ಕೊರೋನಾದ ನೈಜ ಮಾಹಿತಿ ನೀಡಿ !

ಅಂತರರಾಷ್ಟ್ರೀಯ ಆರೋಗ್ಯ ಸಂಘಟನೆಯಿಂದ ಚೀನಾಗೆ ಛೀಮಾರಿ

ಜಿನೇವಾ (ಸ್ವೀಸ್ಜರ್ಲ್ಯಾಂಡ್) – ಚೀನಾದಲ್ಲಿನ ಕೊರೋನಾದ ಪರಿಸ್ಥಿತಿ ಕೈಮೀರಿ ಹೋಗಿರುವುದು ನೋಡುತ್ತಾ ಅದರ ಬಗ್ಗೆ ವಾಸ್ತವಿಕ ಮಾಹಿತಿ ನೀಡುವಂತೆ ಅಂತರರಾಷ್ಟ್ರೀಯ ಆರೋಗ್ಯ ಸಂಘಟನೆಯಿಂದ ಚೀನಾಗೆ ಛೀಮಾರಿ ಹಾಕಿದೆ. ಕೊರೊನದಿಂದ ಚೀನಾದಲ್ಲಿ ಪ್ರಸ್ತುತ ಆಸ್ಪತ್ರೆಗಳಲ್ಲಿ ಜಾಗ ಉಳಿದಿಲ್ಲ ಹಾಗೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಸಾಲುಗಟ್ಟಿ ಜನರು ನಿಂತಿದ್ದಾರೆ. ಆದ್ದರಿಂದ ಸ್ವಂತದ ಪ್ರತಿಮೆ ಹಾಳಾಗಬಾರದೆಂದು, ಚೀನಾ ಕೊರೋನಾದ ಅಂಕಿ ಅಂಶಗಳು ಪ್ರತಿದಿನ ನೀಡದೆ ತಿಂಗಳಿಗೆ ಒಮ್ಮೆ ನೀಡುವ ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಘಟನೆಯ ಜೊತೆಗೆ ಚೀನಾದ ಅಧಿಕಾರಿಗಳ ನಡೆದಿರುವ ಸಭೆಯಲ್ಲಿ ಮೇಲಿನ ಆದೇಶ ನೀಡಿದ್ದಾರೆ. ಜೊತೆಗೆ ವಿಶ್ವ ಆರೋಗ್ಯ ಸಂಘಟನೆಯು ಕೋರೋನಾದಿಂದ ಕಾಪಾಡಲು ಕೊರೋನ ತಡೆಗಟ್ಟುವಿಕೆ ಲಸಿಕೆ ಮತ್ತು ಬೂಸ್ಟರ್ ಡೋಸ್ ನ ಮಹತ್ವ ಕೂಡ ಮತ್ತೊಮ್ಮೆ ಹೇಳಿದೆ.

ಈ ಸಭೆಯಲ್ಲಿ ವಿಶ್ವ ಆರೋಗ್ಯ ಸಂಘಟನೆಯಿಂದ ಚೀನಾದ ಆಸ್ಪತ್ರೆಯಲ್ಲಿ ಸೇರಿಸಲಾಗಿರುವ ಕೊರೊನಾದ ರೋಗಿಗಳ ಸಂಖ್ಯೆ, ಐ.ಸಿ.ಯು ವಿಭಾಗದಲ್ಲಿ ಇರುವ ರೋಗಿಗಳ ಸಂಖ್ಯೆ, ಕೋರೋನಾದಿಂದ ಸಾವನ್ನಪ್ಪಿರುವವರ ಸಂಖ್ಯೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಕೇಳಿದೆ. ಇದಲ್ಲದೆ ಶಾರೀರಿಕ ದೃಷ್ಟಿಯಿಂದ ಅಶಕ್ತವಾಗಿರುವ ಮತ್ತು ವಯೋವೃದ್ಧರ ಲಸಿಕರಣದ ಅಂಕಿ ಅಂಶಗಳನ್ನು ನಿಯಮಿತವಾಗಿ ಘೋಷಿಸುವಂತೆ ಚೀನಾಗೆ ವಿಶ್ವ ಆರೋಗ್ಯ ಆಯೋಗ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ಪ್ರತಿಬಂಧ ಇಲಾಖೆಯು ಆಡಳಿತಕ್ಕೆ ಆದೇಶ ನೀಡಿದೆ.