ಝಾರಖಂಡದ ಪೂರ್ವ ಸಿಂಹಭೂಮಿ ಜಿಲ್ಲೆಯಲ್ಲಿ ಇಮ್ರಾನ ಅಲಿಯ ಮನೆಯಿಂದ 500 ಕಿಲೋ ಗೋಮಾಂಸ ಜಪ್ತ

ರಾಂಚಿ- ಝಾರಖಂಡದ ಪೂರ್ವ ಸಿಂಹಭೂಮ ಜಿಲ್ಲೆಯಲ್ಲಿ ಗೋಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಜಮಶೇಡಪೂರದಿಂದ 30 ಕಿ.ಮೀ. ಅಂತರದಲ್ಲಿರುವ ಹಲ್ದಿಪೋಖರ ಗ್ರಾಮದಲ್ಲಿ ಗೋಹತ್ಯೆಯಾಗುತ್ತಿರುವ ಗುಪ್ತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಇಮ್ರಾನ ಅಲಿ ಮತ್ತು ಅವನ ಸಹಭಾಗಿ ಶಮೀಮ ಇವರಿಬ್ಬರನ್ನು ಬಂಧಿಸಲಾಯಿತು. ಇಮ್ರಾನ ಅಲಿಯವರ ಮನೆಯಿಂದ 500 ಕೆ.ಜಿ. ಗೋಮಾಂಸ ಜಪ್ತಿ ಮಾಡಲಾಯಿತು. ಈ ಮಾಂಸವನ್ನು ಖರೀದಿಸುತ್ತಿದ್ದ 3 ಗ್ರಾಹಕರನ್ನು ಕೂಡ ಪೊಲೀಸರು ಬಂಧಿಸಿದರು. ಈ ಪೊಲೀಸರ ಕಾರ್ಯಾಚರಣೆಯಲ್ಲಿ 17 ಹಸುಗಳನ್ನು ಬಂಧನದಿಂದ ಮುಕ್ತಗೊಳಿಸಲಾಯಿತು.

ಪೊಲೀಸರು`ಝಾರಖಂಡ ಗೋವಂಶ ಹತ್ಯೆ ಪ್ರತಿಬಂಧ ಕಾಯಿದೆ, 2005’ ರ ಅಡಿಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ, ಅವರಿಗೆ 14 ದಿನಗಳ ನ್ಯಾಯಾಲಯ ಬಂಧನದ ವಶಕ್ಕೆ ಒಪ್ಪಿಸಲಾಯಿತು. ಈ ಪೊಲೀಸ ಕಾರ್ಯಾಚರಣೆಯಲ್ಲಿ 17 ಹಸುಗಳನ್ನು ಬಿಡಿಸಲಾಯಿತು.