೨೦೨೦ ರಿಂದ ೧೧೩ ಸಲ ರಾಹುಲ ಗಾಂಧಿಯಿಂದ ಸುರಕ್ಷಾ ನಿಯಮಗಳ ಉಲ್ಲಂಘನೆ !

ಕಾಂಗ್ರೆಸ್ ನ ಆರೋಪಕ್ಕೆ ಸಿ.ಆರ್.ಪಿ.ಎಫ್.ನಿಂದ ಉತ್ತರ !

ನವ ದೆಹಲಿ – ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿಯವರು ಹಲವಾರುಬಾರಿ ನಿಗದಿತ ಮಾರ್ಗಸೂಚಿಯ ಉಲ್ಲಂಘನೆ ಮಾಡಿದ್ದಾರೆ. ರಾಹುಲ ಗಾಂಧಿಯವರು ೨೦೨೦ ರಿಂದ ೧೧೩ ಸಲ ಸುರಕ್ಷಾ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಹೀಗೆ `ಭಾರತ ಜೋಡೋ’ ಯಾತ್ರೆಯ ಸಮಯದಲ್ಲಿ ಕೂಡ ನಡೆದಿದೆ, ಕೇಂದ್ರೀಯ ಮೀಸಲು ಪಡೆ ಪೊಲೀಸದಳದಿಂದ (ಸಿ.ಆರ್.ಪಿ.ಎಫ್.ನಿಂದ) ಉತ್ತರ ನೀಡಿದೆ. `ಭಾರತ ಜೋಡೋ’ ಯಾತ್ರೆಯಲ್ಲಿನ ಸುರಕ್ಷತೆ ಭಂಗ ಮಾಡುವುದು ಬೇಜವಾಬ್ದಾರಿತನದಿಂದ ರಾಹುಲ ಗಾಂಧಿ ಇವರ ಜೀವಕ್ಕೆ ಅಪಾಯ ನಿರ್ಮಾಣವಾಗಬಹುದು. ಆದ್ದರಿಂದ ಯೋಗ್ಯ ಸುರಕ್ಷಾ ವ್ಯವಸ್ಥೆ ಪೂರೈಸ ಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಮಹಾ ಸಚಿವರಾದ ಕೆ.ಸಿ ವೇಣುಗೋಪಾಲ್ ಇವರು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರಿಗೆ ಪತ್ರ ಕಳುಹಿಸಿದ್ದಾರೆ. ಇದರ ಬಗ್ಗೆ ಸಿ.ಆರ್.ಪಿ.ಎಫ್.ನಿಂದ ಮೇಲಿನಂತೆ ಉತ್ತರ ನೀಡಿದೆ.

ಸಂಪಾದಕೀಯ ನಿಲುವು

ಈ ರೀತಿ ನಿಯಮ ಉಲ್ಲಂಘಿಸಿ ಅನುಚಿತ ಘಟನೆ ಘಟಿಸಿದರೆ, ಆಗ ಅದಕ್ಕೆ ಯಾರು ಹೊಣೆ, ಇದನ್ನು ಕಾಂಗ್ರೆಸ್ಸಿನವರು ಸ್ಪಷ್ಟಪಡಿಸಬೇಕು !