ಕಾಂಗ್ರೆಸ ಶಾಸಕ ಆರಿಫ ಮಸೂದ ಅವರ ಹಿಂದೂ ವಿರೋಧಿ ಆಗ್ರಹ / ಬೇಡಿಕೆ !
ಭೋಪಾಲ (ಮಧ್ಯಪ್ರದೇಶ) – ಮದರಸಾಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬುದನ್ನು ಮಧ್ಯಪ್ರದೇಶ ಸರಕಾರವು ಪರಿಶೀಲಿಸಲಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ ಶಾಸಕ ಆರಿಫ ಮಸೂದ, ‘ಸರಸ್ವತಿ ಶಿಶು ಮಂದಿರಗಳ/ದೇವಾಲಯಗಳ ಬಗ್ಗೆಯೂ ತನಿಖೆ ನಡೆಸಬೇಕು. ಅಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬುದು ತಿಳಿಯಬೇಕು’ ಎಂಬ ಬೇಡಿಕೆಯನ್ನಿಟ್ಟರು. ’ಕೇವಲ ಮದರಸಾಗಳನ್ನು ಗುರಿಯಾಗಿಸಲಾಗುತ್ತಿದೆ. ಮದರಸಾಗಳ ಸ್ಥಿತಿಗತಿ ಹೇಗಿದೆ ಎಂಬುದಾದರೂ ವಿಚಾರಣೆಯಿಂದ ತಿಳಿಯುವುದು. ಕಳೆದ 3 ವರ್ಷಗಳಿಂದ ಮದರಸಾಗಳಿಗೆ ಆರ್ಥಿಕ ನೆರವು ಸಿಕ್ಕಿಲ್ಲ’ ಎಂದೂ ಅವರು ದೂರಿದರು.
‘ಮದರಸಾಗಳಲ್ಲಿ ದೇಶದ್ರೋಹದ ಪಾಠ ಕಲಿಸಲಾಗುತ್ತಿದೆಯೇ?’, ಈ ಬಗ್ಗೆ ನಮಗೆ ಆತಂಕ ! – ಮಸೂದ ಅವರಿಗೆ ಸಂಸ್ಕೃತಿ ಸಚಿವೆ ಉಷಾ ಠಾಕೂರ ಅವರ ಪ್ರತ್ಯುತ್ತರ
ಆರಿಫ ಮಸೂದ ಅವರ ಹೇಳಿಕೆ ಕುರಿತು ರಾಜ್ಯ ಸಂಸ್ಕೃತಿ ಸಚಿವೆ ಉಷಾ ಠಾಕೂರ ಅವರು, ಸರಸ್ವತಿ ಶಿಶು ಮಂದಿರದ/ದೇವಾಲಯದ ತನಿಖೆ ನಡೆಸಬಹುದು ಎಂದು ಹೇಳಿದರು. ನಮ್ಮಲ್ಲಿ ಸನಾತನ ಸಂಸ್ಕಾರವಿದೆ. ‘ಮದರಸಾಗಳಲ್ಲಿ ದೇಶದ್ರೋಹದ ಪಾಠ ಕಲಿಸಲಾಗುತ್ತಿದೆಯೇ?’, ‘ಮಾನವ ಕಳ್ಳಸಾಗಣೆ ನಡೆಯುತ್ತಿದೆಯೇ ?’ ಎಂಬ ಆತಂಕ ನಮ್ಮದು. ಈ ಬಗ್ಗೆ ತನಿಖೆಯಾಗಬೇಕು. ಸರಕಾರದಿಂದ ಅನುಮತಿ ಇಲ್ಲದ ಮದರಸಾಗಳ ಮೇಲೆ ಸರಕಾರದ ನಿಯಂತ್ರಣವಿರಬೇಕು.
ಸಂಪಾದಕೀಯ ನಿಲುವುಸರಸ್ವತಿ ಶಿಶು ಮಂದಿರಗಳಿಂದ/ದೇವಾಲಯಗಳಿಂದ ಭಯೋತ್ಪಾದಕರು ಮತ್ತು ಕಾಮುಕರು ಹೊರಬರುವುದಿಲ್ಲ ಎಂಬುದು ಜಗಜ್ಜಾಹೀರವಾಗಿದೆ ಆದರೆ ಇದು ಮದರಸಾಗಳಿಗೆ ಅನ್ವಯಿಸುವುದಿಲ್ಲ ಎಂಬುದು ಮಸೂದ ಅವರಿಗೂ ತಿಳಿದಿದೆ ! ಆದರೂ ಅವರು ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಮುಸಲ್ಮಾನ ಮತದಾರರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ ! |