ಧರ್ಮ ಕಾರ್ಯದ ತೀವ್ರ ತಳಮಳವಿರುವ ಶೇ. ೬೪ ರಷ್ಟು ಮಟ್ಟದ ನ್ಯಾಯವಾದಿ ಕೃಷ್ಣಮೂರ್ತಿ ಮತ್ತು ಭಗವಂತನ ಬಗ್ಗೆ ಅಪಾರ ಭಕ್ತಿ ಇರುವ ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ ಶ್ರೀ. ಸತೀಶಚಂದ್ರ ಇವರ ಗುಣವೈಶಿಷ್ಟ್ಯಗಳು

ನ್ಯಾಯವಾದಿ ಕೃಷ್ಣಮೂರ್ತಿ

ಮನೋಗತವನ್ನು ವ್ಯಕ್ತಪಡಿಸುವಾಗ ನ್ಯಾಯವಾದಿ ಕೃಷ್ಣಮೂರ್ತಿ ಇವರು, ೨೦೦೦ ದ ಇಸವಿಯಲ್ಲಿ ನನಗೆ ತೊಂದರೆಯಾದಾಗ ಓರ್ವ ಸ್ನೇಹಿತನು ವಿಷ್ಣು ಸಹಸ್ರನಾಮವನ್ನು ಪಠಿಸಲು ಹೇಳಿದಾಗ ನಾನು ಅದನ್ನು ಪಠಿಸಿದೆ. ಒಂದು ಬಾರಿ ಕೇರಳದ ‘ಅಮ್ಮಾ’ ದೇವಸ್ಥಾನದಲ್ಲಿ ಲಲಿತಾ ಸಹಸ್ರ ನಾಮವು ಸಂಪನ್ನಗೊಳ್ಳುತ್ತಿರುವಾಗ ಕುಂಕುಮ ಬೇಕಿತ್ತು. ಆಗ ಶರಣಾಗತಭಾವದಿಂದ ದೇವಿಗೆ ಹರಕೆ ಹೊತ್ತಾಗ ಅರ್ಚಕರೇ ಬಂದು ಕುಂಕುಮಾರ್ಚನೆಗೆ ಅವಕಾಶ ಕೊಟ್ಟರು. ಕೋತಿಮರಿ ತನ್ನ ತಾಯಿಯನ್ನು ಗಟ್ಟಿಯಾಗಿ ಹಿಡಿದು ಕೊಳ್ಳುವುದರಿಂದ ತಾಯಿಗೆ ಎಲ್ಲೆಡೆಗೆ ಸಹಜವಾಗಿ ಜಿಗಿಯಲು ಸಾಧ್ಯವಾಗುತ್ತದೆ. ಮರಿಗೆ ತನ್ನ ತಾಯಿಯ ಮೇಲೆ ಸಂಪೂರ್ಣ ಶ್ರದ್ಧೆ ಇರುವಂತೆ ರೀತಿ ನಮಗೆ ಭಗವಂತನಲ್ಲಿ ಶ್ರದ್ಧೆಯಿರಬೇಕು ಎಂದರು.

ಶ್ರೀ. ಸತೀಶಚಂದ್ರ

ಶ್ರೀ. ಸತೀಶಚಂದ್ರ ಇವರು ಮನೋಗತವನ್ನು ವ್ಯಕ್ತಪಡಿಸುತ್ತಾ, ಕೊರೊನಾದ ಸಮಯದಲ್ಲಿ ಮೊದಲು ನರ್ಸರಿ ಕ್ಲಾಸಿನಲ್ಲಿದ್ದೆನು. ಸತತವಾಗಿ ನಾಮಜಪ ಮಾಡುತ್ತಿದೆನು. ನಾನು ಮಲಗುವ ಜಾಗದಲ್ಲಿ ಸಿಮೆಂಟ್ ಹಾಕಿರುವ ನೆಲದ ಮೇಲೆ ತುಳಸಿ ಸಸಿ ಹುಟ್ಟಿಕೊಂಡಿದೆ. ಶ್ರೀಕೃಷ್ಣನಿಗೆ ತುಳಸಿ ಪ್ರಿಯವಾಗಿದೆ. ಗುರುದೇವರ ಆಶೀರ್ವಾದದಿಂದ ಇದು ನಡೆದಿದೆ. ನನ್ನಲ್ಲಿ ಇಷ್ಟು ಯೋಗ್ಯತೆ ಎಲ್ಲಿದೆ ? ನಮ್ಮ ಮನಸ್ಸು ಶುದ್ಧವಾಗಬೇಕು. ನಾನು ಭೂಮಿಯ ಮೇಲೆ ಇರುವಷ್ಟು ದಿನ ಪರೋಪಕಾರಿಯಾಗಿರಬೇಕು. ಸಮಾಜಕ್ಕೆ ನನ್ನ ಉಪಯೋಗವಾಗಬೇಕು ಎಂದು ಹೇಳಿದರು.

ನಿರಪೇಕ್ಷವಾಗಿ ಹಿಂದುತ್ವದ ಕಾರ್ಯವನ್ನು ಮಾಡುವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಕೃತಜ್ಞತಾಭಾವವಿರುವ ನ್ಯಾಯವಾದಿ ಕೃಷ್ಣಮೂರ್ತಿ ಪಿ.

ಮಡಿಕೇರಿಯ ನ್ಯಾಯವಾದಿ ಕೃಷ್ಣಮೂರ್ತಿ ಪಂಜಿತಡಕಾ (೪೪ ವರ್ಷಗಳು) ಇವರು ದೇವಿ ಭಕ್ತರಾಗಿದ್ದು ಕಳೆದ ೧೧ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಧರ್ಮ ಮತ್ತು ಹಿಂದುತ್ವದ ಕಾರ್ಯದ ಬಗ್ಗೆ ಅವರಲ್ಲಿ ಬಹಳ ತಳಮಳವಿದೆ. ೪ ವರ್ಷಗಳ ಹಿಂದೆ ಅವರು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬಂದರು. ಒಂದು ಸಲ ಅವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಭೇಟಿ ನೀಡಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅವರಿಗೆ ಬಹಳ ಶ್ರದ್ಧೆ ಇದೆ.

೧. ಹಿಂದೂ ಧರ್ಮ ಮತ್ತು ಹಿಂದುತ್ವದ ತೀವ್ರ ತಳಮಳವಿರುವ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿ !

೧ ಅ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿಂದುತ್ವನಿಷ್ಠರ ಪರ ಮೊಕದ್ದಮೆ ನಡೆಸಿ ಅದನ್ನು ಗೆಲ್ಲುವುದು : ಹಿಂದೂ ಸಂಘಟನೆಯ ಕಾರ್ಯದಲ್ಲಿ ಕೃಷ್ಣಮೂರ್ತಿ ಅಣ್ಣಾ ಇವರ ಸಕ್ರಿಯ ಸಹಭಾಗವಿರುತ್ತದೆ. ಒಮ್ಮೆ ಮಡಿಕೇರಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯ ಸಮಯದಲ್ಲಿ ಗಲಭೆಯಾಗಿತ್ತು. ಈ ಪ್ರಕರಣದಲ್ಲಿ ಅನೇಕ ಹಿಂದೂಗಳನ್ನು ಸಿಲುಕಿಸಲಾಗಿತ್ತು. ಕೃಷ್ಣಮೂರ್ತಿ ಅಣ್ಣನವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿಂದುತ್ವನಿಷ್ಠರ ಪರ ಈ ಮೊಕದ್ದಮೆಯನ್ನು ನಡೆಸಿದರು ಮತ್ತು ಗೆದ್ದರು. ಈ ರೀತಿ ಹಿಂದುತ್ವನಿಷ್ಠರಿಗೆ ಯಾವುದೇ ಸಮಸ್ಯೆ ಬಂದರೂ, ಅವರು ತತ್ಪರತೆಯಿಂದ ಅವರಿಗೆ ಸಹಾಯ ಮಾಡುತ್ತಾರೆ.

೧ ಆ. ಹಿಂದುತ್ವದ ಕಾರ್ಯಕ್ಕಾಗಿ ತ್ಯಾಗ ಮಾಡುವ ವೃತ್ತಿ : ಹಿಂದುತ್ವದ ಕಾರ್ಯವನ್ನು ಮಾಡುವಾಗ ಅವರಿಗೆ ವಿವಿಧ ಮೊಕದ್ದಮೆಗಳಿಗಾಗಿ ಮಡಿಕೇರಿಯಿಂದ ಬೆಂಗಳೂರು ಅಥವಾ ಬೇರೆ ಸ್ಥಳಗಳಿಗೆ ಚತುಷ್ಚಕ್ರ ವಾಹನದಿಂದ ಹೋಗಬೇಕಾಗುತ್ತದೆ. ಆಗ ಅವರು ಯಾರಿಂದಲೂ ಪ್ರವಾಸಕ್ಕಾಗಿ ತಗಲುವ ಖರ್ಚನ್ನು ತೆಗೆದುಕೊಳ್ಳುವುದಿಲ್ಲ. ಅವರು ಸ್ವತಃ ಈ ತ್ಯಾಗವನ್ನು ಮಾಡುತ್ತಾರೆ.

೧ ಇ. ಅನೇಕ ಬಾರಿ ಅವರು ಅವಶ್ಯಕತೆ ಇರುವ ಹಿಂದೂ ಕಾರ್ಯಕರ್ತರಿಗೆ ಧಾನ್ಯ ಮತ್ತು ವಸ್ತುಗಳನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಕೊಡುತ್ತಾರೆ.

೧. ಈ. ಇತರರಿಗೆ ತಕ್ಷಣ ಸಹಾಯ ಮಾಡುವುದು : ಒಂದು ಗೋಶಾಲೆಯ ಪ್ರಮುಖರು ಕೃಷ್ಣಮೂರ್ತಿ ಅಣ್ಣಾ ಇವರ ಬಳಿ ಸಹಾಯ ಕೇಳಿದ್ದರು. ಆಗ ಅವರು ತಕ್ಷಣ ಸಹಾಯ ಮಾಡಿದರು.

೨. ಕಾನೂನಿನ ಉತ್ತಮ ಅನುಭವ ಇದ್ದರೂ ನಮ್ರತೆ ಮತ್ತು ಅಹಂಶೂನ್ಯ ಸ್ಥಿತಿಯಲ್ಲಿದ್ದು ನ್ಯಾಯಾಲಯದ ಕಾರ್ಯಕಲಾಪ ಮಾಡುವ ನ್ಯಾಯವಾದಿ ಕೃಷ್ಣಮೂರ್ತಿ !

೨ ಅ. ಕಕ್ಷಿದಾರನ ಮೊಕದ್ದಮೆಯನ್ನು ಸ್ವಯಂಸ್ಫೂರ್ತಿಯಿಂದ ಮತ್ತು ಆತ್ಮೀಯತೆಯಿಂದ ನಡೆಸುವುದು : ಯಾರಾದರೂ ಕಕ್ಷಿದಾರರು ಕೃಷ್ಣಮೂರ್ತಿ ಅಣ್ಣನವರ ಬಳಿಗೆ ಮೊಕದ್ದಮೆಯನ್ನು ಒಪ್ಪಿಸಿದರೆ, ಅವರಿಗೆ ಇದರ ಬಗ್ಗೆ ಯೋಚನೆ ಮಾಡಬೇಕಾಗುವುದಿಲ್ಲ. ಅಣ್ಣನವರು ಸ್ವಯಂಸ್ಫೂರ್ತಿಯಿಂದ ಎಲ್ಲಾ ಕೃತಿಗಳನ್ನು ಮಾಡುತ್ತಾರೆ ಮತ್ತು ಆತ್ಮೀಯತೆಯಿಂದ ಮೊಕದ್ದಮೆಯನ್ನು ನಡೆಸುತ್ತಾರೆ.

೨ ಆ. ಅನುಭವಿ ನ್ಯಾಯವಾದಿಯಾಗಿದ್ದರೂ ಎಲ್ಲರ ಜೊತೆಗೆ ನಮ್ರತೆಯಿಂದ ಮಾತನಾಡುವುದು : ಕೃಷ್ಣಮೂರ್ತಿ ಅಣ್ಣನವರಿಗೆ ಕಾನೂನು ಮತ್ತು ಧರ್ಮ ಕಾರ್ಯದ ಬಗ್ಗೆ ಒಳ್ಳೆಯ ಅನುಭವ ಇದೆ, ಆದರೂ ಅವರ ವರ್ತನೆಯಲ್ಲಿ ಅಧಿಕಾರವಾಣಿ ಅಥವಾ ನನಗೆ ಹೆಚ್ಚು ತಿಳಿಯುತ್ತದೆ ಎಂದು ಅನಿಸುವುದಿಲ್ಲ. ಅವರು ಎಲ್ಲರೊಂದಿಗೆ ನಮ್ರತೆಯಿಂದ ಮಾತನಾಡುತ್ತಾರೆ. ಅವರ ಜೊತೆ ಇರುವ ಕಿರಿಯ ನ್ಯಾಯವಾದಿಗಳ ಅಭಿಪ್ರಾಯಗಳನ್ನೂ ಕೂಡ ನಮ್ರತೆಯಿಂದ ತಿಳಿದುಕೊಳ್ಳುತ್ತಾರೆ. ಅವರ ಈ ನಡುವಳಿಕೆಯಿಂದ ನ್ಯಾಯವಾದಿಗಳಿಗೆ ಉತ್ಸಾಹವೆನಿಸಿ ಪ್ರೇರಣೆ ಸಿಗುತ್ತದೆ ಮತ್ತು ಅಣ್ಣನವರ ಆಧಾರ ಕೂಡ ಅನಿಸುತ್ತದೆ.

ಉದ್ಯಮಿಗಳ ಸತ್ಸಂಗದಲ್ಲಿ ಹೇಳಿದಂತೆ ಸಾಧನೆಯನ್ನು ಆರಂಭಿಸುವ ಮತ್ತು ಧರ್ಮಕಾರ್ಯದ ತಳಮಳವಿರುವ ಚಾರ್ಟರ್ಡ್ ಅಕೌಂಟೆಂಟ್ ಶ್ರೀ. ಸತೀಶಚಂದ್ರ !

‘ಮಂಗಳೂರಿನ ಶ್ರೀ. ಸತೀಶಚಂದ್ರ ಇವರು ಚಾರ್ಟರ್ಡ್ ಅಕೌಂಟೆಂಟ್ ಇದ್ದಾರೆ. ಅವರು ಧಾರ್ಮಿಕ ಸಂಸ್ಥೆಗಳಿಗೆ ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಾರೆ. ಕಳೆದ ೧೨ ವರ್ಷಗಳಿಂದ ಅವರು ‘ಸನಾತನ ಪ್ರಭಾತ’ದ ವಾಚಕರಾಗಿದ್ದಾರೆ ಮತ್ತು ಕಳೆದ ೩ ವರ್ಷಗಳಿಂದ ಉದ್ಯಮಿಗಳ ಸತ್ಸಂಗದಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀ. ಸತೀಶಚಂದ್ರ ಅಣ್ಣನವರ ಗುಣವೈಶಿಷ್ಟ್ಯ ಮತ್ತು ಅವರಿಗೆ ಬಂದ ಅನುಭೂತಿಗಳನ್ನು ಇಲ್ಲಿ ಕೊಡಲಾಗಿದೆ.

೧. ಗುಣವೈಶಿಷ್ಟ್ಯಗಳು

೧ ಅ. ಮನಮುಕ್ತತೆ : ಶ್ರೀ. ಸತೀಶಚಂದ್ರ ಅಣ್ಣನವರು ಸಾಧಕರೊಂದಿಗೆ ಮನಮುಕ್ತವಾಗಿ ಮಾತನಾಡುತ್ತಾರೆ. ಒಮ್ಮೆ ಸನಾತನ ಸಂಸ್ಥೆಯ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಅಣ್ಣನವರೊಂದಿಗೆ ಅವರ ಭೇಟಿಯಾಯಿತು. ಅವರು ಪೂ. ರಮಾನಂದ ಅಣ್ಣನವರೊಂದಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಮುಕ್ತತೆಯಿಂದ ಮತ್ತು ಸಹಜತೆಯಿಂದ ಮಾತನಾಡಿದರು.

೧ ಆ. ಸಮಯಪ್ರಜ್ಞೆ ಮತ್ತು ನಿಯೋಜನಬದ್ಧ ಕೃತಿ : ಅಣ್ಣನವರಲ್ಲಿ ಸಮಯಪ್ರಜ್ಞೆ ಈ ಗುಣವಿದೆ. ಅವರು ದಿನನಿತ್ಯದ ಪ್ರತಿಯೊಂದು ವಿಷಯದ ನಿಯೋಜನೆಯನ್ನು ಮಾಡಿ ಸಮಯಮಿತಿಗನುಸಾರ ಎಲ್ಲ ಕೃತಿಗಳನ್ನು ಮಾಡುತ್ತಾರೆ, ಉದಾ ಪೂಜೆ, ನಾಮಜಪ, ಕಚೇರಿಯ ಕೆಲಸಗಳನ್ನು ಮಾಡುವುದು, ಸಾಧಕರನ್ನು ಭೇಟಿಯಾಗುವುದು ಇತ್ಯಾದಿ.

೧ ಇ. ಎಷ್ಟೇ ಕೆಲಸಗಳಿದ್ದರೂ ಸಾಧಕರಿಗೆ ಪ್ರಾಧಾನ್ಯತೆಯಿಂದ ಸಮಯ ಕೊಡುವುದು : ಸಾಧಕರು ಅವರನ್ನು ಭೇಟಿಯಾಗಲು ಅವರ ಕಚೇರಿಗೆ ಹೋಗುತ್ತಾರೆ. ಆಗ ಅವರು ಸಾಧಕರಿಗೆ ಆದ್ಯತೆಯಿಂದ ಸಮಯ ಕೊಡುತ್ತಾರೆ. ಅವರನ್ನು ಭೇಟಿಯಾಗಲು ಅನೇಕ ಜನರು ಬಂದಿದ್ದರೂ ಸಾಧಕರ ಸಮಯ ವ್ಯರ್ಥವಾಗಬಾರದೆಂದು ಅವರು ಮೊದಲು ಸಾಧಕರೊಂದಿಗೆ ಮಾತನಾಡುತ್ತಾರೆ.

೧ ಈ. ತಮ್ಮ ಕಡೆಗೆ ಕಡಿಮೆತನ ತೆಗೆದುಕೊಂಡು ಕಲಿಯುವ ಸ್ಥಿತಿಯಲ್ಲಿರುವ ಸತೀಶಚಂದ್ರ ಅಣ್ಣನವರು ! : ಅವರು ಚಾರ್ಟರ್ಡ್ ಅಕೌಂಟೆಂಟ್ ಇರುವುದರಿಂದ ಅವರಿಗೆ ಅನೇಕ ವಿಷಯಗಳ ಮಾಹಿತಿ ಇದೆ. ಹೀಗಿದ್ದರೂ ಅವರು ‘ನನಗೆ ಏನೂ ಗೊತ್ತಿಲ್ಲ’ ಎಂದು ಹೇಳಿ ಕಡಿಮೆತನ ತೆಗೆದುಕೊಳ್ಳುತ್ತಾರೆ ಮತ್ತು ಕಲಿಯುವ ಸ್ಥಿತಿಯಲ್ಲಿರುತ್ತಾರೆ. ಅವರು ಪೂ. ರಮಾನಂದ ಅಣ್ಣನವರಿಗೆ, “ನೀವು ಎಲ್ಲವನ್ನೂ ಮಾಡುತ್ತಿರುವಿರಿ. ನೀವು ಭಾಗ್ಯವಂತರಿರುವಿರಿ” ಎಂದು ಹೇಳುತ್ತಾರೆ. ಅವರು ಸಾಧಕರಿಗೆ, “ನೀವೆಲ್ಲರೂ ಬಹಳ ಕಾರ್ಯವನ್ನು ಮಾಡುತ್ತಿರುವಿರಿ. ನಾನೇನೂ ಮಾಡುವುದಿಲ್ಲ. ನನಗೆ ಇನ್ನೂ ಬಹಳಷ್ಟು ಮಾಡಲಿಕ್ಕಿದೆ” ಎಂದು ಹೇಳುತ್ತಾರೆ.

೧ ಉ. ಚಿಕ್ಕಂದಿನಿಂದ ದೇವರ ಭಕ್ತಿಯನ್ನು ಮಾಡುವುದು : ಶ್ರೀ. ಸತೀಶಚಂದ್ರ ಅಣ್ಣನವರ ತಾಯಿಯವರು ಅತ್ಯಂತ ಧಾರ್ಮಿಕರಾಗಿದ್ದರು ಮತ್ತು ದೇವರ ಭಕ್ತಿಯನ್ನು ಮಾಡುತ್ತಿದ್ದರು. ಆದುದರಿಂದ ಚಿಕ್ಕಂದಿನಿಂದಲೇ ಅಣ್ಣನವರೂ ಶ್ರೀಕೃಷ್ಣನ ಮತ್ತು ಬಾಲಾಜಿಯ ಭಕ್ತಿಯನ್ನು ಮಾಡುತ್ತಿದ್ದಾರೆ.

೧ ಊ. ಸಾಧನೆ ಮತ್ತು ಧರ್ಮಕಾರ್ಯದ ತಳಮಳ

೧ ಊ ೧. ಅರ್ಪಣೆ ನೀಡುವುದು : ಅನೇಕ ವರ್ಷಗಳಿಂದ ಅವರು ಸನಾತನ ಸಂಸ್ಥೆಯ ಕಾರ್ಯಕ್ಕೆ ಅರ್ಪಣೆ ಮತ್ತು ಪಂಚಾಂಗಕ್ಕೆ ಜಾಹೀರಾತನ್ನೂ ನೀಡುತ್ತಾರೆ. ಅವರು ಇತರ ಧಾರ್ಮಿಕ ಕಾರ್ಯಕ್ರಮಗಳಿಗೂ ಅರ್ಪಣೆಯನ್ನು ನೀಡುತ್ತಾರೆ. ಪೂ. ರಮಾನಂದ ಅಣ್ಣನವರನ್ನು ಭೇಟಿಯಾದಾಗ ಅವರು ಕೃತಜ್ಞತಾಭಾವದಿಂದ, “ನಾನು ಸಾಧನೆಯನ್ನು ಆರಂಭಿಸಿದ ನಂತರ ನನ್ನ ಅನೇಕ ಶಾರೀರಿಕ ಸಮಸ್ಯೆಗಳು ಕಡಿಮೆಯಾಗಿ ನನ್ನ ಶಾರೀರಿಕ ಸ್ಥಿತಿಯು ಸುಧಾರಿಸಿದೆ. ಹಿಂದಿನ ತುಲನೆಯಲ್ಲಿ ನನ್ನ ಕೃತಿಗಳಿಗೆ ವೇಗವೂ ಬಂದಿದೆ. ನನ್ನ ಮಗನಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿವೆ ಮತ್ತು ಈಗ ಅವನಿಗೆ ಒಳ್ಳೆಯ ಕೆಲಸವೂ ಸಿಕ್ಕಿದೆ. ಇದೆಲ್ಲವೂ ಈಶ್ವರನ ಕೃಪೆಯಿಂದ ಆಗುತ್ತಿದೆ ಎನ್ನುತ್ತಾರೆ. ನಾನು ಓರ್ವ ಸಾಮಾನ್ಯ ವ್ಯಕ್ತಿಯಾಗಿದ್ದು ನನಗೆ ಸಂತರ ಸಹವಾಸ ಲಭಿಸಿದೆ, ಇದು ನನ್ನ ದೊಡ್ಡ ಭಾಗ್ಯವಾಗಿದೆ” ಎಂದು ಅವರು ನಮ್ರತೆಯಿಂದ ಹೇಳುತ್ತಾರೆ.

೧ ಊ ೨. ಭಾವ : ಅಣ್ಣನವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಸನಾತನದ ಸಂತರ ಬಗ್ಗೆ ಬಹಳ ಭಾವವಿದೆ. ಅವರು ಸಂತರೊಂದಿಗೆ ನಮ್ರತೆಯಿಂದ ಮಾತನಾಡುತ್ತಾರೆ. ನಾನು ಸಾಮಾನ್ಯ ವ್ಯಕ್ತಿಯಾಗಿದ್ದು ನನಗೆ ಸಂತರ ಸಹವಾಸ ಸಿಗುವುದು ನನ್ನ ಬಹುದೊಡ್ಡ ಭಾಗ್ಯವಾಗಿದೆ ಎಂದು ಹೇಳಿದರು.

(ಸವಿಸ್ತಾರ ಮಾಹಿತಿಗಾಗಿ ಭೇಟಿ ನೀಡಿ – https://sanatanprabhat.org/kannada/76466.html)