ಇಸ್ಲಾಮಾಬಾದ (ಪಾಕಿಸ್ತಾನ)ನಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನ ಸಾವು

ಇಸ್ಲಾಮಾಬಾದ (ಪಾಕಿಸ್ತಾನ) – ಇಲ್ಲಿನ ‘ಆಯ ೧೦/೪ ಸೆಕ್ಟರ’ನಲ್ಲಿ ಪೊಲೀಸರು ತಪಾಸಣೆಗಾಗಿ ನಿಲ್ಲಿಸಲಾದ ಟ್ಯಾಕ್ಸಿಯಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನು ಮೃತಪಟ್ಟಿದ್ದು, ೪ ಪೊಲೀಸರೊಂದಿಗೆ ೬ ಜನರು ಗಾಯಗೊಂಡಿದ್ದಾರೆ. ಈ ಟ್ಯಾಕ್ಸಿಯಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಕುಳಿತಿದ್ದರು. ಪೊಲೀಸರಿಗೆ ಇವರಿಬ್ಬರ ಮೇಲೆ ಸಂಶಯ ಬಂದಿದ್ದರಿಂದ ಅವರು ಟ್ಯಾಕ್ಸಿಯನ್ನು ನಿಲ್ಲಿಸಿದ್ದರು. ಅನಂತರ ಈ ಸ್ತ್ರೀ ಪುರುಷ ಇಬ್ಬರೂ ಟ್ಯಾಕ್ಸಿಯಿಂದ ಹೊರಬಂದರು. ಸ್ವಲ್ಪ ಸಮಯದಲ್ಲಿ ಪುನಃ ಟ್ಯಾಕ್ಸಿಯಲ್ಲಿ ಕುಳಿತರು ಮತ್ತು ಅವನು ತನ್ನ ಶರೀರದ ಮೇಲೆ ಕಟ್ಟಲಾಗಿದ್ದ ಬಾಂಬನಿಂದ ಸ್ಫೋಟ ಮಾಡಿದ್ದಾನೆ.