ಅಮೆರಿಕದಲ್ಲಿ ‘ಬಾಂಬ್‌ ‘ ಚಂಡಮಾರುತದಿಂದಾಗಿ 60 ಕ್ಕೂ ಹೆಚ್ಚು ಜನರ ಸಾವು

ನ್ಯೂಯಾರ್ಕ್ (ಅಮೆರಿಕಾ)- ಅಮೆರಿಕದಲ್ಲಿ ‘ ಬಾಂಬ್‌ ‘ ಚಂಡಮಾರುತದಿಂದಾಗಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಚಂಡಮಾರುತದಿಂದಾಗಿ ಎಲ್ಲಕ್ಕಿಂತ ಹೆಚ್ಚು ಅಂದರೆ 28 ​​ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಮದಲ್ಲಿ ಹೂತುಹೋಗಿದ್ದ ವಾಹನಗಳಲ್ಲಿ ಹಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

೧. ಪ್ರತಿಕೂಲ ಹವಾಮಾನದಿಂದಾಗಿ ಕಳೆದ 24 ಗಂಟೆಗಳಲ್ಲಿ 3000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದರೆ 3809 ವಿಮಾನಗಳು ವಿಳಂಬವಾಗಿ ಚಲಿಸುತ್ತಿವೆ.

೨. ಡಿಸೆಂಬರ್ 26 ರಂದು, ನಾರಾಯಣ ಮುದ್ದಣ್ಣ (49 ವರ್ಷ), ಗೋಕುಲ್ ಮೆಡಿಸೆಥಿ (47 ವರ್ಷ) ಮತ್ತು ಹರಿತಾ ಮುದ್ದಣ್ಣ, 3 ಭಾರತೀಯರು ಅಮೆರಿಕದ ಅರಿಜೋನಾದಲ್ಲಿ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಂಜುಗಡ್ಡೆ ಬಿರುಕು ಬಿಟ್ಟಿತು. ಇದರಿಂದ ಎಲ್ಲರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.