ಸಂವಿಧಾನ ರಕ್ಷಿಸುವುದಿದ್ದರೆ, ಪ್ರಧಾನಮಂತ್ರಿ ಮೋದಿ ಅವರ ಹತ್ಯೆಗಾಗಿ ಸಿದ್ಧರಾಗಿರಿ !(ಅಂತೆ)

ಮಧ್ಯ ಪ್ರದೇಶದಲ್ಲಿನ ಕಾಂಗ್ರೆಸ್ಸಿನ ಮಾಜಿ ಸಚಿವ ರಾಜಾ ಪಟೇರಿಯಾ ಇವರ ಆವಾಹನೆ

ಮಧ್ಯ ಪ್ರದೇಶದಲ್ಲಿನ ಕಾಂಗ್ರೆಸ್ಸಿನ ಮಾಜಿ ಸಚಿವ ರಾಜಾ ಪಟೇರಿಯಾ

ಭೋಪಾಲ್ (ಮಧ್ಯಪ್ರದೇಶ) – ಪ್ರಧಾನಿ ಮೋದಿ ಚುನಾವಣೆಯ ಪದ್ಧತಿಯನ್ನು ಕೊನೆಗೊಳಿಸುವರು. ಧರ್ಮ ,ಜಾತಿ ಮತ್ತು ಭಾಷೆ ಇದರ ಆಧಾರದಲ್ಲಿ ದೇಶದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಆದ್ದರಿಂದ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸಂವಿಧಾನವನ್ನು ಉಳಿಸುವದಿದ್ದರೆ ಮೋದಿಯವರ ಹತ್ಯೆಗಾಗಿ ಸಿದ್ದರಾಗಿರಿ. ಹತ್ಯೆ ಎಂದರೆ ಅವರನ್ನು ಸೋಲಿಸುವುದು, ಎನ್ನುವ ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಿರುವ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಇವರಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವರು ಅವರ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿರುವುದು ಕಾಣಿಸುತ್ತಿದೆ. ಈ ವಿಡಿಯೋ ರಾಜ್ಯದ ಪನ್ನಾ ಜಿಲ್ಲೆಯ ಪವಯಿ ಇಲ್ಲಿಯದಾಗಿದೆಯೆಂದು ಹೇಳಲಾಗುತ್ತಿದೆ. ಈ ವಿಡಿಯೋ ಬಗ್ಗೆ ರಾಜ್ಯದ ಗೃಹ ಸಚಿವರು ನರೋತ್ತಮ ಮಿಶ್ರಾ ಇವರು ದೂರು ದಾಖಲಿಸುವಂತೆ ಆದೇಶಿಸಿದ್ದಾರೆ.

ಪಟೇರಿಯಾ ಇವರ ಸ್ಪಷ್ಟೀಕರಣ

ನನ್ನ ಹೇಳಿಕೆಯನ್ನು ತಿರುಚಲಾಗಿದೆ .(ಅಂತೆ)

ರಾಜ ಪಟೇರಿಯಾ ಒಂದು ವಿಡಿಯೋ ಪ್ರಸಾರ ಮಾಡಿ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅವರು ನಾನು ಪ್ರಧಾನಿ ಮೋದಿ ಇವರ ಹತ್ಯೆಯ ಬಗ್ಗೆ ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ. ನಾನು ಮಹಾತ್ಮ ಗಾಂಧಿ ಇವರನ್ನು ನಂಬುವನಾಗಿದ್ದೇನೆ. ನಾನು ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ನಾನು ಹೇಳಿಕೆಯ ಅರ್ಥ ರಾಜಕೀಯ ದೃಷ್ಟಿಕೋನದಿಂದಾಗಿತ್ತು. ಸಂವಿಧಾನವನ್ನು ಉಳಿಸಲು ಮೋದಿಯವರನ್ನು ಸೋಲಿಸುವುದು ಅವಶ್ಯಕವಾಗಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ರಕ್ಷಣೆಗಾಗಿ ನಿರುದ್ಯೋಗ ದೂರಗೊಳಿಸುವುದಕ್ಕಾಗಿ ಅವರನ್ನು ಸೋಲಿಸುವುದು ಅವಶ್ಯಕವಾಗಿದೆ. ಆದರೆ ನನ್ನ ಹೇಳಿಕೆ ಅತ್ಯಂತ ತಪ್ಪಾದ ರೀತಿಯಲ್ಲಿ ಸಾದರಪಡಿಸಲಾಗಿದೆ. (ಹಾಗಿದ್ದರೆ ಆಗ ಹತ್ಯೆ ಎನ್ನುವ ಶಬ್ದವನ್ನು ಏಕೆ ಬಳಸಿದರು? ಏನು ಮನಸ್ಸಿನಲ್ಲಿರುತ್ತದೆಯೋ, ಅದೇ ಬಾಯಿಂದ ಬಂದಿದೆಯೆಂದೇ ಹೇಳಬೇಕಾಗುತ್ತದೆ!-ಸಂಪಾದಕರು)

ಸಂಪಾದಕೀಯ ನಿಲುವು

ಇದೇ ಡೋಂಗಿ ಅಹಿಂಸಾವಾದಿ ಕಾಂಗ್ರೆಸ್ ನಾಯಕರ ನಿಜವಾದ ಮಾನಸಿಕತೆ ಆಗಿದೆ ! ಇಂತಹವರನ್ನು ಕಾರಾಗೃಹಕ್ಕೆ ತಳ್ಳಿ ಅವರಿಗೆ ಕಠಿಣ ಶಿಕ್ಷೆಯಾಗಲು ಮಧ್ಯಪ್ರದೇಶ ಸರಕಾರ ಪ್ರಯತ್ನಿಸಬೇಕು.