ಹಲಾಲ್ ಪ್ರಮಾಣಪತ್ರದ ವಿರೋಧಕ್ಕೆ ಕಾರಣ :ಧಾರ್ಮಿಕ ವಿಷಯದ ಕಡ್ಡಾಯ, ಆರ್ಥಿಕತೆ ಮತ್ತು ದೇಶದ ಭದ್ರತೆ !

ಶ್ರೀ.ರಮೇಶ ಶಿಂದೆ

‘ಹಲಾಲ್ ಪ್ರಮಾಣೀಕರಣ’ದ ಮೂಲಕ ಭಾರತದಲ್ಲಿ ಒಂದು ಸಮಾಂತರ ಅರ್ಥವ್ಯವಸ್ಥೆ ತಲೆ ಎತ್ತುತ್ತಿದೆ. ಇದರಿಂದ ದೊರೆಯುವ ಹಣವನ್ನು ಭಾರತವಿರೋಧಿ ಕೃತ್ಯಗಳಿಗೆ ಬಳಸುತ್ತಿರುವುದು ಬಯಲಾಗಿದೆ. ಈ ದೇಶವಿರೋಧಿ ಷಡ್ಯಂತ್ರಕ್ಕೆ ಹಿಂದೂ ಜನಜಾಗೃತಿ ಸಮಿತಿ ವಿವಿಧ ಸ್ತರಗಳಲ್ಲಿ ವಿರೋಧವನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ ‘ಗೋವಾ ನ್ಯೂಸ ಹಬ್’ ಈ ‘ಯೂ ಟ್ಯೂಬ್’ ವಾಹಿನಿಯು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರೊಂದಿಗೆ ಇತ್ತೀಚೆಗಷ್ಟೇ ಸಂದರ್ಶನ ನಡೆಸಿತ್ತು. ಈ ಸಂದರ್ಭದಲ್ಲಿ ಶ್ರೀ. ಶಿಂದೆಯವರು ಸಮಿತಿಯು ಹಲಾಲ್ ಪ್ರಮಾಣಪತ್ರವನ್ನು ವಿರೋಧಿಸುತ್ತಿರುವುದರ ಹಿಂದಿನ ಕಾರಣಗಳ ಬಗ್ಗೆ ಹೇಳಿದ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಹಿಂದೂ ಜನಜಾಗೃತಿ ಸಮಿತಿಯ ವಿರೋಧವುಹಲಾಲ್ ಮಾಂಸಕ್ಕಲ್ಲ, ಅವರಿಂದ ಹಿಂದೂಗಳಮೇಲೆ ಮಾಡಲಾಗುವ ಇದರ ಕಡ್ಡಾಯಕ್ಕಾಗಿದೆ

ಕುರಾನ್ ನಲ್ಲಿ ‘ಹಲಾಲ್’ ಸಂಕಲ್ಪನೆಯು ಮಾಂಸದ ಸಂದರ್ಭ ದಲ್ಲಿದೆ. ಈ ಹಲಾಲ್ ಮಾಂಸದ ಕೆಲವು ನಿಯಮಗಳಿವೆ. ಮೊದಲನೇಯದಾಗಿ ಪಶುವಧೆಯನ್ನು ಮಾಡುವವನು ಮುಸಲ್ಮಾನ ಇರಬೇಕು, ಹತ್ಯೆಯನ್ನು ಮಾಡುವಾಗ ಪಶುವಿನ ತಲೆ ಮಕ್ಕಾದ ದಿಕ್ಕಿನಲ್ಲಿರಬೇಕು, ಪ್ರಾಣಿಯ ಹತ್ಯೆಯನ್ನು ಮಾಡುವ ಮೊದಲು ಅವನು ಕಲಮಾಗಳನ್ನು ಹೇಳಬೇಕು, ಅವನು ಕುತ್ತಿಗೆಯನ್ನು ಕೊಯ್ದು ಒಂದೇ ಸಲಕ್ಕೆ ಅನ್ನನಾಳ, ಶ್ವಾಸನಾಳ ಮತ್ತು ಕುತ್ತಿಗೆಯ ರಕ್ತ ವಾಹಿನಿಯನ್ನು ಕತ್ತರಿಸಬೇಕು. ಈ ಪದ್ಧತಿಯಿಂದ ಕತ್ತರಿಸಿದ ಪ್ರಾಣಿಯ ಮಾಂಸಕ್ಕೆ ‘ಹಲಾಲ್ ಮಾಂಸ’ ಎನ್ನುತ್ತಾರೆ. ಹಿಂದೂ ಜನ ಜಾಗೃತಿ ಸಮಿತಿಯ ‘ಹಲಾಲ್’ ನ ಮೂಲ ಸಂಕಲ್ಪನೆಗೆ ವಿರೋಧವಿಲ್ಲ; ಏಕೆಂದರೆ ಅದನ್ನು ಅವರ ಧರ್ಮದಲ್ಲಿ ಹೇಳ ಲಾಗಿದೆ. ಆದುದರಿಂದ ಅವರು ಹಲಾಲ್ ಮಾಂಸವನ್ನು ತಿನ್ನಬಹುದು. ನಾವು ಹೇಳುವುದೇನೆಂದರೆ, ಈ ಸಂಕಲ್ಪನೆ ನಿಮಗೆ ಹೇಳಲಾಗಿದ್ದರೆ, ಅದರ ಪಾಲನೆಯನ್ನು ಕೇವಲ ನೀವೇ ಮಾಡ ಬೇಕು. ಅದನ್ನು ಇತರರ ಮೇಲೆ ಹೇರಬಾರದು, ಅದರ ಒತ್ತಾಯ ಹಿಂದೂಗಳ ಮೇಲೆ ಏಕೆ ? ಕ್ರೈಸ್ತ, ಸಿಕ್ಖ್ ಇವರಿಗೆಲ್ಲ ಹಲಾಲ್ ಮಾಂಸವನ್ನು ತಿನ್ನಲು ಏಕೆ ಒತ್ತಾಯಿಸಬೇಕು ? ಹಲಾಲ್ ಮಾಂಸ ಮುಸಲ್ಮಾನರಿಗಿದೆ. ಆದುದರಿಂದ ಅದನ್ನು ಅವರೇ ಸೇವಿಸಬೇಕು. ಅದಕ್ಕಾಗಿ ಇತರೆ ಧರ್ಮದವರ ಮೇಲೆ ಒತ್ತಾಯ ಹೇರ ಬಾರದು. ಇಂದು ಮ್ಯಾಕಡೊನಾಲ್ಡ್, ಪಿಝ್ಜಾ ಹಟ್, ಬರ್ಗರಕಿಂಗ, ಕೆ.ಎಫ್.ಸಿ. ಇಂಡಿಯಾ ಈ ಎಲ್ಲ ಕಂಪನಿಗಳು ಹಲಾಲ್ ಮಾಂಸವನ್ನೇ ಉಪಯೋಗಿಸುತ್ತವೆ. ನಮ್ಮ ಅಭಿಪ್ರಾಯವೆಂದರೆ, ಮುಸಲ್ಮಾನರಿಗೆ ಹಲಾಲ್ ಖಾದ್ಯಗಳನ್ನು ಪೂರೈಸಲು ಈ ಕಂಪನಿಗಳು ಪ್ರತ್ಯೇಕ ‘ಹಲಾಲ್ ಕೌಂಟರ್’ ತೆರೆಯಬೇಕು. ಅದನ್ನು ಸಾರಾಸಗಟಾಗಿ ಎಲ್ಲರಿಗೂ ಕೊಡಬಾರದು.

೨. ಈಗ ಹಲಾಲ್ ಪ್ರಮಾಣಪತ್ರ ಧರ್ಮದ ವಿಷಯವಾಗಿರದೇ, ಆರ್ಥಿಕತೆಯ ವಿಷಯವಾಗಿದೆ, ಆದುದರಿಂದ ಅದನ್ನು ವಿರೋಧಿಸಲಾಗುತ್ತಿದೆ.

ಹಲಾಲ್ ಸಂಕಲ್ಪನೆಯು ಕೇವಲ ಮಾಂಸದ ಸಂದರ್ಭದಲ್ಲಿ ಮಾತ್ರವಿತ್ತು; ಆದರೆ ಈಗ ಅದನ್ನು ಇತರ ಉತ್ಪಾದನೆಗಳ ಸಂದರ್ಭದಲ್ಲಿಯೂ ಮಾಡಲಾಗಿದೆ, ಅಲ್ಲದೇ ಈಗ ಅದನ್ನು ‘ಸರ್ಟಿಫಿಕೇಶನ’ (ಪ್ರಮಾಣಪತ್ರದ) ಮಟ್ಟದ ವರೆಗೆ ಒಯ್ಯಲಾಗಿದೆ. ‘ನಿಮ್ಮ ಉತ್ಪಾದನೆಗಳನ್ನು ಮುಸಲ್ಮಾನರು ಖರೀದಿಸಬೇಕೆಂದು ನಿಮಗೆ ಅನಿಸುತ್ತಿದ್ದರೆ, ನೀವು ಹಲಾಲ್ ಪ್ರಮಾಣಪತ್ರವನ್ನು ಪಡೆಯಬೇಕು’, ಎಂದು ಅವರ ಹೇಳಿಕೆಯಾಗಿದೆ. ಈ ಹಲಾಲ್ ಪ್ರಮಾಣಪತ್ರವನ್ನು ‘ಜಮಿಯತ-ಉಲೇಮಾ-ಎ-ಹಿಂದ್’ ಮತ್ತು ‘ಜಮಿಯತ ಉಲೆಮಾ ಹಲಾಲ್ ಸೊಸೈಟಿ (ಮಹಾರಾಷ್ಟ್ರ)’ ಇವರಿಂದ ಕೊಡಲಾಗುತ್ತದೆ. ಈ ಪ್ರಮಾಣಪತ್ರಕ್ಕಾಗಿ ಪ್ರತಿವರ್ಷ ೬೦ ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತದೆ. ಇದರರ್ಥ ಅದು ಧಾರ್ಮಿಕ ವಿಷಯಕ್ಕೆ ಸೀಮಿತವಾಗಿರದೇ ಸಮಾನಾಂತರ ಆರ್ಥಿಕ ವ್ಯವಸ್ಥೆಯಾಗಿದೆ.

೩. ಭಾರತದಲ್ಲಿ ಸಮಾನಾಂತರ ಆರ್ಥಿಕವ್ಯವಸ್ಥೆಯನ್ನು ನಿರ್ಮಿಸಲು ಇತರ ಧರ್ಮದವರ ಮೇಲೆ ಹಲಾಲ್ ಉತ್ಪಾದನೆಗಳನ್ನು ಹೇರಲಾಗುತ್ತಿದೆ

ಹಲಾಲ್ ಈ ವಿಷಯ ಈಗ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ‘ಫ್ಯಾಶನ ಇಂಡಸ್ಟ್ರೀಸ್’, ‘ಹಲ್ದಿರಾಮ’, ‘ಅಮೂಲ’, ‘ಆಶೀರ್ವಾದ ಆಟಾ’ ಮುಂತಾದ ಅನೇಕ ಶಾಕಾಹಾರಿ ಉತ್ಪಾದನೆಗಳು ಹಲಾಲ್ ಪ್ರಮಾಣೀಕೃತಗೊಂಡಿವೆ. ಹಲಾಲ್ ಪ್ರಮಾಣೀಕರಣ ಪದ್ಧತಿ ೨೦೧೩ ರಲ್ಲಿ ಪ್ರಾರಂಭವಾಗಿದೆ. ಭಾರತದಲ್ಲಿ ಪ್ರಮಾಣಪತ್ರ ನೀಡುವ ಅಧಿಕಾರ ‘ಬ್ಯೂರೋ ಆಫ್ ಇಂಡಿಯನ್ ಸ್ಟಾ?ಯಂಡರ್ಡ’, ‘ಎಫ್.ಸಿ.ಐ.’ ಮತ್ತು ‘ಎಫ್.ಎಸ್.ಎಸ್.ಐ’ ಈ ೩ ಸಂಸ್ಥೆಗಳಿಗೆ ಇದೆ. ಸ್ವಲ್ಪದರಲ್ಲಿ ಹೇಳುವುದಾದರೆ ಮುಸಲ್ಮಾನರು ಖಾಸಗಿ ಪ್ರಮಾಣೀಕರಣವನ್ನು ಪ್ರಾರಂಭಿಸಿದ್ದಾರೆ, ಅದಕ್ಕೆ ‘ಹಲಾಲ್ ಸರ್ಟಿಫಿಕೇಶನ’ ಎಂದು ಹೇಳಲಾಗುತ್ತದೆ. ಮೊದಲು ‘ಆರ್ಗನೈಸೇಶನ ಆಫ್ ಇಸ್ಲಾಮಿಕ್ ಕಾರ್ಪೊರೇಶನ’ ಈ ೫೭ ಇಸ್ಲಾಮಿ ದೇಶಗಳ ಜಾಗತಿಕ ಸಂಘಟನೆ ಹೇಳಿರುವು ದೇನೆಂದರೆ, ಇತರ ದೇಶಗಳಿಂದ ಮುಸಲ್ಮಾನ ದೇಶಗಳಿಗೆ ಉತ್ಪಾದನೆಗಳನ್ನು ರಫ್ತು ಮಾಡುವುದಿದ್ದಲ್ಲಿ, ಅದಕ್ಕೆ ಹಲಾಲ್ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕಾಗುವುದು. ಈಗ ಅದು ಕ್ರಮೇಣ ಭಾರತದಲ್ಲಿಯೂ ಪ್ರಾರಂಭವಾಗಿದೆ. ಭಾರತದಲ್ಲಿ ವಸತಿ ಸಮುಚ್ಚಯ, ಗ್ಲೋಬಲ ಹಾಸ್ಪಿಟಲ್ಸ, ಮಿಂಗಲ ಡಾಟ ಕಾಮ್ ಇವುಗಳೊಂದಿಗೆ ಡೇಟಿಂಗ ಜಾಲತಾಣಗಳೂ ಹಲಾಲ್ ಪ್ರಮಾಣೀಕೃತಗೊಂಡಿವೆ. ಇದರರ್ಥ ಅವರಿಗೆ ಭಾರತದಲ್ಲಿ ಸಮಾಂತರ ಆರ್ಥಿಕವ್ಯವಸ್ಥೆಯನ್ನು ರೂಪಿಸಲಿಕ್ಕಿದೆ ಎಂಬುದು ಸ್ಪಷ್ಟವಾಗುತ್ತದೆ. ಹಲಾಲ್ ಪ್ರಮಾಣೀಕರಣವನ್ನು ಹಿಂದೂಗಳ ಮೇಲೆ ಹೇರಲಾಗುತ್ತಿದೆ, ಇಸ್ಲಾಂ ಧರ್ಮಗ್ರಂಥಗಳಲ್ಲಿ ಇಂತಹ ಸಮಾನಾಂತರ ಅರ್ಥವ್ಯವಸ್ಥೆಯನ್ನು ಎಲ್ಲಿ ಬರೆಯಲಾಗಿದೆ ?

೪. ಹಿಂದೂ ಜನಜಾಗೃತಿ ಸಮಿತಿಯುಹಲಾಲ್ ಸರ್ಟಿಫಿಕೇಶನ್‌ನ ವಿರುದ್ಧಸರಕಾರಿ ಸ್ತರದಲ್ಲಿ ನಡೆಸಿದ ಯಶಸ್ವಿ ಹೋರಾಟ !

೧೨ ಮತ್ತು ೧೩ ನವೆಂಬರ್ ೨೦೨೨ ರಂದು ಮುಂಬಯಿಯಲ್ಲಿ ‘ವರ್ಲ್ಡ ಹಲಾಲ್ ಕಾನ್ಫರೆನ್ಸ’ನ್ನು ಆಯೋಜಿಸಲಾಗಿತ್ತು. ಅದನ್ನು ಹಿಂದುತ್ವನಿಷ್ಠ ಸಂಘಟನೆಗಳು ರದ್ದುಗೊಳಿಸುವಲ್ಲಿ ಯಶಸ್ವಿಯಾದವು. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಮುಂಬಯಿಯಲ್ಲಿ ಆಂದೋಲನವನ್ನು ಮಾಡಿತ್ತು. ಯಾವ ಹಲಾಲ್ ಪ್ರಮಾಣಪತ್ರವನ್ನು ಭಾರತ ಸರಕಾರ ಅಧಿಕೃತಗೊಳಿಸಿಲ್ಲವೋ, ಇವರು ಅದನ್ನು ತೆಗೆದುಕೊಳ್ಳುವಂತೆ ಹೇಗೆ ಹೇಳುತ್ತಾರೆ ?

೫. ಹಿಂದುತ್ವನಿಷ್ಠರ ವಿರೋಧದ ನಂತರಕೇಂದ್ರ ಸರಕಾರವು ರಫ್ತಿನ ಮೇಲಿನ ಹಲಾಲ್‌ಪ್ರಮಾಣಪತ್ರದ ಒತ್ತಾಯವನ್ನು ರದ್ದುಗೊಳಿಸಿತು !

ಖಾದ್ಯ ಪದಾರ್ಥಗಳಿಗಾಗಿ ಮೊದಲಿನಿಂದಲೇ ಸರಕಾರದ ‘ಎಫ್.ಎಸ್.ಎಸ್.ಐ’, ಪ್ರಮಾಣಪತ್ರ ಇದೆ. ಅದರಲ್ಲಿ ಶಾಕಾಹಾರಿ ಪದಾರ್ಥಗಳಿದ್ದರೆ, ಹಸಿರು ಬಣ್ಣದ ಬಿಂದು ಮತ್ತು ಮಾಂಸಾಹಾರಿ ಪದಾರ್ಥಗಳಿದ್ದರೆ, ಕಂದು ಬಣ್ಣದ ಬಿಂದು ಎಂಬುದನ್ನು ನಿಶ್ಚಯಿಸಲಾಗಿದೆ. ನನ್ನ ಉತ್ಪಾದನೆಗೆ ‘ಎಫ್.ಎಸ್.ಎಸ್.ಐ.’ ಪ್ರಮಾಣಪತ್ರ ದೊರಕಿದ ಕೂಡಲೇ, ಅದು ಶೇ. ೧೦೦ ರಷ್ಟು ಶಾಕಾಹಾರಿ ಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೆ ನನಗೆ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಆವಶ್ಯಕತೆಯೇನಿದೆ ?ಇದರ ವಿರುದ್ಧ ನಾವು ನ್ಯಾಯಾಲಯದಲ್ಲಿ ದೂರು ದಾಖಲಿಸಿದೆವು, ಅದರಲ್ಲಿ ಎರಡು ವಿಷಯಗಳನ್ನು ಮಂಡಿಸಿದ್ದೆವು. ಒಂದು ಭಾರತ ಸರಕಾರವು ‘ಎಫ್.ಎಸ್.ಎಸ್.ಐ.’ ಅಥವಾ ಹಲಾಲ್ ಪ್ರಮಾಣಪತ್ರ ಇವೆರಡರಲ್ಲಿ ಒಂದನ್ನು ಅಂತಿಮವೆಂದು ಹೇಳಬೇಕು. ‘ಎಫ್.ಎಸ್.ಎಸ್.ಐ.’ ತೆಗೆದುಕೊಳ್ಳುವುದು ಮತ್ತು ಮುಸಲ್ಮಾನ ಸಂಘಟನೆಗಳಿಗೆ ೬೦ ಸಾವಿರ ರೂಪಾಯಿಗಳನ್ನು ನೀಡಿ ಹಲಾಲ್ ಪ್ರಮಾಣಪತ್ರ ತೆಗೆದುಕೊಳ್ಳುವುದು ಹೀಗೆ ಎರಡು ಪ್ರಮಾಣಪತ್ರಗಳನ್ನು ನಾವು ಸ್ವೀಕರಿಸುವುದಿಲ್ಲ. ಎರಡನೇಯ ವಿಷಯವೆಂದರೆ ಭಾರತದಿಂದ ಶೇ. ೪೭ ರಷ್ಟು ರಫ್ತು ಮುಸಲ್ಮಾನೇತರ ದೇಶಗಳಿಗೆ ಆಗುತ್ತದೆ. ಅದರಲ್ಲಿ ಅಮೇರಿಕಾ, ಯುರೋಪ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ಚೀನಾ, ಜಪಾನ, ಆಫ್ರಿಕಾದ ದೇಶಗಳು ಹೀಗೆ ಅನೇಕ ದೇಶಗಳು ಸೇರಿವೆ. ಈ ಎಲ್ಲ ದೇಶಗಳಿಗೆ ಹಲಾಲ್ ಪ್ರಮಾಣಪತ್ರದ ಆವಶ್ಯಕತೆಯಿರುವುದಿಲ್ಲ. ಹೀಗಿರುವಾಗ ‘ಎಲ್ಲ ರಫ್ತಿನ ವಸ್ತುಗಳ ಮೇಲೆ ಹಲಾಲ್ ಪ್ರಮಾಣಪತ್ರವನ್ನು ತೆಗೆದುಕೊಳ್ಳಲು ಒತ್ತಾಯವನ್ನು ಏಕೆ ಮಾಡಲಾಗುತ್ತದೆ ?’, ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ತದನಂತರ ಜನವರಿ ೨೦೨೨ ರಲ್ಲಿ ಕೇಂದ್ರ ಸರಕಾರವು ಅದನ್ನು ತೆಗೆದು ಹಾಕಿತು. ಈಗ ರಫ್ತು ಮಾಡುವ ವಸ್ತುಗಳಿಗಾಗಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಆವಶ್ಯಕತೆಯಿಲ್ಲ.

೬. ಸಂಸತ್ತಿನ ಉಪಹಾರಗೃಹದಲ್ಲಿ ನೀಡುತ್ತಿದ್ದಹಲಾಲ್ ಪ್ರಮಾಣೀಕೃತ ಭೋಜನಕ್ಕೆ ನಿರ್ಬಂಧ !

ಸಂಸತ್ತಿನ ೪ ಉಪಾಹಾರಗೃಹಗಳಲ್ಲಿ ಭಾರತೀಯ ರೈಲ್ವೆ ಇಲಾಖೆಯಿಂದ ಊಟವನ್ನು ಪೂರೈಸಲಾಗುತ್ತಿತ್ತು. ಭಾರತೀಯ ರೈಲಿನ ಭೋಜನವು ಹಲಾಲ್ ಪ್ರಮಾಣಿತವಾಗಿತ್ತು. ನಾವು ಸರಕಾರಕ್ಕೆ ‘ನೀವು ಸಂಸತ್ತು ಪ್ರಜಾಪ್ರಭುತ್ವದ ಮಂದಿರವಾಗಿದೆ ಮತ್ತು ಅಲ್ಲಿ ಪ್ರತಿಯೊಬ್ಬರ ಅಧಿಕಾರದ ರಕ್ಷಣೆಯನ್ನು ಮಾಡುತ್ತೇವೆ ಎಂದು ಹೇಳುತ್ತೀರಿ. – ಶ್ರೀ. ರಮೇಶ ಶಿಂದೆ
ಹೀಗಿರುವಾಗ ಸಿಕ್ಖ ಧರ್ಮಗ್ರಂಥದಲ್ಲಿ ಹಲಾಲ ಪದಾರ್ಥಗಳನ್ನು ತಿನ್ನಲು ನಿಷೇಧವಿರುವಾಗ ಅವರಿಗೆ ನೀವು ಅಲ್ಲಿಯ ಹಲಾಲ್ ಭೋಜನವನ್ನು ಏಕೆ ನೀಡುತ್ತೀರಿ ? ಅದೇ ರೀತಿ ಹಿಂದೂ ಮತ್ತು ಕ್ರಿಶ್ಚಿಯನ ಇವರಿಗೂ ಹಲಾಲ್ ಭೋಜನವನ್ನು ನೀಡುತ್ತೀರಿ, ಇದು ತಪ್ಪಾಗಿದೆ. ಇವರೆಲ್ಲರ ಮೂಲಭೂತ ಅಧಿಕಾರದ ರಕ್ಷಣೆ ಆಗಬೇಕು’ ಎಂದು ಪತ್ರವನ್ನು ಬರೆದೆವು. ಇದಕ್ಕೆ ನಮಗೆ ಭಾರತೀಯ ರೇಲ್ವೆ ಸಚಿವಾಲಯದವರು ಉತ್ತರವನ್ನು ಕಳುಹಿಸಲಿಲ್ಲ, ಆದರೆ ಇದರ ಪರಿಣಾಮವಾಗಿ ೪ ಸುದ್ದಿವಾಹಿನಿಗಳಿಗೆ ಪ್ರತಿಕ್ರಿಯೆಗಳನ್ನು ನೀಡುವಾಗ ಅವರು ‘ಈಗ ಹಲಾಲ ಭೋಜನವನ್ನು ನಿರ್ಬಂಧಿಸಲಾಗಿದೆ’, ಎಂದು ಹೇಳಿದರು. ಇದರಿಂದ ಸರಕಾರದ ಮಟ್ಟದಲ್ಲಿ ನಮ್ಮ ಪ್ರಯತ್ನಗಳಿಗೆ ಜಯ ದೊರಕಿದೆ. ಈ ಬಗ್ಗೆ ನಾವು ಸರಕಾರಕ್ಕೆ ಅನೇಕ ಪತ್ರಗಳನ್ನು ಕಳುಹಿಸಿದ್ದೇವೆ. ಇನ್ನೊಂದೆಡೆ ನಾವು ವಿವಿಧ ಕಂಪನಿಗಳೊಂದಿಗೆ ಚರ್ಚೆಯನ್ನು ಮಾಡುತ್ತಿದ್ದೇವೆ.

೭. ಹಲಾಲ್ ಪ್ರಮಾಣಪತ್ರ ಇದು ಭಾರತದ ಸುರಕ್ಷತೆಗೆ ಎಲ್ಲಕ್ಕಿಂತ ದೊಡ್ಡ ಅಪಾಯ.

ಒಟ್ಟಾರೆ ನಾವು ಹೇಳುವುದೇನೆಂದರೆ, ಭಾರತದಲ್ಲಿ ಈ ರೀತಿಯ ಖಾಸಗಿ ಅರ್ಥವ್ಯವಸ್ಥೆ ನಡೆಯುವುದು ಅತ್ಯಂತ ದುರದೃಷ್ಟಕರವಾಗಿದೆ. ಇದರಲ್ಲಿ ಆಶ್ಚರ್ಯಕರ ವಿಷಯವೆಂದರೆ ‘ಜಮಿಯತ ಉಲೆಮಾ-ಎ-ಹಿಂದ್’ ಈ ಸಂಘಟನೆ ಕೇವಲ ಹಲಾಲ್ ಪ್ರಮಾಣಪತ್ರವನ್ನಷ್ಟೇ ಕೊಡುವುದಿಲ್ಲ, ಅದು ಅಲ್ ಕಾಯದಾ, ಲಷ್ಕರ-ಎ- ತೋಯಬಾ, ಇಂಡಿಯನ ಮುಜಾಹಿದ್ದೀನ ಮುಂತಾದ ಸಂಘಟನೆಗಳ ಭಯೋತ್ಪಾದಕರಿಗೆ ನ್ಯಾಯಾಲಯ ಪ್ರಕರಣಗಳಲ್ಲಿ ಹೋರಾಡಲು ಆರ್ಥಿಕ ಸಹಾಯವನ್ನೂ ಮಾಡುತ್ತದೆ. ಸದ್ಯ ಈ ಸಂಘಟನೆ ನ್ಯಾಯಾಲಯಗಳಲ್ಲಿ ೭೦೦ ಕ್ಕಿಂತ ಹೆಚ್ಚು ಭಯೋತ್ಪಾದಕರ ಪ್ರಕರಣಗಳಿಗೆ ಸಹಾಯವನ್ನು ಮಾಡುತ್ತಿದೆ. ಹಲಾಲ್ ಪ್ರಮಾಣೀಕರಣದಿಂದ ದೊರಕುವ ಹಣದ ಉಪಯೋಗದ ಕುರಿತು ನಮ್ಮ ಬಳಿ ದಾಖಲೆಗಳಿವೆ. ಅವುಗಳನ್ನು ನಾವು ಸರಕಾರಕ್ಕೆ ಕೊಟ್ಟಿದ್ದೇವೆ. ಈ ವಿಷಯದ ಬಗ್ಗೆ ನಾವು ‘ಹಲಾಲ್ ಜಿಹಾದ್’ ಪುಸ್ತಕವನ್ನು ಪ್ರಕಟಿಸಿದ್ದೇವೆ. ಈ ದೇಶದಲ್ಲಿ ಖಾಸಗಿ ಅರ್ಥವ್ಯವಸ್ಥೆ ನಿರ್ಮಾಣವಾಗಬಾರದು ಇದಕ್ಕೆ ನಮ್ಮ ವಿರೋಧವಿದೆ’.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಲಾಲ್ ಜಿಹಾದ್ ಈ ಗ್ರಂಥವನ್ನು ಆನ್ ಲೈನ್ ಖರೀದಿಸಲು Sanatanshop.com ಗೆ ಭೇಟಿ ನೀಡಿ
ಸ್ಥಳೀಯ ಸಂಪರ್ಕ ಸಂಖ್ಯೆ : ೯೩೪೨೫೯೯೨೯೯