ಮುಸ್ಲಿಂ ದೇಶ ಮೊರೊಕ್ಕೋ ವಿಜಯದ ಬಳಿಕ ಫ್ರಾನ್ಸನಲ್ಲಿ ಮುಸ್ಲಿಂ ಸಮರ್ಥಕರಿಂದ ಹಿಂಸಾಚಾರ

ಫುಟಬಾಲ್ ವಿಶ್ವಕಪ್ ಸ್ಪರ್ಧೆ

ಪ್ಯಾರಿಸ(ಫ್ರಾನ್ಸ) – ಕತಾರ ದೇಶದಲ್ಲಿ ಪ್ರಾರಂಭವಾಗಿರುವ ಫುಟಬಾಲ ವಿಶ್ವಕಪ್ ಸ್ಪರ್ಧೆಯಲ್ಲಿ ಆಫ್ರಿಕಾ ಖಂಡದ ಮುಸ್ಲಿಂ ದೇಶ ಮೊರೊಕ್ಕೊ ಪೋರ್ತುಗಲ್ ಪರಾಭವಗೊಳಿಸಿದ ಬಳಿಕ ಫ್ರಾನ್ಸನಲ್ಲಿ ಅನೇಕ ಸ್ಥಳಗಳಲ್ಲಿ ಗಲಭೆಗಳು ನಡೆದವು. ಈ ಸಂದರ್ಭದಲ್ಲಿ ಮೊರೊಕ್ಕೊ ಸಮರ್ಥಕ ಮುಸಲ್ಮಾನರು ಪೊಲೀಸರ ಮೇಲೆ ಆಕ್ರಮಣ ನಡೆಸಿದರು. ಹಾಗೂ ಕಲ್ಲೆಸೆದರು. ಇದರೊಂದಿಗೆ ಪೊಲೀಸರ ಮೇಲೆ ಲಾಠಿಚಾರ್ಜ ಮಾಡಿದರು. ಗಲಭೆಖೋರ ಮುಸಲ್ಮಾನರು ವಾಹನ ಹಾಗೂ ಅಂಗಡಿಗಳನ್ನು ಧ್ವಂಸ ಮಾಡಿದರು. ಅವರನ್ನು ತಡೆಯಲು ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಯಿತು.

ಮೊರೊಕ್ಕೋ ವಿಜಯದ ಬಳಿಕ ದೊಡ್ಡ ಸಂಖ್ಯೆಯಲ್ಲಿ ಸಮರ್ಥಕರು ರಸ್ತೆಗಿಳಿದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅವರು ಪ್ಯಾರಿಸನ ಪ್ರಸಿದ್ಧ ಪೆರಿಸಿಯನ ಚೌಕದಲ್ಲಿ ಒಂದುಗೂಡಿದರು. ಅಲ್ಲಿ ಅವರು ಘೋಷಣೆ ಕೂಗಿದರು. ಹಾಗೆಯೇ ವಾಹನಗಳ ಹಾರ್ನ ಬಾರಿಸಿ ಗಲಾಟೆ ಮಾಡಿದರು. ತದನಂತರ ಅವರು ಹಿಂಸಾಚಾರ ಪ್ರಾರಂಭಿಸಿದರು.

ಸಂಪಾದಕೀಯ ನಿಲುವು

`ಇಸ್ಲಾಂ’ ಎಂದರೆ `ಶಾಂತತೆ’ ಎಂದು ಅರ್ಥವಿರುವಾಗ ವಿಜಯದ ಬಳಿಕವೂ ಹಿಂಸಾಚಾರ ನಡೆಸುವ ಮುಸಲ್ಮಾನರು ಅದರ ಅಪಮಾನವನ್ನೇ ಮಾಡುತ್ತಿದ್ದಾರೆ ಎಂದೇ ಯಾರಿಗಾದರೂ ಅನಿಸುವುದು.