ಉಲ್ಲಾಸನಗರದಲ್ಲಿನ ಘಟನೆ
(‘ಲಿವ್-ಇನ್ ರಿಲೇಶನಶಿಪ್’ದಲ್ಲಿ ಮದುವೆಯಾಗದೆ ಒಟ್ಟಿಗೆ ವಾಸಿಸುವುದು)
ಠಾಣೆ – ಉಲ್ಲಾಸನಗರದಲ್ಲಿ ‘ಲಿವ್-ಇನ್ ರಿಲೇಶನಶಿಪ್’ನಲ್ಲಿ ವಾಸಿಸುತ್ತಿರುವ 21 ವರ್ಷದ ಯುವತಿಯೊಬ್ಬರು ತನ್ನ 1 ತಿಂಗಳ ಮಗುವನ್ನು ಯಾವುದೇ ಕಾನೂನು ಪ್ರಕ್ರಿಯೆ ಮಾಡದೆ ಕೇವಲ 10 ಸಾವಿರ ರೂಪಾಯಿಗಳಿಗೆ ಕಲ್ವಾದಲ್ಲಿರುವ ಕುಟುಂಬಕ್ಕೆ ದತ್ತು ನೀಡಿದ್ದಾರೆ. ಇದು ಬೆಳಕಿಗೆ ಬಂದಾಗ, ಅವಳು ಹಿಂತಿರುಗಿಸಬೇಕೆಂದು ಒತ್ತಾಯಿಸಿದಳು.
ಅವಳು ಗರ್ಭಿಣಿಯಾದಾಗ, ಅವಳ ಪ್ರೇಮಿ ಮಗುವನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದನು; ಆದರೆ ಮಗು ಜನಿಸಿದ ನಂತರ, ಅವನು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಮಗುವನ್ನು ನೋಡಿಕೊಳ್ಳಲು ನಿರಾಕರಿಸಿದನು. (ಹಾಗಾದರೆ, ‘ಲಿವ್-ಇನ್ ರಿಲೇಶನಶಿಪ್’ನಲ್ಲಿ ಇರುವುದಾದರೂ ಏಕೆ ? – ಸಂಪಾದಕರು) ಎರಡೂ ಕಡೆಯ ಪೋಷಕರು ಮಗುವನ್ನು ದತ್ತು ಪಡೆಯಲು ಅಗತ್ಯವಿರುವ ಕುಟುಂಬಕ್ಕೆ ನೀಡಲು ನಿರ್ಧರಿಸಿದರು. ಉಲ್ಹಾಸ್‌ನಗರದ ‘ಸಖಿ’ ಕೇಂದ್ರಕ್ಕೆ ಈ ವಿಷಯ ತಿಳಿದಾಗ, ಕಲ್ವಾದಲ್ಲಿರುವ ಸಂಬಂಧಪಟ್ಟ ಕುಟುಂಬದಿಂದ ಮಗುವನ್ನು ವಶಕ್ಕೆ ಪಡೆದು ಕೊಂಡರು. ಈ ಪ್ರಕರಣದಲ್ಲಿ, ಮಗುವಿನ ನಿಜವಾದ ಪಾಲಕರು ಮತ್ತು ಅಕ್ರಮವಾಗಿ ದತ್ತು ಪಡೆದ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವು‘ಲಿವ್-ಇನ್ ರಿಲೇಶನಶಿಪ್’ನ ದುಷ್ಪರಿಣಾಮಗಳು ಹೀಗಿದೆ! ಹಿಂದೂ ಧರ್ಮದಲ್ಲಿನ ವಿವಾಹವೆಂದರೆ ಹಲವು ವಿಷಯಗಳ ಸುಂದರ ಸಂಯೋಜನೆಯಾಗಿದೆ. ಈ ಮೂಲಕ ಸಾಧಿಸಿದ ಉನ್ನತ ಗೃಹಸ್ಥಾಶ್ರಮ ಜೀವನದಲ್ಲಿ, ಜವಾಬ್ದಾರಿಗಳನ್ನು ಕೈಝಾಡಿಸಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಬದಲಿಗೆ ಸಂತೋಷದಿಂದ ಪೂರ್ಣಗೊಳಿಸಲಾಗುತ್ತದೆ; ಆದರೆ ಪಾಶ್ಚಿಮಾತ್ಯ ವಿಕೃತಿಗಳಿಗೆ ಬಲಿಯಾಗಿ ‘ಲಿವ್-ಇನ್’ ಅಳವಡಿಸಿಕೊಳ್ಳುವುದು ಎಂದರೆ ಜೀವನವನ್ನು ನಾಶಪಡಿಸಿಕೊಳ್ಳುವುದು ಎನ್ನಬಹುದು ! |