ಹೆಚ್ಚುತ್ತಿರುವ ತಾಪಮಾನ, ಮಾನವನ ವಿಕಾಸದ ಹವ್ಯಾಸ ಮತ್ತು ಜೀವಸೃಷ್ಟಿ ಕಾಪಾಡುವುದರ ಅವಶ್ಯಕತೆ !

ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿರುವುದರ ಸಂಗ್ರಹಚಿತ್ರ

ಕಳೆದ ವರ್ಷ (೨೦೨೧ ರಲ್ಲಿ) ದೇಶದ ಕೆಲವೆಡೆ ಐತಿಹಾಸಿಕ ಅತಿವೃಷ್ಟಿ ಆಯಿತು. ಅನಿರೀಕ್ಷಿತವಾಗಿ ನೆರೆ ಬಂದಿತು. ಎಲ್ಲೆಡೆ ಅಪಾರ ಪ್ರಮಾಣದಲ್ಲಿ ಹಾನಿಯಾಯಿತು. ವಾಹನಗಳು ನೀರಿನಲ್ಲಿ ಆಟಿಕೆಗಳಂತೆ ತೇಲಿ ಹೋದವು. ಇಂತಹ ಮಳೆ ಬಂದರೆ ಸಾಕು ಯಾವಾಗಲೂ ವಿಷಯ ಪ್ಲಾಸ್ಟಿಕ್‌ಗೆ ಬಂದು ನಿಲ್ಲುತ್ತದೆ. ಪ್ಲಾಸ್ಟಿಕ್ ಇದಂತೂ ತೊಂದರೆದಾಯಕವೇ ಆಗಿದೆ; ಆದರೆ ಅದರ ಆಚೆಗೂ ಇನ್ನೂ ಏನೋ ಇದೆ, ಇದು ಜನರಿಗೆ ತಿಳಿಯಬೇಕೆಂದು ಈ ಲೇಖನ..

ನ್ಯಾಯವಾದಿ ಗಿರೀಶ ರಾವುತ್

೧. ಸಿಮೆಂಟ್‌ನಿಂದ ಒಂದು ವರ್ಷದಲ್ಲಿ ಸುಮಾರು ೪೦೦ ಕೋಟಿ ಟನ್‌ದಷ್ಟು ಕಾರ್ಬನ್ ಡೈಆಕ್ಸಾಯಿಡ್ ವಾಯುವಿನ ಉತ್ಸರ್ಜನೆಯಾಗುವುದು ಮತ್ತು ಅದರ ಪರಿಣಾಮದಿಂದ ಮೇಘಸ್ಫೋಟವಾಗಿ ಅಪಾರ ಮಳೆಯಾಗುವುದು

ಸಿಮೆಂಟ್ ಕಾಂಕ್ರೀಟಿನ ವಿನಾಶಕಾರಿ ಸ್ವರೂಪದ ಬಗ್ಗೆ ಜನರಿಗೆ ಮಾಹಿತಿ ಇರುವುದು ಆವಶ್ಯಕವಾಗಿದೆ. ೧೯೭೦ ರಿಂದ ಎಷ್ಟು ಕಾರ್ಬನ್ ಡೈಆಕ್ಸಾಯಿಡ್ ವಾಯುವಿನ ಉತ್ಸರ್ಜನೆಯು ಪ್ಲಾಸ್ಟಿಕ್‌ನ ನಿರ್ಮಾಣದಿಂದ ಆಯಿತೋ, ಅಷ್ಟು ಅಂದರೆ ೮೦೦ ಕೋಟಿ ಟನ್ ಉತ್ಸರ್ಜನೆಯು ಕೇವಲ ಕಳೆದ ೨ ವರ್ಷಗಳಲ್ಲಿ ಸಿಮೆಂಟ್ ಉತ್ಪಾದನೆಯಿಂದಾಗಿದೆ. ಕೃಷಿ, ಅರಣ್ಯ ಸಂಪತ್ತು, ನೆರೆ ನಿಯಂತ್ರಣ, ಪ್ರಾಣವಾಯು ಉತ್ಪನ್ನ, ನೀರಿನ ಶುದ್ಧೀಕರಣಗಳೊಂದಿಗೆ ಗುಡ್ಡ ಬೆಟ್ಟಗಳು, ನದಿಗಳು, ಝರಿಗಳು, ಭೂಜಲ, ಸರೋವರ, ನೀರಾವರಿ ಭೂಮಿ ಮತ್ತು ಸಮುದ್ರತೀರ ಇವುಗಳಿಗೆ ಎಂದಿಗೂ ಭರಿಸಲಾಗದಷ್ಟು ಅಪಾರ ಹಾನಿಯು ಸಿಮೆಂಟ್‌ನಿಂದ ಆಗಿದೆ.

ಸಿಮೆಂಟ್‌ಅನ್ನು ತಯಾರಿಸುವಾಗ ಅದರ ಅರ್ಧ ಭಾರದ ಕಾರ್ಬನ್ ಡೈಆಕ್ಸಾಯಿಡ್ ವಾಯು ವಾತಾವರಣದಲ್ಲಿ ಸೇರಿಕೊಳ್ಳುತ್ತದೆ. ಕಳೆದ ವರ್ಷದ ಕಾರ್ಬನ್ ಡೈಆಕ್ಸಾಯಿಡ್‌ನ ಒಟ್ಟು ೩ ಸಾವಿರದ ೮೦೦ ಕೋಟಿ ಟನ್ ಉತ್ಸರ್ಜನೆಯಲ್ಲಿ ಸುಮಾರು ೪೦೦ ಕೋಟಿ ಟನ್‌ನ ಪಾಲು ಸಿಮೆಂಟಿನದ್ದಾಗಿದೆ. ಈ ಕಾರ್ಬನ್ ಸೂರ್ಯನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಅದರಿಂದ ಪೃಥ್ವಿಯ ತಾಪಮಾನ ಹೆಚ್ಚಾಗುತ್ತಿದೆ. ಧ್ರುವಪ್ರದೇಶ, ಪರ್ವತಗಳ ಮೇಲಿನ ಹಿಮ ಮತ್ತು ಮಹಾಸಾಗರದ ಜಲದಿಂದ ಹೆಚ್ಚುತ್ತಿರುವ ಆವಿಯಿಂದ ಮೇಘಸ್ಫೋಟವಾಗಿ ಅಪಾರ ಮಳೆ ಬೀಳುತ್ತದೆ.

೨. ನಗರಗಳ ಪ್ರಚಂಡ ಸಿಮೆಂಟೀಕರಣ, ಎಂದರೆ ದೇಶ ಮತ್ತು ಪೃಥ್ವಿಯ ಮರುಭೂಮೀಕರಣ !

ಅಮೇರಿಕಾವು ೨೦ ನೇ ಶತಮಾನದಲ್ಲಿ ಪೃಥ್ವಿಯ ಮೇಲೆ ಸುರಿದಿರುವ ಸಿಮೆಂಟ್‌ನಷ್ಟು ಸಿಮೆಂಟನ್ನು ಚೀನಾ ೨೦೦೩ ರ ನಂತರ ಪ್ರತಿ ೩ ವರ್ಷಗಳಿಗೊಮ್ಮೆ ಸುರಿದಿದೆ. ಈಗ ಭಾರತದಲ್ಲಿ India under reconstruction (ಭಾರತದ ಪುನರ್ನಿರ್ಮಾಣ ನಡೆಯುತ್ತಿದೆ)’, ಎಂದು ಹೇಳುತ್ತಾ ಅದೇ ಅನರ್ಥವನ್ನು ಮಾಡಲಾಗುತ್ತಿದೆ. ನದಿ, ಸಮುದ್ರ, ಸರೋವರ, ಬಾವಿ ಇತ್ಯಾದಿಗಳಲ್ಲಿ ಸಿಮೆಂಟ್ ನುಗ್ಗಿದೆ. ಭೂಮಿಯಲ್ಲಿಯೂ ಸೇರಿಕೊಂಡಿದೆ. ಇದರಿಂದ ನೀರಿನಲ್ಲಿ ಮತ್ತು ಭೂಮಿಯಲ್ಲಿರುವ ಜೀವಜಂತುಗಳಿಗೆ ಉಸಿರುಗಟ್ಟಿದಂತಾಗಿದೆ. ಕೇರಳದ ದುರ್ಘಟನೆಯನ್ನು ನೋಡಿ. ನೀರಿನ ಹರಿವಿಗೆ ಅಡ್ಡಿಯುಂಟಾಯಿತು. ನೀರು ಒಸರುಗಳು ನಿಂತು ಹೋದವು. ಸಿಮೆಂಟಿನ ಅಚ್ಛಾದನೆಯೆಂದರೆ ‘ಅಭಿವೃದ್ಧಿ’ ಎಂಬ ಕಲ್ಪನೆಯು ರೂಢಿಯಾಗಿದೆ. ಮುಂಬಯಿ, ನ್ಯೂಯಾರ್ಕ್, ಟೋಕಿಯೋ, ಶಾಂಘಾಯನಂತಹ ನಗರಗಳ ಪ್ರಚಂಡ ಸಿಮೆಂಟೀಕರಣ, ಅಂದರೆ ದೇಶ ಮತ್ತು ಪೃಥ್ವಿಯ ಮರುಭೂಮೀಕರಣವಾಗಿದೆ. ಇದು ಒಂದೆಡೆ ವೇಗದಿಂದಾಗುತ್ತಿರುವಾಗ, ಇನ್ನೊಂದೆಡೆ ಬರಡುಭೂಮಿ, ನೀರು ಮತ್ತು ಮರುಭೂಮೀಕರಣದ ಸಮಸ್ಯೆಯನ್ನು ತಡೆಗಟ್ಟಲು ಜಗತ್ತಿನಾದ್ಯಂತ ಸಂಯುಕ್ತ ರಾಷ್ಟ್ರಗಳ ನಿಷ್ಪಲ ಪರಿಷತ್ತುಗಳಾಗುತ್ತಿವೆ.

೩. ಸಿಮೆಂಟಿನ ಹೆಚ್ಚೆಚ್ಚು ಉಪಯೋಗದಿಂದ ರಭಸದಿಂದ ಕುಸಿಯುತ್ತಿರುವ ಆಹಾರ ಉತ್ಪಾದನೆ !

ಸಿಮೆಂಟೀಕರಣಕ್ಕಾಗಿ ಬೆಟ್ಟಗಳನ್ನಂತೂ ಒಡೆಯಲಾಯಿತು; ಅದರೊಂದಿಗೆ ಜನರ ಸಿಮೆಂಟ್ ಆವರಣದ ಹವ್ಯಾಸದಿಂದ ಜೀವಸೃಷ್ಟಿಗೆ ಅಕ್ಷಮ್ಯ ಹಿಂಸೆಯಾಯಿತು. ೧೮೨೪ ರಲ್ಲಿ ಫ್ರಾನ್ಸ್‌ನಲ್ಲಿ ಮೊಟ್ಟ ಮೊದಲು ಸಿಮೆಂಟನ್ನು ಕಂಡು ಹಿಡಿಯಲಾಯಿತು. ಈಗ ಜಗತ್ತಿನಲ್ಲಿ ಪ್ರತಿವರ್ಷ ಕೋಟಿಗಟ್ಟಲೆ ಟನ್ ಸಿಮೆಂಟ್ ಸಾದಾ (ordinary) ರಾಸಾಯನಿಕ ಪ್ರಕ್ರಿಯೆಯಿಂದ ಸಹಜವಾಗಿ ತಯಾರಿಸಲಾಗುತ್ತದೆ. ಆದರೆ ಅದರಿಂದ ಮುಚ್ಚಲ್ಪಡುವ ಮಣ್ಣಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ಅರಣ್ಯದಲ್ಲಿ ಒಂದು ಬೊಗಸೆ ಮಣ್ಣಿನಲ್ಲಿ ಸುಮಾರು ೧ ಸಾವಿರ ಕೋಟಿ ಜೀವಾಣುಗಳಿರುತ್ತವೆ. ಜಗತ್ತಿನ ಎಲ್ಲ ವೈಜ್ಞಾನಿಕ ಪ್ರಯೋಗಾಲಯಗಳು ಎಲ್ಲ ಹಣವನ್ನು ಸುರಿದರೂ, ಒಂದು ಬೊಗಸೆ ಮಣ್ಣನ್ನು ತಯಾರಿಸಲು ಸಾಧ್ಯವಿಲ್ಲ. ಮಣ್ಣಿನಿಂದ ಆಹಾರಧಾನ್ಯಗಳು ಬೆಳೆಯುತ್ತವೆ. ಈಗ ಹೆಚ್ಚುತ್ತಿರುವ ಸಿಮೆಂಟ್‌ನ ಉಪಯೋಗದಿಂದ ಪ್ರತಿ ಎಕರೆಗೆ ಸಿಗುವ ಉತ್ಪನ್ನ ಕಡಿಮೆಯಾಗುತ್ತಿದೆ.

೪. ಭೂಮಿಯಲ್ಲಿನ ಜೀವಗಳು ಕ್ಷಣಾರ್ಧದಲ್ಲಿ ಸಿಮೆಂಟಿನ ಕೆಳಗೆ ಹುಗಿಯಲ್ಪಡುತ್ತವೆ

ಕಪ್ಪೆ ಮತ್ತು ಇತರ ಅನೇಕ ಜೀವಗಳು ಸುಪ್ತಾವಸ್ಥೆಯಲ್ಲಿ ತಮ್ಮ ಊರ್ಜೆಯನ್ನು ಅತಿ ಕಡಿಮೆ ಮಾಡಿ ಮತ್ತು ತಮ್ಮನ್ನು ನಿಷ್ಕ್ರಿಯಗೊಳಿಸಿ ಮಳೆಗಾಲದ ಅನುಕೂಲ ಸ್ಥಿತಿ ಬರುವ ವರೆಗೆ ಅಥವಾ ಬೇಸಿಗೆಯನ್ನು ತಪ್ಪಿಸಲು ಭೂಮಿಯಲ್ಲಿ ಹೂತುಕೊಂಡಿರುತ್ತವೆ. ಈ ಜೀವಗಳು ಕೋಟಿಗಟ್ಟಲೆ ವರ್ಷಗಳಲ್ಲಿ ಗಳಿಸಿದ ಈ ಅದ್ಭುತ ಕ್ಷಮತೆಯು ನಮ್ಮನ್ನು ಆಶ್ಚರ್ಯಪಡಿಸುತ್ತದೆ. ಇಂತಹ ಜೀವಗಳನ್ನು ಕ್ಷಣಮಾತ್ರದಲ್ಲಿ ಸಿಮೆಂಟಿನ ಕೆಳಗೆ ಹುಗಿಯುವಾಗ ಅಥವಾ ಅವುಗಳಿಗೆ ಜೀವಂತವಿರುವಾಗ ಗೋರಿಯನ್ನು ಕಟ್ಟುವಾಗ ಮನುಷ್ಯನಿಗೆ ನಾಚಿಕೆಯಾಗಬೇಕು. ನೆರೆಯಲ್ಲಿ ಹಾಳಾದ ಅಥವಾ ಹರಿದುಹೋದ ವಾಹನಗಳು ಮತ್ತು ಒಡೆದುಹೋಗಿರುವ ರಸ್ತೆಗಳ ಬಗ್ಗೆ ದುಃಖಿಸುವ ಆವಶ್ಯಕತೆಯಿಲ್ಲ. ನಿಜ ನೋಡಿದರೆ ಅವುಗಳ ನಿರ್ಮಾಣದ ವೇಳೆ ಹಾಳಾದ ಪೃಥ್ವಿಯ ಬಗ್ಗೆ ದುಃಖಿಸಬೇಕು.

೫. ಬಿಲ್ ಗೇಟ್ಸ್ ಇವರು ಜೀವಸೃಷ್ಟಿಯನ್ನು ಉಳಿಸಲು ದೊಡ್ಡ ಪ್ರಮಾಣದಲ್ಲಿ ನಿಧಿಯನ್ನು ಮೀಸಲಿಟ್ಟು ಅದರ ಮೂಲಕ ಪ್ರಯತ್ನಿಸುವುದು; ಆದರೆ ಅವರು ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ಕಡಿಮೆ ಮಾಡದಿರುವುದು

ಈಗ ಪ್ಯಾರೀಸ್ ಒಪ್ಪಂದದಲ್ಲಿ ಮಾನವರನ್ನು ಉಳಿಸಲು ಆವಶ್ಯಕವಿರುವ ತಾಪಮಾನದಲ್ಲಿನ ೨ ಸೆಲ್ಸಿಯಸ್ ಹೆಚ್ಚಳದ ಮಿತಿಯನ್ನು ಮುಂದಿನ ೨ ವರ್ಷಗಳಲ್ಲಿ ದಾಟಲಾಗುವುದು; ಆದ್ದರಿಂದ ಬಿಲ್ ಗೇಟ್ಸ್‌ನಂತವರು ಇಲ್ಲಿಯವರೆಗೆ ತಂತ್ರಜ್ಞಾನಕ್ಕೆ ವೇಗವನ್ನು ಕೊಟ್ಟು ಮಿತಿಮೀರಿ ಧ್ವಂಸಗೊಳಿಸುವ ಧನಾಢ್ಯನು ಈಗ ಸಂಕಟ ಪಡುತ್ತಿದ್ದಾನೆ. ಅವರು ೨೦೦ ಕೋಟಿ ಡಾಲರ್ಸ್‌ಗಳಷ್ಟು (೧೬೦೦೦ ಕೋಟಿ ರೂಪಾಯಿ) ಮೊತ್ತವನ್ನು ತಾಪಮಾನ ಹೆಚ್ಚಳದಿಂದ ಜೀವಸೃಷ್ಟಿಯನ್ನು ಉಳಿಸಲು ಮೀಸಲಿಟ್ಟಿದ್ದಾರೆ. ಇಷ್ಟು ದೊಡ್ಡ ಮೊತ್ತವು ಅವರ ಬಹುದೊಡ್ಡ ಉತ್ಪನ್ನದ ವಿಚಾರ ಮಾಡಿದರೆ ಹೆಚ್ಚೇನಿಲ್ಲ. ಜೀವಸೃಷ್ಟಿಯನ್ನು ಉಳಿಸುವ ಸಮಸ್ಯೆಯು ಹಣ ಮತ್ತು ತಂತ್ರಜ್ಞಾನದಿಂದ ನಿವಾರಣೆಯಾಗಬಹುದು ಎಂದು ಅವರಿಗೆ ಅನಿಸುತ್ತದೆ.

ಮೋಜಿನ ವಿಷಯವೆಂದರೆ, ಈ ಬಿಲ್ ಗೇಟ್ಸ್‌ರವರ ಎಲ್ಲಕ್ಕಿಂತ ಇಷ್ಟವಾಗುವ ಮನೆಯನ್ನು ಕ್ಯಾಲಿಫೋರ್ನಿಯಾದ ಬೆಟ್ಟದ ಮೇಲಿನ ಅರಣ್ಯದಲ್ಲಿ ಕಟ್ಟಿದ್ದು, ಅದು ಮಣ್ಣಿನ ಮನೆಯಾಗಿದೆ. ಮಣ್ಣಿನ ಮನೆಗಳು ಪೃಥ್ವಿಗೆ ಯಾವುದೇ ರೀತಿಯ ಹಾನಿಯನ್ನು ಮಾಡಿರಲಿಲ್ಲ ಮತ್ತು ಇದುವೇ ಮನುಕುಲವನ್ನು ಕಾಪಾಡುವ ಉಪಾಯವಾಗಿದೆ, ಎಂಬುದು ಗೇಟ್ಸ್ ಇವರ ಗಮನಕ್ಕೆ ಬರುವುದಿಲ್ಲ. ಅವರು ಆ ಮನೆಯನ್ನೂ ಆಧುನಿಕ ಸುಖಸೌಲಭ್ಯಗಳಿಂದ, ಅಂದರೆ ತಂತ್ರಜ್ಞಾನದಿಂದ ಸುಸಜ್ಜಿತಗೊಳಿಸಿದ್ದಾರೆ. ಇದೇ ತಂತ್ರಜ್ಞಾನ ಮತ್ತು ವಸ್ತುನಿರ್ಮಿತಿಯು ಮಣ್ಣು ಮತ್ತು ಪೃಥ್ವಿಯ ವಿರುದ್ಧವಿದೆ, ಎಂಬುದು ಅವರ ಗಮನಕ್ಕೆ ಬರುವುದಿಲ್ಲ.

ಬಿಲ್ ಗೇಟ್ಸ್ ಇವರು ಒಂದು ವೇಳೆ ಅವರ ವಾಹನಗಳನ್ನು, ಕಂಪನಿಗಳನ್ನು ಬಿಟ್ಟರೆ, ಅವರ ಮೈಕ್ರೋಸಾಫ್ಟ್ ಗಣಕಯಂತ್ರದ ಕೃತಕ ಜಗತ್ತನ್ನು ಬಿಟ್ಟರೆ, ಅವುಗಳನ್ನು ನಡೆಸಲು ಬೇಕಾಗುವ ವಿದ್ಯುತ್ತನ್ನು ಬಿಟ್ಟರೆ ಮಾತ್ರ ಜೀವಸೃಷ್ಟಿ ಉಳಿಯುವುದು ಮತ್ತು ಅವರನ್ನು ಪುರಸ್ಕರಿಸುವ ಜಗತ್ತು ಕೂಡ ಉಳಿಯುವುದು; ಆದರೆ ನಾವು (ಮನುಷ್ಯರು) ತಪ್ಪಿದ್ದೇವೆ, ಎಂಬುದನ್ನು ಸ್ವೀಕರಿಸುವ ಸಿದ್ಧತೆ ಅವರಲ್ಲಿಲ್ಲ.

೬. ಹಿಂದೂ ಧರ್ಮಗ್ರಂಥಗಳಲ್ಲಿ ಸಂಪತ್ತನ್ನು ಸಂಗ್ರಹಿಸುವುದು ವರ್ಜ್ಯವೆಂದು ಹೇಳಲಾಗಿದೆ

ಭಾರತೀಯರು ಸಂಪತ್ತನ್ನು ಸಂಗ್ರಹಿಸುವುದು ವರ್ಜ್ಯವೆಂದು ಒಪ್ಪಿಕೊಂಡಿದ್ದಾರೆ. ‘ಈಶೋಪನಿಷದ್’ ಈ ಮುಖ್ಯ ಮತ್ತು ಮೊದಲ ಉಪನಿಷತ್ತಿನ ಮೊದಲ ಮಂತ್ರ ಹೇಳುತ್ತದೆ, “ಈಶ್ವರನು ವಿಶ್ವದಲ್ಲಿನ ಪ್ರತಿಯೊಂದು ಅಣುರೇಣುವಿನಲ್ಲಿದ್ದಾನೆ. ಅವನಿಗಾಗಿ ತ್ಯಾಗ ಮಾಡಿ ಅಥವಾ ಅವನು ನಮಗಾಗಿ ಏನನ್ನು ತ್ಯಾಗ ಮಾಡಿದ್ದಾನೆಯೋ, ಕೇವಲ ಅದನ್ನೇ ಉಪಭೋಗಿಸಬೇಕು. ಇತರ ಯಾರದೇ ಅಥವಾ ಯಾವುದೇ ಹಣದ ಇಚ್ಛೆಯನ್ನು ಮಾಡಬಾರದು.” ಎರಡನೇಯ ಮಂತ್ರ ಹೇಳುತ್ತದೆ, “ಈ ಪೃಥ್ವಿಯ ಮೇಲೆ ಕರ್ಮಗಳನ್ನು ಮಾಡುತ್ತಾ ನೀನು ೧೦೦ ವರ್ಷ ಜೀವಿಸಲು ಇಚ್ಛಿಸು. ಮನುಷ್ಯತ್ವದ ಅರಿವಿರುವ ನಿನಗೆ ಇದಲ್ಲದೆ ಬೇರೆ ಮಾರ್ಗವಿಲ್ಲ. ಯಾವ ಕರ್ಮಗಳಿಂದ ನೀನು ಲಿಪ್ತನಾಗುವುದಿಲ್ಲವೋ, ಬಂಧಿಸಲ್ಪಡುವುದಿಲ್ಲವೋ ಅಂತಹ ಕರ್ಮ ಮಾಡು”.

೭. ಭಾರತೀಯರೂ ಭೌತಿಕ ಸುಖದ ಹಿಂದೆ ಧಾವಿಸುತ್ತಿರುವುದರಿಂದ ಅವರ ಜೀವನವು ಸಂಪೂರ್ಣ ವಿನಾಶದ ಕಡೆಗೆ ಹೋಗುತ್ತಿದೆ 

ಪ್ರಚಲಿತ ಅರ್ಥವ್ಯವಸ್ಥೆಯು ಈ ಶಾಶ್ವತ ಅಸ್ತಿತ್ವವನ್ನು ನೀಡುವ, ಈ ಸತ್ಪ್ರವೃತ್ತ ಅನಾಸಕ್ತಿಯ ವಿರುದ್ಧವಿದೆ. ನಮ್ಮ ಪೂರ್ವಜರು ಭೌತಿಕ ಸುಖವನ್ನು ತ್ಯಜಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟವು ಇದೇ ತತ್ತ್ವದ ಮೇಲಾಯಿತು. (ಮ. ಗಾಂಧಿ ಮತ್ತು ಸ್ವಾಮಿ ವಿವೇಕಾನಂದರು ಇದನ್ನೇ ಹೇಳಿದರು. ಇಂದು ಭಾರತೀಯರು ಭೌತಿಕ ಸುಖದ ಹಿಂದೆ ಧಾವಿಸುತ್ತಾ ಜೀವನ ಮತ್ತು ಸ್ವಾತಂತ್ರ್ಯವನ್ನೂ ಬಿಡುತ್ತಿದ್ದಾರೆ. ಈಗ ಇನ್ನೂ ಮುಂದಿನಂತೆ ವಿಚಾರ ಮಾಡುವ ವಿದ್ಯಾ ವಂತರು ಸಿದ್ಧರಾಗುತ್ತಿದ್ದಾರೆ, ಮನುಷ್ಯರಿಗೆ ಬೇಕಾಗುವಷ್ಟು ಪ್ರಾಣವಾಯುವನ್ನು ಕೊಡುವ ವೃಕ್ಷ, ಬೇಕಾಗುವಷ್ಟು ನೀರು ಮತ್ತು ಅನ್ನವನ್ನಿಟ್ಟುಕೊಂಡು ಉಳಿದ ವೃಕ್ಷ, ವಿವಿಧ ಜೀವಗಳು ಮತ್ತು ಪೃಥ್ವಿಯ ಮೇಲಿನ ಬೆಟ್ಟಗಳ ಅವಶ್ಯಕತೆಯೇನಿದೆ ? ಉದ್ಯೋಗ, ವಿದ್ಯುತ್ ನಿರ್ಮಾಣ, ಸಾರಿಗೆ, ಕಟ್ಟಡಕಾಮಗಾರಿ , ರಾಸಾಯನಿಕ-ಯಾಂತ್ರಿಕ ಕೃಷಿ, ಅಗಣಿತ ವಸ್ತುಗಳನ್ನು ನಿರ್ಮಾಣ ಮಾಡಬೇಕು, ವಾಹನ, ಟಿ.ವಿ ಇತ್ಯಾದಿ ಭೌತಿಕ ಸುಖವನ್ನು ಕೊಡುವ ವಸ್ತುಗಳನ್ನು ನಿರ್ಮಾಣ ಮಾಡುತ್ತಿರಬೇಕು, ಎಂದು ಅವರಿಗೆ ಅನಿಸುತ್ತದೆ. ಇದಕ್ಕೆ ಅವರು ಜೀವನದ ಗುಣಮಟ್ಟವನ್ನು ಕಾಪಾಡುವುದು ಎಂದು ತಿಳಿಯುತ್ತಾರೆ. ಇದರಲ್ಲಿ ಕಾರ್ಬನ್ ಉತ್ಸರ್ಜನ ಹೆಚ್ಚಾಗುವುದು, ಹಸಿರುದ್ರವ್ಯ ನಾಶವಾಗುವುದು, ಧಾತು, ಸಿಮೆಂಟ್‌ಗಾಗಿ ಬೆಟ್ಟಗಳು ನಾಶವಾಗುವವು, ತಾಪಮಾನ ಹೆಚ್ಚಾಗಿ ಹವಾಮಾನದಲ್ಲಿ ಬದಲಾವಣೆಯು ವಿಕೃತ ಸ್ವರೂಪದ ದುರ್ಘಟನೆಗಳನ್ನು ಘಟಿಸುವವು. ಪ್ರಾಣವಾಯು ಮುಗಿದು ಹೋಗುವುದು. ಸಂಕ್ಷಿಪ್ತದಲ್ಲಿ ಜೀವನವು ಸಂಪೂರ್ಣ ನಾಶವಾಗುವುದು, ಇದರ ಕಡೆಗೆ ಅವರ ಗಮನವಿಲ್ಲ.

೮. ಮಾನವನು ತಂತ್ರಜ್ಞಾನ, ವ್ಯಾಪಾರ ಮತ್ತು ಯಶಸ್ಸಿನ ಕಲ್ಪನೆಗಳಿಂದ ವಿಪರೀತ ಮನೋರಾಜ್ಯದಲ್ಲಿ ರಮಿಸುವುದು

‘ಆನ್‌ಲೈನ್’ ಮಾರಾಟದಿಂದ ಜಗತ್ತಿನಲ್ಲಿ ಎಲ್ಲರಿಗಿಂತ ಧನಿಕರ ಸಾಲಿನಲ್ಲಿ ಬಂದಿರುವ ಜೆಫ್ ಬೇಝೋಸ್ ಕೆಲವು ದಿನಗಳ ಹಿಂದೆ, ‘ಪೃಥ್ವಿಯ ಮೇಲಿನ ಸಂಪತ್ತು ಮುಗಿಯುತ್ತಾ ಬಂದಿದೆ’, ನಮಗೆ ‘ಬ್ಯಾಕ್‌ಅಪ್’ ಗ್ರಹದ ಅವಶ್ಯಕತೆಯಿದೆ. ಮಂಗಳ ಗ್ರಹವು ಅಂತಹ ಒಂದು ಗ್ರಹವಾಗಿದೆ. ನಾನು ನನ್ನ ಹಣವನ್ನು ಈ ಅಂತರಿಕ್ಷ ಉದ್ಯೋಗಕ್ಕಾಗಿ ಹೂಡುತ್ತಿದ್ದೇನೆ. ಇದರಲ್ಲಿ ಚಂದ್ರನನ್ನು ತಳವೆಂದು ಉಪಯೋಗಿಸಲಾಗುವುದು” ಎಂದು ಸಹಜತೆಯಿಂದ ಹೇಳಿದರು. ಈ ಮಾತುಗಳು ಯಾವುದಾದರೊಂದು ವಿಜ್ಞಾನಯುಗದ ಕಥೆ, ಕಾದಂಬರಿ, ಚಲನಚಿತ್ರದ್ದಾಗಿರಬಹುದು ಎಂದೆನಿಸುತ್ತದೆ; ಆದರೆ ಹಾಗಿಲ್ಲ. ತಂತ್ರಜ್ಞಾನ, ವ್ಯಾಪಾರ ಮತ್ತು ಯಶಸ್ಸಿನ ಕಲ್ಪನೆಗಳಲ್ಲಿ ಮುಳುಗಿರುವುದರಿಂದ ಇವರು ವಿಪರೀತ ಮನೋವಿಶ್ವದಲ್ಲಿ ಹೋಗಿದ್ದಾರೆ. ದೌರ್ಭಾಗ್ಯವೆಂದರೆ, ಇಂದು ಭಾರತೀಯರಿಗೆ ಗೀತೆ-ಉಪನಿಷತ್ತುಗಳು ಮಾರ್ಗದರ್ಶನ ಮಾಡದೇ ಜೆಫ್ ಬೆಝೋಸ್‌ನಂತಹ ಬೌದ್ಧಿಕ ಭಿಕಾರಿ ಅವರ ಆದರ್ಶ ಆಗಿದ್ದಾರೆ.

೯. ಮಾನವನು ತನ್ನ ಅಸ್ತಿತ್ವವನ್ನು ಕಾಪಾಡಲು ಸ್ವಯಂಚಾಲಿತ ವಾಹನಗಳನ್ನು ತಕ್ಷಣ ತಡೆಯುವುದು ಅವಶ್ಯಕವಾಗಿದೆ

ಇಂದಿನ ಜನರು ಜೀವನವನ್ನು ನಿಷ್ಕ್ರಿಯತೆಯಿಂದ ಕಳೆದಿರುವ ಹಣ ಸಂಪಾದನೆಯನ್ನು ಮಾಡಿದವರ ಬೋಧಾಮೃತವನ್ನು ತೆಗೆದುಕೊಳ್ಳುತ್ತಿದೆ. ಮೂಲದಲ್ಲಿ ತಪ್ಪು ಚಂದ್ರಯಾನ ಯೋಜನೆಯ ವೈಫಲ್ಯದ ನಂತರವೂ ಅದರಲ್ಲಿ ಪ್ರಗತಿಯ ಹೆಜ್ಜೆಗಳನ್ನು ನೋಡುವ ಒಬ್ಬ ವಿಕಾಸಕೋರ ಸಂಪಾದಕರು ಇದೇ ಬೇಝೋಸ್‌ನನ್ನು ಪ್ರಶಂಸಿಸುತ್ತಾ ಹೀಗೆ ಹೇಳಿದರು. ‘ಈಗ ಅಂತರಿಕ್ಷದ ಹೊಸ ಮಾರುಕಟ್ಟೆ ಲಭ್ಯವಾಗುವುದಿದೆ. ಅದರಲ್ಲಿ ಭಾರತವು ಮುಂದಾಳತ್ವವನ್ನು ವಹಿಸಬೇಕು.’ ಈ ಮಹಾಶಯರ ಅಭಿಪ್ರಾಯದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿಯೂ ತಾಪಮಾನ ಹೆಚ್ಚಾಗಿತ್ತು. ತಾಪಮಾನ ಹೆಚ್ಚಳದಲ್ಲಿ ವಿಶೇಷವೇನೂ ಇಲ್ಲ. ಅವರಿಗೆ ಮತ್ತು ತಂತ್ರಜ್ಞಾನದ ಭೂತ ಹಿಡಿದುಕೊಂಡವವರಿಗೆ ತಿಳಿಯದಿರುವ ವಿಷಯವೆಂದರೆ, ಅಸ್ತಿತ್ವ ಉಳಿಯಬೇಕಿದ್ದರೆ ಚಂದ್ರಭೂಮಿಯ ಮೇಲೆ ವಿಹಾರಕ್ಕಾಗಿ ಕಳುಹಿಸಿದ ‘ವಿಕ್ರಮ’ ವಾಹನವ ಬಿಡಿ, ಈಗ ಪೃಥ್ವಿಯ ಮೇಲೆ ಓಡಾಡುವ ಎಲ್ಲ ಸ್ವಯಂಚಾಲಿತ ವಾಹನಗಳನ್ನು ತಕ್ಷಣ ತಡೆಯುವ ಮತ್ತು ಅವುಗಳನ್ನು ಬಿಡುವ ಸಮಯ ಬಂದಿದೆ. ಹೀಗಾದರೆ ಮಾತ್ರ, ಕೇವಲ ೩-೪ ದಶಕಗಳಲ್ಲಿ ನಾಶವಾಗುವ ಮನುಕುಲ ಮತ್ತು ಜೀವಸೃಷ್ಟಿಯು ಉಳಿಯಬಹುದು.

– ನ್ಯಾಯವಾದಿ ಗಿರೀಶ ರಾವುತ್, ಸಂಚಾಲಕರು, ಭಾರತೀಯ ಜೀವನ ಮತ್ತು ಪೃಥ್ವಿರಕ್ಷಣ ಚಳುವಳಿ (೨೨.೧೦.೨೦೨೨)

(ಆಧಾರ : ಸಾಮಾಜಿಕ ಮಾಧ್ಯಮ)