಂದ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿದ್ದನು. ನಿಗ್ರೋನ ಪುಲವಾಮಾದ ಆಕ್ರಮಣದಲ್ಲಿ ಕೈವಾಡವಿದೆ. ಈ ಆಕ್ರಮಣದಲ್ಲಿ ಭಾರತದ ೪೦ ಸೈನಿಕರು ವೀರಮರಣವನ್ನಪ್ಪಿದ್ದರು.
ಸರಕಾರಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡುವವರೆಗೆ ಆಡಳಿತದವರು ಮಲಗಿದ್ದರೇ ? ಇದರ ಹೊಣೆಗಾರರ ಮೇಲೆಯೂ ಕ್ರಮ ತೆಗೆದುಕೊಳ್ಳಿ !- ಸಂಪಾದಕರು |