ಅಮೇರಿಕಾದಲ್ಲಿ ‘ಬಾಂಬ’ ಚಂಡಮಾರುತದಿಂದಾಗಿ ಮೃತರ ಸಂಖ್ಯೆಯು ೬೦ಕ್ಕೂ ಮೇಲೆ ಏರಿದೆ

ನ್ಯೂಯಾರ್ಕ (ಅಮೇರಿಕಾ) – ಅಮೇರಿಕಾದಲ್ಲಿ ‘ಬಾಂಬ್’ ಚಂಡಮಾರುತದಿಂದಾಗಿ ಮೃತರಾದವರ ಸಂಖ್ಯೆಯು ೬೦ಕ್ಕಿಂತಲೂ ಹೆಚ್ಚಾಗಿದೆ. ನ್ಯೂಯಾರ್ಕ ನಗರದಲ್ಲಿ ಚಂಡಮಾರುತದಿಂದಾಗಿ ಅತ್ಯಂತ ಹೆಚ್ಚಿನ ಅಂದರೆ ೨೮ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು, ಹಿಮದಲ್ಲಿ ಹುದುಗಿರುವ ವಾಹನಗಳಲ್ಲಿ ಅನೇಕ ಜನರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ವಿಪರೀತ ಹವಾಮಾನದಿಂದಾಗಿ ಕಳೆದ ೨೪ ಗಂಟೆಗಳಲ್ಲಿ ೩ ಸಾವಿರಕ್ಕಿಂತಲೂ ಹೆಚ್ಚಿನ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು, ೩ ಸಾವಿರದ ೮೦೯ ವಿಮಾನಗಳು ತಡವಾಗಿ ಹಾರಾಟ ಮಾಡಿದವು.

ಅಮೇರಿಕಾದಲ್ಲಿ ಚಂಡಮಾರುತದಿಂದಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಹಿಮವೃಷ್ಟಿಯಿಂದಾಗಿ ದುರ್ಘಟನೆಗಳ ಸಂಖ್ಯೆಯು ಹೆಚ್ಚಾಗಿದೆ. ಡಿಸೆಂಬರ್‌ ೨೬ರಂದು ನಾರಾಯಣ ಮುದ್ದನಾ (ವಯಸ್ಸು ೪೯ ವರ್ಷ), ಗೋಕುಲ ಮೆಡಿಸೆಠಿ (ವಯಸ್ಸು ೪೭ ವರ್ಷ) ಮತ್ತು ಹರಿಥಾ ಮುದ್ದನ್ನಾ ಎಂಬ ಮೂವರು ಭಾರತೀಯರು ಅಮೇರಿಕಾದಲ್ಲಿನ ಅರಿಝೋನಾದಲ್ಲಿ ಹೆಪ್ಪುಗಟ್ಟಿದ್ದ ಸರೋವರದ ಮೇಲೆ ಹೋಗುವಾಗ ಹಿಮದ ಮೇಲಿನ ಭಾಗವು ಒಡೆಯಿತು. ಇದರಿಂದಾಗಿ ಎಲ್ಲರೂ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದರು.