-
ಕರ್ನಾಟಕದಲ್ಲಿನ ವಿಧಾನಸೌಧದ ಮುಂದೆ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ
-
‘ಹಲಾಲ್ ಪ್ರಮಾಣಪತ್ರ ಸಹ ರದ್ದುಪಡಿಸಬೇಕೆಂಬ ಆಗ್ರಹ
ಬೆಳಗಾವಿ (ಕರ್ನಾಟಕ) – ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್‌ನ ಘಟನೆಗಳ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ಇರುವಂತೆ ಲವ್ ಜಿಹಾದ್ ವಿರೋಧಿ ವಿಶೇಷ ಪೊಲೀಸದಳವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಇಲ್ಲಿಯ ವಿಧಾನಸೌಧದ ಎದುರು ಆಯೋಜಿಸಲಾದ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಬೇಡಿಕೆ ಮಾಡಲಾಯಿತು. ಇದರ ಜೊತೆಗೆ ಹಲಾಲ್‌ಲ ಪ್ರಮಾಣಪತ್ರ ರದ್ದುಪಡಿಸಲು ಸಹ ಈ ಸಮಯದಲ್ಲಿ ಒತ್ತಾಯಿಸಲಾಯಿತು. ಆಂದೋಲನದ ನಂತರ ಕರ್ನಾಟಕದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಇವರಿಗೆ ಮನವಿ ನೀಡಲಾಯಿತು.
🚩 Hindu Rashtra Jagruti Andolan held in Belagavi, by Hindu Janajagruti Samiti and Pro Hindu organisations demanding Ban on ‘Halal Certificate’ and set up of ‘Anti Love Jihad Police Force’
Memorandum submitted to @JnanendraAraga Hon Home Minister Karnataka by @Mohan_HJS & others pic.twitter.com/no2GGM5sRx
— HJS Karnataka (@HJSKarnataka) December 24, 2022
೫ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ೨೧ ಸಾವಿರ ಯುವತಿಯರು ನಾಪತ್ತೆ ! – ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನ ಜಾಗೃತಿ ಸಮಿತಿ
ಈ ಸಮಯದಲ್ಲಿ ಶ್ರೀ ಮೋಹನ ಗೌಡ ಇವರು ಮುಂದಿನಂತೆ ಹೇಳಿದರು, ದೆಹಲಿಯ ಜಿಹಾದಿ ಉಗ್ರ ಆಪತಾಬ್ ನು ಶ್ರದ್ಧಾಳನ್ನು ಹತ್ಯೆ ಮಾಡಿ ಆಕೆಯನ್ನು ೩೫ ತುಂಡುಗಳಾಗಿ ಕತ್ತರಿಸಿದನು. ಇದೇ ರೀತಿಯ ಘಟನೆಗಳು ರಾಜ್ಯದಲ್ಲಾಗುತ್ತಿವೆ. ಕರ್ನಾಟಕದಲ್ಲಿ ಮತಾಂತರ ವಿರೋಧಿ ಕಾನೂನು ಇದ್ದರೂ ಕೂಡ ಅದರಿಂದ ವಿಶೇಷ ಉಪಯೋಗವಾಗುತ್ತಿಲ್ಲ. ಲವ್ ಜಿಹಾದ್‌ನ ಮೂಲಕ ಮತಾಂತರ ಹೆಚ್ಚುತ್ತಿದೆ. ೨೦೧೪ ರಿಂದ ೨೦೧೯ ಈ ಕಾಲವಧಿಯಲ್ಲಿ ಕರ್ನಾಟಕ ರಾಜ್ಯ ಒಂದರಲ್ಲಿಯೇ ೨೧ ಸಾವಿರ ಯುವತಿಯರು ನಾಪತ್ತೆಯಾಗಿದ್ದಾರೆ. ಅನೇಕ ಮೌಲ್ವಿ ಮತ್ತು ಮದರಸಾಗಳು ಮತಾಂತರದ ದುಷ್ಕೃತ್ಯದಲ್ಲಿ ತೊಡಗಿವೆ. ಇದನ್ನು ತಡೆಗಟ್ಟಲು ಉತ್ತರಪ್ರದೇಶದ ರೀತಿಯಲ್ಲಿ ಲವ್ ಜಿಹಾದ್ ವಿರೋಧಿ ವಿಶೇಷ ಪೊಲೀಸದಳವನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಉತ್ಪಾದನೆಗಳ ಮೇಲೆ ಕಾನೂನು ಬಾಹಿರವಾಗಿ ಹಲಾಲ್ ಲೋಗೋ ಇರುವ ಪ್ರಮಾಣಪತ್ರ ಮುದ್ರಿಸಿ ಅದರ ಮೂಲಕ ಸಾವಿರಾರು ಕೋಟಿ ರೂಪಾಯಿ ಗಳಿಸಿ ಮತಾಂಧ ಸಂಘಟನೆಗಳು ದೇಶ ವಿರೋಧಿ ಚಟುವಟಿಕೆಗಾಗಿ ಉಪಯೋಗಿಸುತ್ತಿವೆ. ಹಾಗಾಗಿ ಈ ವಿಷಯದ ಬಗ್ಗೆ ಅನ್ವೇಷಣೆ ನಡೆಸಿ ಹಲಾಲ್ ಪ್ರಮಾಣಪತ್ರ ರದ್ದುಪಡಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಲಾಯಿತು. ಈ ಸಮಯದಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಅಂದೋಲನದಲ್ಲಿ ಶ್ರೀರಾಮ ಸೇನೆ ಜಿಲ್ಲಾ ಕಾರ್ಯದರ್ಶಿ ಶ್ರೀ ವಿನಯ ಅಂಗರೋಳಿ, ಶ್ರೀರಾಮ ಸೇನೆ ಉತ್ತರ ಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀ ರವಿ ಕೋಕಿತಕರ, ಭಾಜಪ ಗ್ರಾಮೀಣ ಸಚಿವ ಶ್ರೀ ಪಂಕಜ ಗಾಡಿ, ಹಿಂದೂ ರಾಷ್ಟ್ರ ಸೇನೆಯ ಶ್ರೀ ಬಾಳು ಕುರುಬರ, ಭಾಜಪದ ಸವಿತಾ ಹೆಬ್ಬಾರ್, ಹಮಾರಾ ದೇಶ ಸಂಘಟನೆಯ ಮೀನಾ ಕಾಕತಕರ್, ಏಂಜಲ್ ಫೌಂಡೇಶನಿನ ಅನುಷ್ಕಾ ಪವಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಕಾಂಕ್ಷ ಮಾಗಣಾವರ, ಆರ್ಟ್ ಆಫ್ ಲಿವಿಂಗ್ ನ ಆಕಾಂಕ್ಷಾ ಕುಲಕರ್ಣಿ, ಹಿಂದುತ್ವನಿಷ್ಠ ಶ್ರೀ ಮಾರುತಿ ಸುತಾರ್, ಕರ್ತವ್ಯ ಮಹಿಳಾ ಮಂಡಳದ ಅಕ್ಕಾತಾಯಿ ಸುತಾರ್ ಮತ್ತು ಸೌಮಿಲನ್ ಪವಾರ ಇವರ ಜೊತೆಗೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಮಹಿಳಾ ಮಂಡಳದ ಕಾರ್ಯಕರ್ತರು, ಹಿಂದುತ್ವ ನಿಷ್ಠರು, ಧರ್ಮಪ್ರೇಮಿಗಳು ಹೀಗೆ ೧೫೫ ಕಿಂತಲೂ ಹೆಚ್ಚಿನ ಜನರು ಆಂದೋಲನದಲ್ಲಿ ಭಾಗವಹಿಸಿದರು.
ಲವ್ ಜಿಹಾದ್ ನ ಸಂದರ್ಭದಲ್ಲಿ ಅಪೇಕ್ಷಿತ ಕಾರ್ಯಾಚರಣೆಯನ್ನು ಜವಾಬ್ದಾರಿ ವಹಿಸಿ ಮಾಡುವೆನು ! – ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರಮನವಿ ಸ್ವೀಕರಿಸಿದ ನಂತರ ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ ಇವರು, ನಿಮ್ಮ ಮನವಿ ಸ್ವೀಕರಿಸಿ ಲವ್ ಜಿಹಾದ್ ವಿಷಯವಾಗಿ ಯಾವ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆಯೋ, ಅದನ್ನು ನಾನು ಸಂಪೂರ್ಣ ಜವಾಬ್ದಾರಿ ವಹಿಸಿ ಮಾಡುವೆನು. ಅದರ ಜೊತೆಗೆ ಹಲಾಲ್ ಪ್ರಮಾಣದ ಸಂದರ್ಭದಲ್ಲಿ ಸಮೀಕ್ಷೆ ನಡೆಸಿ ಅದರ ಬಗ್ಗೆ ಕೂಡ ಅವಶ್ಯಕವಾದ ಕೃತಿ ಮಾಡುವೆನು ಎಂದು ಹೇಳಿದರು. |