ವೈದ್ಯಕೀಯ ಕ್ಷೇತ್ರದಲ್ಲಿ ಉಜಿರೆಯ ಭಂಡಾರ್ಕರ್ ಸಹೋದರಿಯರ ಉನ್ನತ ಸಾಧನೆ

ಡಾ. (ಸೌ.) ಅನುಷಾ ಭಂಡಾರ್ಕರ್
ಡಾ. (ಸೌ.) ಅಖಿಲಾ ಭಂಡಾರ್ಕರ್

ಉಜಿರೆ : ಸ್ಥಳೀಯ ಶ್ರೀ ಗಣೇಶ್ ಪ್ರಸಾದ್ ಮೋಟಾರ್ ಲಿಂಕ್ಸ್‌ನ ಮಾಲೀಕರಾದ ಬಿ. ಪಾಂಡುರಂಗ ಭಂಡಾರ್ಕರ್ ಮತ್ತು ಸನಾತನದ ಸಾಧಕಿ ಶಾರದಾ ಭಂಡಾರ್ಕರ್ ದಂಪತಿಯ ಹಿರಿಯ ಮಗಳಾದ ಡಾ. (ಸೌ.) ಅನುಷಾ ಭಂಡಾರ್ಕರ್ ಇವರು ರಾಷ್ಟ್ರಮಟ್ಟದಲ್ಲಿ ೨೦೨೧-೨೦೨೨ರ ಸಾಲಿನ ಶ್ರೇಷ್ಠ ಮಧುಮೇಹ ತಜ್ಞೆ ಎಂದು ಮಾನ್ಯತೆ ಪಡೆದು ರಾಷ್ಟ್ರಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ. ಅದೇ ರೀತಿ ಕಿರಿಯ ಪುತ್ರಿ ಡಾ. (ಸೌ.) ಅಖಿಲಾ ಭಂಡಾರ್ಕರ್ ಇವರು ಎಂ.ಡಿ. ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಸುವರ್ಣ ಪದಕ ಪಡೆದಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಂದ ಅಭಿನಂದನೆ

ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಾಗಿರುವ ಇವರಿಬ್ಬರ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಅಪಾರ ಆನಂದವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ. ಇವರಿಬ್ಬರೂ ಬಾಲ್ಯದಿಂದಲೂ ತಮ್ಮ ತಾಯಿ ಸೌ. ಶಾರದಾ ಭಂಡಾರಕರ ಇವರ ಜೊತೆಗೆ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿದ್ದು ಬಾಲಸಾಧಕರಾಗಿ ಬಾಲ ಸಂಸ್ಕಾರ ವರ್ಗ ನಡೆಸುತ್ತಿದ್ದರು. ಅನೇಕರಿಗೆ ಪ್ರಥಮಚಿಕಿತ್ಸೆಯ ತರಬೇತಿಯನ್ನು ಸಹ ನೀಡಿ ಸಂಸ್ಥೆಯ ಕಾರ್ಯದಲ್ಲಿ ಸಹಕರಿಸಿದ್ದಾರೆ. ಶ್ರೀ ಗುರುದೇವರ ಅಪಾರ ಕೃಪೆಯಿಂದಲೇ ಹಾಗೂ ತಂದೆತಾಯಿಯವರಿಂದ ಸಿಕ್ಕಿದ ಯೋಗ್ಯ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರಗಳಿಂದಾಗಿಯೇ ಇದೆಲ್ಲವೂ ಪ್ರಾಪ್ತವಾಯಿತು ಎಂದು ಗುರು ಚರಣದಲ್ಲಿ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ.