ಭಾಗ್ಯನಗರ (ತೆಲಂಗಾಣ) – ಭಗವಾನ ಅಯ್ಯಪ್ಪ ಸ್ವಾಮಿಯನ್ನು ನಿಂದಿಸಿದ `ಭಾರತ ನಾಸ್ತಿಕ ಸಂಘ’ದ ಅಧ್ಯಕ್ಷ ಬೈರಿ ನರೇಶ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಾ ಅಯ್ಯಪ್ಪ ಸ್ವಾಮಿಯ ಭಕ್ತರು ತೆಲಂಗಾಣ ರಾಜ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆ ನಡೆಸಿದರು. ಬೈರಿ ನರೇಶ ಇವರು ಎರಡು ದಿನಗಳ ಹಿಂದೆ ಕೊಂಡಂಗಲ್ ದಲ್ಲಿ ಆಯೋಜಿಸಿದ್ದ ಒಂದು ಸಾರ್ವಜನಿಕ ಸಮಾರಂಭದಲ್ಲಿ ಭಗವಾನ್ ಅಯ್ಯಪ್ಪ ಸ್ವಾಮಿಯ ವಿರುದ್ಧ ಅವಾಚ್ಯ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದರು. ಅವರು ನಿಖರವಾಗಿ ಯಾವ ಹೇಳಿಕೆ ನೀಡಿದ್ದರು ಎಂಬುದು ತಿಳಿದು ಬಂದಿಲ್ಲ. ಭಾಗ್ಯನಗರದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು ಬೈರಿ ನರೇಶ್ ಇವರನ್ನು ಥಳಿಸಿದರು. ಆ ಸಮಯದಲ್ಲಿ ಪೊಲೀಸರು ಅವರನ್ನು ಬಿಡಿಸಿದರು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.
೧. ಬೈರಿ ನರೇಶ್ ಇವರು ನೀಡಿರುವ ಅಪಮಾನಕರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಯಿತು ಮತ್ತು ಭಗವಾನ್ ಅಯ್ಯಪ್ಪ ಸ್ವಾಮಿ ಭಕ್ತರಿಂದ ಅವರನ್ನು ಬಲವಾಗಿ ಟೀಕಿಸಿದರು. `ಪುಕ್ಕಟ್ಟೆ ಜನಪ್ರಿಯವಾಗಲು ಹಿಂದೂಗಳ ದೇವತೆಗಳ ವಿಡಂಬನೆ ಮಾಡುವುದು ಪ್ರಸ್ತುತ ಪ್ರಚಲಿತವಾಗಿದೆ. ಭಗವಾನ್ ಅಯ್ಯಪ್ಪ ಸ್ವಾಮಿಯ ವಿರುದ್ಧ ಅಪಮಾನಕರ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿರುವುದರ ಬಗ್ಗೆ ಬೈರಿ ನರೇಶ್ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’, ಎಂದು ದೂರು ನೀಡುವವರಲ್ಲಿ ಒಬ್ಬರಾಗಿರುವ ಕರಾಟೆ ಕಲ್ಯಾಣಿ ಎಂಬ ಮಹಿಳೆ ಆಗ್ರಹಿಸಿದ್ದಾರೆ.
೨. ಬೈರಿ ನರೇಶ್ ದಲಿತ ನಾಯಕರಾಗಿದ್ದು ಅವರು ಈ ಮೊದಲು ಕೂಡ ಹಿಂದೂಗಳ ದೇವತೆ ಮತ್ತು ರೂಢಿ-ಪದ್ಧತಿ ಇವುಗಳ ಬಗ್ಗೆ ಟೀಕಿಸಿದ್ದರು.
೩. ಭಾರತೀಯ ಜನತಾ ಪಕ್ಷದ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಇವರು ಈ ಪ್ರಕರಣದಲ್ಲಿ ಕಠಿಣಕ್ರಮ ಕೈಗೊಳ್ಳುವಂತೆ `ಭಾರತೀಯ ರಾಷ್ಟ್ರ ಸಮಿತಿ’ಯ ಸರಕಾರದ ಬಳಿ ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಇತ್ತೀಚಿಗೆ ಯಾರೋ ಬಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಟೀಕಿಸುತ್ತಾರೆ. ಇದು ನಿಲ್ಲಿಸಬೇಕಾದರೆ ಧರ್ಮನಿಂದನೆ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವುದು ಅವಶ್ಯಕವಾಗಿದೆ ! |